Kotak Kanya Scholarship 2025– ಪ್ರತಿಭಾವಂತ ಹುಡುಗಿಯರಿಗೆ ಅತ್ಯುತ್ತಮ ಅವಕಾಶ!
ವಿದ್ಯಾಭ್ಯಾಸವೆಂಬ ಪವಿತ್ರ ದಾರಿಗೆ ಆರ್ಥಿಕ ಅಡಚಣೆಗಳೇ ತಡೆವಾಗಬಾರದು ಎಂಬ ದೃಷ್ಟಿಯಿಂದ, ಕೋಟಕ್ ಮಹೀಂದ್ರಾ ಗ್ರೂಪ್ ಮತ್ತು ಕೋಟಕ್ ಎಜುಕೇಶನ್ ಫೌಂಡೇಶನ್, ಸಂಸ್ಥೆಗಳ ಸಿಎಸ್‌ಆರ್ ಕಾರ್ಯಕ್ರಮದಡಿಯಲ್ಲಿ “ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2025” (Kotak Kanya Scholarship 2025) ಘೋಷಿಸಿದೆ.
ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವೆಂದರೆ 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಯುವತಿಯರಿಗೆ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ವಿಜ್ಞಾನ ಮತ್ತು ಇತರ ವೃತ್ತಿಪರ ಪದವಿಗಳಲ್ಲಿ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವನ್ನು ಒದಗಿಸುವುದು.
ಇದನ್ನು ಓದಿ : Veterinary Diploma: ಗ್ರಾಮೀಣ ಯುವಕರಿಗೆ ಶ್ರೇಷ್ಠ ಅವಕಾಶ ಡಿಪ್ಲೊಮಾ ಪಶು ಸಂಗೋಪನೆ ಕೋರ್ಸ್‌ಗೇ ಪ್ರವೇಶ ಆರಂಭ!
ಅರ್ಹತೆ ಪ್ರಮಾಣಪತ್ರ (Eligibility Criteria)
ಕೋಟಕ್ ಕನ್ಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಈ ಕೆಳಗಿನ ಅರ್ಹತೆಗಳಿರಬೇಕು
- ವಿದ್ಯಾರ್ಥಿನಿಯು ಭಾರತೀಯ ನಾಗರಿಕರಾಗಿರಬೇಕು.
- 12ನೇ ತರಗತಿಯಲ್ಲಿ ಕನಿಷ್ಠ 75% ಅಂಕಗಳು (ಅಥವಾ ಸಮಾನ CGPA) ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯ ₹6,00,000 ಕ್ಕಿಂತ ಕಡಿಮೆ ಇರಬೇಕು.
- 2025-26 ನೇ ಶೈಕ್ಷಣಿಕ ವರ್ಷದಲ್ಲಿ NAAC/NIRF ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮೊದಲ ವರ್ಷದ ವೃತ್ತಿಪರ ಪದವಿ ಕೋರ್ಸ್ (engineering, MBBS, Integrated LLB, BS-MS research, design, architecture…) ಗೆ ಪ್ರವೇಶ ಪಡೆದಿರಬೇಕು.
- Kotak Group ಮತ್ತು Buddy4Study ನ ಉದ್ಯೋಗಿಗಳ ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ.
ವಿದ್ಯಾರ್ಥಿವೇತನದ ಮೊತ್ತ ಎಷ್ಟು?
ಈ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗೆ ವಾರ್ಷಿಕವಾಗಿ ₹1.5 ಲಕ್ಷದವರೆಗೆ ವಿದ್ಯಾರ್ಥಿವೇತನ ಒದಗಿಸಲಾಗುತ್ತದೆ. ಈ ಮೊತ್ತವನ್ನು ಕೆಳಗಿನ ಶೈಕ್ಷಣಿಕ ವೆಚ್ಚಗಳನ್ನು ಪೂರೈಸಲು ಬಳಸಬಹುದು:
ಟ್ಯೂಷನ್ ಫೀ
ಹಾಸ್ಟೆಲ್ ವೆಚ್ಚ
ಲ್ಯಾಪ್‌ಟಾಪ್, ಪುಸ್ತಕಗಳು, ಇಂಟರ್ನೆಟ್ ವೆಚ್ಚ
ಸಾರಿಗೆ ವೆಚ್ಚ
ಲೇಖನ ಸಾಮಗ್ರಿಗಳು
ಇದನ್ನು ಓದಿ : BOB Recruitment 2025: ಬ್ಯಾಂಕ್ ಆಫ್ ಬರೋಡ ಹೊಸ ನೇಮಕಾತಿ! ತಕ್ಷಣ ಖಾಲಿ ಹುದ್ದೆಗಳಿಗೆ ಈ ರೀತಿ ಅಪ್ಲೈ ಮಾಡಿ
ಅಗತ್ಯ ದಾಖಲೆ
- ಅರ್ಜಿಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು ಅಗತ್ಯವಿರುತ್ತವೆ:
- ವಿದ್ಯಾರ್ಥಿಯ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ
- ಫೋಟೋ
- 12ನೇ ತರಗತಿಯ ಅಂಕಪಟ್ಟಿ
- ಕಾಲೇಜು ಪ್ರವೇಶ ದೃಢೀಕರಣ ಪತ್ರ
- ಕಾಲೇಜು ಫೀ ಸ್ರ್ಟ್ರಕ್ಚರ್
- ಪೋಷಕರ ಆದಾಯ ಪ್ರಮಾಣಪತ್ರ
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿಗೋಪಿಯು
- ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
ಅರ್ಜಿ ಸಲ್ಲಿಸುವ ವಿಧಾನ (How to Apply Online)
ಅಂತಿಮ ದಿನಾಂಕ: 31 ಆಗಸ್ಟ್ 2025
ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:
ಹಂತ 1
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.buddy4study.com
ಹಂತ 2
“Kotak Kanya Scholarship 2025” ಪುಟವನ್ನು ಹುಡುಕಿ
“Apply Now” ಮೇಲೆ ಕ್ಲಿಕ್ ಮಾಡಿ
ಖಾತೆ ಇಲ್ಲದಿದ್ದರೆ “Create an Account” ಮೂಲಕ ಹೊಸ ಖಾತೆ ರಚಿಸಿ
ಲಾಗಿನ್ ಆದ ಬಳಿಕ ಅರ್ಜಿ ನಮೂನೆ ಭರ್ತಿ ಮಾಡಿ
ಹಂತ 3
ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ
ಅರ್ಜಿಯನ್ನು ಪರಿಶೀಲಿಸಿ ಮತ್ತು “Submit” ಬಟನ್ ಕ್ಲಿಕ್ ಮಾಡಿ
ಇದನ್ನು ಓದಿ : SBI Personal Loan 2025: SBI ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ.! ಸಾಲ ಪಡೆಯಲು ಈ ದಾಖಲಾತಿಗಳು ಬೇಕು
ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2025 ನಂತಹ ಸುದಿನದ ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ದೊಡ್ಡ ಪ್ರೇರಣೆಯಾಗಿ ನಿಂತಿವೆ. ನೀವು ಅಥವಾ ನಿಮ್ಮ ಪರಿಚಯದ ಯಾರಾದರೂ ಈ ಅರ್ಹತೆಯನ್ನು ಹೊಂದಿದ್ದರೆ, ಈ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಬೇಡಿ.