Anna Bhagya DBT status:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣಕ್ಕಾಗಿ ಕಾಯುತ್ತಾ ಇದ್ದೀರಾ ಮತ್ತು ನಿಮಗೆ ಪೆಂಡಿಂಗ್ ಇರುವಂತಹ ಎರಡರಿಂದ ಮೂರು ಕಂತಿನ ಹಣ ಬಂದಿಲ್ವಾ..! ಹಾಗಾದರೆ ಸರ್ಕಾರ ಕಡೆಯಿಂದ ಹಕ್ಕಿ ಹಣ ಬಿಡುಗಡೆಗೆ ಹೊಸ ರೂಲ್ಸ್ ಜಾರಿ ಮಾಡಿದ್ದಾರೆ ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುತ್ತೆ ಈ ಮಾಹಿತಿಯನ್ನು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ನೀವು ಪಿಯುಸಿ ಪಾಸ್ ಆಗಿದ್ದೀರಾ..? 40000 ಸ್ಕಾಲರ್ಶಿಪ್ ಹಣ ಬೇಕಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾಲಿರುವ ಹುದ್ದೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಯೋಜನೆಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದಂತ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕು ಅಂದರೆ ನೀವು ನಮ್ಮ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
(Anna Bhagya DBT status) ಅನ್ನಭಾಗ್ಯ ಯೋಜನೆ..?
ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡುತ್ತವೆ ಎಂಬ ಭರವಸೆಯನ್ನು ನೀಡಿತ್ತು ಆದರೆ ಅಕ್ಕಿಯ ಅಭಾವದಿಂದ ಕೇಂದ್ರ ಸರ್ಕಾರ ನೀಡುತ್ತಿರುವಂತಹ 5 ಕೆಜಿ ಅಕ್ಕಿಯನ್ನು ಮಾತ್ರ ಈ ಯೋಜನೆ ಮೂಲಕ ಫಲಾನುಭವಿಗಳು ಪಡೆದಿದ್ದು ಇನ್ನುಳಿದ 5 ಕೆಜಿ ಅಕ್ಕಿ ಹಣವನ್ನು ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ
ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿಯಲ್ಲಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆ.ಜಿ ಅಕ್ಕಿಗೆ 170 ಹಣವನ್ನು ರೇಷನ್ ಕಾರ್ಡ್ ನಲ್ಲಿರುವಂತ ಎಲ್ಲಾ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಅಂದರೆ ಒಂದು ರೇಷನ್ ಕಾರ್ಡ್ ನಲ್ಲಿ ಐದು ಜನ ಸದಸ್ಯರಿದ್ದಾರೆ 850 ರೂಪಾಯಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತೆ
ಅನ್ನಭಾಗ್ಯ ಯೋಜನೆಯ (Anna Bhagya DBT status) ಅಕ್ಕಿ ಹಣ ಯಾವಾಗ ಬಿಡುಗಡೆ..?
ಹೌದು ಸ್ನೇಹಿತರೆ ತುಂಬಾ ಜನರು ಅನ್ನ ಭಾಗ್ಯ ಯೋಜನೆ ಮೂರರಿಂದ ನಾಲ್ಕು ಕಂತಿನ ಅಕ್ಕಿ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ..! ಇದರ ಬಗ್ಗೆ ಆಹಾರ ಇಲಾಖೆ ಕಡೆಯಿಂದ ಸ್ಪಷ್ಟ ಮಾಹಿತಿ ಬಂದಿದ್ದು ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಪೆಂಡಿಂಗ್ ಇರುವಂತಹ ಎಲ್ಲಾ ಹಣವನ್ನು ಜೂನ್ ತಿಂಗಳು 30 ನೇ ತಾರೀಖಿನ ಒಳಗಡೆ ಅಥವಾ ಜುಲೈ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ
ಹೌದು ಸ್ನೇಹಿತರೆ ನಿಮಗೆ ಪೆಂಡಿಂಗ್ ಇರುವಂತಹ ಅಕ್ಕಿ ಹಣ ಹಾಗೂ ಜೂನ್ ತಿಂಗಳ ಆಯ್ಕೆ ಹಣ ನಿಮ್ಮ ಖಾತೆಗೆ ಇದೇ ತಿಂಗಳು 30 ನೇ ತಾರೀಖಿನ ಒಳಗಡೆ ಅಥವಾ ಜುಲೈ ಮೊದಲ ವಾರದಲ್ಲಿ ಜಮಾ ಮಾಡಲಾಗುತ್ತೆ. ಈ ಅಕ್ಕಿ ಹಣ ಜಮಾ ಮಾಡಬೇಕು ಅಂದರೆ ಕಡ್ಡಾಯವಾಗಿ ಸರಕಾರ ಕಡೆಯಿಂದ ಜಾರಿ ಮಾಡಲಾದಂತ ಈ ಹೊಸ ರೂಲ್ಸ್ ಗಳನ್ನು ಪಾಲಿಸಬೇಕು ಅವುಗಳ ಬಗ್ಗೆ ಈ ಕೆಳಗಡೆ ವಿವರಿಸಲಾಗಿದೆ.
ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಪಡೆಯಲು (Anna Bhagya DBT status) ಇರುವ ಹೊಸ ರೂಲ್ಸ್..?
ರೇಷನ್ ಕಾರ್ಡ್ E-KYC:- ಹೌದು ಸ್ನೇಹಿತರೆ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಪಡೆಯಬೇಕೆಂದರೆ ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಈ ಕೆವೈಸಿ ಮಾಡಿಸಬೇಕು ಮತ್ತು ರೇಷನ್ ಕಾರ್ಡ್ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುತ್ತೆ
ಬ್ಯಾಂಕ್ ಖಾತೆ:- ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಪಡೆಯುತ್ತಿರುವಂತ ಪಾಲಾನುಭವಿಯ ಅಥವಾ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಈ ಕೆವೈಸಿ ಮತ್ತು NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ ಅಂದರೆ ಮಾತ್ರ ಹಣ ಬರುತ್ತೆ
ಆಧಾರ್ ಕಾರ್ಡ್ ಅಪ್ಡೇಟ್:- ಅನ್ನಭಾಗ್ಯ ಯೋಜನೆಯ ಫಲಾನುಭವಿಯ ಅಥವಾ ರೇಷನ್ ಕಾರ್ಡ್ ನಲ್ಲಿರುವಂತ ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಹತ್ತು ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಸಿಲ್ಲವೆಂದರೆ ಅಂತವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅಂದರೆ ಮಾತ್ರ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುತ್ತೆ..
ರೇಷನ್ ಪಡೆಯುವುದು:- ಅನ್ನ ಭಾಗ್ಯ ಯೋಜನೆ ಪ್ರತಿ ತಿಂಗಳು ಅಕ್ಕಿ ಹಣ ಬರಬೇಕೆಂದರೆ ನೀವು ಕಡ್ಡಾಯವಾಗಿ ನಿಮ್ಮ ನ್ಯಾಯಬೆಲೆ ಅಂಗಡಿಯ ಮೂಲಕ ಅಥವಾ ಕರ್ನಾಟಕದಲ್ಲಿರುವ ಯಾವುದೇ ನ್ಯಾಯಬೆಲೆ ಅಂಗಡಿಯ ಮೂಲಕ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಬೇಕು ಒಂದು ವೇಳೆ ಆರು ತಿಂಗಳಗಳ ಕಾಲ ಯಾವುದೇ ರೇಷನ್ ಪಡೆದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಮತ್ತು ಅನ್ನ ಭಾಗ್ಯ ಯೋಜನೆ ಅಕ್ಕಿ ಅಳಲು ಕೂಡ ಬರುವುದಿಲ್ಲ ಹಾಗಾಗಿ ಪ್ರತಿ ತಿಂಗಳು ರೇಷನ್ ಪಡೆಯಲು ಪ್ರಯತ್ನ ಮಾಡಿ
ಈ ಮೇಲೆ ನೀಡಿದಂತಹ ಎಲ್ಲಾ ರೂಲ್ಸ್ ಗಳನ್ನು ಪಾಲಿಸಿದ್ರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುತ್ತೆ ಇಲ್ಲವಾದರೆ ನಿಮಗೆ ಯಾವುದೇ ಕಂತಿನ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುವುದಿಲ್ಲ
ವಿಶೇಷ ಸೂಚನೆ:- ಸ್ನೇಹಿತರೆ ನಿಮ್ಮ ಎಲ್ಲಾ ಖಾತೆ ಸರಿಯಾಗಿದ್ದು ಕೂಡ ನಿಮಗೆ ಅನ್ನ ಭಾಗ್ಯ ಯೋಜನೆಯ ಯಾವುದೇ ಕಂತಿನ ಹಣ ಬರುತ್ತಿಲ್ಲವೆಂದರೆ ನೀವು ನಿಮ್ಮ ಹತ್ತಿರದ ತಾಲೂಕು ಅಥವಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಆಹಾರ ಇಲಾಖೆಗೆ ಭೇಟಿ ನೀಡಿ ಯಾವ ಸಮಸ್ಯೆಯಿಂದ ನಿಮಗೆ ಅನ್ನ ಭಾಗ್ಯವನ್ನು ತಿಳಿದುಕೊಳ್ಳಬಹುದು
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ನನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಇದೇ ರೀತಿ ಪ್ರತಿದಿನ ಸುದ್ದಿ ಪಡೆಯಲು ನೀವು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು