Ration Card delete list:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಸುಮಾರು 40 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಪ್ರಾರಂಭ ಮಾಡಿದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂಬ ಮಾಹಿತಿಯನ್ನು ಯಾವ ರೀತಿ ತಿಳಿದುಕೊಳ್ಳುವುದು ಹಾಗೂ ಏಕೆ 40 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ.
ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ವಿವಿಧ ರೀತಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ನಮ್ಮ ಕರ್ನಾಟಕದ ಪ್ರತಿದಿನದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
31000 ರೈತರ ಸಾಲ ಮನ್ನಾ..! ಬೇಗ ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ
ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದು (Ration Card delete list)..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ರಾಜ್ಯದಲ್ಲಿ ಸುಮಾರು 1.27 ಕೋಟಿ ಬಿಪಿಎಲ್ ರೇಷನ್ ಕಾರ್ಡ್ ಗಳು ಇವೆ ಮತ್ತು 4.36 ಕೋಟಿ ಅಧಿಕ ಫಲಾನುಭವಿಗಳು ಈ ಬಿಪಿಎಲ್ ರೇಷನ್ ಕಾರ್ಡಿನ ಫಲಾನುಭವಿಗಳಾಗಿದ್ದಾರೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ ಸಾಕಷ್ಟು ಬಿಪಿಎಲ್ ರೇಷನ್ ಕಾರ್ಡ್ ದಾರು ಅಕ್ರಮವಾಗಿ ಮತ್ತು ಸುಳ್ಳು ದಾಖಲಾತಿಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಅಂತವರನ್ನು ಗುರುತಿಸಿ ಶೇಕಡ 40ಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದು ಮಾಡಲು ಸರ್ಕಾರ ಆದೇಶ ಮಾಡಿದೆ
ಹೌದು ಸ್ನೇಹಿತರೆ ಇದರ ಬಗ್ಗೆ ಖುದ್ದಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟ ಆದೇಶ ಮಾಡಿದ್ದಾರೆ. ನೀತಿ ಆಯೋಗ ನೀಡಿದ ವರದಿಯ ಪ್ರಕಾರ ನಮ್ಮ ರಾಜ್ಯದಲ್ಲಿ 7.5 ರಷ್ಟು ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ ಆದರೆ ರೇಷನ್ ಕಾರ್ಡ್ಗಳ ಸಂಖ್ಯೆ ನೋಡುವುದಾದರೆ ಶೇಕಡ 80ರಷ್ಟು ಗಡಿ ದಾಟಿದೆ ಹಾಗಾಗಿ ಇದರಲ್ಲಿ ಅರ್ಹತೆ ಹೊಂದಿದವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ನೀಡಬೇಕು ಹಾಗೂ ಅರ್ಹತೆ ಇಲ್ಲದಂತ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯನವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ
ಬಿಪಿಎಲ್ ರೇಷನ್ ಕಾರ್ಡ್ (Ration Card delete list) ಹೊಂದಲು ಇರುವ ಮಾನದಂಡಗಳು..?
- ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದ ವಾರ್ಷಿಕ ಆದಾಯ 1,20,000 ಕ್ಕಿಂತ ಕಡಿಮೆ ಇರಬೇಕು
- ಹಳ್ಳಿಗಳಲ್ಲಿ 3 ಹೆಕ್ಟರ್ ಗಿಂತ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರಬಾರದು.
- ನಗರ ಪ್ರದೇಶಗಳಲ್ಲಿ ನೂರು ಚಾದರ ಅಡಿ ವಿಸ್ತೀರ್ಣದ ಜಾಗ ಅಥವಾ ಸ್ವಂತ ಮನೆ ಹೊಂದಿರಬಾರದು
- ಸರಕಾರಿ ಹುದ್ದೆಗಳಲ್ಲಿ ಹಾಗೂ ಇತರ ಉನ್ನತ ಸಂಬಳ ನೀಡುವಂತ ಹುದ್ದೆಗಳಲ್ಲಿ ಕುಟುಂಬದ ಯಾರಾದರೂ ಸದಸ್ಯರು ಇದ್ದರೆ ಅಂತ ಬಿಪಿಎಲ್ ರೇಷನ್ ಕಾರ್ಡ್ಗಳ ರದ್ದು ಮಾಡಲಾಗುತ್ತದೆ
- ವೈಟ್ ಬೋರ್ಡ್ ಕಾರ್, ನಾಲ್ಕು ಚಕ್ರದ ವಾಹನ ಉಳ್ಳವರು ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ
ಈ ಮೇಲೆ ಕೊಟ್ಟಿದ್ದಂತ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದು ಆಗುವುದಿಲ್ಲ ಒಂದು ವೇಳೆ ನೀವು ಸುಳ್ಳು ದಾಖಲಾತಿ ಅಥವಾ ಶ್ರೀಮಂತರಾಗಿದ್ದರು ಬಿಪಿಎಲ್ ರೇಷನ್ ಕಾರ್ಡ್ ಬಳಸುತ್ತಿದ್ದರೆ ಅಂತವರ ರೇಷನ್ ಕಾರ್ಡ್ ಗಳನ್ನು ಶೀಘ್ರದಲ್ಲಿ ಗುರುತಿಸಿ ರದ್ದು ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಸ್ಪಷ್ಟ ಆದೇಶ ನೀಡಿದೆ
40 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ರದ್ದು (Ration Card delete list)..?
