Property Registration New Rule: ಆಸ್ತಿ ನೊಂದಣಿ ಮಾಡಲು ಇನ್ನು ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ನೋಡಿ ಮಾಹಿತಿ.
ಈಗ ಭಾರತ ಸರ್ಕಾರವು ಜನವರಿ 1 2025 ರಿಂದ ಈ ಒಂದು ಜಮೀನು ಮತ್ತು ಆಸ್ತಿ ನೊಂದಣಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಈಗ ಜಾರಿಗೆ ಮಾಡಿದೆ. ಈ ಒಂದು ಹೊಸ ನಿಯಮಗಳ ಮುಖ್ಯ ಉದ್ದೇಶವು ಏನೆಂದರೆ ಈಗ ನೋಂದಣಿ ಪ್ರಕ್ರಿಯೆಯನ್ನು ಸರಳ ಮತ್ತು ವೇಗವಾಗಿ ಅಷ್ಟೇ ಅಲ್ಲದೆ ಸುರಕ್ಷಿತವಾಗಿ ಮಾಡುವಂತಹ ನಿಟ್ಟಿನಲ್ಲಿ ಈ ಒಂದು ನಿಯಮಗಳನ್ನು ಜಾರಿಗೆ ಮಾಡಲಾಗಿದೆ. ಈಗ ಡಿಜಿಟಲ್ ತಂತ್ರಜ್ಞಾನವನ್ನು ಆಧರಿಸಿಕೊಂಡು ಈ ಒಂದು ಬದಲಾವಣೆಗಳನ್ನು ಈಗ ಜನರಿಗೆ ಸಮಯ ಉಳಿತಾಯ ಮಾಡುವುದರ ಜೊತೆಗೆ ವಂಚನೆಯಿಂದ ತಡೆಗಟ್ಟುವ ಸಲುವಾಗಿ ಈ ಒಂದು ನಿಯಮಗಳನ್ನು ಈಗ ಜಾರಿಗೆ ಮಾಡಲಾಗಿದೆ.
ಹೊಸ ನಿಯಮಗಳ ಮಾಹಿತಿ
ಸಂಪೂರ್ಣ ಡಿಜಿಟಲ್ ನೊಂದಣಿ
ಈಗ ಸ್ನೇಹಿತರೆ ನಿಮ್ಮ ಜಮೀನು ಅಥವಾ ಆಸ್ತಿ ನೋಂದಣಿ ಇನ್ನು ಮುಂದೆ ಸಂಪೂರ್ಣ ಆನ್ಲೈನ್ ಮೂಲಕ ನಡೆಯುತ್ತದೆ. ಈಗ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದರ ಮೂಲಕ ಜನರು ಈಗ ರಿಜಿಸ್ಟರ್ ಕಚೇರಿಗೆ ಪದೇಪದೇ ಭೇಟಿ ನೀಡುವ ತೊಂದರೆಯಿಂದ ಮುಕ್ತರಾಗುತ್ತಾರೆ. ನಿಮ್ಮ ನೋಂದಣಿಗೆ ಒಂದು ಬಾರಿ ಪೂರ್ಣಗೊಂಡರೆ ನೀವು ಡಿಜಿಟಲ್ ಸಹಿಯೊಂದಿಗೆ ಡಿಜಿಟಲ್ ಪ್ರಮಾಣ ಪತ್ರವನ್ನು ಈಗ ಪಡೆದುಕೊಳ್ಳಬಹುದಾಗಿದೆ.
ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ
ಈಗ ನಿಮ್ಮ ಆಸ್ತಿ ನೊಂದಣಿಗೆ ಆಧಾರ್ ಕಾರ್ಡ್ ನ ಬಯೋಮೆಟ್ರಿಕ್ ಪರಿಶೀಲನೆಯನ್ನು ಈಗ ಸರ್ಕಾರವು ಕಡ್ಡಾಯ ಮಾಡಿದೆ. ಇದರಿಂದ ಆಸ್ತಿಯ ಮಾಲೀಕತ್ವದಲ್ಲಿ ಯಾವುದೇ ರೀತಿಯಾದಂತಹ ನಕಲಿ ಚಟುವಟಿಕೆಗಳು ನಡೆಯುವುದಿಲ್ಲ. ಅಷ್ಟೇ ಅಲ್ಲದೆ ಎಲ್ಲಾ ದಾಖಲಾತಿಗಳನ್ನು ಆಧಾರ್ ಕಾರ್ಡಿಗೆ ಜೋಡಣೆ ಮಾಡುವುದರಿಂದ ಬೆನಾಮಿ ಆಸ್ತಿಗಳನ್ನು ಸುಲಭವಾಗಿ ಈಗ ಪತ್ತೆ ಹಚ್ಚಬಹುದಾಗಿರುತ್ತದೆ.
ಆನ್ಲೈನ್ ಶುಲ್ಕ ಪಾವತಿ
ಈಗ ನೀವು ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಡ್ಯೂಟಿಯನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ನೀವು ಈಗ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಷ್ಟೇ ಅಲ್ಲದೆ ಯುಪಿಐ ಮೂಲಕ ಈ ಒಂದು ಶುಲ್ಕವನ್ನು ಈಗ ನೀವು ಪಾವತಿ ಮಾಡಬಹುದಾಗಿದೆ.
ವಿಡಿಯೋ ರೆಕಾರ್ಡಿಂಗ್
ಈಗ ಸ್ನೇಹಿತರೆ ನೋಂದಣಿ ಪ್ರಕ್ರಿಯೆ ಸಮಯದಲ್ಲಿ ಈಗ ಖರೀದಿದಾರರ ಅಥವಾ ಮಾರಾಟಗಾರರ ಸಂವಾದವನ್ನು ಈಗ ವಿಡಿಯೋದಲ್ಲಿ ದಾಖಲಿಸುವುದು ಈಗ ಕಡ್ಡಾಯವಾಗಿರುತ್ತದೆ. ಈ ಒಂದು ವಿಡಿಯೋ ರೆಕಾರ್ಡಿಂಗ್ ಈಗ ನಿಮ್ಮ ಮುಂದಿನ ದಿನಮಾನಗಳಲ್ಲಿ ಯಾವುದೇ ರೀತಿಯಾದಂತ ವಿವಾದ ಉದ್ಭವ ಆದರೆ ಅದಕ್ಕೆ ಸಾಕ್ಷಿಯಾಗಿ ಈ ಒಂದು ವಿಡಿಯೋ ಸಾಕ್ಷಿಯಾಗಿ ನಿರ್ವಹಣೆ ಮಾಡುತ್ತದೆ.
ಅಗತ್ಯ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಆಸ್ತಿಯ ದಾಖಲೆಗಳು
- ಕಂದಾಯ ದಾಖಲೆಗಳು
- ಪುರಸಭೆ ತೆರಿಗೆ ರಶೀದಿಗಳು
ಆನ್ಲೈನ್ ಮೂಲಕ ನೊಂದಣಿ ಮಾಡುವುದು ಹೇಗೆ?
- ಮೊದಲಿಗೆ ನೀವು ಸರ್ಕಾರಿ ಭೂ ನೊಂದಣಿ ಪೋರ್ಟಲ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ಆನ್ಲೈನ್ ಮೂಲಕ ಅರ್ಜಿಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ.
- ತದನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ನೀವು ಅಪ್ಲೋಡ್ ಮಾಡಬೇಕಾಗುತ್ತದೆ.
- ಆನಂತರ ಅದಕ್ಕೆ ಬೇಕಾಗುವಂತ ಶುಲ್ಕವನ್ನು ನೀವು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
- ನೀವು ಶುಲ್ಕವನ್ನು ಪಾವತಿ ಮಾಡಿದ ನಂತರ ದಾಖಲೆಗಳ ಪರಿಶೀಲನೆಗಾಗಿ ಕಾಯಬೇಕಾಗುತ್ತದೆ.
- ನಿಮ್ಮ ದಾಖಲೆ ಪರಿಶೀಲನೆ ಮುಗಿದ ನಂತರ ಬಯೋಮೆಟ್ರಿಕ್ ಪರಿಶೀಲನೆಗಾಗಿ ನಿಮಗೆ ದಿನಾಂಕವನ್ನು ನೀಡಲಾಗುತ್ತದೆ.
- ಆನಂತರ ನೀವು ಕಚೇರಿಗೆ ಭೇಟಿ ನೀಡಿ. ಬಯೋಮೆಟ್ರಿಕ್ ಪರಿಶೀಲನೆ ಮತ್ತು ಡಿಜಿಟಲ್ ಸಹಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
- ನಿಮ್ಮ ನೋಂದಣಿ ಪ್ರಕ್ರಿಯೆ ಮುಗಿದ ನಂತರ ನೀವು ಡಿಜಿಟಲ್ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು..
ಈಗ ಸರ್ಕಾರ ಈ ಒಂದು ಆಸ್ತಿ ನೋಂದಣಿಯನ್ನು ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಹೊಸ ನಿಯಮಗಳನ್ನು ಜಾರಿಗೆ ಮಾಡಿ ಸುಲಭ ಮತ್ತು ಸುರಕ್ಷಿತ ವ್ಯವಸ್ಥೆಯನ್ನು ಒದಗಿಸಲು ಈ ಒಂದು ನಿಯಮಗಳೊಂದಿಗೆ ಜಾರಿಗೆ ಮಾಡಿದೆ.