Cashew Cultivation Subsidy: ಗೇರು ಕೃಷಿಗೆ ₹1.20 ಲಕ್ಷದ ಆರ್ಥಿಕ ನೆರವು – 2025–26ರ ಹೊಸ ಸಬ್ಸಿಡಿ ಯೋಜನೆ
ಗೇರು ಬೆಳೆಗಾರರಿಗೆ ಸರ್ಕಾರದ ಬಂಪರ್ ಸಬ್ಸಿಡಿ 2025–26 ನೇ ಸಾಲಿಗೆ ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ವತಿಯಿಂದ ಹೊಸ ಸಬ್ಸಿಡಿ ಯೋಜನೆ ಪ್ರಕಟಗೊಂಡಿದ್ದು, ಗೇರು ಬೆಳೆ ಬೆಳೆಸಲು ಉತ್ಸುಕರಾಗಿರುವ ರೈತರಿಗೆ ಇದು ಅಮೂಲ್ಯ ಅವಕಾಶವಾಗಿದೆ. ಈ ಯೋಜನೆಯಡಿಯಲ್ಲಿ ಗೇರು ಸಸಿಗಳ ಖರೀದಿ, ಹನಿ ನೀರಾವರಿ ವ್ಯವಸ್ಥೆ ಸ್ಥಾಪನೆ, ಹಾಗೂ ಕೀಟ ನಿರ್ವಹಣೆಗೆ ರೂ. 1.20 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಈ ನೆರವು ಎರಡು ವಿಭಿನ್ನ ಪದ್ಧತಿಗಳ ಮೂಲಕ ನೀಡಲಾಗುತ್ತದೆ
ಸಾಮಾನ್ಯ ಗೇರು ಕೃಷಿ ಮಾದರಿ (General Pattern) ಮತ್ತು ಸಾಂದ್ರ ಗೇರು ಕೃಷಿ ಪದ್ಧತಿ (High-Density Plantation). ಈ ಎರಡರಲ್ಲಿ ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆಮಾಡಬಹುದು. ವಿಶೇಷವೆಂದರೆ, ಈ ಯೋಜನೆಯಡಿಯಲ್ಲಿ ನೀವು ಪುತ್ತೂರಿನ ನಿರ್ದೇಶನಾಲಯದಿಂದಲೇ ಗೇರು ಸಸಿಗಳನ್ನು ಖರೀದಿಸಬೇಕಾಗಿದ್ದು, ನರ್ಸರಿ ಬಿಲ್ ಜಮಾ ಮಾಡುವುದು ಕಡ್ಡಾಯವಾಗಿದೆ.
ಇದನ್ನು ಓದಿ : udyogini loan: ಈ ಯೋಜನೆ ಅಡಿಯಲ್ಲಿ ಸಿಗಲಿದೆ 3 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ! ಶೇಕಡ 50ರಷ್ಟು ಸಬ್ಸಿಡಿ,
ಸಾಮಾನ್ಯ ಪದ್ಧತಿಯಡಿ ಪ್ರತಿ ಎಕರೆಗೆ ಸರಾಸರಿ ₹75,000ದವರೆಗೆ ಸಹಾಯಧನ ಲಭ್ಯವಿದೆ.
ಆದರೆ ಹೆಚ್ಚಿನ ಸಬ್ಸಿಡಿ ಅಗತ್ಯವಿದ್ದರೆ, ಸಾಂದ್ರ ಪದ್ಧತಿ ಉತ್ತಮ ಆಯ್ಕೆಯಾಗಿದೆ. ಇಲ್ಲಿ 4 ಮೀ x 4 ಮೀ ಅಂತರದಲ್ಲಿ ಪ್ರತಿ ಎಕರೆಗೆ 250 ಗಿಡಗಳನ್ನು ನೆಡುವ ವ್ಯವಸ್ಥೆ ಇರುವುದರಿಂದ ಪ್ರತಿ ಎಕರೆಗೆ ₹1.12 ಲಕ್ಷದವರೆಗೆ ಸಬ್ಸಿಡಿ ಲಭ್ಯವಿರುತ್ತದೆ. ಈ ಪ್ಯಾಟರ್ನ್‌ನಲ್ಲಿ Bidhan Bonsai Kaju ಮತ್ತು Nethra Vaman ಜಾತಿಯ ಗಿಡಗಳನ್ನು ಬಳಸುವುದು ಕಡ್ಡಾಯವಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಅವಶ್ಯಕ ದಾಖಲೆಗಳು ಅಗತ್ಯವಿವೆ
- ಗೇರು ಗಿಡ ಖರೀದಿಯ ನರ್ಸರಿ ರಸೀದಿ
- ಹನಿ ನೀರಾವರಿ ಪಾವತಿ ಬಿಲ್
- ಬ್ಯಾಂಕ್ ಪಾಸ್‌ಬುಕ್ ನಕಲು
- ಭೂಮಿಯ ದಾಖಲೆಗಳು
ಈ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ 2025 ಆಗಸ್ಟ್ 31 ರ ಒಳಗೆ ಅರ್ಜಿ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ, ಡಾ. ಈರದಾಸಪ್ಪ (9916074454) ಅವರನ್ನು ಸಂಪರ್ಕಿಸಬಹುದು.
ಇದನ್ನು ಓದಿ : sslc supplementary result 2025: SSLC ಪರೀಕ್ಷೆ-2 ರ ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್! ತಕ್ಷಣ ಈ ರೀತಿ ರಿಸಲ್ಟ್ ಚೆಕ್ ಮಾಡಿ
ರೈತ ಸ್ನೇಹಿತರೆ, ನಿಮ್ಮ ಭೂಮಿಯಲ್ಲಿ ಗೇರು ಬೆಳೆ ಬೆಳೆಸುವ ಈ ಬಂಗಾರದ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಹನಿ ನೀರಾವರಿ ಮತ್ತು ಪ್ರಾಮಾಣಿಕ ಬೆಳೆ ವ್ಯವಸ್ಥೆಯಿಂದ ಹೆಚ್ಚು ಆದಾಯ ಗಳಿಸಲು ಇದು ಅತ್ಯುತ್ತಮ ಅವಕಾಶ. ಗೇರು ಕೃಷಿಯ ಮೂಲಕ ನಿವೇ ನಿಮ್ಮ ಕೃಷಿ ಬದುಕಿಗೆ ಹೊಸ ಬೆಳಕು ನೀಡಬಹುದು.
ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತ ರೈತರೊಂದಿಗೆ ಹಂಚಿಕೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ತಕ್ಷಣವೇ ಅರ್ಜಿ ಸಲ್ಲಿಸಿ.