bpl Ration cancel:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಸುಮಾರು 3 lakh ಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲು ಸರ್ಕಾರ ಕಡೆಯಿಂದ ಈಗಾಗಲೇ ಆದೇಶ ಮಾಡಲಾಗಿದೆ ಮತ್ತು ಅರ್ಹತೆ ಹೊಂದಿರದಂತ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ ಹಾಗಾಗಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ನೀವು ಕಡ್ಡಾಯವಾಗಿ ಈ ಮೂರು ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು (bpl Ration cancel) ಈ ಲೇಖನಿಯಲ್ಲಿ ನಾವು ತಿಳಿದುಕೊಳ್ಳೋಣ ಹಾಗಾಗಿ (read more) ಈ ಲೇಖನನ್ನು ಪೂರ್ತಿಯಾಗಿ ಓದಿ
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಿಡುಗಡೆ ಹಣ ಜಮಾ ಆಗದೇ ಇರುವವರು ಈ ಕೆಲಸ ಮಾಡಿ ತಕ್ಷಣ ಹಣ ಬರುತ್ತೆ ಇಲ್ಲಿದೆ ಮಾಹಿತಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಮಾಹಿತಿ ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಂದು ಅಪ್ಡೇಟ್ ಪಡೆಯಲು ಹಾಗೂ ರೈತರಿಗೆ ಸಂಬಂಧಿಸಿದಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳ ಮಾಹಿತಿ ಪ್ರತಿದಿನ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
bpl ರೇಷನ್ ಕಾರ್ಡ್ ರದ್ದು (bpl Ration cancel)..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಮೊನ್ನೆ ನಡೆದ ವಿಧಾನಪರಿಷತ್ತು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಬಿಪಿಎಲ್ ರೇಷನ್ ಕಾರ್ಡ್ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ ನಮ್ಮ ರಾಜ್ಯದಲ್ಲಿ ಸುಮಾರು 1. 27 ಕೋಟಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಹಾಗೂ 4.36 ಕೋಟಿ ಜನರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿದ್ದಾರೆ ಎಂದು ಮಾಹಿತಿ ಬಂದಿದೆ ಮತ್ತು ಇದರಲ್ಲಿ ಸುಮಾರು ಜನ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ ಅಂಥವರನ್ನು ಗುರುತಿಸಿ ಅರ್ಹತೆ ಹೊಂದಿಲ್ಲದಂತ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಸಿಎಂ ಸಿದ್ದರಾಮಯ್ಯನವರು ಆದೇಶ ನೀಡಿದ್ದಾರೆ.
ಹೌದು ಸ್ನೇಹಿತರೆ ನೀತಿ ಆಯೋಗ ನೀಡಿರುವ ವರದಿಯ ಪ್ರಕಾರ ನಮ್ಮ ರಾಜ್ಯದಲ್ಲಿ 5.85ರಷ್ಟು ಮಾತ್ರ ಬಡತನ ಹೊಂದಿದ್ದು ಆದರೆ ನಮ್ಮ ರಾಜ್ಯದಲ್ಲಿ ಶೇಕಡ 80ರಷ್ಟು ಬಿಪಿಎಲ್ ರೇಷನ್ ಕಾರ್ಡ್ ಕುಟುಂಬದಾರರು ಹೊಂದಿದ್ದಾರೆ ಹಾಗಾಗಿ ಇದರಲ್ಲಿ ಅರ್ಹತೆ ಹೊಂದಿಲ್ಲದಂತ ಸುಮಾರು 3.41 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ಈಗಾಗಲೇ ಆಹಾರ ಇಲಾಖೆ ತಯಾರಿ ಮಾಡುತ್ತಿದೆ ಮತ್ತು ಇದರ ಬಗ್ಗೆ ಕಟ್ಟುನಿಟ್ಟು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯನವರು ಆದೇಶ ಮಾಡಿದ್ದಾರೆ.
bpl ರೇಷನ್ ಕಾರ್ಡ್ ರದ್ದು (bpl Ration cancel) ಆಗಬಾರದು ಅಂದರೆ ಏನು ಮಾಡಬೇಕು..?
ಹೌದು ಸ್ನೇಹಿತರೆ, ನೀವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ಏನು ಮಾಡಬೇಕೆಂದರೆ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರುವಂತ ಮಾನದಂಡಗಳನ್ನು ಸರಿಯಾಗಿ ಪಾಲಿಸಬೇಕು ಅಂದರೆ ಮಾತ್ರ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವುದಿಲ್ಲ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ
BPL ರೇಷನ್ ಕಾರ್ಡ್ ಕ್ಯಾನ್ಸಲ್ ಆಗದೆ ಇರಲು ಈ ಮೂರು ದಾಖಲೆಗಳು ಕಡ್ಡಾಯವಾಗಿ ಹೊಂದಿರಬೇಕು..?
ಆದಾಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಕಡ್ಡಾಯವಾಗಿ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಮಾನದಂಡದಲ್ಲಿ ನೀವು 1,50,000 ವರೆಗೆ ನಿಮ್ಮ ಕುಟುಂಬದ ವಾರ್ಷಿಕ ಆದಾಯದ ಒಳಗಡೆ ಇರಬೇಕು ಅಂದರೆ ಮಾತ್ರ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರುತ್ತದೆ.
ಜಮೀನು ಪ್ರಮಾಣ ಪತ್ರ:- ಹೌದು ಸ್ನೇಹಿತರೆ ನೀವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ನೀವು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ 3 ಹೆಕ್ಟೇ ರ್ ಒಣ ಭೂಮಿ ಅಥವಾ ತತ್ಸ ಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬ ಆಗಿರಬೇಕು ಅಥವಾ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ 1000 ಚದರ ಅಡಿಗಿಂತಲೂ ಒಳಗೆ ಜಾಗ ಅಥವಾ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಆಗಿರಬಾರದು ಅಂದರೆ ಮಾತ್ರ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವುದಿಲ್ಲ.
ಆದಾಯ ತೆರಿಗೆ:- ಹೌದು ಸ್ನೇಹಿತರೆ ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ಕುಟುಂಬದ ಇತರ ಸದಸ್ಯರು ಯಾವುದೇ ರೀತಿ ಆದಾಯ ತೆರಿಗೆ ಅಥವಾ ಇನ್ಕಮ್ ಟ್ಯಾಕ್ಸ್ ಕಟ್ಟುತ್ತಿದ್ದರೆ ಅಂತವರ ರೇಷನ್ ಕಾರ್ಡ್ ಗಳು ರದ್ದು ಮಾಡಲಾಗುತ್ತದೆ ಒಂದು ವೇಳೆ ಯಾವುದೇ ರೀತಿ ಆದಾಯ ತೆರಿಗೆ ಕಟ್ಟುತ್ತಿಲ್ಲ ಎಂಬ ಪ್ರಮಾಣ ಪತ್ರ ನಿಮ್ಮ ಹತ್ತಿರ ಇದ್ದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗುವುದಿಲ್ಲ.
ಈ ಮೇಲೆ ನೀಡಿದಂತ ಎಲ್ಲಾ ದಾಖಲಾತಿಗಳು ನೀವು ಒಂದಿದ್ದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗುವುದಿಲ್ಲ. ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು