Posted in

Horticulture Schemes: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಬ್ಸಿಡಿ ಯೋಜನೆಗಳು – ಅರ್ಜಿ ಆಹ್ವಾನ!

Horticulture Schemes

Horticulture Schemes: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಬ್ಸಿಡಿ ಯೋಜನೆಗಳು – ಅರ್ಜಿ ಆಹ್ವಾನ!

ತೋಟಗಾರಿಕೆ ಇಲಾಖೆಯು 2025-26ನೇ ಸಾಲಿಗೆ ಸಂಬಂಧಿಸಿದಂತೆ ಹಲವು ಸಬ್ಸಿಡಿ ಯೋಜನೆಗಳನ್ನು ಘೋಷಿಸಿದ್ದು, ರೈತರು ಈ ಯೋಜನೆಗಳಡಿ ತಮ್ಮ ಕೃಷಿಗೆ ಅವಶ್ಯಕ ಯಂತ್ರೋಪಕರಣಗಳು, ನೀರಾವರಿ ಸಾಧನೆ, ಸಂಸ್ಕರಣಾ ಘಟಕಗಳು, ಜೇನು ಸಾಕಾಣಿಕೆ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now       

ಉಪ ನಿರ್ದೇಶಕ ಯೋಗೇಶ್ ಅವರ ಮಾಹಿತಿ ಪ್ರಕಾರ, ಈ ಸಾಲಿನಲ್ಲಿ ರೈತರಿಗೆ ತೋಟಗಾರಿಕೆ ಸಂಬಂಧಿತ ಹಲವಾರು ಹೂಡಿಕೆಗಳಿಗೆ ಶೇ.40ರಿಂದ 90%ರಷ್ಟು ಸಹಾಯಧನ ನೀಡಲಾಗುತ್ತಿದೆ.

ಯಾವೆಲ್ಲ ಯೋಜನೆಗಳಿವೆ?

ಇದೇವರೆಗೆ ಜಾರಿಯಲ್ಲಿರುವ ಪ್ರಮುಖ ತೋಟಗಾರಿಕೆ ಯೋಜನೆಗಳ ಪಟ್ಟಿ:

  1. ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM)
  2. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)
  3. ತಾಳೆ ಬೆಳೆ ಹೇರಳಗೊಳಿಸುವ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ
  4. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)
  5. ಜೇನು ಸಾಕಾಣಿಕೆ ಅಭಿವೃದ್ದಿ ಯೋಜನೆ
  6. ಪರಂಪರಾಗತ ಕೃಷಿ ವಿಕಾಸ ಯೋಜನೆ
  7. ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆ
  8. ನರೇಗಾ (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)
  9. ಕೊಯ್ಲೋತ್ತರ ನಿರ್ವಹಣೆ ಯೋಜನೆ

ಇದನ್ನು ಓದಿ : Fast food Training: ಗ್ರಾಮೀಣ ಯುವಕರಿಗೆ ಉಚಿತ ಫಾಸ್ಟ್ ಫುಡ್ ತರಬೇತಿ – ಅರ್ಜಿ ಆಹ್ವಾನ

ಪ್ರಮುಖ ಸಬ್ಸಿಡಿ ಸೌಲಭ್ಯಗಳು

1. ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ

  • ಪವರ್ ಸ್ಪ್ರೇಯರ್, ದೋಟಿ, ಪವರ್ ವೀಡರ್, ಮರ ಕತ್ತರಿಸುವ ಯಂತ್ರ, ತಳ್ಳುವ ಗಾಡಿ, ಅಡಿಕೆ ಸಿಪ್ಪೆ ಯಂತ್ರ, ಕಾಳು ಮೆಣಸು ಬೇರ್ಪಡಿಸುವ ಯಂತ್ರಗಳಿಗೆ ಶೇ.40ರ ಸಹಾಯಧನ (RKVY ಯಾಂತ್ರಿಕರಣ ಅಡಿಯಲ್ಲಿ)
  • ಹಸಿರು ಮನೆ, ಪಾಲಿ ಟನಲ್, ನೀರು ಸಂಗ್ರಹಣೆ ಟ್ಯಾಂಕ್‌ಗಳಿಗೆ ಶೇ.50ರ ಸಹಾಯಧನ (NHM ಅಡಿಯಲ್ಲಿ)

2. ಹನಿ ನೀರಾವರಿ ಉಪಕರಣಗಳು

  • ಹನಿ ಮತ್ತು ಸೂಕ್ಷ್ಮ ನೀರಾವರಿ ಅಳವಡಿಕೆಗೆ ಶೇ.90ರ ಸಬ್ಸಿಡಿ (SC/ST/PWD ರೈತರಿಗೆ) – PMKSY

3. ಜೇನು ಸಾಕಾಣಿಕೆ

  • ಜೇನು ಪೆಟ್ಟಿಗೆ, ಜೇನು ಕುಟುಂಬ, ಸ್ಟ್ಯಾಂಡ್‌ಗಳಿಗೆ ಶೇ.75 (ಸಾಮಾನ್ಯ ರೈತರಿಗೆ) ಹಾಗೂ ಶೇ.90 (SC/ST ರೈತರಿಗೆ)

4. ತಾಳೆ ಬೆಳೆ ಉತ್ತೇಜನ

  • ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆಗೆ ಶೇ.50ರ ಸಹಾಯಧನ, ಡಿಸೇಲ್ ಮೋಟಾರ್, ಚಾಫ್ ಕಟ್ಟರ್, ಇತರ ಸಾಧನಗಳಿಗೂ ಸಹಾಯಧನ

5. ಪರಂಪರೆ ಕೃಷಿ ಪ್ರೋತ್ಸಾಹ

  • ಸಾವಯವ ಕೃಷಿಗೆ ಬೇಕಾದ ಗೊಬ್ಬರ ಘಟಕ, ಅಝೋಲ್ಲಾ ತೊಟ್ಟಿ, ಬಯೋಡೈಜೆಸ್ಟರ್, ಕೀಟನಾಶಕ ತಯಾರಿಕೆ ಡ್ರಂ‌ಗಳಿಗೆ ಸಹಾಯಧನ

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

  • ಆಸಕ್ತ ರೈತರು ತಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು (AHO) ನೇರವಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
  • ಅಧಿಕೃತ ವೆಬ್‌ಸೈಟ್ ಮೂಲಕ ಕೂಡ ತೋಟಗಾರಿಕೆ ಇಲಾಖೆಯ ಮಾಹಿತಿ ಪಡೆಯಬಹುದಾಗಿದೆ:
    ತೋಟಗಾರಿಕೆ ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ

ಇದನ್ನು ಓದಿ : SSP Scholarship 2025 Eligibility: SSP ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಈ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ

ಅರ್ಜಿಗೆ ಅಗತ್ಯ ದಾಖಲೆಗಳು

  • ಭೂಮಿ ದಾಖಲೆ (RTC)
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್ ನಕಲು
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಭೂ ಮಾಲೀಕತ್ವ ಪ್ರಮಾಣ

ರೈತ ಬಂಧುಗಳು, ನಿಮ್ಮ ತೋಟಗಾರಿಕೆ ಆಧಾರಿತ ಕೃಷಿಗೆ ಸರ್ಕಾರವು ನೀಡುತ್ತಿರುವ ಸಬ್ಸಿಡಿ ಯೋಜನೆಗಳನ್ನು ಅನುಕೂಲಪಡಿಸಿಕೊಳ್ಳಿ. ನಿಮ್ಮ ಪ್ರದೇಶದ ತೋಟಗಾರಿಕೆ ಇಲಾಖೆಯನ್ನು ಭೇಟಿಯಾಗಿ ಸಮಗ್ರ ಮಾಹಿತಿಯನ್ನು ಪಡೆದು, ಅರ್ಹತೆಯಾದಲ್ಲಿ ಅರ್ಜಿ ಸಲ್ಲಿಸಿ.

ಇದನ್ನು ಓದಿ : SSP Scholarship 2025 Eligibility: SSP ಸ್ಕಾಲರ್ಶಿಪ್ ಅರ್ಜಿ ಆಹ್ವಾನ.! ಈ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ

Horticulture Department Website: ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್-Click Here

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>