Ganga kalyana free borewell scheme :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ 2024 – 25 ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರೆವೆಲ್ ಗಾಗಿ ರಾಜ್ಯ ಸರ್ಕಾರ ವಿವಿಧ ನಿಗಮದ ಮೂಲಕ ರೈತರಿಂದ ಅರ್ಜಿ ಪ್ರಾರಂಭ ಮಾಡಲಾಗಿದೆ. ಯಾವೆಲ್ಲಾ ಜಾತಿಯ ರೈತರು ಈ ಸೌಲಭ್ಯ (Ganga kalyana free borewell scheme) ಪಡೆಯುತ್ತಾರೆ? ಅರ್ಹತ ಮಾನದಂಡಗಳು ಅರ್ಜಿ ಸಲ್ಲಿಸಲು ಬೇಕಾಗುವ ಧಾಖಲೆಗಳೇನು ? ಈ ಎಲ್ಲ ಸಂಪೂರ್ಣ ಮಾಹಿತಿ ಗಳಿಗೆ ಈ ಲೇಖನವನ್ನು ಕೊನೆಯವರೆಗೂ ನೋಡಿ.
ರಾಜ್ಯ ಸರ್ಕಾರವು ಸಣ್ಣ ಮತ್ತು ಹರಿಸಣ್ಣ ರೈತರ ಅಭಿವೃದ್ಧಿಗಾಗಿ ಅನುಪಯೋಜನೆಗಳನ್ನು ಜಾರಿಗೆ ತಂದಿದೆ ಬೇರೆಯವರಿಗೆ ಅನುಕೂಲಕ್ಕಾಗಿ ವಿವಿಧ ನಿಗಮಗಳ ಮುಖಾಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತ ಬೋರ್ವೆಲ್ ಯೋಜನೆಗಳಿದ್ದು ಈ ಪೈಕಿ ಗಂಗಾ ಕಲ್ಯಾಣ ಯೋಜನೆ ಅತ್ಯಂತ ಜನಪ್ರಿಯವಾಗಿದೆ ಎಂದು ಹೇಳಬಹುದು ಆದರೆ ಯೋಜನೆಯಡಿ ಅನೇಕ ರೈತರು ನೆರವರಿ ಅನುಕುಲ ಹೊಂದುವ ಮೂಲಕ ಸುಸ್ಥಿರ ಆದಾಯ ಗಳಿಸಬಹುದು.
Ganga kalyana free borewell scheme ಎಷ್ಟು ಸಹಾಯಧನ ಸಿಗುತ್ತದೆ.
ಸ್ನೇಹಿತರೆ ಈ ಯೋಜನೆಯಡಿ ಅಂತರ್ಜಲ ಕಡಿಮೆ ಆಗಿರುವ ಬೆಂಗಳೂರಿನ ನಗರ ಬೆಂಗಳೂರು ಗ್ರಾಮಾಂತರ ಕೋಲಾರ ರಾಮನಗರ ಚಿಕ್ಕಬಳ್ಳಾಪುರ ತುಮಕೂರು ಜಿಲ್ಲೆಗಳಿಗೆ ಘಟಕದ ರಕ್ಷವನ್ನು 4.75 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ ಇದರಲ್ಲಿ ವಿದ್ಯುತ್ ಸೇರಿ 4.25 ಲಕ್ಷ ಸಹಾಯಧನ ಸಿಗುತ್ತದೆ ಅವಶ್ಯಕತೆ ಇದ್ದರೆ ಶೇಕಡ 4ರ ಬಡ್ಡಿ ದರದಲ್ಲಿ 50,000 ಸಾಲವನ್ನು ಮಂಜೂರು ಮಾಡಲಾಗುತ್ತದೆ.
Ganga kalyana free borewell scheme ಈ ಯೋಜನೆಯ ಮಾನದಂಡಗಲೇನು..?
