Ration card online apply Karnataka :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬೇಕು ಅಂದಿದ್ದರೆ ನಿಮಗೆ ಸುವರ್ಣ ಅವಕಾಶವೆಂದು ಹೇಳಬಹುದು ಏಕೆಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬೇಕಾಗುವ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಯಾವಾಗ ಅವಕಾಶ ಮಾಡಿಕೊಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ
ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಎಂಬುದು ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತೇ ಇದೆ ಈಗಂತೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ ಈ ಗ್ಯಾರಂಟಿಗಳನ್ನು ನೀವು ಪಡೆಯಬೇಕೆಂದರೆ ಕಡ್ಡಾಯವಾಗಿ ನೀವು ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ ಹಾಗಾಗಿ ತುಂಬಾ ಜನರು ರೇಷನ್ ಕಾರ್ಡ್ ಮಾಡಿಸಲು ಕಾತುರದಿಂದ ಎದುರು ನೋಡುತ್ತಿದ್ದಾರೆ ಎಂದು ಹೇಳಬಹುದು
ರೇಷನ್ ಕಾರ್ಡ್ ಮಾಡಲು ಕಳೆದ ಮೂರು ವರ್ಷಗಳಿಂದ ಯಾವುದೇ ಸರಕಾರವು ಸರಿಯಾಗಿ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕೊಟ್ಟಿಲ್ಲ ಒಂದು ವೇಳೆ ಅವಕಾಶ ಕೊಟ್ಟಿದ್ದರೂ ಜನರು ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಸರ್ವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಇದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿ ಕೊಡುತ್ತಿದ್ದೇವೆ
ನಾವು ಈ ಲೇಖನಿಯಲ್ಲಿ ಹೊಸ ರೇಷನ್ ಕಾರ್ಡ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಇಲ್ಲಿವರೆಗೂ ಎಷ್ಟು ದಿನ ಅವಕಾಶ ಕೊಡಲಾಗಿದೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಯಾವಾಗ ಅವಕಾಶ ಕೊಡಲಾಗುತ್ತದೆ ಮತ್ತು ರೇಷನ್ ಕಾರ್ಡ್ ನಿಂದ ಆಗುವಂತಹ ಉಪಯೋಗಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ವಿವರಣೆ ಕೊಡುತ್ತೇವೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ನಿಮಗೆ ಸರಕಾರಿ ನೌಕರಿಗಳ ಕುರಿತು ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಕಾಲಿರುವ ಹುದ್ದೆಗಳಿಗೆ ಯಾವಾಗ ಅರ್ಜಿ ಕರೆಯಲಾಗುತ್ತದೆ ಹಾಗೂ ಸರಕಾರಿ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಎಷ್ಟು ಉದ್ದಗಳು ಖಾಲಿ ಇವೆ ಹಾಗೂ ಎಷ್ಟು ಸಂಬಳ ನೀಡಲಾಗುತ್ತದೆ ಹಾಗೂ ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಈ ರೀತಿ ಅನೇಕ ಮಾಹಿತಿಗಳನ್ನು ಜೊತೆಗೆ ಸರ್ಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ರೈತರಿಗೆ ಉಪಯೋಗವಾಗುವಂತಹ ಯೋಜನೆಗಳು ಯಾವುವು..? ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿ ಯಾವಾಗ ಬಿಡುತ್ತಾರೆ ಈ ರೀತಿ ಪ್ರತಿಯೊಂದು ಮಾಹಿತಿ ನೀವು ಬೇಗ ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ನೀವು ನಮ್ಮ WhatsApp & Telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ
(Ration card online apply Karnataka) ರೇಷನ್ ಕಾರ್ಡ್..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ರೇಷನ್ ಕಾರ್ಡನ್ನು ಒಂದು ಗುರುತಿನ ಆಧಾರವಾಗಿ ಬಳಸಲಾಗುತ್ತದೆ ಜೊತೆಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಯಾವುದೇ ಒಂದು ಯೋಜನೆಯನ್ನು ಜಾರಿಗೆ ತಂದರೆ ಕಡ್ಡಾಯವಾಗಿ ರೇಷನ್ ಕಾರ್ಡನ್ನು ಒಂದು ಮಾನದಂಡವಾಗಿ ಬಳಸಲಾಗುತ್ತದೆ ಏಕೆಂದರೆ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಂದರೆ ಬಡವರಿಗೆ ಮಾತ್ರ ನೀಡಲಾಗುತ್ತದೆ ಹಾಗಾಗಿ ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದರೆ ಈ ರೇಷನ್ ಕಾರ್ಡನ್ನು ಒಂದು ಮಾನದಂಡವಾಗಿ ಬಳಸಲಾಗುತ್ತದೆ
ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಅವುಗಳು ಯಾವಂದರೆ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಯುವ ನಿಧಿ, ಮತ್ತು ಶ್ರೀ ಶಕ್ತಿ ಯೋಜನೆ ಈ 5 ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಈ ಐದು ಯೋಜನೆಗಳಿಗೆ ಅಥವಾ ಈ ನಾಲ್ಕು ಯೋಜನೆಗಳಿಗೆ ರೇಷನ್ ಕಾರ್ಡನ್ನು ಒಂದು ಮಾನದಂಡವಾಗಿ ಬಳಸಲಾಗುತ್ತಿದೆ
ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲವೆಂದರೆ ಯಾವುದೇ ಗ್ಯಾರೆಂಟಿ ಯೋಜನೆಗಳ ಅಥವಾ ಸರಕಾರದಿಂದ ಬರುವಂತಹ ಕೆಲವೊಂದು ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ
ಹಾಗಾಗಿ ಒಂದು ರೇಷನ್ ಕಾರ್ಡ್ ಎಷ್ಟು ಮುಖ್ಯ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ ಇವಾಗ ನಾವು ರೇಷನ್ ಕಾರ್ಡ್ ನಲ್ಲಿ ಎಷ್ಟು ವಿಧಗಳಿವೆ ಹಾಗೂ ಯಾವೆಲ್ಲ ರೇಷನ್ ಕಾರ್ಡ್ ಗಳಿಂದ ಏನು ಉಪಯೋಗ ಎಂಬುದು ಇವಾಗ ತಿಳಿಯೋಣ
(Ration card online apply Karnataka) ರೇಷನ್ ಕಾರ್ಡ್ ನಲ್ಲಿ ಎಷ್ಟು ವಿಧ..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ರೇಷನ್ ಕಾರ್ಡ್ ನಲ್ಲಿ ಐದು ಪ್ರಮುಖ ರೇಷನ್ ಕಾರ್ಡ್ಗಳನ್ನು ನೀಡಲಾಗುತ್ತಿದ್ದು ಅದರಲ್ಲಿ ಪ್ರಮುಖವಾಗಿ ಮೂರು ರೇಷನ್ ಕಾರ್ಡ್ ಗಳು ಚಾಲ್ತಿಯಲ್ಲಿವೆ ಅವುಗಳು ಯಾವೆಂದು ಇವಾಗ ತಿಳಿದುಕೊಳ್ಳೋಣ
BPL ರೇಷನ್ ಕಾರ್ಡ್:- ಹೌದು ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ಅಂದರೆ (below poverty line) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಈ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯಬೇಕೆಂದರೆ ಕೆಲವೊಂದು ನಿಯಮಗಳು ಹಾಗೂ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ
ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡ್ ಪಡೆಯಬೇಕು ಅಂದರೆ ನಿಮ್ಮ ವಾರ್ಷಿಕ ಆದಾಯ 2,50,000 ಕ್ಕಿಂತ ಕಡಿಮೆ ಇರಬೇಕಾಗುತ್ತದೆ ಅಂದರೆ ಮಾತ್ರ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಪಡೆದಿರುತ್ತಿರಿ
