gruhalakshmi:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ 2000 ಹಣಕ್ಕಾಗಿ ಕಾಯ್ತಾ ಇದ್ದೀರಾ ಹಾಗಾದರೆ ನಿಮಗೆ ಗುಡ್ ನ್ಯೂಸ್ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು ಈ ದಿನ ಗ್ರಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣ ಒಟ್ಟಿಗೆ ರೂ.4000 ಜಮಾ ಆಗುತ್ತೆ ಎಂದು ತಿಳಿಸಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖಕನೆಯಲ್ಲಿ ತಿಳಿದುಕೊಳ್ಳೋಣ
ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವವರಿಗೆ ಸಿಎಂ ಸಿದ್ದರಾಮಯ್ಯನವರ ಕಡೆಯಿಂದ ಮಹತ್ವದ ನಿರ್ಧಾರ ಇಲ್ಲಿದೆ ಮಾಹಿತಿ..!
ಇದೇ ರೀತಿ ಸರಕಾರಿ ನೌಕರಿ ಆಗುವ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತ ವಿವಿಧ ರೀತಿ ಯೋಜನೆಗಳು ಮತ್ತು ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರತಿದಿನದ ಪ್ರಮುಖ ಸುದ್ದಿಗಳು ಬೇಗ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಗೃಹಲಕ್ಷ್ಮಿ ಯೋಜನೆ (gruhalakshmi)…?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಈ ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಹಣ ಹಾಕುತ್ತಾ ಬಂದಿದೆ ಮತ್ತು ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ ಎಂದು ಜನರು ಆತಂಕ ಕೊಡುತ್ತಿದ್ದಾರೆ ಅಂತವರಿಗೆ ಸಿಹಿ ಸುದ್ದಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ.
ಹೌದು ಸ್ನೇಹಿತರೆ ಲೋಕಸಭೆ ಚುನಾವಣೆ ಬೆನ್ನಲ್ಲೇ ನೀತಿ ಸಹಿತಿ ಜಾರಿಯಲ್ಲಿದ್ದರೂ ಕೂಡ ಗ್ರಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಹಾಕುತ್ತಾ ಕಾಂಗ್ರೆಸ್ ಸರ್ಕಾರ ಬಂದಿದೆ ಆದರೆ ಕಳೆದ ಎರಡು ತಿಂಗಳಿಂದ ಹಣ ಬರುತ್ತಿಲ್ಲ ಎಂಬ ಕೂಗು ಹೆಚ್ಚಾಗುತ್ತಿದ್ದಂತೆ ಈ ಬಗ್ಗೆ ಈ ಯೋಜನೆ ಮುಂದುವರಿಸುವುದರ ಬಗ್ಗೆ ಹಾಗೂ ಹಣ ಬಿಡುಗಡೆಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ ಅದರ ವಿವರಣೆಯನ್ನು ಕೆಳಗಡೆ ನೀಡಿದ್ದೇವೆ
ಹೊಸ ರೇಷನ್ ಅರ್ಜಿ ಪ್ರಾರಂಭ..! ದಿನಾಂಕ ಮತ್ತು ಸಮಯ ಇಲ್ಲಿದೆ ಮಾಹಿತಿ
ಜೂನ್ ಮತ್ತು ಜುಲೈ ತಿಂಗಳ (gruhalakshmi) ಒಟ್ಟಿಗೆ ಹಣ ಜಮಾ..?
ಹೌದು ಸ್ನೇಹಿತರೆ ಬೆಳಗಾವಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಈ ಬಗ್ಗೆ ಮಾತನಾಡುತ್ತಾ ನಾವು ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಮೇ ತಿಂಗಳವರೆಗೆ ಪ್ರತಿಯೊಬ್ಬರ ಖಾತೆಗೆ ವರ್ಗಾವಣೆ ಮಾಡಿದ್ದೇವೆ ಮತ್ತು ಕಳೆದ ಒಂದು ತಿಂಗಳಿಂದ ಕೆಲ ಅರ್ಜಿಗಳ ಪರಿಶೀಲನೆ ಮುಂದುವರಿಸಲಾಗಿದ್ದು ಇದರಲ್ಲಿ ಕೆಲವರು ಆದಾಯ ತೆರಿಗೆ ಕಟ್ಟುವ ಹಾಗೂ ಶ್ರೀಮಂತರು ಕೂಡ ಈ ಯೋಜನೆಯ ಲಾಭ ಪಡೆಯುತ್ತಿದ್ದು ಅಂತವರನ್ನು ಗುರುತಿಸಲಾಗಿದ್ದು ಅವರ ಖಾತೆಗೆ ಹಣ ಇನ್ನು ಮುಂದೆ ವರ್ಗಾವಣೆ ಆಗುವುದಿಲ್ಲ
ಹಾಗೂ ಸುಮಾರು 1.68 ಲಕ್ಷ ಮಹಿಳೆಯರ ಅರ್ಜಿಗಳು ಆದಾಯ ತೆರಿಗೆ ಕಟ್ಟುತ್ತಿರುವರೆಂದು ತೋರಿಸುತ್ತಿದೆ ಅಂತವರ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗಿದ್ದು ಅವುಗಳ ಪರಿಶೀಲನೆ ಕೊನೆಯ ಹಂತದಲ್ಲಿ ಇದೆ ಎಂದು ತಿಳಿಸಿದ್ದಾರೆ. ಜೂನ್ ಮತ್ತು ಜುಲೈ ತಿಂಗಳ ಹಣ ಬಿಡುಗಡೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು ನಾವು ಜೂನ್ ತಿಂಗಳ ಹಣವನ್ನು ಜುಲೈ 15 ನೇ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ ಮತ್ತು ಜುಲೈ ತಿಂಗಳ ಹಣವನ್ನು ಈ ತಿಂಗಳು ಮುಗಿದರ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹೌದು ಸ್ನೇಹಿತರೆ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಈ ತಿಂಗಳು 15 ನೇ ತಾರೀಖಿನ ಒಳಗಡೆ ಆಗಿ ಪ್ರತಿಯೊಬ್ಬರ ಫಲಾನುಭವಿಗಳ ಖಾತೆಗೆ ಒಟ್ಟಿಗೆ ಜಮಾ ಆಗಲಿದೆ ಮತ್ತು ಕೆಲವರಿಗೆ ಎರಡರಿಂದ ಮೂರು ಕಂತಿನ ಹಣ ಪೆಂಡಿಂಗ್ ಇದ್ದರೆ ಅಂತವರಿಗೆ ಎರಡು ಕಂತು ಪೆಂಡಿಂಗ್ ಇದ್ದರೆ 4,000 ಹಾಗೂ ಮೂರು ಕಂತು ಪೆಂಡಿಂಗ್ ಇದ್ದರೆ 6000 ರೂಪಾಯಿ ಜಮಾ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳಕರು ತಿಳಿಸಿದ್ದಾರೆ ಹಾಗಾಗಿ ಹಣ ಬರುವವರೆಗೂ ಎಲ್ಲರೂ ಕಾಯಬೇಕಾಗುತ್ತದೆ ಮತ್ತು ಈಗಾಗಲೇ ಇಂತಹ ಮಹಿಳೆಯರಿಗೆ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಅದರ ವಿವರವನ್ನು ಕೆಳಗಡೆ ಕೊಟ್ಟಿದ್ದೇವೆ
ಇಂಥಹ ಮಹಿಳೆಯರಿಗೆ ಗೃಹಲಕ್ಷ್ಮಿ (gruhalakshmi) ಹಣ ಮೊದಲು ಬಿಡುಗಡೆ…?
ಹೌದು ಸ್ನೇಹಿತರೆ, ಜೂನ್ ಮತ್ತು ಜುಲೈ ತಿಂಗಳ ಹಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಈಗಾಗಲೇ ಬಿಡುಗಡೆ ಮಾಡಿದ್ದೇವೆ ಮತ್ತು ಕೆಲವರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಮಾಡಲಾಗಿದ್ದು ಇನ್ನು ಎರಡು ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಎಲ್ಲಾ ಖಾತೆಗೆ ಹಣ ವರ್ಗಾವಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಉಳಿದ ಎಲ್ಲಾ ಫಲಾನುಭವಿಗಳಿಗೆ ನಾವು ಜುಲೈ 15 ನೇ ತಾರೀಖಿನ ಒಳಗಡೆಯಾಗಿ ಜೂನ್ ತಿಂಗಳ ಹಣ ಹಾಗೂ ಪೆಂಡಿಂಗ್ ಇರುವಂತ ಎಲ್ಲಾ ಕಂತಿನ ಹಣವು ಕೂಡ ವರ್ಗಾವಣೆ ಮಾಡುತ್ತೇವೆ ಎಂದು ಈ ಬಗ್ಗೆ ಲಕ್ಷ್ಮಿ ಹೆಬ್ಬಾಳಕರ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾಗಿ ನಿಮ್ಮ ಖಾತೆಗೆ ಹಣ ಬಂದಿದೆ ಎಂದು ಚೆಕ್ ಮಾಡಿಕೊಳ್ಳಿ ಮತ್ತು ಹಣ ಬಂದಿಲ್ಲ ಅಂದರೆ ಹಣ ಬರುವವರೆಗೂ ಕಾಯಬೇಕಾಗುತ್ತೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಅಂತ ಮಹಿಳೆಯರಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