Swaalanbi Sarati Yojane: ಸ್ವಾಲಂಬಿ ಸಾರಥಿ ಯೋಜನೆಯಡಿಯಲ್ಲಿ ಈಗ ಮೂರು ಲಕ್ಷ ಸಬ್ಸಿಡಿ ಗೆ ಅರ್ಜಿ ಸಲ್ಲಿಕೆ  ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

Swaalanbi Sarati Yojane: ಸ್ವಾಲಂಬಿ ಸಾರಥಿ ಯೋಜನೆಯಡಿಯಲ್ಲಿ ಈಗ ಮೂರು ಲಕ್ಷ ಸಬ್ಸಿಡಿ ಗೆ ಅರ್ಜಿ ಸಲ್ಲಿಕೆ  ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ನಮ್ಮ ರಾಜ್ಯದಲ್ಲಿರುವಂತ ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಮಾಡಲು ಬಯಸುವ ಉದ್ದೇಶದಿಂದ ಈಗ ಕರ್ನಾಟಕ ಸರ್ಕಾರವು ಈ ಒಂದು ಸ್ವಾಲಂಬಿ ಯೋಜನೆ ಅಡಿಯಲ್ಲಿ ಈಗ ಯಾರೆಲ್ಲಾ ಕಾರು, ಆಟೋರಿಕ್ಷ ಮತ್ತು ಗೂಡ್ಸ್ ವಾಹನಗಳನ್ನು ಖರೀದಿ ಮಾಡಲು ಈಗ ಸರ್ಕಾರವು ಸಹಾಯಧನವನ್ನು ನೀಡಲು ಮುಂದಾಗಿದೆ.

Swaalanbi Sarati Yojane

ಈಗ ಈ ಒಂದು ಯೋಜನೆಯಲ್ಲಿ ನೀವು ಗರಿಷ್ಠ 3 ಲಕ್ಷದವರೆಗೆ ಸಾಲ ಅಥವಾ ವಾಹನ ಮೌಲ್ಯದ ಶೇಕಡ 50ರಷ್ಟು ಸಾಲವನ್ನು ಪಡೆದುಕೊಳ್ಳಬಹುದು. ಅರ್ಹವಿರುವಂತ ಯುವಕರು ಅಥವಾ ನಿರುದ್ಯೋಗಿ ಯುವಕರು ನಿಗದಿತ ಅವಧಿ ಒಳಗೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.

ಈ ಯೋಜನೆಯ ಮಾಹಿತಿ

ಈಗ ಈ ಒಂದು ಸ್ವಾಲಂಬಿ ಸಾರಥಿ ಯೋಜನೆಯ ಎಂಬುದು 2023 –  24ನೇ ಸಾಲಿನಲ್ಲಿ ರಾಜ್ಯದ ಬಜೆಟ್ಟಿನಲ್ಲಿ ಮುಖ್ಯಮಂತ್ರಿಗಳಂತ ಸಿಎಂ ಸಿದ್ದರಾಮಯ್ಯನವರಿಂದ ಘೋಷಿತವಾದಂತ ಯೋಜನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ವಿವಿಧ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕರಿಗೆ ವಾಹನಗಳನ್ನು ಖರೀದಿ ಮಾಡುವ ಸಮಯದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ.

ಇದನ್ನು ಓದಿ : Mudra loan apply: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ದೊರೆಯುವ ಸಬ್ಸಿಡಿ ಎಷ್ಟು?

  • ಈಗ ನೀವೇನಾದರೂ ಖರೀದಿ ಮಾಡಿದಂತಹ ವಾಹನ ಮೌಲ್ಯದ ಶೇಕಡ 50ರಷ್ಟು ಅಥವಾ ಗರಿಷ್ಠ 3 ಲಕ್ಷದವರೆಗೆ ನಿಗಮಗಳಿಂದ ನಿಮಗೆ ಸಬ್ಸಿಡಿ ದೊರೆಯುತ್ತದೆ.
  • ಆನಂತರ ಟ್ಯಾಕ್ಸಿ, ಟಾಟಾ ಎಸಿ ವಾಹನ ಖರೀದಿಗೆ ರಾಷ್ಟ್ರಕೃತ ಅಥವಾ ಗ್ರಾಮೀಣ ಬ್ಯಾಂಕುಗಳ ಮೂಲಕ ಸಾಲವನ್ನು ನೀಡಲಾಗುತ್ತದೆ.
  • ಹಾಗೆ ಈಗ ಖರೀದಿ ಮಾಡಿದಂತಹ ವಾಹನ ಸ್ವಂತ ಚಾಲನೆಯ ಉದ್ದೇಶಕ್ಕೆ ಬಳಸುವುದು ಕಡ್ಡಾಯ.
  • ಆನಂತರ ಇನ್ನುಳಿದಂತ ಮೊತ್ತವನ್ನು ಬಡ್ಡಿಯೊಂದಿಗೆ ಅರ್ಹತಾ ಬ್ಯಾಂಕಿನಿಂದ ಕಂತುಗಳ ಮೂಲಕ ನೀವು ಮರುಪಾವತಿ ಮಾಡಬೇಕಾಗುತ್ತದೆ.

ಯಾರೆಲ್ಲಾ ಅರ್ಜಿಯನ್ನು ಸಲ್ಲಿಕೆ ಮಾಡಬಹುದು

ಈಗ ನಾವು ಈ ಕೆಳಗೆ ನೀಡಿರುವಂತಹ ಸಮುದಾಯದವರು ಈಗ ಹಾಗೂ 21ರಿಂದ 45 ವರ್ಷ ವಯಸ್ಸಿನ ಪ್ರತಿಯೊಬ್ಬ ನಿರುದ್ಯೋಗಿ ಯುವಕರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now       
  • ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
  • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
  • ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ
  • ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ
  • ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ
  • ನಿಜಗುಣ ಶರಣ ಅಂಬಿಗರ ಚೌಡಯ್ಯ ನಿಗಮ
  • ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
  • ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ
  • ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
  • ಕರ್ನಾಟಕ ಮಾರಾಟ ಸಮುದಾಯಗಳ ನಿಗಮ

ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ 21 ರಿಂದ 45 ವರ್ಷದ ಒಳಗೆ ಇರಬೇಕು.
  • ಆನಂತರ ಅರ್ಜಿದಾರ ಗ್ರಾಮೀಣ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 98,000  ಒಳಗೆ ಇರಬೇಕು.
  • ಹಾಗೆ ಅರ್ಜಿದಾರರು ನಗರ ಪ್ರದೇಶದಲ್ಲಿ ಇದ್ದರೆ ಅವರ ಆದಾಯ ವಾರ್ಷಿಕವಾಗಿ 1.20 ಲಕ್ಷದ ಒಳಗೆ ಇರಬೇಕು.
  • ಹಾಗೆ ಸಾರಿಗೆ ಇಲಾಖೆಯಿಂದ ಲಘುವಹನ ಚಾಲನೆ ಪರವಾನಿಗೆಯನ್ನು ಹೊಂದಿರಬೇಕಾಗುತ್ತದೆ.
  • ಅರ್ಜಿದಾರರು ಈ ಹಿಂದೆ ಯಾವ ನಿಗಮಗಳಿಂದ ಸಾಲವನ್ನು ಪಡೆದುಕೊಂಡಿರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸಾಧನ ಪರವಾನಿಕೆ ಪತ್ರ
  • ಬ್ಯಾಂಕ್ ಖಾತೆ ವಿವರ
  • ಸ್ವಯಂ ಘೋಷಣೆ ಪತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ಅರ್ಹ ಇರುವಂತ ಅಭ್ಯರ್ಥಿಗಳು ಈ ಒಂದು ಅಂದರೆ ತಮಗೆ ಸಂಬಂಧಿಸಿದಂತೆ ಸಮುದಾಯದ ಅಭಿವೃದ್ಧಿ ನಿಗಮಗಳ ಮೂಲಕ ಸೇವಾ ಸಿಂಧು ಪೋರ್ಟನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅಲ್ಲಿಯು ಕೂಡ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಈಗ ಇದೆ ತಿಂಗಳು ಜೂನ್ 30 ಕೊನೆಯ ದಿನಾಂಕ ವಾಗಿರುತ್ತದೆ. ಆದ ಕಾರಣ ಆ ದಿನಾಂಕದ ಒಳಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಇದನ್ನು ಓದಿ : Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಸಚಿವರು ನೀಡಿರುವ ಮಾಹಿತಿ ಏನು? ಇಲ್ಲಿದೆ ನೋಡಿ ಮಾಹಿತಿ.

WhatsApp Group Join Now
Telegram Group Join Now       

Leave a Comment