pm Scholarship: ಪಿಎಂ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳಿಗೆ 36,000 ಸ್ಕಾಲರ್ಶಿಪ್ ಪಡೆಯಬಹುದು. ಬೇಗ ಅರ್ಜಿ ಸಲ್ಲಿಸಿ

pm Scholarship:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು 36,000 ಹಣ ಸಿಗುತ್ತೆ, ಯಾವುದು ಸ್ಕಾಲರ್ಶಿಪ್..? ಹೇಗೆ ಅರ್ಜಿ ಸಲ್ಲಿಸಬಹುದು..? ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು..? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ

ಗೃಹಲಕ್ಷ್ಮಿ ಪೆಂಡಿಂಗ್ ಇರುವ ಜೂನ್ ಮತ್ತು ಜುಲೈ ತಿಂಗಳ ಹಣ ಬಿಡುಗಡೆ..! ಹೊಸ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿದಿನ ಮಾಹಿತಿ ಬೇಕಾದರೆ ಜೊತೆಗೆ ರೈತರಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತ ವಿವಿಧ ರೀತಿ (pm Scholarship) ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ (current affairs) ಪ್ರಚಲಿತ ಘಟನೆಗಳ ಬಗ್ಗೆ ಪ್ರತಿದಿನ (daily update) ಮಾಹಿತಿ ಪಡೆಯಲು ನೀವು ನಮ್ಮ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಬಂತು ಹೊಸ ರೂಲ್ಸ್, ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಿ ಇಲ್ಲವಾದರೆ ದಂಡಗಳು ಇಲ್ಲಿದೆ ಮಾಹಿತಿ

 

ಪಿಎಂ ಸ್ಕಾಲರ್ಶಿಪ್ (pm Scholarship) ಯೋಜನೆ..?

ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಯೋಜನೆಯನ್ನು ಭಾರತ ಸರ್ಕಾರದಿಂದ ಈ ಯೋಜನೆ ಜಾರಿಗೆ ತರಲಾಗಿದೆ ನಮ್ಮ ಕೇಂದ್ರ ಸರಕಾರದಲ್ಲಿ ಬರುವಂತಹ ಅಸ್ಸಾಂ ರೈಫಲ್ಸ್ & ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಗಳು ಹಾಗೂ ನಮ್ಮ ರಾಜ್ಯ ಪೊಲೀಸ್ ಪಡೆಗಳಲ್ಲಿ ಸೇವೆ ಸಲ್ಲಿಸಿದವರು ಹಾಗೂ ಹಾಗೂ ನಮ್ಮ ದೇಶದ ಸೈನಿಕ ಕ್ಷೇತ್ರದಲ್ಲಿ ಅಂದರೆ ನೌಕಾಪಡೆ ಭೂಪಡೆ ಹಾಗೂ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ವೀರ ಮರಣ ಹೊಂದಿದಂತ ಯೋಧರು ಹಾಗೂ ಅಂಗವಿಕಲ ಹೊಂದಿದಂತ ಯೋಧರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಅವರಿಗೆ ಪ್ರೋತ್ಸಾಹ ನೀಡಲು ಈ ವಿದ್ಯಾರ್ಥಿ ವೇತನವನ್ನು ಜಾರಿಗೆ ತರಲಾಯಿತು.

WhatsApp Group Join Now
Telegram Group Join Now       
pm Scholarship
pm Scholarship

ಹೌದು ಸ್ನೇಹಿತರೆ, ಈ ವಿದ್ಯಾರ್ಥಿ ವೇತನಕ್ಕೆ ನಮ್ಮ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಸೈನಿಕರ ಮಕ್ಕಳು ಹಾಗೂ ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೋಲಿಸ್ ಪಡೆಗಳು ಹಾಗೂ ಇತರ ಸಿಬ್ಬಂದಿ ವರ್ಗದವರು ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಬರೋಬ್ಬರಿ 36,000 ವರೆಗೆ ಹಣ ಪಡೆದುಕೊಳ್ಳಬಹುದು

 

WhatsApp Group Join Now
Telegram Group Join Now       

ಪಿಎಂ ಸ್ಕಾಲರ್ಶಿಪ್ (pm Scholarship) ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

ಸ್ನೇಹಿತರೆ ಈ ಪಿಎಂ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ನಮ್ಮ ಭಾರತೀಯ ದೇಶದಲ್ಲಿ ಇರುವಂತ ಮೂರು ಸೇನೆಯಲ್ಲಿ ಅಂದರೆ ಭೂಪಡೆ ಹಾಗೂ ವಾಯುಪಡೆ ಮತ್ತು ಜಲ ಪಡೆ ಈ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿರುವಂತಹ ಯೋಧರ ಮಕ್ಕಳು ಹಾಗೂ SRPF, CRPF, RPF & ಪೊಲೀಸ್ ಪಡೆ ಮತ್ತು ಇತರ ಕೆಲಸ ಮಾಡಿದಂತ ಸಿಬ್ಬಂದಿಗಳು ಹಾಗೂ ವೀರ ಮರಣ ಹೊಂದಿದಂತ ಯೋಧರ ಪುತ್ರ ಪುತ್ರಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಪಿಎಂ ಸ್ಕಾಲರ್ಶಿಪ್ ಯೋಜನೆ (pm Scholarship) ಅರ್ಹತಾ ಮಾನದಂಡಗಳು..?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದಂತ ಸೈನಿಕರ ಮಕ್ಕಳಾಗಿರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕನಿಷ್ಠ 60% ಅಂಕ ಪಡೆದಿರಬೇಕು
  • ಪಿಎಂ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 2nd puc ಅಥವಾ ಯಾವುದೇ ಪದವಿ ಅಥವಾ ಡಿಪ್ಲೋಮೋ ಪಾಸ್ ಆಗಿರಬೇಕು
  • ಪಿಎಂ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಆರು ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
  • ಪಿಎಂ ಸ್ಕಾಲರ್ಶಿಪ್ ಯೋಜನೆ ಸ್ನಾತಕೋತ್ತರ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುವಹಿಸುವುದಿಲ್ಲ

 

 

ಪಿಎಂ ಸ್ಕಾಲರ್ಶಿಪ್ (pm Scholarship) ಯೋಜನೆಯ ಪ್ರಯೋಜನಗಳು…?

  • ಸ್ನೇಹಿತರೆ ಪಿಎಂ ಸ್ಕಾಲರ್ಶಿಪ್ ಯೋಜನೆ 2024-25 ವೀರ ಮರಣ ಹೊಂದಿದಂತ ಯೋಧರ ಕುಟುಂಬದ ಮಕ್ಕಳು ಅಥವಾ ವಿಧವೆಯರ ಮಕ್ಕಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
  • ಈ ಪಿಎಂ ಸ್ಕಾಲರ್ಶಿಪ್ ಯೋಜನೆಯ ಮೂಲಕ ಸರಕಾರದಿಂದ 5500 ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಆಯ್ಕೆ ಮಾಡಲಾಗುತ್ತಿದೆ ಮತ್ತು ಇಲ್ಲಿ ವಿಧವೆಯಾರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ
  • ಈ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿದಂತ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದ ಅಥವಾ ತಾವು ಓದುತ್ತಿರುವ ಕೋರ್ಸಿನ ಪೂರ್ಣ ಅವಧಿ ಮುಗಿದ ಬಳಿಕ ವಿದ್ಯಾರ್ಥಿ ವೇತನ ನೀಡಲಾಗುತ್ತದೆ
  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದಂತ 3, 4, ಅಥವಾ ಐದು ವರ್ಷಗಳ ಅವಧಿಗೆ ಹುಡುಗರು ಪ್ರತಿ ತಿಂಗಳು 2500 ಹಣ ಪಡೆಯಬಹುದು ಮತ್ತು ಹುಡುಗಿಯರು 3000 ವರೆಗೆ ಪ್ರತಿ ತಿಂಗಳು ಹಣ ಪಡೆಯಬಹುದು
  • ರಾಜ್ಯ ಪೊಲೀಸ್ ಪಡೆ ಅಥವಾ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನದ ಮೊತ್ತದ ಮೇಲೆ ತಿಂಗಳಿಗೆ 500 ಹೆಚ್ಚುವರಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ

 

ಪಿಎಂ ಸ್ಕಾಲರ್ಶಿಪ್ ಯೋಜನೆಗೆ (pm Scholarship) ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮಾಣ ಪತ್ರ..?

ಸೇವೆಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ತಮ್ಮ ತಂದೆ ಅಥವಾ ತಾಯಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ

ಮರಣ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ತಮ್ಮ ತಂದೆ ಅಥವಾ ತಾಯಿ ಈ ಹಿಂದೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುವಂಥ ಸಂದರ್ಭದಲ್ಲಿ ವೀರಮರಣ ಹೊಂದಿದ್ದಾರೆ ಅಥವಾ ಇತರ ಯಾವುದೇ ಸಂದರ್ಭಗಳಲ್ಲಿ ಮರಣ ಹೊಂದಿದ್ದಾರೆ ಎಂಬ ದೃಢೀಕರಣ ಪ್ರಮಾಣ ಪತ್ರ ನೀಡಬೇಕಾಗುತ್ತದೆ, ನಮ್ಮ ರಾಜ್ಯ ಪೊಲೀಸ್ ಸಿಬ್ಬಂದಿಗಳಿಗೆ ಈ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರ ಕಡೆಯಿಂದ ನೀಡಲಾಗುತ್ತದೆ

 

ಮಾರ್ಕ್ಸ್ ಕಾರ್ಡ್:- ಹೌದು ಸ್ನೇಹಿತರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ತಾವು ಈ ಹಿಂದೆ ಪೂರ್ತಿ ಮಾಡಿದಂತ ದ್ವಿತೀಯ ಪಿಯುಸಿ ಅಥವಾ ಪದವಿ ಅಥವಾ ಡಿಪ್ಲೋಮೋ ಅಥವಾ ಇತರ ಯಾವುದೇ ಪದವಿ ಎಲ್ಲ ಮಾರ್ಕ್ಸ್ ಕಾರ್ಡ್ ಗಳು ನೀಡಬೇಕಾಗುತ್ತದೆ

ಅಂಗವಿಕಲ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ಹಿಂದೆ ಸೇನದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅಥವಾ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅಂಗವಿಕಲರಾಗಿದ್ದರೆ ಅಂತ ಪ್ರಮಾಣ ಪತ್ರವನ್ನು ತಮ್ಮ ತಂದೆಯ ಅಥವಾ ತಾಯಿಯ ಪ್ರಮಾಣ ಪತ್ರವನ್ನು ವಿದ್ಯಾರ್ಥಿಗಳು ನೀಡಬೇಕಾಗುತ್ತದೆ

ಇತರ ದಾಖಲಾತಿಗಳು:- ಹೌದು ಸ್ನೇಹಿತರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾಗುವಂತ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತ ಇತರ ದಾಖಲಾತಿಗಳನ್ನು ನೀಡಬೇಕಾಗುತ್ತದೆ

 

ಪಿಎಂ ಸ್ಕಾಲರ್ಶಿಪ್ (pm Scholarship) ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ…?

ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಕೂಡ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಪಿಎಂ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ 35000 ವರೆಗೆ ನಿಮ್ಮ ವಿದ್ಯಾಭ್ಯಾಸಕ್ಕಾಗಿ ಪಡೆದುಕೊಳ್ಳಬಹುದು.

 

ಇಲ್ಲಿ ಅರ್ಜಿ ಸಲ್ಲಿಸಿ  

ಈ ಮೇಲೆ ಕೊಟ್ಟಿರುವಂತ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಪಿಎಂ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಇಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

 

ಇದೇ ರೀತಿ ಸರಕಾರಿ ಯೋಜನೆಗಳಿಗೆ ಹಾಗೂ ಸರಕಾರಿ ನೌಕರಿಗಳಿಗೆ ಸಂಬಂಧಿಸಿದಂತೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment