DHFWS Requerment: ಬಾಗಲಕೋಟೆ ನೇಮಕಾತಿ 2025: 131 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ
DHFWS Bagalkot Recruitment 2025 – ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS), ಬಾಗಲಕೋಟೆ ಜಿಲ್ಲೆಯ ವತಿಯಿಂದ 2025ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಒಟ್ಟು 131 ಹುದ್ದೆಗಳನ್ನು ಭರ್ತಿ ಮಾಡುವ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬಹುಮೂಲ್ಯವಾದ ಅವಕಾಶ.
ಈ ನೇಮಕಾತಿಯಲ್ಲಿ ವೈದ್ಯಕೀಯ, ಪ್ಯಾರಾಮೆಡಿಕಲ್ ಮತ್ತು ಆಡಳಿತಾತ್ಮಕ ಹುದ್ದೆಗಳೂ ಸೇರಿವೆ. ಈ ಲೇಖನದಲ್ಲಿ ಹುದ್ದೆಗಳ ವಿವರ, ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಸಂಸ್ಥೆಯ ವಿವರ
- ಸಂಸ್ಥೆ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS), ಬಾಗಲಕೋಟೆ
- ಉದ್ಯೋಗ ಸ್ಥಳ: ಬಾಗಲಕೋಟೆ, ಕರ್ನಾಟಕ
- ಹುದ್ದೆಗಳ ಸಂಖ್ಯೆ: 131
- ಉದ್ಯೋಗ ಪ್ರಕಾರ: ರಾಜ್ಯ ಸರ್ಕಾರಿ ಉದ್ಯೋಗ
ಭರ್ತಿ ಮಾಡಲಾಗುವ ಪ್ರಮುಖ ಹುದ್ದೆಗಳ ಪಟ್ಟಿ:
ಹುದ್ದೆ ಹೆಸರು | ವಿದ್ಯಾರ್ಹತೆ |
ಆಡಿಯೋಲಾಜಿಸ್ಟ್ | ಬಿಎಎಸ್ಎಲ್ಪಿ ಅಥವಾ ಬಿಎಸ್‌ಸಿ |
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ | ಡಿಪ್ಲೊಮಾ |
ಇನ್ಸೆಕ್ಟ್ ಕಲೆಕ್ಟರ್ | ಕನಿಷ್ಟ 12ನೇ ತರಗತಿ |
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್ | ಬಿಬಿಎಮ್/ಎಂ.ಬಿ.ಎ |
ಕೌನ್ಸೆಲರ್ | ಪದವಿ |
ಲ್ಯಾಬ್ ಟೆಕ್ನಿಷಿಯನ್ | 10/12ನೇ ತರಗತಿ + ಡಿಎಂಎಲ್‌ಟಿ |
ಸ್ಟಾಫ್ ನರ್ಸ್ | ಬಿ.ಎಸ್ಸಿ ಅಥವಾ ಜಿಎನ್‌ಎಂ ನರ್ಸಿಂಗ್ |
ವೈದ್ಯಾಧಿಕಾರಿ | ಎಂ.ಬಿ.ಬಿ.ಎಸ್/ಬಿಎಎಂಎಸ್ |
ಪೀಡಿಯಾಟ್ರಿಷಿಯನ್, ಅನೇಸ್ಥಿಸಿಯೋಲಾಜಿಸ್ಟ್ | ಎಂ.ಡಿ/ಡಿ.ಎನ್.ಬಿ/ಸ್ನಾತಕೋತ್ತರ ಪದವಿ |
ಒಟ್ಟು ಹುದ್ದೆಗಳ ಪಟ್ಟಿ ಹಾಗೂ ಶೈಕ್ಷಣಿಕ ಅರ್ಹತೆಗಳ ಸಂಪೂರ್ಣ ವಿವರಕ್ಕೆ ಅಧಿಕೃತ ನೋಟಿಫಿಕೇಶನ್ ಓದುವುದು ಅನಿವಾರ್ಯ.
ಇದನ್ನು ಓದಿ : SSP Scholarship Application: SSP ಸ್ಕಾಲರ್ಷಿಪ್ ಅರ್ಜಿ ಪ್ರಾರಂಭ.! ಬೇಗ ವಿದ್ಯಾರ್ಥಿಗಳು ಈ ರೀತಿ ಅರ್ಜಿ ಸಲ್ಲಿಸಿ
ಅರ್ಹತಾ ಮಾನದಂಡಗಳು
- ವಯೋಮಿತಿ: ಕನಿಷ್ಠ 18 ರಿಂದ ಗರಿಷ್ಠ 65 ವರ್ಷ (ಹುದ್ದೆ ಪ್ರಕಾರ ಬದಲಾಗಬಹುದು)
- ವಯೋಮಿತಿ ಸಡಿಲಿಕೆ:
- ಓಬಿಸಿ: 3 ವರ್ಷ
- ಎಸ್ಸಿ/ಎಸ್ಟಿ: 5 ವರ್ಷ
- ದಿವ್ಯಾಂಗ ಅಭ್ಯರ್ಥಿಗಳು: 10–15 ವರ್ಷ
ವೇತನ ವಿವರ
- ಸಂಬಳ ಶ್ರೇಣಿ: ₹12,000 ರಿಂದ ₹60,000 ರವರೆಗೆ
- ಹುದ್ದೆ ಪ್ರಕಾರ ವೇತನ ಬದಲಾಗುತ್ತದೆ. ನಿಖರ ವೇತನ ವಿವರ ನೋಟಿಫಿಕೇಶನ್‌ನಲ್ಲಿ ಲಭ್ಯವಿದೆ.
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ ಅಥವಾ ಸ್ಕ್ರಿನಿಂಗ್ ಟೆಸ್ಟ್
- ವೈಯಕ್ತಿಕ ಸಂದರ್ಶನ
- ದಾಖಲೆಗಳ ಪರಿಶೀಲನೆ
ಅರ್ಜಿ ಶುಲ್ಕ
- ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿಗೆ ಯಾವುದೇ ಶುಲ್ಕವಿಲ್ಲ. ಈ ನೇಮಕಾತಿ ಉಚಿತವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ನೋಟಿಫಿಕೇಶನ್ ಓದಿ, ಅರ್ಹತೆ ಪರಿಶೀಲಿಸಿ
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
- ಆನ್‌ಲೈನ್ ಅರ್ಜಿ ಲಿಂಕ್‌ನಲ್ಲಿ ಲಾಗಿನ್ ಮಾಡಿ
- ಅರ್ಜಿ ಸಲ್ಲಿಸಿ, ರಸೀದಿಯನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಿ
ಮುಖ್ಯ ದಿನಾಂಕಗಳು:
ಘಟನೆ | ದಿನಾಂಕ |
ಅರ್ಜಿ ಪ್ರಾರಂಭ ದಿನಾಂಕ | 03 ಜೂನ್ 2025 |
ಅರ್ಜಿ ಕೊನೆ ದಿನಾಂಕ | 17 ಜೂನ್ 2025 |
ಪ್ರಮುಖ ಲಿಂಕುಗಳು
- ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆಯ ಈ ನೇಮಕಾತಿ ಆರೋಗ್ಯ ಕ್ಷೇತ್ರದಲ್ಲಿ ಉತ್ಸಾಹಿ ಅಭ್ಯರ್ಥಿಗಳಿಗೆ ಹೊಸ ತಿರುವು ನೀಡಬಲ್ಲದು. ಸರಕಾರದ ನೇರ ನೇಮಕಾತಿಯ ಮೂಲಕ ಉತ್ತಮ ಉದ್ಯೋಗ ಭದ್ರತೆ ಮತ್ತು ಸೇವೆಯ ಅವಕಾಶ ದೊರೆಯಲಿದೆ. ವಿಳಂಬವಿಲ್ಲದೆ ಅರ್ಜಿ ಸಲ್ಲಿಸಿ, ನಿಮ್ಮ ಮುಂದಿನ ಹೆಜ್ಜೆಯನ್ನು ಸಮರ್ಥವಾಗಿ ಇಡಿ!