New Ration Card update 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅಥವಾ ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ ಹಾಗಾಗಿ ರಾಜ್ಯ ಸರ್ಕಾರ ಕಡೆಯಿಂದ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದೆ ಹಾಗಾಗಿ ಇಂಥವರಿಗೆ ಇನ್ನು ಮುಂದೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ ಯಾವ ರೂಲ್ಸ್ ಎಂದು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ಇವತ್ತು ಒಂದು ರೇಷನ್ ಕಾರ್ಡ್ ಇದ್ದರೆ ಏನು ಇಲ್ಲ ಅಂದರು ನಮ್ಮ ಕರ್ನಾಟಕ ಸರ್ಕಾರ ಕಡೆಯಿಂದ 5000 ಪ್ರತಿ ತಿಂಗಳು ಉಚಿತವಾಗಿ ಪಡೆದುಕೊಳ್ಳಬಹುದು ಹಾಗಾಗಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಮಾಡಿಸಲು ಕಾಯುತ್ತಿದ್ದಾರೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ಕಾಯುತ್ತಿದ್ದಾರೆ ಆದ್ದರಿಂದ ನಮ್ಮ ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈಗಾಗಲೇ ಅವಕಾಶ ಕೊಟ್ಟಿದೆ ಮತ್ತು ಮುಂದೆ ಬರುವ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಕೊಡುತ್ತಿದ್ದು ಈ ಬಗ್ಗೆ ಹೊಸ ನಿಯಮಾವಳಿಗಳನ್ನು ಜಾರಿಗೆ ಮಾಡಿದೆ ಇದರ ಮಾಹಿತಿಯನ್ನು ತಿಳಿದುಕೊಳ್ಳೋಣ
ಬಿಪಿಎಲ್ ರೇಷನ್ ಕಾರ್ಡ್ (New Ration Card update 2024)…?
ಹೌದು ಸ್ನೇಹಿತರೆ, ಆಹಾರ ಭದ್ರತೆ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ನಮ್ಮ ಭಾರತ ಸರಕಾರದಿಂದ ಹಾಗೂ ರಾಜ್ಯ ಸರ್ಕಾರ ಕಡೆಯಿಂದ ಉಚಿತವಾಗಿ ಅಕ್ಕಿಯನ್ನು ನೀಡಲಾಗುತ್ತಿದೆ ರಾಜ್ಯ ಸರ್ಕಾರ ಕಡೆಯಿಂದ 5 ಕೆಜಿ ಅಕ್ಕಿಗೆ ಹಣ ಹಾಗೂ ಕೇಂದ್ರ ಸರ್ಕಾರ ಕಡೆಯಿಂದ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ ಹಾಗಾಗಿ ತುಂಬಾ ಜನರು ಬಿಪಿಎಲ್ ರೇಷನ್ ಕಾರ್ಡ್ ಒಂದನ್ನು ಬಯಸುತ್ತಿದ್ದಾರೆ ಮತ್ತು ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಎಂದು ಹೇಳಬಹುದು
7ನೇ ತರಗತಿ ಪಾಸಾದವರಿಗೆ KSRTC ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ
ಹಾಗಾಗಿ ನಮ್ಮ ರಾಜ್ಯ ಸರ್ಕಾರ ಈಗಾಗಲೇ ಅಕ್ರಮವಾಗಿ ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿದಂತ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದೆ ಹೀಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಗುಲ್ಬರ್ಗ ಒಂದರಲ್ಲಿ 15000 ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಮತ್ತು ನಮ್ಮ ರಾಜ್ಯದಾದ್ಯಂತ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದ್ದು ಹಾಗಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಹೊಸ ನಿಯಮಾವಳಿಗಳನ್ನು ಜಾರಿಗೆ ಮಾಡಿದೆ ಈ ನಿಯಮಾವಳಿಗಳನ್ನು ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಗಳು ಸಿಗುವುದಿಲ್ಲ ಹಾಗಾಗಿ ಇದರ ವಿವರವನ್ನು ತಿಳಿದುಕೊಳ್ಳೋಣ
ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಹೊಸ ರೂಲ್ಸ್ (New Ration Card update 2024)..?
ಸ್ನೇಹಿತರೆ ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡ್ ಪಡೆಯಬೇಕು ಅಂದುಕೊಂಡರೆ ಕಡ್ಡಾಯವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಈ ನಿಯಮಾವಳಿಗಳನ್ನು ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
- ನಗರ ಪ್ರದೇಶಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ 100 ಚದರ್ ಮೀಟರ್ ಗಿಂತ ಹೆಚ್ಚು ಜಾಗವನ್ನು (flat) ಅಥವಾ ಮನೆಯನ್ನು ಹೊಂದಿದ್ದರೆ ಅಂತವರಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ ಮತ್ತು ಇದ್ದ ಬಿಪಿಎಲ್ ರೇಷನ್ ಕಾರ್ಡ್ ಕೂಡ ಕ್ಯಾನ್ಸಲ್ ಮಾಡಲಾಗುತ್ತದೆ
- ಐಷಾರಾಮಿ ಕಾರು ಹಾಗೂ ಟ್ಯಾಕ್ಟರ್ ಸೇರಿದಂತೆ ಮತ್ತು ವೈಟ್ ಬೋರ್ಡ್ ಹೊಂದಿದ ಯಾವುದೇ ನಾಲ್ಕು ಚಕ್ರದ ವಾಹನವನ್ನು ಹೊಂದಿದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ ಜೊತೆಗೆ ಇದ್ದ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ
- ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅಥವಾ ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಬಂದಿದ್ದರೆ ಅಂತಹ ಜನರು ಮನೆಯಲ್ಲಿ AC ಹಾಗೂ ರಿಪ್ರಿಜರೇಟರ್ ಬಳಸುತ್ತಿದ್ದರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ
- ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಅಥವಾ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಂತಹ ಜನರು ತಮ್ಮ ಕುಟುಂಬದಲ್ಲಿ ಯಾವುದೇ ರೀತಿ ಸರಕಾರಿ ನೌಕರಿಗಳು ಹಾಗೂ ಉನ್ನತ ಸಂಬಳ ತರುವ ಖಾಸಗಿ ಸಂಸ್ಥೆಯ ಉದ್ಯೋಗ ಹೊಂದಿರಬಾರದು
- ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು 1500 ಗಿಂತ ಹೆಚ್ಚು ವಿದ್ಯುತ್ ಬಿಲ್ ಕಟ್ಟುತ್ತಿದ್ದರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದೇ ಇಲ್ಲ ಜೊತೆಗೆ ಇದ್ದ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ
ಈ ಮೇಲೆ ನೀಡಿದಂತ ಎಲ್ಲಾ ರೂಲ್ಸ್ ಗಳನ್ನು ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಪಾಲಿಸಬೇಕಾಗುತ್ತದೆ ಜೊತೆಗೆ ನೀವು ಯಾವುದಾದರು ಈ ಮೇಲಿನ ರೂಲ್ಸ್ ಅಲ್ಲಿ ಇದ್ದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಸದ್ಯದಲ್ಲೇ ಕ್ಯಾನ್ಸಲ್ ಮಾಡಲಾಗುತ್ತದೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವವರಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ರೇಷನ್ ಕಾರ್ಡ್ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು