Karnataka Shrama Shakti Scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಸರ್ಕಾರ ಕಡೆಯಿಂದ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 50,000 ಸಾಲ ಸಿಗುತ್ತದೆ ಜೊತೆಗೆ 25000 ಸಬ್ಸಿಡಿ ಸಿಗುತ್ತದೆ ಹಾಗಾಗಿ ಇದು ಯೋಜನೆ ಯಾವುದು ಹಾಗೂ ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತದ್ದು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ನಿರುದ್ಯೋಗಿ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ನೀಡಲಾಗುತ್ತಿದೆ ಬೇಗ ಅರ್ಜಿ ಸಲ್ಲಿಸಿ
ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರ ಶ್ರಮಶಕ್ತಿ ಯೋಜನೆ ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ 50,000 ಹಣ ಸಿಗುತ್ತದೆ ಜೊತೆಗೆ ಈ ಯೋಜನೆ ಅಡಿಯಲ್ಲಿ ಮಹಿಳೆಯರು 25,000 ಹಣವನ್ನು ಹಿಂದಿರುಗಿಸಬೇಕು ಹಾಗೂ 25000 ಹಣವನ್ನು ಸಬ್ಸಿಡಿ ರೂಪದಲ್ಲಿ ಸರಕಾರ ಕಟ್ಟುತ್ತದೆ ಹಾಗಾಗಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ
ಇಂತಹ ರೈತರ ಬೆಳೆ ಸಾಲ ಮನ್ನಾ ಮಾಡಲಾಗಿದೆ ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯಾ ಇಲ್ಲಿದೆ ನೋಡಿ ಮಾಹಿತಿ
ಶ್ರಮ ಶಕ್ತಿ ಯೋಜನೆ (Karnataka Shrama Shakti Scheme)..?
ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗಳ ಮುಂಚೆ ಸಾಕಷ್ಟು ಭರವಸೆಗಳನ್ನು ಹಾಗೂ ಐದು ಗ್ಯಾರಂಟಿಗಳನ್ನು ಜನರಿಗೆ ಈಡೇರಿಸಲು ಭರವಸೆ ನೀಡಿತ್ತು. ಅದೇ ರೀತಿ ಅಧಿಕಾರಕ್ಕೆ ಬಂದ ನಂತರ ತಾನು ನೀಡಿದಂತಹ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ ಹಾಗೂ ಈ ಯೋಜನೆಗಳಿಂದ ಸಾಕಷ್ಟು ಮಹಿಳೆಯರು ಲಾಭ ಪಡೆಯುತ್ತಿದ್ದಾರೆ ಎಂದು ಹೇಳಬಹುದು
ಹೌದು ಸ್ನೇಹಿತರೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಮಹಿಳೆಯರಿಗೆ ಹೆಚ್ಚಿನ ಉದ್ಯೋಗದಲ್ಲಿ ಅವಕಾಶ ಕಲ್ಪಿಸಿಕೊಡಲು ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ನಮ್ಮ ಕರ್ನಾಟಕದಲ್ಲಿ ಜಾರಿಗೆ ಇರುವಂತಹ ಪ್ರಮುಖ ಯೋಜನೆಗಳೆಂದರೆ ಅದು ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆ ಮತ್ತು ಗೃಹಜೋತಿ ಯೋಜನೆ ಈ ಯೋಜನೆಗಳು ಮಹಿಳೆಯರ ಮನಸ್ಸು ಗೆದ್ದಿದೆ ಎಂದು ಹೇಳಬಹುದು ಅದೇ ರೀತಿ ನಮ್ಮ ಕರ್ನಾಟಕದಲ್ಲಿ ಈಗ ಶ್ರಮಶಕ್ತಿ ಯೋಜನೆ ಜಾರಿಗೆ ತರಲಾಗಿದೆ
ಶ್ರಮಶಕ್ತಿ ಯೋಜನೆ ವಿವರ (Karnataka Shrama Shakti Scheme)