ಹೌದು ಸ್ನೇಹಿತರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ನೀಡಿರುವ ಆದೇಶದ ಪ್ರಕಾರ ಅರ್ಹತೆ ಹೊಂದಿದಂತ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾತ್ರ ಉಳಿಸಬೇಕು ಮತ್ತು ಅನರ್ಹ ಹೊಂದಿದಂತ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರುವ ಮಾನದಂಡಗಳನ್ನು ಪಾಲಿಸುತ್ತಿದ್ದರೆ ಅಂತವರ ರೇಷನ್ ಕಾರ್ಡ್ ಗಳನ್ನು ಕೂಡಲೇ ರದ್ದು ಮಾಡಿ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಹೌದು ಸ್ನೇಹಿತರೆ ಒಂದು ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹಜೋತಿ ಯೋಜನೆ, ಹಾಗೂ ಮುಂತಾದ ಯೋಜನೆಗಳ ಲಾಭ ಪಡೆದುಕೊಳ್ಳಬಹುದು ಮತ್ತು ಈ ಯೋಜನೆ ಬಡವರಿಗೆ ತಲುಪಿಸುವ ಉದ್ದೇಶದಿಂದ ಹಾಗೂ ಅಕ್ರಮವಾಗಿ ಈ ಯೋಜನೆಯನ್ನು ಮತ್ತು ಸುಳ್ಳು ದಾಖಲಾತಿಗಳನ್ನು ಒಂದೇ ಬಿಪಿಎಲ್ ರೇಷನ್ ಕಾರ್ಡ್ ಮೂಲಕ ಈ ಯೋಜನೆಯ ಲಾಭ ಪಡೆಯುತ್ತಿರುವಂತವರನ್ನು ಗುರುತಿಸಲಾಗುತ್ತಿದೆ ಮತ್ತು ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ.
ಈ ಪ್ರಕಾರ ಆಹಾರ ಇಲಾಖೆ ಬಡತನ ರೇಖೆಗಿಂತ ಮೇಲಿರುವಂತವರು ಹಾಗೂ ಶ್ರೀಮಂತರು ಮತ್ತು ತೆರಿಗೆ ಪಾವತಿ ಮಾಡುತ್ತಿರುವವರು ಅಂತವರನ್ನು ಈಗಾಗಲೇ ಗುರುತಿಸಿದ್ದು ಶೇಕಡ 20ರಷ್ಟು ಬಿಪಿಎಲ್ ರೇಷನ್ ಕಾರ್ಡ್ ಗಳು ಬೆಂಗಳೂರಿನಲ್ಲಿ ಮಾತ್ರ ಪತ್ತೆಯಾಗಿದ್ದು ಇನ್ನುಳಿದ ಕಡೆ ಜಾಸ್ತಿ ಅಕ್ರಮವಾಗಿ ಮತ್ತು ಸುಳ್ಳು ದಾಖಲಾತಿಗಳು ನೀಡಿರುವಂತಹ ಬಿಪಿಎಲ್ ರೇಷನ್ ಕಾರ್ಡ್ ಗಳು ಪತ್ತೆ ಆಗುವಂತ ಸಾಧ್ಯತೆ ಇದೆ ಹಾಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈಗಾಗಲೇ ಅಂತಹ ರೇಷನ್ ಕಾರ್ಡ್ ಗಳ ಪತ್ತೆ ಹಚ್ಚುವಿಕೆ ಕಾರ್ಯ ಶುರು ಮಾಡಿದೆ.
ಸದ್ಯ ನಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರತಿ ತಿಂಗಳು ಒಂದಿಷ್ಟು ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಿದೆ ಮತ್ತು ರದ್ದು ಮಾಡಿದಂತ ರೇಷನ್ ಕಾರ್ಡ್ ಪಟ್ಟಿಯನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತಿದೆ ನಾವು ಅದನ್ನು ಯಾವ ರೀತಿ ತಿಳಿದುಕೊಳ್ಳುವುದು ಅಥವಾ ಯಾವ ರೀತಿ ನೋಡುವುದು ಎಂಬ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ
ರದ್ದು ಮಾಡಲಾದ ರೇಷನ್ ಕಾರ್ಡ್ ಗಳ ಮಾಹಿತಿ ಚೆಕ್ ಮಾಡುವುದು ಹೇಗೆ (Ration Card delete list)..?
ಸ್ನೇಹಿತರೆ ನೀವು ಈ ತಿಂಗಳ ರದ್ದಾದ ಅಥವಾ ಡಿಲೀಟ್ ಮಾಡಲಾದ ರೇಷನ್ ಕಾರ್ಡ್ಗಳ ವಿವರ ತಿಳಿದುಕೊಳ್ಳಬೇಕೆಂದರೆ ಆಹಾರ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ.
ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಹೋದ ನಂತರ ನಿಮಗೆ ಅಲ್ಲಿ ಈ ಸರ್ವಿಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮಗೆ (Show Cancelled / Suspended list) ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ
ನಂತರ ನಿಮಗೆ ಅಲ್ಲಿ ನೀವು ನಿಮ್ಮ ಜಿಲ್ಲೆ ಹಾಗೂ ತಾಲೂಕುವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಅಲ್ಲಿ ಯಾವ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ವೀಕ್ಷಣೆ ಮಾಡಲು ಬಯಸುತ್ತೀರಿ ಆ ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ ನಂತರ ವರ್ಷ ಆಯ್ಕೆ ಮಾಡಿಕೊಂಡು ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ರೇಷನ್ ಕಾರ್ಡ್ ರದ್ದು ಪಟ್ಟಿ ನಿಮಗೆ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆ ಎಂದು ಅಥವಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಬಹುದು.
ಈ ಮಾಹಿತಿ ನಿಮಗೆ ಇಷ್ಟವಾದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿಯನ್ನು ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು