Horticulture Schemes: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಬ್ಸಿಡಿ ಯೋಜನೆಗಳು – ಅರ್ಜಿ ಆಹ್ವಾನ!
ತೋಟಗಾರಿಕೆ ಇಲಾಖೆಯು 2025-26ನೇ ಸಾಲಿಗೆ ಸಂಬಂಧಿಸಿದಂತೆ ಹಲವು ಸಬ್ಸಿಡಿ ಯೋಜನೆಗಳನ್ನು ಘೋಷಿಸಿದ್ದು, ರೈತರು ಈ ಯೋಜನೆಗಳಡಿ ತಮ್ಮ ಕೃಷಿಗೆ ಅವಶ್ಯಕ ಯಂತ್ರೋಪಕರಣಗಳು, ನೀರಾವರಿ ಸಾಧನೆ, ಸಂಸ್ಕರಣಾ ಘಟಕಗಳು, ಜೇನು ಸಾಕಾಣಿಕೆ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಉಪ ನಿರ್ದೇಶಕ ಯೋಗೇಶ್ ಅವರ ಮಾಹಿತಿ ಪ್ರಕಾರ, ಈ ಸಾಲಿನಲ್ಲಿ ರೈತರಿಗೆ ತೋಟಗಾರಿಕೆ ಸಂಬಂಧಿತ ಹಲವಾರು ಹೂಡಿಕೆಗಳಿಗೆ ಶೇ.40ರಿಂದ 90%ರಷ್ಟು ಸಹಾಯಧನ ನೀಡಲಾಗುತ್ತಿದೆ.
ಯಾವೆಲ್ಲ ಯೋಜನೆಗಳಿವೆ?
ಇದೇವರೆಗೆ ಜಾರಿಯಲ್ಲಿರುವ ಪ್ರಮುಖ ತೋಟಗಾರಿಕೆ ಯೋಜನೆಗಳ ಪಟ್ಟಿ:
- ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM)
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)
- ತಾಳೆ ಬೆಳೆ ಹೇರಳಗೊಳಿಸುವ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)
- ಜೇನು ಸಾಕಾಣಿಕೆ ಅಭಿವೃದ್ದಿ ಯೋಜನೆ
- ಪರಂಪರಾಗತ ಕೃಷಿ ವಿಕಾಸ ಯೋಜನೆ
- ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆ
- ನರೇಗಾ (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)
- ಕೊಯ್ಲೋತ್ತರ ನಿರ್ವಹಣೆ ಯೋಜನೆ
ಇದನ್ನು ಓದಿ : Fast food Training: ಗ್ರಾಮೀಣ ಯುವಕರಿಗೆ ಉಚಿತ ಫಾಸ್ಟ್ ಫುಡ್ ತರಬೇತಿ – ಅರ್ಜಿ ಆಹ್ವಾನ
ಪ್ರಮುಖ ಸಬ್ಸಿಡಿ ಸೌಲಭ್ಯಗಳು
1. ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ
- ಪವರ್ ಸ್ಪ್ರೇಯರ್, ದೋಟಿ, ಪವರ್ ವೀಡರ್, ಮರ ಕತ್ತರಿಸುವ ಯಂತ್ರ, ತಳ್ಳುವ ಗಾಡಿ, ಅಡಿಕೆ ಸಿಪ್ಪೆ ಯಂತ್ರ, ಕಾಳು ಮೆಣಸು ಬೇರ್ಪಡಿಸುವ ಯಂತ್ರಗಳಿಗೆ ಶೇ.40ರ ಸಹಾಯಧನ (RKVY ಯಾಂತ್ರಿಕರಣ ಅಡಿಯಲ್ಲಿ)
- ಹಸಿರು ಮನೆ, ಪಾಲಿ ಟನಲ್, ನೀರು ಸಂಗ್ರಹಣೆ ಟ್ಯಾಂಕ್‌ಗಳಿಗೆ ಶೇ.50ರ ಸಹಾಯಧನ (NHM ಅಡಿಯಲ್ಲಿ)
2. ಹನಿ ನೀರಾವರಿ ಉಪಕರಣಗಳು
- ಹನಿ ಮತ್ತು ಸೂಕ್ಷ್ಮ ನೀರಾವರಿ ಅಳವಡಿಕೆಗೆ ಶೇ.90ರ ಸಬ್ಸಿಡಿ (SC/ST/PWD ರೈತರಿಗೆ) – PMKSY
3. ಜೇನು ಸಾಕಾಣಿಕೆ
- ಜೇನು ಪೆಟ್ಟಿಗೆ, ಜೇನು ಕುಟುಂಬ, ಸ್ಟ್ಯಾಂಡ್‌ಗಳಿಗೆ ಶೇ.75 (ಸಾಮಾನ್ಯ ರೈತರಿಗೆ) ಹಾಗೂ ಶೇ.90 (SC/ST ರೈತರಿಗೆ)
4. ತಾಳೆ ಬೆಳೆ ಉತ್ತೇಜನ
- ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆಗೆ ಶೇ.50ರ ಸಹಾಯಧನ, ಡಿಸೇಲ್ ಮೋಟಾರ್, ಚಾಫ್ ಕಟ್ಟರ್, ಇತರ ಸಾಧನಗಳಿಗೂ ಸಹಾಯಧನ
5. ಪರಂಪರೆ ಕೃಷಿ ಪ್ರೋತ್ಸಾಹ
- ಸಾವಯವ ಕೃಷಿಗೆ ಬೇಕಾದ ಗೊಬ್ಬರ ಘಟಕ, ಅಝೋಲ್ಲಾ ತೊಟ್ಟಿ, ಬಯೋಡೈಜೆಸ್ಟರ್, ಕೀಟನಾಶಕ ತಯಾರಿಕೆ ಡ್ರಂಗಳಿಗೆ ಸಹಾಯಧನ
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
- ಆಸಕ್ತ ರೈತರು ತಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು (AHO) ನೇರವಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
- ಅಧಿಕೃತ ವೆಬ್‌ಸೈಟ್ ಮೂಲಕ ಕೂಡ ತೋಟಗಾರಿಕೆ ಇಲಾಖೆಯ ಮಾಹಿತಿ ಪಡೆಯಬಹುದಾಗಿದೆ:
ತೋಟಗಾರಿಕೆ ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ
ಇದನ್ನು ಓದಿ : SSP Scholarship 2025 Eligibility: SSP ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಈ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ
ಅರ್ಜಿಗೆ ಅಗತ್ಯ ದಾಖಲೆಗಳು
- ಭೂಮಿ ದಾಖಲೆ (RTC)
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್ ನಕಲು
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಭೂ ಮಾಲೀಕತ್ವ ಪ್ರಮಾಣ
ರೈತ ಬಂಧುಗಳು, ನಿಮ್ಮ ತೋಟಗಾರಿಕೆ ಆಧಾರಿತ ಕೃಷಿಗೆ ಸರ್ಕಾರವು ನೀಡುತ್ತಿರುವ ಸಬ್ಸಿಡಿ ಯೋಜನೆಗಳನ್ನು ಅನುಕೂಲಪಡಿಸಿಕೊಳ್ಳಿ. ನಿಮ್ಮ ಪ್ರದೇಶದ ತೋಟಗಾರಿಕೆ ಇಲಾಖೆಯನ್ನು ಭೇಟಿಯಾಗಿ ಸಮಗ್ರ ಮಾಹಿತಿಯನ್ನು ಪಡೆದು, ಅರ್ಹತೆಯಾದಲ್ಲಿ ಅರ್ಜಿ ಸಲ್ಲಿಸಿ.
ಇದನ್ನು ಓದಿ : SSP Scholarship 2025 Eligibility: SSP ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಈ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ
Horticulture Department Website: ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್-Click Here