AAY ರೇಷನ್ ಕಾರ್ಡ್:- ಅಂತೋದಯ ರೇಷನ್ ಕಾರ್ಡ್ ಹೌದು ಸ್ನೇಹಿತರೆ ಈ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳನ್ನು ಅತ್ಯಂತ ಕಡುಬಡುವರೆಂದು ಗುರುತಿಸಲಾಗುತ್ತದೆ ಹಾಗೂ ಈ ರೇಷನ್ ಕಾರ್ಡ್ ಪಡೆಯಲು ನಿಮ್ಮ ವಾರ್ಷಿಕ ಆದಾಯ ಕೇವಲ 15 ಸಾವಿರ ಗಿಂತ ಕೆಳಗಿರಬೇಕಾಗುತ್ತದೆ ಅಂದರೆ ಮಾತ್ರ ಈ ಅಂಥೋದಯ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುತ್ತೀರಿ
ಈ ಅಂಥೋದಯ ರೇಷನ್ ಕಾರ್ಡ್ ಕೊಡುವುದರಿಂದ ಇನ್ನೊಂದು ಉಪಯೋಗವೇನೆಂದರೆ ನೀವು ಕೇಂದ್ರ ಸರ್ಕಾರದಿಂದ ನೀಡುವಂತಹ ಅಕ್ಕಿ ಅಂದರೆ ಈ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕಡೆಯಿಂದ 35 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಅಂದರೆ ಈ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನ ಸದಸ್ಯರು ಇದ್ದರೂ ಕೂಡ ಅಂದರೆ ಅಂತೋದಯ ಹೊಂದಿದ ರೇಷನ್ ಕಾರ್ಡ್ ಕುಟುಂಬದಲ್ಲಿ ಒಬ್ಬ ಸದಸ್ಯರಿದ್ದರು ಹಾಗೂ 10 ಜನ ಸದಸ್ಯರಿದ್ದರು ಕೇಂದ್ರ ಸರ್ಕಾರ ಕಡೆಯಿಂದ ನಿಮಗೆ 35 ಕೆಜಿ ಅಕ್ಕಿ ನೀಡಲಾಗುತ್ತದೆ
APL ರೇಷನ್ ಕಾರ್ಡ್:- ಎಪಿಎಲ್ ರೇಷನ್ ಕಾರ್ಡ್ ಇದನ್ನು ಮಧ್ಯ ತರಗತಿ ಕುಟುಂಬಗಳು ಹಾಗೂ ಶ್ರೀಮಂತರ ಕುಟುಂಬಗಳಿಗೆ ಈ ಎಪಿಎಲ್ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ ಈ ರೇಷನ್ ಕಾರ್ಡ್ ಪಡೆಯುವುದರಿಂದ ನೀವು ಸರಕಾರ ಕಡೆಯಿಂದ ಆರೋಗ್ಯಕ್ಕೆ ಸಂಬಂಧಿಸಿದಂತ ಯೋಜನೆಗಳ ಲಾಭ ಪಡೆಯಬಹುದು
ಈ ರೀತಿ ರೇಷನ್ ಕಾರ್ಡ್ ಗಳಲ್ಲಿ ಮೂರು ರೀತಿಯ ರೇಷನ್ ಕಾರ್ಡ್ ಗಳನ್ನು ಪ್ರಮುಖವಾಗಿ ವಿಂಗಡನೆ ಮಾಡಲಾಗಿದೆ ನೀವು ಈ ಮೇಲೆ ನೀಡಿದ ಯಾವ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಯಸುತ್ತೀರಿ ಎಂಬುವುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ
(Ration card online apply Karnataka) BPL & AAY ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು
- ನೀವೇನಾದರೂ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ ಕಡ್ಡಾಯವಾಗಿ ಈ ಕೆಳಗಡೆ ನೀಡಲಾದ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ
- ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಬಯಸಿದವರು ತಮ್ಮ ವರ್ಷದ ಆರ್ಥಿಕ ಆದಾಯ 2,50,000 ಕ್ಕಿಂತ ಕೆಳಗಡೆ ಇರಬೇಕು
- ಈ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಭಾರತದ ಪ್ರಜೆಯಾಗಿರಬೇಕು ಮತ್ತು ಯಾವುದಾದರೂ ರಾಜ್ಯದ ಗುರುತಿನ ಪುರಾವೆ ಹೊಂದಿರಬೇಕು
- ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅಂದರೆ ಒಂದೇ ಕುಟುಂಬಕ್ಕೆ ಒಂದೇ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶವಿರುತ್ತದೆ
- ನೀವೇನಾದರೂ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ನೀವು ನೂರು ಚದರ್ ಮೀಟರ್ ಗಿಂತ ಹೆಚ್ಚು ಜಾಗ ಅಥವಾ ಭೂಮಿ ಹೊಂದಿರಬಾರದು
- ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಯಸುವಂತಹ ಕುಟುಂಬದಲ್ಲಿ ಸರಕಾರಿ ನೌಕರಿ ಒಂದಿದ್ದರೆ ಅಂತ ಕುಟುಂಬಗಳಿಗೆ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ
- ರೇಷನ್ ಕಾರ್ಡ್ ಅರ್ಜಿ ಹಾಕಲು ಬಯಸುವಂತಹ ಕುಟುಂಬವು ಯಾವುದೇ ಸ್ವಂತ ಬಳಕೆಗಾಗಿ ಅಂದರೆ ಕಾರು ಹಾಗೂ ನಾಲ್ಕು ಚಕ್ರದ ಯಾವುದೇ ವಾಹನ ಹೊಂದಿರಬಾರದು
- ಗ್ರಾಮೀಣ ಪ್ರದೇಶದಲ್ಲಿ ಆಗಲಿ ಅಥವಾ ನಗರ ಪ್ರದೇಶದಲ್ಲಿ ಆಗಲಿ ವಾಸ ಮಾಡುತ್ತಿರುವ ಜನರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಯಸಿದರೆ ಒಂದು ಹೆಕ್ಟರಿಗಿಂತ ಕಡಿಮೆ ಭೂಮಿಯನ್ನು ಹೊಂದಿರಬೇಕಾಗುತ್ತದೆ
ಈ ಮೇಲೆ ನೀಡಿದ ಎಲ್ಲಾ ಅರಹತೆಗಳನ್ನು ನೀವು ಹೊಂದಿದ್ದರೆ ಅಥವಾ ನಿಮ್ಮ ಕುಟುಂಬ ಬಂದಿದ್ದರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶವಿರುತ್ತದೆ
(Ration card online apply Karnataka) ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬೇಕಾಗುವಂತಹ ದಾಖಲಾತಿಗಳು..?
ಆಧಾರ್ ಕಾರ್ಡ್:- ಹೌದು ಸ್ನೇಹಿತರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅಂದುಕೊಂಡಿದ್ದರೆ ಕಡ್ಡಾಯವಾಗಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ಈ ಆಧಾರ್ ಕಾರ್ಡ್ ಗಳಿಗೆ ಮೊಬೈಲ್ ನಂಬರ್ ಲಿಂಕ್ ಇರಬೇಕಾಗುತ್ತದೆ. ಜೊತೆಗೆ ಈ ಆಧಾರ್ ಕಾರ್ಡನ್ನು ಭಾರತದ ನಾಗರಿಕನೆಂದು ಗುರುತಿಸಲು ಈ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ರೇಷನ್ ಕಾರ್ಡ್ ಅರ್ಜಿ ಹಾಕಲು ಕೇಳಲಾಗುತ್ತದೆ
ಜಾತಿ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಜಾತಿ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ, ನಮ್ಮ ಭಾರತ ದೇಶದಲ್ಲಿ ಅನೇಕ ಧರ್ಮಗಳು ಹಾಗೂ ಜಾತಿಗಳನ್ನು ಹೊಂದಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಜಾತಿ ಪ್ರಮಾಣ ಪತ್ರವನ್ನು ಮಾಡಿಸಿರುತ್ತಾರೆ, ಮತ್ತು ಈ ಜಾತಿ ಪ್ರಮಾಣ ಪತ್ರವನ್ನು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಕೇಳಲಾಗುತ್ತದೆ ಅದರಲ್ಲಿ ST & SC ಜನಾಂಗದ ಕುಟುಂಬಗಳಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತದೆ ಏಕೆಂದರೆ ಇದರಿಂದ ಅವರಿಗೆ ಹೆಚ್ಚಿನ ಸೌಲಭ್ಯಗಳು ನೀಡಲು ಅವಕಾಶವಿರುತ್ತದೆ
ಆದಾಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಯಸುವಂತಹ ಕುಟುಂಬದ ಯಾವುದಾದರೂ ಒಬ್ಬ ವ್ಯಕ್ತಿಯ ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ ಏಕೆಂದರೆ ಈ ಆದಾಯ ಪ್ರಮಾಣ ಪತ್ರದಲ್ಲಿ ನಿಮ್ಮ ವಾರ್ಷಿಕ ಆದಾಯ ಎಷ್ಟು ಇರುತ್ತದೆ ಎಂಬ ಪಕ್ಕ ಮಾಹಿತಿ ಸಿಗುತ್ತದೆ ಹಾಗಾಗಿ ಆದಾಯ ಪ್ರಮಾಣ ಪತ್ರವನ್ನು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಕೇಳಲಾಗುತ್ತದೆ
ಜನನ ಪ್ರಮಾಣ ಪತ್ರ:- ಈ ಜನನ ಪ್ರಮಾಣ ಪತ್ರವನ್ನು ಆರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅಥವಾ ನಿಮ್ಮಲ್ಲಿ ರೇಷನ್ ಕಾರ್ಡ್ ಇದ್ದು ಅದರಲ್ಲಿ ನಿಮ್ಮ ಮಕ್ಕಳನ್ನು ಸೇರಿಸಿಕೊಳ್ಳಬೇಕು ಅಂದರೆ ಜನನ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ
ಮೊಬೈಲ್ ಸಂಖ್ಯೆ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಏಕೆಂದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ರೀತಿ ಅಪ್ಡೇಟ್ ಇದ್ದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಕಳಿಸಲಾಗುತ್ತದೆ
ಈ ಮೇಲೆ ನೀಡಿದ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಹೊಸ ರೇಷನ್ ಕಾರ್ಡನ್ನು ಪಡೆದುಕೊಳ್ಳಬಹುದು
(Ration card online apply Karnataka) ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಯಾವಾಗ ಪ್ರಾರಂಭ..?
ಹೌದು ಸ್ನೇಹಿತರೆ ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಐದರಿಂದ ಆರು ಸಲ ಅವಕಾಶ ಮಾಡಿಕೊಡಲಾಗಿದ್ದು ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬೇಕು ಅಂದುಕೊಂಡಿದ್ದರೆ ಇದೇ ತಿಂಗಳು ಅಂದರೆ ಜೂನ್ 10ನೇ ತಾರೀಖಿನಂದು ಹಾಗೂ ಜೂನ್ 21ನೇ ತಾರೀಖಿನಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶವಿರುತ್ತದೆ ಹಾಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಯಾವುದೇ ರೀತಿ ಅಪ್ಡೇಟ್ ಬೇಗ ಪಡೆಯಬೇಕೆಂದರೆ ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜೈನ್ ಆಗಿ ಇದರಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತ ಪ್ರತಿಯೊಂದು ಅಪ್ಡೇಟ್ ನಿಮಗೆ ಬೇಗ ಸಿಗುತ್ತದೆ
ಹೌದು ಸ್ನೇಹಿತರೆ ಈಗಾಗಲೇ ರಾಜ್ಯ ಸರ್ಕಾರ ಕಡೆಯಿಂದ ಮೇ ತಿಂಗಳಲ್ಲಿ ಎರಡು ಸಲ ಹಾಗೂ ಏಪ್ರಿಲ್ ತಿಂಗಳಲ್ಲಿ ಎರಡು ಸಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಕೊಟ್ಟಿದ್ದು ಇಲ್ಲಿ ಸರ್ಕಾರ ಯಾವುದೇ ಮುನ್ಸೂಚನೆ ಇಲ್ಲದೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಕೊಡುತ್ತಿದೆ. ಹಾಗಾಗಿ ನಿಮಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ದಿನ ನಿಮಗೆ ಬಿಟ್ಟ ತಕ್ಷಣ ಬೇಗ ಅಪ್ಡೇಟ್ ಪಡೆಯಬೇಕು ಅಂದುಕೊಂಡರೆ ನೀವು ಖಂಡಿತವಾಗಲೂ ನಮ್ಮ WhatsApp ಗ್ರೂಪ್ಗಳಿಗೆ ಜೋಯಿನ್ ಆಗಿ ಏಕೆಂದರೆ ಯಾವಾಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಿಡುತ್ತಾರೆ ಎಂಬ ಖಚಿತ ಮಾಹಿತಿ ಸರ್ಕಾರ ಬಿಟ್ಟುಕೊಡುತ್ತಿಲ್ಲ ಹಾಗಾಗಿ ಅಪ್ಡೇಟ್ ಬಿಟ್ಟ ತಕ್ಷಣ ನಿಮಗೆ ವಾಟ್ಸಪ್ ಗ್ರೂಪ್ನಲ್ಲಿ ಮಾಹಿತಿ ಸಿಗುತ್ತದೆ
ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅಪ್ಡೇಟ್ ಬಿಟ್ಟ ತಕ್ಷಣ ಮಾಹಿತಿ ಬೇಕಾದರೆ ಕಡ್ಡಾಯವಾಗಿ ನೀವು ನಮ್ಮ WhatsApp ಗ್ರೂಪಿಗೆ ಜಾಯಿನ್ ಆಗಿ ಇದರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಹಾಗೂ ತಿದ್ದುಪಡಿ ಅವಕಾಶ ಬಿಟ್ಟಾಗ ಬೇಗ ಮಾಹಿತಿ ಸಿಗುತ್ತದೆ
(Ration card online apply Karnataka) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವುದು ಹೇಗೆ..?