ಹೌದು ಸ್ನೇಹಿತರೆ ಈ ಶ್ರಮಶಕ್ತಿ ಯೋಜನೆ ಮೂಲಕ ಸ್ವಯಂ ಉದ್ಯೋಗ ಮಾಡಲು ಹಾಗೂ ಸ್ವಂತ ಉದ್ಯೋಗವನ್ನು ಆರಂಭಿಸಲು ಕರ್ನಾಟಕ ಸರ್ಕಾರ ಕಡೆಯಿಂದ ನಿರುದ್ಯೋಗ ಯುವಕ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ 50,000 ಸಾಲ ನೀಡಲಾಗುತ್ತದೆ ಜೊತೆಗೆ ಈ ಹಣವನ್ನು 36 ತಿಂಗಳ ಕಾಲ ಹಿಂತಿರುಗಿಸಬೇಕು ಹಾಗೂ ಇದರಲ್ಲಿ ನಿಮಗೆ 25000 ಸರಕಾರ ಸಬ್ಸಿಡಿ ರೂಪದಲ್ಲಿ ನೀಡುತ್ತದೆ ಅಂದರೆ ನೀವು ರೂ.50,000 ಹಣ ತೆಗೆದುಕೊಂಡರೆ ಕೇವಲ ನೀವು 25000 ಹಣವನ್ನು ಹಿಂದಿರುಗಿಸಬೇಕಾಗುತ್ತದೆ ಮತ್ತು ಸಂಪೂರ್ಣವಾಗಿ 25000 ಹಣ ಉಚಿತವಾಗಿ ಸಿಗುತ್ತದೆ ಎಂದು ಹೇಳಬಹುದು ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆದುಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Karnataka Shrama Shakti Scheme)..?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ
- ಬ್ಯಾಂಕ್ ಖಾತೆಯ ವಿವರ
- ಅಲ್ಪಸಂಖ್ಯಾತರ ಪ್ರಮಾಣ ಪತ್ರ
- ಉದ್ಯೋಗಕ್ಕೆ ಸಂಬಂಧಿಸಿದ ವರದಿ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು (Karnataka Shrama Shakti Scheme)..?
- ಸ್ನೇಹಿತರೆ ಕರ್ನಾಟಕದಲ್ಲಿ ವಾಸ ಮಾಡುವಂತಹ ಖಾಯಂ ನಿವಾಸಿಗಳು ಅರ್ಜಿ ಸಲ್ಲಿಸಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟು ಹಾಗೂ 55 ವರ್ಷ ಒಳಗಿನವರು ಇರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಅಥವಾ ಫಲಾನುಭವಿಗಳ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿ ಒಳಗಡೆ ಇರಬೇಕು
- ಈ ಯೋಜನೆಗೆ ಕರ್ನಾಟಕದಲ್ಲಿ ವಾಸ ಮಾಡುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ದೊರೆಯುತ್ತಿದ್ದು ಹಾಗಾಗಿ ಈ ಯೋಜನೆ ಅಡಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಹಾಗೂ ಜೈನ ಧರ್ಮಗಳಿಗೆ ಸೇರಿದಂತವರು ಮತ್ತು ಆಂಗ್ಲೋ ಇಂಡಿಯನ್ ಹಾಗೂ ಪಾರ್ಸಿ ಮಹಿಳೆಯರು ಮಾತ್ರ ಈ ಯೋಜನೆಯ ಅರ್ಜಿ ಸಲ್ಲಿಸಲು ಅವಕಾಶವಿದೆ
- ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಕುಟುಂಬದಲ್ಲಿ ಯಾವುದೇ ರೀತಿ ಸರಕಾರಿ ನೌಕರಿ ಹೊಂದಿರಬಾರದು
ಅರ್ಜಿ ಸಲ್ಲಿಸುವುದು ಹೇಗೆ (Karnataka Shrama Shakti Scheme)..?
ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಗೆ ಸಂಬಂಧಿಸಿ ದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೀವು ಈ ಅಧಿಕೃತ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರ ಮೇಲೆ ಕೊಟ್ಟಿರುವಂತ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದೇ ರೀತಿ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರ ಕಡೆಯಿಂದ ಸಾಲ ಸೌಲಭ್ಯ ಪಡೆದುಕೊಳ್ಳಬಹುದು
ಇದೇ ರೀತಿ ಪ್ರತಿಯೊಂದು ಮಾಹಿತಿಯನ್ನು ಹಾಗೂ ಸರಕಾರದ ಯೋಜನೆಗಳು ಮತ್ತು ಸರಕಾರಿ ನೌಕರಿಗಳ ಕುರಿತು ಮಾಹಿತಿ ಪಡೆಯಲು Telegram group & WhatsApp ಗ್ರೂಪ್ ಗಳಿಗೆ ಜಾಯಿನ್ ಆಗಿ