sbi gold loan: SBI ಬ್ಯಾಂಕ್ ಮೂಲಕ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವುದು ಹೇಗೆ..? ಬೇಕಾಗುವಂತ ದಾಖಲಾತಿಗಳು ಏನು ಇಲ್ಲಿದೆ ಮಾಹಿತಿ

sbi gold loan:- ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬಳಿ ಚಿನ್ನವಿದೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಚಿನ್ನದ ಮೇಲೆ ಎಷ್ಟು ಸಾಲು ಸಿಗುತ್ತದೆ ಹಾಗೂ ಬಡ್ಡಿದರ ಎಷ್ಟು..? ಹತ್ತು ಗ್ರಾಂ ಚಿನ್ನಕ್ಕೆ ಎಷ್ಟು ಹಣ ಸಿಗುತ್ತದೆ ಹಾಗೂ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಬೇಕಾಗುವಂತ ದಾಖಲಾತಿಗಳೇನು ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ರೂ. 20 ಹಳೆ ನೋಟ್ ಮಾರಿ ಲಕ್ಷಾಧಿಪತಿಗಳು ಆಗುವುದು ಹೇಗೆ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ತುಂಬಾ ಜನರ ಬಳಿ ಈಗಂತೂ ಚಿನ್ನ ಅಥವಾ ಬಂಗಾರ ಇರುತ್ತದೆ ಹಾಗಾಗಿ ಸಾಕಷ್ಟು ಜನರು ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಬಯಸುತ್ತಾರೆ ಆದ್ದರಿಂದ ಈ ಒಂದು ಲೇಖನಿಯಲ್ಲಿ SBI ಬ್ಯಾಂಕ್ ಮೂಲಕ ಚಿನ್ನದ ಮೇಲೆ ಸುಲಭವಾಗಿ ಸಾಲ ತೆಗೆದುಕೊಳ್ಳುವುದು ಹೇಗೆ ಮತ್ತು ಯಾವೆಲ್ಲ ದಾಖಲಾತಿಗಳು ಬೇಕು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನಿಯಲ್ಲಿ ವಿವರಿಸಿದ್ದೇವೆ. ಹಾಗಾಗಿ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ಗೂಗಲ್ ಪೇ ಮೂಲಕ ಎರಡು ನಿಮಿಷದಲ್ಲಿ 50 ಸಾವಿರ ಸಾಲ ಪಡೆದುಕೊಳ್ಳುವುದು ಹೇಗೆ

 

ಚಿನ್ನದ ಮೇಲೆ ಸಾಲ (sbi gold loan)..?

ಹೌದು ಸ್ನೇಹಿತರೆ ಸಾಕಷ್ಟು ಜನರು ತಮ್ಮ ಬಳಿ ಇರುವಂತ ಚಿನ್ನವನ್ನು ಇತರರ ಬಳಿ ಅಡ ಬಿಟ್ಟು ಸಾಲ ತರುತ್ತಾರೆ. ಆದರೆ ಸಾಕಷ್ಟು ಬಡ್ಡಿದರ ವಿಧಿಸಲಾಗುತ್ತದೆ ಮತ್ತು ಬಡ್ಡಿ ಕಟ್ಟಲಾಗದೆ ತಮ್ಮ ಚಿನ್ನವನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ನೀವು SBI ಬ್ಯಾಂಕ್ ಮೂಲಕ ಚಿನ್ನದ ಮೇಲೆ ಸಾಲ ತೆಗೆದುಕೊಂಡರೆ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಾಲ ಸಿಗುತ್ತದೆ ಜೊತೆಗೆ ಈ ಸಾಲವನ್ನು ತುಂಬಾ ಸುಲಭವಾಗಿ ತೀರಿಸಬಹುದು ಹಾಗಾಗಿ ನಿಮ್ಮ ಬಳಿ ಹತ್ತು ಗ್ರಾಂ ಚಿನ್ನವಿದ್ದರೆ ಎಷ್ಟು ಹಣ ಸಿಗುತ್ತದೆ ಮತ್ತು ಯಾವೆಲ್ಲ ದಾಖಲಾತಿಗಳು ಬೇಕು ಎಂಬ ವಿವರವನ್ನು ತಿಳಿದುಕೊಳ್ಳೋಣ

WhatsApp Group Join Now
Telegram Group Join Now       
sbi gold loan
sbi gold loan

 

ಸ್ನೇಹಿತರೆ ಇಲ್ಲಿ ಚಿನ್ನದಲ್ಲಿ ಮೂರು ರೀತಿಯ ಚಿನ್ನ ಬರುತ್ತದೆ, ಮೊದಲನೇದಾಗಿ 24K ಕ್ಯಾರೆಟ್ ಚಿನ್ನ, 22k ಕ್ಯಾರೆಟ್ ಚಿನ್ನ, 18K ಕ್ಯಾರೆಟ್ ಚಿನ್ನ, ಈ ಮೂರು ರೀತಿಯ ಚಿನ್ನದ ಮೇಲೆ ವಿವಿಧ ರೀತಿ ಚಿನ್ನದ ಸಾಲ ನೀಡಲಾಗುತ್ತದೆ ಅಂದರೆ 24 ಕ್ಯಾರೆಟ್ ಚಿನ್ನದ ಮೇಲೆ ಜಾಸ್ತಿ ಹಣ ನೀಡಲಾಗುತ್ತದೆ ಹಾಗೂ 18 ಕ್ಯಾರೆಟ್ ಚಿನ್ನದ ಮೇಲೆ ಕಡಿಮೆ ಸಾಲವನ್ನು ನೀಡಲಾಗುತ್ತದೆ ಹಾಗಾಗಿ ನಿಮ್ಮ ಬಳಿ ಯಾವ ಚಿನ್ನವಿದೆ ಎಂದು ಮೊದಲು ತಿಳಿದುಕೊಳ್ಳಿ

WhatsApp Group Join Now
Telegram Group Join Now       

 

ಚಿನ್ನದ ಮೇಲಿನ ಸಾಲದ ವಿವರ (sbi gold loan)..?

ಸಾಲ ನೀಡುವ ಬ್ಯಾಂಕ್:- SBI ಬ್ಯಾಂಕ್

ಸಾಲದ ಮೊತ್ತ:- 20,000 ರಿಂದ 50 ಲಕ್ಷದವರೆಗೆ

ಸಾಲದ ಅವಧಿ :- 3 ತಿಂಗಳಿಂದ 36 ತಿಂಗಳವರೆಗೆ

ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 0.50% ಗರಿಷ್ಠ ₹500 ರೂ.

 

SBI ಚಿನ್ನದ ಸಾಲದ ವೈಶಿಷ್ಟ್ಯಗಳು & ಉಪಯೋಗಗಳು (sbi gold loan)..?

  • ಈ ಬ್ಯಾಂಕಿನ ಮೂಲಕ ಗ್ರಾಹಕರು 20,000 ಯಿಂದ 50 ಲಕ್ಷ ರೂಪಾಯಿವರೆಗೆ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದು
  • ಚಿನ್ನದ ಮೇಲೆ ಸಾಲ ಪಡೆದಂತ ಗ್ರಾಹಕರು ಮರುಪಾವತಿ ಅವಧಿ 12 ತಿಂಗಳಿಂದ 36 ತಿಂಗಳವರೆಗೆ ಇರುತ್ತದೆ
  • ಎಸ್ ಬಿ ಐ ಬ್ಯಾಂಕ್ ಮೂಲಕ ಚಿನ್ನದ ಸಾಲ ಪಡೆದುಕೊಳ್ಳಲು ಬಯಸುವವರು 24 ಕ್ಯಾರೆಟ್ ಚಿನ್ನದ ಬಾರ್ಗಳು ಹಾಗೂ ಬಿಸ್ಕೆಟ್ಗಳ ಮೇಲೆ ಸಾಲ ಪಡೆಯುವಂತಿಲ್ಲ
  • ಸಾಲ ಮರುಪಾವತಿ ಪೂರ್ಣಗೊಂಡ ನಂತರ ನಿಮ್ಮ ಚಿನ್ನವನ್ನು ಅಥವಾ ನೀವು ಅಡ ಇಟ್ಟ ಬಂಗಾರದ ವಸ್ತುಗಳನ್ನು ಹಿಂದಿರುಗಿಸಲಾಗುತ್ತದೆ
  • ಎಸ್‌ಬಿಐ ಮೂಲಕ ತುಂಬ ಸುಲಭವಾಗಿ ಹಾಗೂ ತೋರಿತವಾಗಿ ಸಾಲ ಪಡೆದುಕೊಳ್ಳಬಹುದು
  • ಚಿನ್ನದ ಮೇಲೆ ಸಾಲ ನೀಡಲು ಕಡಿಮೆ ಸಂಸ್ಕರಣೆಯ ಶುಲ್ಕ ವಿಧಿಸಲಾಗುತ್ತದೆ
  • ಚಿನ್ನದ ಮೇಲಿನ ಸಾಲದ ಮೇಲೆ ಯಾವುದೇ ಪೂರ್ವ ಪಾವತಿ ತಂಡ OR ಚಿನ್ನವನ್ನು ಸ್ವಾಧೀನ ಪಡಿಸಿಕೊಳ್ಳುವ ಶುಲ್ಕಗಳು ಇರುವುದಿಲ್ಲ

 

ಚಿನ್ನದ ಮೇಲೆ ಬಡ್ಡಿದರ ಎಷ್ಟು (sbi gold loan)..?

ಹೌದು ಸ್ನೇಹಿತರೆ ನೀವು SBI ಮೂಲಕ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಲು ಬಯಸಿದರೆ ವಿವಿಧ ರೀತಿ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ ಏಕೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಬದಲಾವಣೆ ಹಾಗೂ RBI ಬ್ಯಾಂಕ್ ನಿಯಮದ ಪ್ರಕಾರ ಬಡ್ಡಿ ದರಗಳು ಬದಲಾವಣೆ ಆಗುತ್ತಿರುತ್ತವೆ. ಹಾಗಾಗಿ ಪ್ರಸ್ತುತ ಇರುವಂತ ಬಡ್ಡಿ ದರದ ವಿವರವನ್ನು ನೀಡುತ್ತಿದ್ದೇವೆ

ಚಿನ್ನದ ಸಾಲ EMI ಆಧಾರಿತ:- ಹೌದು ಸ್ನೇಹಿತರೆ ನೀವೇನಾದರೂ SBI ಮೂಲಕ ತಿಂಗಳಿಗೆ ಇಎಂಐ ಪಾವತಿಸುವ ಮೂಲಕ ಚಿನ್ನದ ಮೇಲೆ ಸಾಲ ಪಡೆದುಕೊಂಡರೆ ನಿಮಗೆ ಒಂದು ವರ್ಷಕ್ಕೆ 8.65% ರಿಂದ ಗರಿಷ್ಠ 9.90% ರೆಸ್ಟು ಬಡ್ಡಿ ದರವನ್ನು ವಿಧಿಸಲಾಗುತ್ತದೆ

12 ತಿಂಗಳಗಳ ಮರುಪಾವತಿ ಚಿನ್ನದ ಸಾಲ:- ಸ್ನೇಹಿತರೆ ನೀವೇನಾದರೂ 12 ತಿಂಗಳುಗಳ ನಂತರ ಚಿನ್ನದ ಮೇಲೆನ ಸಾಲವನ್ನು ಮರುಪಾವತಿಸಲು ಪಡೆದುಕೊಂಡರೆ ನಿಮಗೆ ಪ್ರಾರಂಭಿಕವಾಗಿ ಒಂದು ವರ್ಷಕ್ಕೆ 8.65% ರಿಂದ 9.15% ವರೆಗೆ ಬಡ್ಡಿ ವಿಧಿಸಲಾಗುತ್ತದೆ

3 ತಿಂಗಳ ಮರುಪಾವತಿ ಚಿನ್ನದ ಸಾಲ:- ಸ್ನೇಹಿತರೆ ನೀವು ಮೂರು ತಿಂಗಳಿಗೆ ಚಿನ್ನದ ಮೇಲೆ ಮರುಪಾವತಿಸಲು ಸಾಲ ಪಡೆದುಕೊಂಡರೆ ನಿಮಗೆ 8.20% ರಿಂದ 8.75% ವರೆಗೆ ವರ್ಷದ ಬಡ್ಡಿ ದರ ವಿಧಿಸಲಾಗುತ್ತದೆ

6 ತಿಂಗಳಿ ಮರುಪಾವತಿ ಚಿನ್ನದ ಸಾಲ:- ಸ್ನೇಹಿತರೆ ನೀವೇನಾದರೂ ಆರು ತಿಂಗಳಗಳ ಕಾಲ ಮರುಪಾವತಿ ಚಿನ್ನದ ಮೇಲೆ ಸಾಲ ತೆಗೆದುಕೊಂಡರೆ ಅಂದರೆ ಆರು ತಿಂಗಳ ಒಳಗಡೆಯಾಗಿ ನೀವು ಚಿನ್ನದ ಮೇಲೆ ಸಾಲ ತೀರಿಸಲು ಚಿನ್ನದ ಮೇಲೆ ಸಾಲ ತೆಗೆದುಕೊಂಡರೆ ನಿಮಗೆ ಒಂದು ವರ್ಷದ ಬಡ್ಡಿ ದರದಲ್ಲಿ 8.55% ರಿಂದ 8.90% ಹೊರಗೆ ಬಡ್ಡಿದರ ವಿಧಿಸಲಾಗುತ್ತದೆ

 

ಪ್ರತಿ ಗ್ರಾಂ ಚಿನ್ನಕ್ಕೆ (sbi gold loan) ಸಾಲ ಎಷ್ಟು ಸಿಗುತ್ತದೆ..?

ಸ್ನೇಹಿತರೆ ನೀವು ಚಿನ್ನದ ಮೇಲೆ ಸಾಲ ಪಡೆದುಕೊಳ್ಳಲು ಬಯಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ನಿರ್ಧಾರವಾಗುವಂತಹ ಚಿನ್ನದ ದರದ ಮೇಲೆ ಪ್ರತಿ ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲ ಸಿಗುತ್ತದೆ ಎಂಬ ನಿರ್ಧಾರ ಮಾಡಲಾಗುತ್ತದೆ ಹಾಗಾಗಿ ಇದು ಕೆಲವೊಂದು ಸಲ ಬದಲಾವಣೆ ಆಗುತ್ತಾ ಇರುತ್ತದೆ ಆದ್ದರಿಂದ ನಿಖರ ಚಿನ್ನದ ಮೇಲೆ ಸಾಲ ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿಗೆ ಭೇಟಿ ನೀಡಿ

22 ಕ್ಯಾರೆಟ್ 1 ಗ್ರಾಂ ಚಿನ್ನಕ್ಕೆ ಸಾಲ ಎಷ್ಟು:- ಹೌದು ಸ್ನೇಹಿತರೆ ನಿಮ್ಮ ಹತ್ತಿರ 22 ಕ್ಯಾರೆಟ್ ಗೋಲ್ಡ್ ಚಿನ್ನ ಇದ್ದರೆ ನಿಮಗೆ ಒಂದು ಗ್ರಾಂ ಚಿನ್ನಕ್ಕೆ ₹3800 ರಿಂದ ₹4350 ರೂಪಾಯಿ ತನಕ ಸಾಲ ಸಿಗುವಂತಹ ಸಾಧ್ಯತೆ ಇರುತ್ತದೆ ಹಾಗಾಗಿ ನೀವು ಒಂದು ಸಲ ನಿಮ್ಮ SBI ಬ್ಯಾಂಕಿಗೆ ಭೇಟಿ ನೀಡಿ

10 ಗ್ರಾಂ ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತದೆ:- ಸ್ನೇಹಿತರೆ ನಿಮ್ಮ ಬಳಿ 22 ಕ್ಯಾರೆಟ್ ಚಿನ್ನ ಇದ್ದರೆ ಹತ್ತು ಗ್ರಾಂ ಚಿನ್ನಕ್ಕೆ ಸುಮಾರು 22,000 ರಿಂದ 45,000 ರೂಪಾಯಿವರೆಗೆ ಚಿನ್ನದ ಮೇಲೆ ಸಾಲ ಸಿಗುವಂತೆ ಸಾಧ್ಯತೆ ಇರುತ್ತದೆ

 

10 ಗ್ರಾಂ ಚಿನ್ನಕ್ಕೆ ವರ್ಷಕ್ಕೆ ಬಡ್ಡಿ ಎಷ್ಟು ಆಗುತ್ತದೆ..?

ಹೌದು ಸ್ನೇಹಿತರೆ, ನೀವೇನಾದರೂ sbi ಬ್ಯಾಂಕ್ ಮೂಲಕ 22 ಕ್ಯಾರೆಟ್ ಚಿನ್ನದ ಮೇಲೆ ಅಥವಾ 10 ಗ್ರಾಂ ಚಿನ್ನದ ಮೇಲೆ ಉದಾಹರಣೆ:+  ನೀವು ಸುಮಾರು 31 ಸಾವಿರ ಸಾಲ ಪಡೆದುಕೊಂಡಿದ್ದೀರಾ ಅಂದುಕೊಳ್ಳೋಣ ಇದರ ಮೇಲೆ ನಿಮಗೆ ಇಂಟರೆಸ್ಟ್ ರೇಟ್ ವರ್ಷಕ್ಕೆ 8.75% ರಿಂದ 9.90% ಬಡ್ಡಿದರ ನಿಗದಿ ಮಾಡಲಾಗಿದೆ ಎಂದು ತಿಳಿದುಕೊಳ್ಳೋಣ ನೀವು ಒಂದು ವರ್ಷದ ನಂತರ ಸಾಲ ಮರುಪಾವತಿಸಲು ಹೋದರೆ ನಿಮಗೆ ಸುಮಾರು ₹2600 ರಿಂದ 3100 ರೂಪಾಯಿವರೆಗೆ ಒಂದು ವರ್ಷಕ್ಕೆ ಬಡ್ಡಿ ಆಗಬಹುದು ಮತ್ತು ಇನ್ನಷ್ಟು ನಿಖರ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗಳಿಗೆ ಭೇಟಿ ನೀಡಿ

 

ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು (sbi gold loan)..?
  • ಬ್ಯಾಂಕ್ ಪಾಸ್ ಬುಕ್
  • ಆಧಾರ್ ಕಾರ್ಡ್
  • ಎರಡು ಪಾಸ್ಪೋರ್ಟ್ ಸೈಜ್ ಫೋಟೋ.
  • ವಿಳಾಸದ ಪುರಾವೆ ( ವೋಟರ್ ಐಡಿ, ಆಧಾರ್ ಕಾರ್ಡ್,)
  • ಗುರುತಿನ ಪುರಾವೆ (ಆಧಾರ್ ಕಾರ್ಡ್)

ಮತ್ತು ಇತರ ಹೆಚ್ಚುವರಿ ದಾಖಲಾತಿಗಳು ಬೇಕಾದರೆ ನೀವು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು SBI ಬ್ಯಾಂಕ್ ಶಾಖೆಗೆ ಬೇಟಿ ನೀಡಿ

 

ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವುದು ಹೇಗೆ (sbi gold loan)..?

ಸ್ನೇಹಿತರೆ ನಿಮ್ಮ ಹತ್ತಿರ ಚಿನ್ನ ಇದೆಯಾ..? ನೀವು ಎಸ್ಬಿಐ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಲು ಬಯಸಿದರೆ ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಬಳಿ ಇರುವಂತ ಚಿನ್ನವನ್ನು ತೆಗೆದುಕೊಂಡು ಹೋಗಿ ಅಲ್ಲಿ ನಿಮಗೆ 10 ಅಥವಾ ಒಂದು ಗಂಟೆಯ ಒಳಗಡೆ ನಿಮಗೆ ಚಿನ್ನದ ಮೇಲೆ ಸಾಲ ನೀಡಲಾಗುತ್ತದೆ ಹಾಗಾಗಿ ಇನ್ನಷ್ಟು ನಿಖರ ಮತ್ತು ಖಚಿತ ಮಾಹಿತಿಯನ್ನು ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದುಕೊಳ್ಳುತ್ತಿದ್ದೇನೆ ಹಾಗೂ ಇದೇ ರೀತಿ ಬ್ಯಾಂಕಿಂಗ್ ಸಂಬಂಧಿಸಿದಂತೆ ಮತ್ತು ವಿವಿಧ ರೀತಿ ಸಾಲಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಇದರ ಬಗ್ಗೆ ಯಾವುದೇ ಸಂದೇಹ ನಿಮ್ಮಲ್ಲಿ ಇದ್ದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು ಹಾಗೂ ನಿಮ್ಮ ಸಂದೇಹವನ್ನು ತೀರಿಸಿಕೊಳ್ಳಬಹುದು

Leave a Comment