ಸ್ನೇಹಿತರೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಪ್ರಯೋಜನ ಪಡೆಯಲು ಯಾವುದೇ ನೀರಾವರಿ ಸೌಲಭ್ಯ ಹೊಂದಿಲ್ಲದ ಸಣ್ಣ ಮತ್ತು ಅತಿ ಸಣ್ಣ ರೈತರು ಆಗಿರಬೇಕು. ಕನಿಷ್ಠ ಎರಡು ಎಕರೆ ಗರಿಷ್ಠ 5 ಎಕರೆ ಒಳಗೆ ಭೂಮಿ ಒಂದೇ ಸ್ಥಳದಲ್ಲಿ ಇರಬೇಕು. (Ganga kalyana free borewell scheme)
ಶಿವಮೊಗ್ಗ ದಕ್ಷಿಣ ಕನ್ನಡ ಉಡುಪಿ ಚಿಕ್ಕಮಗಳೂರು ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಯ ರೈತರಿಗೆ ಕನಿಷ್ಠ ಒಂದು ಎಕರೆ ನಿಗದಿಪಡಿಸಲಾಗಿದೆ. ಅರ್ಜಿದಾರ ಯಾವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು. ವಾರ್ಷಿಕ ವರಮಾನ ಗ್ರಾಮಾಂತರವರೆಗೂ 98,000 ಹಾಗೂ ಪಟ್ಟಣ ಪ್ರದೇಶದವರಿಗೆ 1,20,000 ಮಿತಿಯಲ್ಲಿರಬೇಕು.
ಸ್ನೇಹಿತರೆ ಆಧಾರ್ ನಂಬರ್ ಜೋಡಣೆ ಇರುವ ಬ್ಯಾಂಕ್ ಖಾತೆ ಹೊಂದಿರಬೇಕು ಈಗಾಗಲೇ ಆಯಾ ಜಾತಿ ಸಮುದಾಯದ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳೇನು ?
- ರೈತರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಸಣ್ಣ ಮತ್ತು ಅತಿ ಸಣ್ಣ ರೈತರ ದೃಢೀಕರಣ ಪತ್ರ
- ಜಮೀನಿನ ಪಹಣಿ
ಯಾವ ಜಾತಿಯ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
- ಹಿಂದುಳಿದ ವರ್ಗದ ರೈತರು
- ವೀರಶೈವ ಲಿಂಗಾಯತರದ್ದರು
- ಒಕ್ಕಲಿಗ ಸಮುದಾಯದ ರೈತರು
- ವಿಶ್ವಕರ್ಮ ಸಮುದಾಯದ ರೈತರು
- ಉಪ್ಪಾರ್ ಸಮುದಾಯದ ರೈತರು
- ಅಂಬಿಗ ಸಮುದಾಯದ ರೈತರು
- ಸವಿತಾ ಸಮುದಾಯದ ರೈತರು
- ಮಡಿವಾಳ ಸಮುದಾಯದ ರೈತರು
- ಕಾಡುಗೊಲ್ಲ ಸಮುದಾಯದ ರೈತರು
- ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ರೈತರು
ಎಲ್ಲಾ ಸಮುದಾಯದ ರೈತರು ಈ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಸರಿಯಾಗಿ ನೀಡಿ ಈ ಕೆಳಗೆ ಸೂಚಿಸಲಾದ ಆನ್ಲೈನ್ ಸೆಂಟರ್ಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು ?
ಸ್ನೇಹಿತರೆ ಅರ್ಹ ಫಲಾನುಭವಿಗಳು ಗ್ರಾಮ ವನ್ / ಬೆಂಗಳೂರು ಒನ್ / ಕರ್ನಾಟಕ ಒನ್ / ನಾಗರಿಕ ಸೇವಾ ಕೇಂದ್ರಗಳಲ್ಲಿ ಸರಿಯಾದ ದಾಖಲೆಗಳೊಂದಿಗೆ ಸೇವಾ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇದರ ಮೇಲೆ ಒತ್ತಿ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರು ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ.