pm kisan samman nidhi :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಪಿಎಂ ಕಿಸಾನ್ ಸಲ್ಮಾನ್ ನಿಧಿ ಯೋಜನೆಯ ಅರ್ಜಿದಾರರೇ ಅಥವಾ ಈ ಯೋಜನೆ ಮೂಲಕ ನೀವು ಹಣ ಪಡೆಯುತ್ತಿದ್ದರೆ ನಿಮಗೆ ಒಂದು ಬಂಪರ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಆಯ್ಕೆ ಆದ ನಂತರ ಈ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದ್ದು ನಿಮಗೆ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಹಾಗೂ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಬೇಕೆಂದರೆ ಹೊಸ ರೂಲ್ಸ್ ಜಾರಿಗೆ ಮಾಡಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆಗೆ ಹೊಸ ರೂಲ್ಸ್ ಎಲ್ಲಿದೆ ಸಂಪೂರ್ಣ ಮಾಹಿತಿ
ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸತತವಾಗಿ ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರುವ ಕಾರಣದಿಂದ ಈ ಪಿಎಂ ಕಿಸಾನ್ ಯೋಜನೆಗೆ ಒಂದು ಬಲ ಬಂದಿದೆ ಎಂದು ಹೇಳಬಹುದು ಏಕೆಂದರೆ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ರೈತರಿಗೆ ಬಂಪರ್ ನ್ಯೂಸ್ ಅನ್ನು ನರೇಂದ್ರ ಮೋದಿ ಅವರು ನೀಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಿಮಗೆಲ್ಲರಿಗೂ ಗೊತ್ತಿರುವಂತೆ ಪಿಎಂ ನರೇಂದ್ರ ಮೋದಿ ಅವರು ಈ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ ಈ ಯೋಜನೆ ಮೂಲಕ ರೈತರಿಗೆ ವರ್ಷಕ್ಕೆ ಆರು ಸಾವಿರ ಹಣವನ್ನು ನೇರವಾಗಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಹಾಗೂ ಈ ಯೋಜನೆ ರೈತರಿಗೆ ಇಷ್ಟವಾಗುವಂತ ಜನಪ್ರಿಯ ಯೋಜನೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ ಹಾಗೂ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕೊನೆಯದಾಗಿ ಸರ್ಕಾರ ಕಡೆಯಿಂದ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ನೇಹಿತರೆ ನಿಮಗೆ ಪ್ರತಿದಿನಲೂ ಸರಕಾರಿ ನೌಕರಿಗೆ ಸಂಬಂಧಿಸಿದಂತೆ ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡೆಗಳಿಂದ ಬಿಡುಗಡೆಯಾಗುವಂತ ಸರಕಾರಿ ನೌಕರಿಗಳ ಕುರಿತು ಮಾಹಿತಿ ಹಾಗೂ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನಲೂ ಈ ನಮ್ಮ People of karnataka ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಹಾಗೂ ಇದೇ ರೀತಿ ಸರಕಾರಿ ಯೋಜನೆಗಳ ಕುರಿತು ಹಾಗೂ ಈ ಯೋಜನೆಗಳಿಗೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಈ ಯೋಜನೆಯ ಲಾಭವನ್ನು ಯಾರು ಯಾರು ರೈತರು ಪಡೆಯಬಹುದು ಹಾಗೂ ಫಲಾನುಭವಿಗಳು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಕೂಡ ನಾವು ಪ್ರತಿದಿನ ಪ್ರಕಟಣೆ ಮಾಡುತ್ತೇವೆ
ಇದರ ಜೊತೆಗೆ ಖಾಸಗಿ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಹಾಗೂ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಹಾಗೂ ಖಾಸಗಿ ಕಂಪನಿಗಳಲ್ಲಿ ಯಾವ ರೀತಿ ಉದ್ಯೋಗ ಪಡೆದುಕೊಳ್ಳುವುದು ಮತ್ತು ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಲಾಭ ಯಾವ ರೀತಿ ಪಡೆಯಬೇಕು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಈ ರೀತಿ ಪ್ರತಿದಿನ ನಾವು ಹೊಸ ಹೊಸ ಸುದ್ದಿಗಳನ್ನು ಅಪ್ಡೇಟ್ ಮಾಡುತ್ತಾ ಇರುತ್ತೇವೆ ಈ ಸುದ್ದಿಗಳನ್ನು ನೀವು ಬೇಗ ಪಡೆಯಬೇಕು ಅಂದುಕೊಂಡರೆ ನೀವು ನಮ್ಮ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ
(pm kisan samman nidhi) ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ..?
ಹೌದು ಗೆಳೆಯರೇ ಪಿಎಂ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಯನ್ನು ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ರೈತರಿಗೆ ಕನಿಷ್ಠ ಬೆಂಬಲ ನೀಡುವ ಅಥವಾ ಗೌರವ ಧನ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಡಿಸೆಂಬರ್ 2018ರಲ್ಲಿ ಈ ಯೋಜನೆಯನ್ನು ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದರು
ಈ ಯೋಜನೆ ಮೂಲಕ ರೈತರಿಗೆ ಕನಿಷ್ಠ ಆದಾಯ ಬೆಂಬಲ ನೀಡುವ ಉದ್ದೇಶದಿಂದ ವಾರ್ಷಿಕವಾಗಿ ಅರ್ಜಿ ಹಾಕಿದಂತ ರೈತರ ಖಾತೆಗೆ 6000 ಹಣವನ್ನು ಮೂರು ಕಂತಿನ ರೂಪದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ಈ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಪ್ರಾರಂಭ ಮಾಡಿದರು ಈ ಮೂಲಕ ರೈತರಿಗೆ ವಾರ್ಷಿಕವಾಗಿ 6,000 ಹಣ ನೀಡುವುದರ ಮೂಲಕ ರೈತರಿಗೆ ಬೀಜ ಹಾಗೂ ರಸಗೊಬ್ಬರಗಳ ಪಡೆದುಕೊಳ್ಳುವ ಸಮಯದಲ್ಲಿ ಈ ಹಣವನ್ನು ಅಂತ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಇದರಿಂದ ರೈತರಿಗೆ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ಸಹಾಯ ಸಿಕ್ಕಂತಾಗುತ್ತದೆ
(pm kisan samman nidhi) ಪಿಎಂ ಕಿಸಾನ್ ಯೋಜನೆ ಪ್ರಾರಂಭ..?
ಹೌದು ಸ್ನೇಹಿತರೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ನರೇಂದ್ರ ಮೋದಿಯವರು 2018 ರಲ್ಲೇ ಬಿಡುಗಡೆ ಮಾಡಲು ಪರಿಚಯ ಮಾಡಲಾಗಿತ್ತು ಹಾಗೂ ಈ ಯೋಜನೆಯನ್ನು ಫೆಬ್ರವರಿ ಒಂದು 2019ರಲ್ಲಿ ಜಾರಿಗೆ ತರಲಾಯಿತು ಹಾಗೂ ಈ ಯೋಜನೆ ಮೂಲಕ ರೈತರಿಗೆ ಪ್ರತಿ ವರ್ಷಕ್ಕೆ ಆರು ಸಾವಿರ ಹಣವನ್ನು ಮೂರು ಹಂತದಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು ಹಾಗೂ ಇದರಿಂದ ರೈತರಿಗೆ ಆರ್ಥಿಕ ನೆರವಾಗಲು ಸಹಾಯವಾಗಿದೆ ಎಂದು ಹೇಳಬಹುದು
ಇದೇ ರೀತಿ ಹೋಲುವಂತಹ ಯೋಜನೆ ಎಂದರೆ ಅದು ತೆಲಂಗಾಣ ರಾಜ್ಯವು ರೈತ ಬಂದು ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು ಈ ಯೋಜನೆಯ ಮೂಲಕ ರೈತರ ಖಾತೆಗೆ ವರ್ಷಕ್ಕೆ 10 ಸಾವಿರ ಹಣವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ತೆಲಂಗಾಣದಲ್ಲಿ ಜಾರಿಗೆ ತರಲಾಯಿತು ಈ ಯೋಜನೆಯ ಸ್ಪೂರ್ತಿಯಿಂದ ಪಿಎಂ ಕಿಸಾನ್ ಯೋಜನೆ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ ಎಂದು ಹೇಳಬಹುದು
ಹಾಗೂ ಈ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಇಡೀ ಭಾರತದ ತುಂಬಾ ಹಾಗೂ ಭಾರತದಲ್ಲಿ ವಾಸ ಮಾಡುವಂತ ರೈತ ಕುಟುಂಬಗಳಿಗೆ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅಂದರೆ ಎರಡು ಎಕರೆ ಒಳಗಿರುವಂತ ರೈತರಿಗೆ ಅನ್ವಯಿಸುವಂತೆ ಈ ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಾಯಿತು
(pm kisan samman nidhi) ಇಲ್ಲಿವರೆಗೂ ಎಷ್ಟು ಕಂತಿನ ಹಣ ಬಿಡುಗಡೆ..?
ಹೌದು ಸ್ನೇಹಿತರೆ ಈ ಯೋಜನೆಯನ್ನು 2019ರಲ್ಲಿ ನರೇಂದ್ರ ಮೋದಿಯವರು ಜಾರಿಗೆ ತರಲಾಯಿತು ಈ ಯೋಜನೆಯ ಮೂಲಕ ರೈತರಿಗೆ ವರ್ಷಕ್ಕೆ ಆರು ಸಾವಿರ ಹಣವನ್ನು ಮೂರು ಕಂತಿನ ರೂಪದಲ್ಲಿ ಅಂದರೆ ಒಂದು ಕಂತು 2000 ಹಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ರೈತರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಇಲ್ಲಿವರೆಗೂ ರೈತರು ಈ ಯೋಜನೆಯ ಮೂಲಕ 16 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು
ಹೌದು ಸ್ನೇಹಿತರೆ ಇಲ್ಲಿವರೆಗೂ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಮೂಲಕ 16 ಕಂತು ಅಂದರೆ ಸುಮಾರು 32,000 ಹಣ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಈ ಯೋಜನೆಯನ್ನು ರೈತರಿಗೆ ಬಿತ್ತನೆ ಸಮಯದಲ್ಲಿ ರಸಗೊಬ್ಬರ ಹಾಗೂ ಬೀಜಗಳ ಕರೆದಿಗೆ ಉಪಯೋಗವಾಗಿದೆ ಎಂದು ಹೇಳಬಹುದು ಹಾಗೂ ಪ್ರಧಾನಮಂತ್ರಿಯವರು ಸತತವಾಗಿ ಮೂರನೇ ಬಾರಿಗೆ ನಮ್ಮ ದೇಶದ ಪ್ರಧಾನಿಯಾಗಿ ಆಯ್ಕೆ ಆಗುತ್ತಿದ್ದಾರೆ ಆಯ್ಕೆಯಾದ ಮೊದಲ ದಿನವೇ ರೈತರಿಗೆ ಬಂಪರ್ ಸುದ್ದಿಯನ್ನು ನೀಡಿದ್ದಾರೆ ಏನು ಎಂದು ಈ ಲೇಖನ ಕೆಳಗಡೆ ವಿವರಿಸಿದ್ದೇವೆ
(pm kisan samman nidhi) ಮೊದಲ ದಿನವೇ ರೈತರಿಗೆ ಮೋದಿ ಗಿಫ್ಟ್..?
ಹೌದು ಸ್ನೇಹಿತರೆ, ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು 2019ರಲ್ಲಿ ಈ ಪಿಎಂ ಕಿಸಾನ್ ಸನ್ಮಾನ್ಯಧಿ ಯೋಜನೆಯನ್ನು ಜಾರಿಗೆ ತಂದಿದ್ದರು ಈ ಯೋಜನೆಯನ್ನು 203 ಹಾಗೂ 24ನೇ ವರ್ಷಕ್ಕೆ ಮುಂದುವರಿಸಲು ಕಳೆದ ಮಧ್ಯಾಂತರ ಬಜೆಟ್ ನಲ್ಲಿ ಮಂಡನೆ ಮಾಡಿದ್ದರು ಹಾಗೂ ಮೇ ತಿಂಗಳಲ್ಲಿ ನಡೆದಂತ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಸತತವಾಗಿ ಮೂರನೇ ಬಾರಿಗೆ ಎನ್ ಡಿ ಎ ಬಹುಮತವನ್ನು ಪಡೆದುಕೊಂಡಿದ್ದು ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿ ಜೂನ್ 10ನೇ ತಾರೀಖಿನಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ ಈ ಮೂಲಕ ಸತತವಾಗಿ ಮೂರನೇ ಬಾರಿಗೆ ನಮ್ಮ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಜೊತೆಗೆ ಈ ಯೋಜನೆಗೆ ಬಲತಂದಿದೆ ಎಂದು ಹೇಳಬಹುದು
ಹೌದು ಸ್ನೇಹಿತರೆ ಸತತವಾಗಿ ಮೂರನೇ ಬಾರಿಗೆ ಪ್ರಧಾನಮಂತ್ರಿಯ ಆಗಿ ಕಾರ್ಯನಿರ್ವಹಿಸುವ ಮೊದಲ ದಿನವೇ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ ಎಂದು ಹೇಳಬಹುದು ಏಕೆಂದರೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯ 17ನೇ ಕಂತಿನ ಹಣ ಬಿಡುಗಡೆಗಾಗಿ ಬರೋಬ್ಬರಿ ಇಪ್ಪತ್ತು ಸಾವಿರ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಇದು ಪ್ರಮಾಣವಚನ ಸ್ವೀಕಾರ ಆದ ಮೊದಲ ದಿನವೇ ರೈತರಿಗೆ ಮೋದಿ ಸರ್ಕಾರದ ಭರ್ಜರಿ ಗಿಫ್ಟ್ ಎಂದು ಹೇಳಬಹುದು
ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣಕ್ಕಾಗಿ ರೈತರು ಎದುರು ನೋಡುತ್ತಿದ್ದು ಹಾಗೂ ನಮ್ಮ ದೇಶದಲ್ಲಿ ಮುಂಗಾರು ಪ್ರಾರಂಭವಾಗಿದ್ದು ರೈತರಿಗೆ ಈ ಹಣ ಸಹಾಯ ತುಂಬಾ ಮುಖ್ಯ ಎಂದು ಹೇಳಬಹುದು ಹಾಗಾಗಿ ಇದನ್ನು ಮನಗಂಡಂತ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕಾರ ಆದ ಮರುದಿನವೇ ಅಂದರೆ ಇವತ್ತು 17ನೇ ಕಂತಿನ ಹಣ ಬಿಡುಗಡೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ
ಹಾಗಾಗಿ 17ನೇ ಕಂತಿನ ಹಣವನ್ನು ಜೂನ್ 11ನೇ ತಾರೀಖಿನಿಂದ ಜೂನ್ ಕೊನೆಯ ವಾರದ ವರೆಗೆ ಅಥವಾ ಜುಲೈ ಮೊದಲ ವಾರದ ಒಳಗಡೆಯಾಗಿ ಪ್ರತಿಯೊಬ್ಬರ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತೆ ಎಂದು ಕೃಷಿ ಸಚಿವಾಲಯದ ಮೂಲಕ ಮಾಹಿತಿ ವರ ಬಂದಿದೆ ಹಾಗಾಗಿ ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಿ ಹಾಗೂ ಹಣ ಜಮಾ ಆಗಿಲ್ಲ ಅಂದರೆ ನಿಮಗೆ ಜುಲೈ ಮೊದಲ ವಾರದ ಒಳಗಡೆಯಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಹಾಗಾಗಿ ಭಯಪಡುವಂತಹ ಅವಶ್ಯಕತೆ ಇಲ್ಲ
(pm kisan samman nidhi) 17ನೇ ಕಂತಿನ ಹಣ ಬಿಡುಗಡೆಗೆ ಹೊಸ ರೂಲ್ಸ್..?
ಹೌದು ಸ್ನೇಹಿತರೆ, ನೀವು ಇನ್ನು ಮುಂದೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯ ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಈ ಕೆಳಗಡೆ ನೀಡಿದಂತಹ ಹೊಸ ರೂಲ್ಸ್ ಗಳನ್ನು ಪಾಲಿಸಬೇಕು ಅವುಗಳ ಬಗ್ಗೆ ಸಂಪೂರ್ಣ ವಿವರವನ್ನು ನಾವು ಈ ಕೆಳಗಡೆ ನೀಡಿದ್ದೇವೆ
ಬ್ಯಾಂಕ್ ಖಾತೆ:- ಇನ್ನು ಮುಂದೆ ನೀವು ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಬೇಕೆಂದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸಬೇಕು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ ಇದರಿಂದ ನಿಮ್ಮ ಆಧಾರ್ ಕಾರ್ಡ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಒಂದು ವೇಳೆ ಇವುಗಳಲ್ಲಿ ಯಾವುದಾದರು ಒಂದನ್ನು ಮಾಡಿಸಿದೆ ಹೋದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ
FID ಕ್ರಿಯೇಟ್ ಮಾಡುವುದು:- ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಬೇಕು ಅಂದರೆ ಕಡ್ಡಾಯವಾಗಿ ನೀವು ಎಫ್ ಐ ಡಿ ಕ್ರಿಯೇಟ್ ಮಾಡುವುದು ಕಡ್ಡಾಯ ಇದನ್ನು ಕ್ರಿಯೇಟ್ ಮಾಡಲು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಅಥವಾ ಕುಲಕರಣಿ (ಗ್ರಾಮ ಲೆಕ್ಕಿಗ ಅಧಿಕಾರಿ) ಗಳಿಗೆ ಭೇಟಿ ಮಾಡಿ ನಿಮ್ಮ ಪಾಣಿಗೆ fid ಕ್ರಿಯೇಟ್ ಮಾಡಬೇಕು ಅಂದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತೆ ಇಲ್ಲವಾದರೆ ಹಣ ಬರುವುದಿಲ್ಲ
ಪಾಣಿಗೆ ಆಧಾರ್ ಕಾರ್ಡ್ ಲಿಂಕ್:- ಹೌದು ಸ್ನೇಹಿತರೆ ನೀವು ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಬೇಕು ಅಂದರೆ ಕಡ್ಡಾಯವಾಗಿ ನಿಮ್ಮ ನಿಮ್ಮ ಹೊಲದ ಪಾಣಿಗೆ ಅಥವಾ ನಿಮ್ಮ ಭೂಮಿಗೆ ಸಂಬಂಧಿಸಿದಂತೆ ಪಾಣಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಹಾಗಾಗಿ ಪ್ರತಿಯೊಬ್ಬರೂ ರೈತರು ತಮ್ಮ ಪಾಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಇದನ್ನು ಮಾಡಿಸಲು ನಿಮ್ಮ ಹತ್ತಿರದ ಕುಲಕರಣಿಗಳಿಗೆ ಭೇಟಿ ನೀಡಿ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ
ಈ ಕೆ ವೈ ಸಿ ಮಾಡಿಸಬೇಕು :– ಹೌದು ಸ್ನೇಹಿತರೆ ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಹಾಕಿದಂತ ಎಲ್ಲಾ ರೈತರು ನಿಮ್ಮ ಅರ್ಜಿಗೆ ಈ ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದಂತ ರೈತರು ಈ ಕೆವೈಸಿಯನ್ನು ಮಾಡಿಸಿಕೊಳ್ಳಿ
ಈ ಮೇಲೆ ನೀಡಿದ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತೆ ಒಂದು ವೇಳೆ ಇವುಗಳಲ್ಲಿ ಯಾವುದೇ ನಿಯಮವನ್ನು ಪಾಲಿಸಿದೆ ಇದ್ದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಬರುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಮೇಲೆ ನೀಡಿದ ನಿಯಮವನ್ನು ಪಾಲಿಸಲು ಪ್ರಯತ್ನ ಮಾಡಿ
(pm kisan samman nidhi) ಹಣ ಬಂದಿಲ್ಲ ಅಂದರೆ ಏನು ಮಾಡಬೇಕು..?
ಹೌದು ಸ್ನೇಹಿತರೆ ನಿಮಗೆ ಪಿಎಮ್ ಕಿಸಾನ್ ಯೋಜನೆಯ ಯಾವುದೇ ರೀತಿ ಹಣ ಬಂದಿಲ್ಲ ಅಂದರೆ ನೀವು ನಿಮ್ಮ ಹತ್ತಿರದ ಕುಲಕರ್ಣಿ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕೀಗ ಅಧಿಕಾರಿಗಳನ್ನು ಭೇಟಿ ಮಾಡಿ ಯಾವ ಕಾರಣಕ್ಕೆ ಹಣ ಬಂದಿಲ್ಲ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೂ ಹಣ ಬರಲು ಏನು ಮಾಡಬೇಕೆಂಬ ಸಲಹೆಯನ್ನು ಆ ಅಧಿಕಾರಿಗಳ ಮೂಲಕ ತಿಳಿಸಬಹುದು ಅಥವಾ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ರೈತರಿಗೆ ಹಾಗೂ ರೈತರ ಕುಟುಂಬಗಳಿಗೆ ಆದಷ್ಟು ಈ ಮಾಹಿತಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ WhatsApp & Telegram ಗ್ರೂಪ್ ಗಳಿಗೆ ಜಾಯಿನ್ ಆಗಿ