ಹೌದು ಸ್ನೇಹಿತರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಬೇಕು ಅಂದುಕೊಂಡಿದ್ದರೆ ಸರ್ಕಾರ ಕಡೆಯಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಬಿಟ್ಟ ದಿನ ನಾವು ಕೆಳಗಡೆ ಒಂದು ಲಿಂಕ್ ಕೊಟ್ಟಿದ್ದೇವೆ ಆ ಲಿಂಕಿನ ಮೂಲಕ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು
ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ:- ನಮ್ಮ ರಾಜ್ಯ ಸರ್ಕಾರ ಕಡೆಯಿಂದ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಿಟ್ಟ ದಿನ ಮಾತ್ರ ಈ ಮೇಲ್ಕಾಣಿಸಿದ ಲಿಂಕ್ ಓಪನ್ ಆಗುತ್ತೆ ಹಾಗಾಗಿ ಅವತ್ತಿನ ದಿನ ಈ ಲಿಂಕನ್ನು ಓಪನ್ ಮಾಡಿ
ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಯಸಿದರೆ ಮೇಲೆ ಕಾಣಿಸಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ. ಈ ರೀತಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
ಅಥವಾ
ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಂದಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಡೆ ನೀಡಲಾದ ಆನ್ಲೈನ್ ಸೆಂಟರ್ ಗಳ ಮೂಲಕ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿದೆ
ಗ್ರಾಮ ಒನ್:- ಈ ಗ್ರಾಮವನ್ನು ಆನ್ಲೈನ್ ಸೆಂಟರ್ ಪ್ರತಿ ಹಳ್ಳಿಗಳಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಈ ಆನ್ಲೈನ್ ಸೆಂಟರ್ ನಿಮಗೆ ನೋಡಲು ಸಿಗುತ್ತದೆ ಆನ್ಲೈನ್ ಕೇಂದ್ರದ ಮೂಲಕ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಹಾಗಾಗಿ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರದ ಗ್ರಾಮವನ್ ಸೆಂಟರ್ ಗಳಿಗೆ ಭೇಟಿ ನೀಡಿ ನಿಮ್ಮ ಎಲ್ಲಾ ದಾಖಲಾತಿಗಳನ್ನು ನೀಡಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
ಕರ್ನಾಟಕ ಒನ್:- ಹೌದು ಸ್ನೇಹಿತರೆ ಕರ್ನಾಟಕವನ್ನು ಆನ್ಲೈನ್ ಸೆಂಟರ್ ಮೂಲಕ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಹಾಗೂ ತಿದ್ದುಪಡಿ ಕೂಡ ಮಾಡಬಹುದು ಈ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಈ ಆನ್ಲೈನ್ ಸೆಂಟರ್ ನಿಮಗೆ ಹೋಬಳಿ ಹಾಗೂ ನಗರ ಪ್ರದೇಶಗಳಲ್ಲಿ ಅಂದರೆ ತಾಲೂಕು ಮಟ್ಟದಲ್ಲಿ ಈ ಆನ್ಲೈನ್ ಸೆಂಟರ್ ನಿಮಗೆ ನೋಡಲು ಸಿಗುತ್ತದೆ
ಬೆಂಗಳೂರು ಒನ್:- ಬೆಂಗಳೂರಿನಲ್ಲಿ ವಾಸ ಮಾಡುವಂತ ಪ್ರಜೆಗಳು ಅಥವಾ ಜನರು ಈ ಬೆಂಗಳೂರು ಒನ್ ಆನ್ಲೈನ್ ಸೆಂಟರ್ ಮೂಲಕ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಮತ್ತು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಹಾಗಾಗಿ ನೀವು ಬೆಂಗಳೂರು ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಈ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡುವುದು
ಬಾಪೂಜಿ ಸೇವ ಕೇಂದ್ರ:- ಈ ಬಾಪೂಜಿ ಸೇವಾ ಕೇಂದ್ರ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ನೀಡಲಾಗುತ್ತದೆ ಹಾಗಾಗಿ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರದ ಬಾಪೂಜಿ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಬಿಟ್ಟು ದಿನ ನೀವು ಅರ್ಜಿ ಸಲ್ಲಿಸಬಹುದಾಗಿದೆ
CSC ಕೇಂದ್ರಗಳಲ್ಲಿ:- ಕಾಮನ್ ಸರ್ವಿಸ್ ಸೆಂಟರ್ ಅಂದರೆ ಸಿ ಎಸ್ ಸಿ ಕೇಂದ್ರಗಳಲ್ಲಿ ಕೂಡ ಹೊಸ ರೇಷನ್ ಕಾರ್ಡಿಗೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ ಹಾಗಾಗಿ ನಿಮ್ಮ ಹತ್ತಿರದ ಸಿಎಸಿ ಕೇಂದ್ರಗಳಿಗೆ ಭೇಟಿ ನೀಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಈ ಮೇಲೆ ನೀಡಿದ ಎಲ್ಲಾ ಆನ್ಲೈನ್ ಸೆಂಟರ್ ಗಳಿಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಹಾಗೂ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ ಏಕೆಂದರೆ ಇವು ರಾಜ್ಯ ಸರ್ಕಾರ ಕಡೆಯಿಂದ ಮಾನ್ಯತೆ ಪಡೆದ ಆನ್ಲೈನ್ ಸೆಂಟರ್ ಗಳಾಗಿರುತ್ತವೆ ಹಾಗಾಗಿ ಈ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ಎಲ್ಲಾ ದಾಖಲಾತಿಗಳನ್ನು ಕೊಟ್ಟು ಬನ್ನಿ ಮತ್ತು ಅವರ ಮೊಬೈಲ್ ನಂಬರನ್ನು ತೆಗೆದುಕೊಂಡು ಬನ್ನಿ
ಏಕೆಂದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಿಟ್ಟಾಗ ಅವರು ನಿಮಗೆ ಓಟಿಪಿ ಮೂಲವೂ ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶವಿರುತ್ತದೆ ಆದ್ದರಿಂದ ತುಂಬಾ ಜನರು ಈಗಾಗಲೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕ್ಯೂ ನಿಲ್ಲುವುದರಿಂದ ಈ ಆನ್ಲೈನ್ ಸೆಂಟರ್ ಗಳಲ್ಲಿ ನಿಮ್ಮ ದಾಖಲಾತಿಗಳನ್ನು ನೀಡುವುದು ಉತ್ತಮ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಿಟ್ಟಾಗ ಅವರು ನಿಮಗೆ ಅರ್ಜಿ ಸಲ್ಲಿಸಿ ಕೊಡುತ್ತಾರೆ
ಈ ಲೇಖನಿಯ ಮೂಲಕ ನೀವು ಹೊಸ ರೇಷನ್ ಕಾರ್ಡ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಯಾವಾಗ ಅವಕಾಶವಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ ಅಂದು
ಕೊಂಡಿದ್ದೇನೆ ಹಾಗಾಗಿ ಈ ಲೇಖನೆಯನ್ನು ಆದಷ್ಟು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡುವುದು ಮಾತ್ರ ಮರೆಯಬೇಡಿ