annabhagya amount:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣಕ್ಕಾಗಿ ಕಾಯುತ್ತಿದ್ದರೆ ನಿಮಗೆ ಗುಡ್ ನ್ಯೂಸ್ ಇವತ್ತು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆಯಾಗಿದೆ ಅದನ್ನು ಯಾವ ರೀತಿ ಚೆಕ್ ಮಾಡಬೇಕು ಮತ್ತು ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ.
ಇದೇ ರೀತಿ ಅನ್ನ ಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಮತ್ತು ಗೃಹಜೋತಿ ಯೋಜನೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ರೀತಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ಸರಕಾರಿ ನೌಕರಿಗಳ ಬಗ್ಗೆ ಮತ್ತು ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸುವುದು. ಕೊನೆಯ ದಿನಾಂಕ ಯಾವಾಗ ಈ ರೀತಿ ಪ್ರತಿಯೊಂದು ಮಾಹಿತಿಯನ್ನು ನೀವು ಪ್ರತಿದಿನ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಅನ್ನಭಾಗ್ಯ ಯೋಜನೆ (annabhagya amount)…?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ನೀಡಿದೆ ಅದರಲ್ಲಿ ಅನ್ನಭಾಗ್ಯ ಯೋಜನೆ ಒಂದು ಗ್ಯಾರಂಟಿಯಾಗಿದೆ ಈ ಯೋಜನೆಯ ಮೂಲಕ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಅಥವಾ ಪಡಿತರ ಚೀಟಿಯ ಮೂಲಕ ಹಕ್ಕಿ ಪಡುತ್ತಿರುವಂತ ಕುಟುಂಬಗಳಿಗೆ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.
ಆದರೆ ನಮ್ಮ ಕರ್ನಾಟಕದಲ್ಲಿ ಅಕ್ಕಿಯ ಅಭಾವದಿಂದ ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಮಾತ್ರ ಫಲಾನುಭವಿಗಳು ಪಡೆಯುತ್ತಿದ್ದು ಮತ್ತು ಉಳಿದ 5 ಕೆಜಿ ಅಕ್ಕಿ ಹಣವನ್ನು ಅಂದರೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 170 ಹಣವನ್ನು ಫಲಾನುಭವಿಗಳ ಖಾತೆಗೆ ಈ ಅನ್ನಭಾಗ್ಯ ಯೋಜನೆಯ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದೆ ಇದೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ (annabhagya amount)…?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಇಲ್ಲಿವರೆಗೂ ಅನ್ನ ಭಾಗ್ಯ ಯೋಜನೆ ಮೂಲಕ ಪ್ರತಿ ತಿಂಗಳು ತುಂಬಾ ಫಲಾನುಭವಿಗಳು ಹಣ ಪಡೆದುಕೊಳ್ಳುತ್ತಾ ಬಂದಿದ್ದಾರೆ ಆದರೆ ಕಳೆದ ಮೂರು ತಿಂಗಳಿಂದ ಈ ಯೋಜನೆ ಮೂಲಕ ಯಾವುದೇ ರೀತಿ ಹಣ ಬರುತ್ತಿಲ್ಲವೆಂದು ಜನರು ಸರಕಾರದ ವಿರುದ್ಧ ಆಕ್ರೋಶ ವರ ಆಗುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದು ಸದ್ಯದಲ್ಲೇ ಹಣ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದರು.
ಅದೇ ರೀತಿ ಇವತ್ತು ಅಂದರೆ ಜುಲೈ 13ನೇ ತಾರೀಖಿನಂದು ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಕ್ಕಿ ಹಣ ವರ್ಗಾವಣೆ ಮಾಡಲು ಪ್ರಾರಂಭ ಮಾಡಿದ್ದಾರೆ ಮತ್ತು ಕೆಲ ಫಲಾನುಭವಿಗಳಿಗೆ ಈಗಾಗಲೇ ಹಣ ಬಿಡುಗಡೆಯಾಗಿದೆ ಅದರ ಸಾಕ್ಷಿಯನ್ನು ನಾವು ನಿಮಗೆ ಮೇಲೆ ಒಂದು ಇಮೇಜಿನಲ್ಲಿ ತೋರಿಸಿದ್ದೇವೆ ಈಗ ನಾವು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಮತ್ತು ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಪಡೆದುಕೊಳ್ಳಬೇಕಾದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಸ್ನೇಹಿತರೆ ಇಲ್ಲಿ ಗಮನಿಸಬೇಕಾದಂತ ಅಂಶವೇನೆಂದರೆ ಇಲ್ಲಿ ಅನ್ನ ಭಾಗ್ಯ ಯೋಜನೆ ಯ ಮೂಲಕ ಕೇವಲ ಒಂದೇ ಕಂಚಿನ ಹಣ ಬಿಡುಗಡೆಯಾಗಿದೆ ಇನ್ನುಳಿದ ಕಂತಿನ ಹಣವನ್ನು ಸರ್ಕಾರ ಇನ್ನ 15 ದಿನಗಳ ಒಳಗಡೆ ಆಗಿ ಅಂದರೆ ಈ ಜುಲೈ ತಿಂಗಳು ಮುಗಿಯುವದರ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಅನ್ನಭಾಗ್ಯ ಯೋಜನೆಯ ಅಕ್ಕಿ ಅಣ ಬಿಡುಗಡೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಕಡೆಯಿಂದ ಮಾಹಿತಿ ತಿಳಿದು ಬಂದಿದೆ
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಮತ್ತು ಪೆಂಡಿಂಗ್ ಇರುವಂತಹ ಹಣ ಪಡೆಯಲು (annabhagya amount) ಏನು ಮಾಡಬೇಕು..?
ಹೌದು ಸ್ನೇಹಿತರೆ, ನೀವು ಅನ್ನ ಭಾಗ್ಯ ಯೋಜನೆಗೆ ಪ್ರತಿ ತಿಂಗಳು ಅಕ್ಕಿ ಹಣ ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅವುಗಳ ಬಗ್ಗೆ ಕೆಳಗಡೆ ವಿವರಿಸಲಾಗಿದೆ. ನೀವು ಈ ಹಿಂದೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಪಡೆಯುತ್ತಿದ್ದರೆ ಮತ್ತು ನಿಮಗೆ ಎರಡರಿಂದ ಮೂರು ಕಂತಿನ ಹಣ ಮಾತ್ರ ಬಾಕಿ ಇದ್ದರೆ ಅಂತವರು ಏನು ಮಾಡುವಂತ ಅವಶ್ಯಕತೆ ಇಲ್ಲ ನಿಮ್ಮ ಖಾತೆಗೆ ಮುಂದಿನ ದಿನಗಳಲ್ಲಿ ಖಂಡಿತವಾಗಲೂ ಹಣ ಜಮಾ ಆಗುತ್ತದೆ
ರೇಷನ್ ಕಾರ್ಡ್ ಈ ಕೆವೈಸಿ:- ಹೌದು ಸ್ನೇಹಿತರೆ ಪ್ರತಿ ತಿಂಗಳು ನೀವು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಪಡೆಯಬೇಕಾದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ ಈಕೆ ವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಅಂದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಹಣ ಬರುತ್ತೆ ಇದನ್ನು ಮಾಡಿಸಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ
ಬ್ಯಾಂಕ್ ಪಾಸ್ ಬುಕ್:- ಅನ್ನಭಾಗ್ಯ ಯೋಜನೆಯ ಅಕ್ಕಿ ಅಣ ಮತ್ತು ಸರಕಾರದ ಯಾವುದೇ ರೀತಿ ಯೋಜನೆಯ ಹಣ ಪಡೆಯಬೇಕೆಂದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿದೆ. ಹಣ ಬರಲು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿ ಇರಬೇಕು.
ಪ್ರತಿ ತಿಂಗಳು ರೇಷನ್ ಪಡೆಯುವುದು:- ಹೌದು ಸ್ನೇಹಿತರೆ ನಿಮಗೆ ಅನ್ನ ಭಾಗ್ಯ ಯೋಜನೆ ಹಣ ಬರದೆ ಇರಲು ಇನ್ನೊಂದು ಪ್ರಮುಖ ಕಾರಣವೇನೆಂದರೆ ನೀವು ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಮೂಲಕ ರೇಷನ್ ಪಡೆಯದೆ ಇರುವುದು ಹಾಗಾಗಿ ನೀವು ಕನಿಷ್ಠ ಮೂರು ತಿಂಗಳಿಗೆ ಒಂದು ಸಲವಾದರೂ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳ ಮೂಲಕ ರೇಷನ್ ಅನ್ನು ಪಡೆದುಕೊಳ್ಳಿ
ಆಧಾರ್ ಕಾರ್ಡ್ ಅಪ್ಡೇಟ್:- ಹೌದು ಸ್ನೇಹಿತರೆ, ನೀವು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದರೆ 10 ವರ್ಷಗಳ ಕಾಲ ನಿಮ್ಮ ಆಧಾರ್ ಕಾರ್ಡ್ ಯಾವುದೇ ರೀತಿ ಅಪ್ಡೇಟ್ ಮಾಡಿಸಲಿಲ್ಲ ಅಂದರೆ ಕಡ್ಡಾಯವಾಗಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅಂದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುತ್ತೆ.
ಈ ಮೇಲೆ ನೀಡಿದಂತ ಎಲ್ಲಾ ನಿಯಮಗಳನ್ನು ನೀವು ಪಾಲಿಸಿದರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಪ್ರತಿ ತಿಂಗಳು ಬರುತ್ತೆ ಆದರೆ ಇಲ್ಲಿ ಗಮನಿಸಬೇಕಾದಂತ ಅಂಶವೇನೆಂದರೆ ಸರಕಾರ ಕಡೆಯಿಂದ ಹಣ ಬಿಡುಗಡೆ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಹಣ ಬರುತ್ತೆ ಹಾಗಾಗಿ ಸರಕಾರ ಹಣ ಬಿಡುಗಡೆ ಮಾಡುವವರೆಗೂ ನೀವು ಕಾಯಬೇಕಾಗುತ್ತದೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಯಾವ ರೀತಿ ಚೆಕ್ ಮಾಡಬೇಕು (annabhagya amount)…?
ಸ್ನೇಹಿತರೆ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಚೆಕ್ ಮಾಡಲು ಎರಡು ವಿಧಾನಗಳಿವೆ. ಮೊದಲು ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅನ್ನಭಾಗ್ಯ ಯೋಜನೆಯ ಹಣ ಮಾಡಬಹುದು ಅಥವಾ ಪ್ಲೇ ಸ್ಟೋರ್ ನಲ್ಲಿ ಸಿಗುವಂತ ಕರ್ನಾಟಕ DBT ಅಪ್ಲಿಕೇಶನ್ ಡೌನ್ಲೋಡ್ ಮಾಡುವುದರ ಮೂಲಕ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಬಹುದು ಅದರ ಪೂರ್ತಿ ವಿವರವನ್ನು ನಾವು ಈ ಕೆಳಗಡೆ ಎರಡು ಲೇಖನಿಯಲ್ಲಿ ತಿಳಿಸಿದ್ದೇವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಕರ್ನಾಟಕ DBT ಅಪ್ಲಿಕೇಶನ್ ಮೂಲಕ:- ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಅಕ್ಕಿ ಹಣ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
gruhalakshmi status check | ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ..! ಈ ರೀತಿ ಹಣ ಚೆಕ್ ಮಾಡಿ
ಆಹಾರ ಇಲಾಖೆಯ ಮೂಲಕ:- ಅನ್ನಭಾಗ್ಯ ಯೋಜನೆಯ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿ ಕ್ಲಿಕ್ ಮಾಡಿ
ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದುಕೊಳ್ಳುತ್ತಿದ್ದೇನೆ ಹಾಗಾಗಿ ಆದಷ್ಟು ಈ ಲೇಖನಿಯನ್ನು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮತ್ತು ಅಕ್ಕಿ ಹಣಕ್ಕಾಗಿ ಯಾರು ಕಾಯುತ್ತಿದ್ದಾರೆ ಅಂತವರಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿಯೊಂದು ಮಾಹಿತಿ ಬೇಗ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು