BpL Ration New rules:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತೋದಯ ರೇಷನ್ ಕಾರ್ಡ್ ಇದೆಯಾ ಹಾಗಾದರೆ ಕಡ್ಡಾಯವಾಗಿ ನೀವು ಎರಡು ರೂಲ್ಸ್ ನ ಪಾಲಿಸಬೇಕಾಗುತ್ತದೆ ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಹೌದು ಸ್ನೇಹಿತರೆ ಈಗಾಗಲೇ ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆಯನ್ನು ನಮ್ಮ ರಾಜ್ಯ ಸರ್ಕಾರ ಪ್ರಾರಂಭ ಮಾಡಿದ್ದು ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ರದ್ದಾಗಬಾರದು ಅಂದರೆ ಕಡ್ಡಾಯವಾಗಿ ನೀವು ಎರಡು ರೂಲ್ಸ್ ನ ಪಾಲಿಸಬೇಕು..! ಯಾವ ರೂಲ್ಸ್ ಎಂದು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ಏರ್ಟೆಲ್ ಫೌಂಡೇಶನ್ ವತಿಯಿಂದ ಸ್ಕಾಲರ್ಶಿಪ್ ಸಿಗುತ್ತೆ..! ಎಲ್ಲಾ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಬಗ್ಗೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರತಿದಿನ ಮಾಹಿತಿ ನೀವು ಬೇಗ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಬಿಪಿಎಲ್ ರೇಷನ್ ಕಾರ್ಡ್ (BpL Ration New rules)..?
ಹೌದು ಸ್ನೇಹಿತರೆ ಪ್ರತಿಯೊಬ್ಬರ ಹತ್ತಿರ ಈಗಂತೂ ಬಿಪಿಎಲ್ ರೇಷನ್ ಕಾರ್ಡ್ ಇದ್ದೇ ಇದೆ ಸರ್ಕಾರ ಐದು ಗ್ಯಾರಂಟಿಗಳು ಜಾರಿಗೆ ತಂದಿರುವುದರಿಂದ ಅಕ್ರಮವಾಗಿ ಮತ್ತು ಸುಳ್ಳು ದಾಖಲೆಯನ್ನು ನೀಡಿದಂತಹ ರೇಷನ್ ಕಾರ್ಡ್ ಗಳ ರದ್ದತಿಯ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಆಹಾರ ಇಲಾಖೆ ಅಧಿಕಾರಿಗಳಿಗೆ ಆದೇಶ ಮಾಡಲಾಗಿದ್ದು ನಮ್ಮ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಆಹಾರ ಇಲಾಖೆ ಈಗಾಗಲೇ ತಯಾರು ಮಾಡಿಕೊಳ್ಳುತ್ತಿದೆ.
ಹೌದು ಸ್ನೇಹಿತರೆ ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಗಳು ಆ ರದ್ದತಿ ಪ್ರಾರಂಭವಾಗಿದ್ದು ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ನೀವು ಕಡ್ಡಾಯವಾಗಿ ಎರಡು ರೂಲ್ಸ್ ನ ಪಾಲಿಸಬೇಕಾಗುತ್ತದೆ ಅವು ಏನು ಎಂದು ಕೆಳಗಡೆ ವಿವರಿಸಿದ್ದೇವೆ. ಹೌದು ಸ್ನೇಹಿತರೆ, ಈಗಾಗಲೇ ಅರ್ಹತೆ ಹೊಂದಿದಂತ ಬಿಪಿಎಲ್ ರೇಷನ್ ಕಾರ್ಡ್ ಗಳು ಕೂಡ ಸರಕಾರ ರದ್ದು ಮಾಡುತ್ತಿದೆ ಕಾರಣ ಕೆಳಗೆ ನೀಡಲಾದಂತ ಎರಡು ರೂಲ್ಸ್ ಪಾಲಿಸಿದೆ ಹೋದರೆ ಅರ್ಹತೆ ಹೊಂದಿದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದು ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಿದೆ.
ಬಿಪಿಎಲ್ ರೇಷನ್ ಕಾರ್ಡ್ ದಾರಿಗೆ ಎರಡು ಹೊಸ ರೂಲ್ಸ್ (BpL Ration New rules)…?
ಪ್ರತಿ ತಿಂಗಳು ರೇಷನ್ ಪಡೆಯಬೇಕು:- ಹೌದು ಸ್ನೇಹಿತರೆ, ಬಿಪಿಎಲ್ ರೇಷನ್ ಕಾರ್ಡ್ ದಾರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯ ಮೂಲಕ ರೇಷನ್ ಪಡೆದುಕೊಳ್ಳಬೇಕು ಒಂದು ವೇಳೆ ಅನಿವಾರ್ಯ ಕಾರಣದಿಂದ ಮೂರು ತಿಂಗಳಗಳ ಕಾಲ ಯಾವುದೇ ರೇಷನ್ ಪಡೆಯದೆ ಹೋದಲ್ಲಿ ಅಂಥವರ ರೇಷನ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ..! ನಂತರ ಆರು ತಿಂಗಳಗಳ ಕಾಲ ಯಾವುದೇ ರೀತಿ ರೇಷನ್ ಪಡೆಯದೆ ಹೋದಲ್ಲಿ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಸರಕಾರ ಮುಂದಾಗಿದೆ ಇದಕ್ಕೆ ಸಾಕ್ಷಿ ಎಂಬುವಂತೆ ನಾವು ಕೆಳಗಡೆ ಒಂದು ರದ್ದಾದ ರೇಷನ್ ಕಾರ್ಡ್ ವಿವರವನ್ನು ನೀಡಿದ್ದೇವೆ.
ಹೌದು ಸ್ನೇಹಿತರೆ ಮೇಲೆ ತೋರಿಸಿದಂತೆ ರೇಷನ್ ಕಾರ್ಡ್ ತಾರರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ಆರು ತಿಂಗಳಗಳ ಕಾಲ ನ್ಯಾಯಬೆಲೆ ಅಂಗಡಿಯ ಮೂಲಕ ಯಾವುದೇ ರೇಷನ್ ಪಡೆದುಕೊಂಡಿಲ್ಲ ಅವರ ರೇಷನ್ ಕಾರ್ಡನ್ನು ಸರ್ಕಾರ ರದ್ದು ಮಾಡಿದೆ ಅದಕ್ಕೆ ಸಂಬಂಧಿಸಿದಂತೆ ಪೂರ್ತಿ ವಿವರವನ್ನು ಆ ಮೇಲೆ ನೀಡಿದಂತ ಫೋಟೋದಲ್ಲಿ ನೀವು ನೋಡಬಹುದು
ಹೌದು ಸ್ನೇಹಿತರೆ, ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ಕೇವಲ ಸರಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದು ಯಾವುದೇ ರೀತಿ ಯಾವುದೇ ರೀತಿ ರೇಷನ್ ಅಥವಾ ನ್ಯಾಯಬೆಲೆ ಅಂಗಡಿಯ ಮೂಲಕ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ಪಡೆಯದೆ ಹೋದಲ್ಲಿ ಅಂತವರ ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಸರಕಾರ ಮುಂದಾಗಿದೆ ಹಾಗಾಗಿ ಕನಿಷ್ಠ ಮೂರು ತಿಂಗಳ ಒಳಗಡೆಯಾಗಿ ಒಂದು ಸಲ ಆದರೂ ಆಹಾರಧಾನ್ಯ ಪಡೆಯಲು ಪ್ರಯತ್ನ ಮಾಡಿ
ರೇಷನ್ ಕಾರ್ಡ್ ಈಕೆ ವೈ ಸಿ:- ಹೌದು ಸ್ನೇಹಿತರೆ, bpl ರೇಷನ್ ಕಾರ್ಡ್ ಹೊಂದಿದವರು ಕಡ್ಡಾಯವಾಗಿ ತಮ್ಮ ರೇಷನ್ ಕಾರ್ಡ್ ನಲ್ಲಿರುವಂತ ಎಲ್ಲಾ ಸದಸ್ಯರ ಈ ಕೆವೈಸಿ ಮಾಡಿಸಬೇಕು ಇಲ್ಲವಾದರೆ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವಂತ ಪ್ರಕ್ರಿಯೆ ಪ್ರಾರಂಭವಾಗಿದೆ ಹಾಗಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತ ಎಲ್ಲಾ ಸದಸ್ಯರ e-kyc ಆಗಿಲ್ಲವೆಂದರೆ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಈ ಕೆವೈಸಿ ಮಾಡಿಸಬಹುದು
ಈ ಮೇಲೆ ನೀಡಿದಂತ ಎರಡು ಹೊಸ ರೂಲ್ಸ್ ಗಳನ್ನು ನೀವು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಈಗಾಗಲೇ ಆಹಾರ ಇಲಾಖೆ ಈ ಕಾರ್ಯ ಪ್ರಾರಂಭ ಮಾಡಿದ್ದು ನಿಮ್ಮ ರೇಷನ್ ಕಾರ್ಡ್ ರದ್ದು ಆಗಿದೆ ಇಲ್ಲವೋ ಎಂದು ನೀವು ಚೆಕ್ ಮಾಡಿಕೊಳ್ಳಿ
ರೇಷನ್ ಕಾರ್ಡ್ ಸ್ಥಿತಿ (BpL Ration New rules) ಚೆಕ್ ಮಾಡುವುದು ಹೇಗೆ…?
ಹೌದು ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆ ಅಥವಾ ರದ್ದಾಗಿದೆ ಎಂಬ ಮಾಹಿತಿಯನ್ನು ಯಾವ ರೀತಿ ಚೆಕ್ ಮಾಡಬೇಕು ಅಂದರೆ ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ.
ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಾವು ಕೊಟ್ಟಿರುವ ಅಂತ ಲಿಂಕಿನ ಮೇಲೆ ಅಥವಾ ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ನಿಮಗೆ ಅಲ್ಲಿ ರೇಷನ್ ಕಾರ್ಡ್ ಈ ಸರ್ವಿಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ (DBT status) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ಮೂರು ಲಿಂಕ್ಗಳು ಕಾಣುತ್ತವೆ ಅಲ್ಲಿ ನಿಮ್ಮ ಜಿಲ್ಲೆ ಯಾವ ಲಿಂಕಿನಲ್ಲಿ ಬರುತ್ತೆ ಎಂದು ಕ್ಲಿಕ್ ಮಾಡಿಕೊಂಡು ಓಪನ್ ಮಾಡಿ ನಂತರ ನಿಮಗೆ ಅಲ್ಲಿ
ನಂತರ ನಿಮಗೆ ಅಲ್ಲಿ ಪಂಡಿತರ ಚೀಟಿಯ ವಿವರ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ With OTP ಅಥವಾ With out ಎಂದು ಕೇಳುತ್ತದೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡಿಗೆ ಲಿಂಕ್ ಇದ್ದರೆ ಒಟಿಪಿ ಮೂಲಕ ವೀಕ್ಷಣೆ ಮಾಡಿ ಅಥವಾ ಆಧಾರ್ ಕಾರ್ಡ್ ನಂಬರ್ ಲಿಂಕ್ ಇಲ್ಲದೆ ಹೋದ ಪಕ್ಷದಲ್ಲಿ ವಿಥೌಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಲು ಕೇಳುತ್ತದೆ ಅಲ್ಲಿ ನೀವು ರೇಷನ್ ಕಾರ್ಡ್ ಎಂಟರ್ ಮಾಡಿದ ತಕ್ಷಣ ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡ್ ಓಪನ್ ಆಗುತ್ತದೆ
ಮೇಲೆ ತೋರಿಸಿದಂತೆ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಆಕ್ಟಿವ್ ಅಂತ ತೋರಿಸಿದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆ ಎಂದು ಅರ್ಥ ಒಂದು ವೇಳೆ ಸಸ್ಪೆಂಡ್ ಆಗಿದ್ದರೆ ಯಾವ ಕಾರಣಕ್ಕೆ ಸಸ್ಪೆಂಡ್ ಆಗಿದೆ ಎಂಬ ಮಾಹಿತಿಯನ್ನು ಅಲ್ಲೇ ತೋರಿಸಲಾಗುತ್ತದೆ ಈ ರೀತಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಆಕ್ಟಿವ್ ಆಗಿದೆ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಸುದ್ದಿ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು