bara parihar status:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಬರ ಪರಿಹಾರದ ಹಣಕ್ಕಾಗಿ ಕಾಯ್ತಾ ಇದ್ರೆ ನಿಮಗೆ ಸರ್ಕಾರ ಕಡೆಯಿಂದ ಗುಡ್ ನ್ಯೂಸ್ ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಈಗಾಗಲೇ ಬೆಳೆ ಪರಿಹಾರ ಎರಡು ಕಂತಿನ ಹಣ ಜಮಾ ಮಾಡಲಾಗಿದೆ ಮತ್ತು ಮೂರನೇ ಕಂತಿನ ಹಣವನ್ನು ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಿಡುಗಡೆ ಮಾಡಲಾಗಿತ್ತು ಇದನ್ನು ಯಾವ ರೀತಿ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಎಂಬ ಮಾಹಿತಿಯು ಕೂಡ ತಿಳಿಸಿಕೊಡುತ್ತೇವೆ
ದ್ವಿತೀಯ ಪಿಯುಸಿ ಪರೀಕ್ಷೆ ಮೂರನೇ ಪಲಿತಾಂಶ ಇವತ್ತು ಬಿಡುಗಡೆ ಇಲ್ಲಿದೆ ಫಲಿತಾಂಶ ಚೆಕ್ ಮಾಡಲು ಡೈರೆಕ್ಟಾಗಿ ಲಿಂಕ್
ಸ್ನೇಹಿತರೆ ಇದೇ ರೀತಿ ನಿಮಗೆ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮತ್ತು ನಮ್ಮ ರಾಜ್ಯದಲ್ಲಿ ನಡೆಯುವಂತ ಪ್ರಮುಖ ಸುದ್ದಿಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಮತ್ತು ನಮ್ಮ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನೀವು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಬರ ಪರಿಹಾರ ಹಣ (bara parihar status)…?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ಅಂದರೆ 2023 ಮತ್ತು 24ನೇ ಸಾಲಿನಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿತ್ತು ಹಾಗಾಗಿ ನಮ್ಮ ರಾಜ್ಯದಲ್ಲಿ ಸುಮಾರು 224 ತಾಲೂಕುಗಳನ್ನು ತೀವ್ರ ಭರಪೀಡಿತ ತಾಲೂಕುಗಳೆಂದು ಗುರುತಿಸಲಾಯಿತು ನಂತರ ಆ ಜಿಲ್ಲೆಯಲ್ಲಿರುವಂತ ರೈತರ ಕುಟುಂಬಗಳಿಗೆ ಬರ ಪರಿಹಾರದ ಹಣ ಬಿಡುಗಡೆ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜೊತೆಗೂಡಿ ಎರಡು ಕಂತಿನ ಹಣದ ರೂಪದಲ್ಲಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಯಿತು.
ಇನ್ನ ತುಂಬಾ ರೈತರಿಗೆ ಯಾವುದೇ ರೀತಿ ಬರ ಪರಿಹಾರದ ಹಣ ಬಂದಿಲ್ಲ ಕಾರಣ ಕೆಲವರ ರೈತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇರುವುದು ಹಾಗೂ ಬ್ಯಾಂಕ್ ಖಾತೆ ಸರಿಯಾಗಿ ಇರೋದೆ ಇರುವುದು ಇದಕ್ಕೆ ಪ್ರಮುಖ ಕಾರಣ ಎಂದು ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ತಿಳಿಸಿದ್ದಾರೆ ಮತ್ತು ನಿಮಗೆ ಬೆಳೆ ಪರಿಹಾರದ ಹಣ ಪಡೆಯಲು ಏನು ಮಾಡಬೇಕೆಂಬ ಮಾಹಿತಿಯನ್ನು ನಾವು ಲೇಖನಿಯ ಕೊನೆಯ ಭಾಗದಲ್ಲಿ ವಿವರಣೆ ನೀಡಿದ್ದೇವೆ.
ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಇರುವಂತ ಸುಮಾರು 17.09 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ ಎಂದು ಗುರುತಿಸಲಾಗಿದೆ ಅಂತವರ ಖಾತೆಗೆ ಮಾತ್ರ ಮೂರನೇ ಕಂತಿನ ಬೆಳೆ ಪರಿಹಾರ ಹಣ 2800 ರಿಂದ 3000 ರೂಪಾಯಿ ಒಳಗಡೆ ರೈತರ ಖಾತೆಗೆ ತಮ್ಮ ಜೀವನೋಪಾಯ ನಷ್ಟ ಪರಿಹಾರವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ನಮ್ಮ ಕಂದಾಯ ಇಲಾಖೆಯ ಸಚಿವರಾದಂತ ಕೃಷ್ಣೆ ಬೈರೇಗೌಡರು ತಿಳಿಸಿದ್ದಾರೆ.
ಅದರಂತೆ ನಮ್ಮ ರಾಜ್ಯದಲ್ಲಿರುವಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜುಲೈ 11 ನೇ ತಾರೀಖಿನಿಂದ ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆ ಪ್ರಾರಂಭ ಮಾಡಲಾಗಿದ್ದು ಅರ್ಹತೆ ಹೊಂದಿದಂತ ರೈತರ ಖಾತೆಗೆ ಈಗಾಗಲೇ ಹಣ ಬಿಡುಗಡೆ ಆಗಿದೆ ಅದರ ಸಾಕ್ಷಿಯನ್ನು ನಾವು ಮೇಲೆ ಒಂದು ಸ್ಕ್ರೀನ್ಶಾಟ್ ರೀತಿಯಲ್ಲಿ ಹಾಕಿದ್ದೇವೆ ನೀವು ನೋಡಬಹುದು. ಮತ್ತು ಬರ ಪರಿಹಾರದ ಮೂರನೇ ಕಂತಿನ ಹಣ ಎಲ್ಲಾ ರೈತರ ಖಾತೆಗೆ ಬರಲು ಇನ್ನು 15 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಹಾಗಾಗಿ ಹಣ ಬರೆಯುವವರೆಗೂ ರೈತರು ಕಾಯಬೇಕಾಗುತ್ತದೆ
ಬರ ಪರಿಹಾರದ ಹಣದ ಸ್ಟೇಟಸ್ (bara parihar status) ಹೇಗೆ ಚೆಕ್ ಮಾಡುವುದು..?
ಸ್ನೇಹಿತರೆ ನಿಮಗೆ ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆ ಆಗಿದೆ ಇಲ್ಲವೋ ಎಂದು ತಿಳಿದುಕೊಳ್ಳಲು ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ ನಂತರ ಅಲ್ಲಿ ನೀವು DBT Karnataka ಎಂದು ಸರ್ಚ್ ಮಾಡಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ
ನಂತರ ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ನಿಮಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ರಿಜಿಸ್ಟರ್ ಆಗಲು ಕೇಳುತ್ತದೆ ನಂತರ ಈ ಅಪ್ಲಿಕೇಶನ್ ನಲ್ಲಿ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ ನೀವು ರಿಜಿಸ್ಟರ್ ಮಾಡಿ ಕೊಡಬೇಕಾಗುತ್ತದೆ ನಂತರ ನೀವು ಈ ಅಪ್ಲಿಕೇಶನ್ ಓಪನ್ ಮಾಡಿಕೊಂಡ ನಂತರ.
ನಂತರ ನಿಮಗೆ ಅಲ್ಲಿ ನಾಲ್ಕು ರೀತಿಯ ಆಯ್ಕೆಗಳು ಕಾಣುತ್ತೇವೆ ಅದರಲ್ಲಿ (payment status) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನಿಮಗೆ ಅಲ್ಲಿ (input subsidy for crop loss) ಈ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ಬೆಳೆ ಪರಿಹಾರ ಹಣ ಇಲ್ಲಿವರೆಗೂ ಎಷ್ಟು ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ
ಬರ ಪರಿಹಾರ ಹಣ ಜಮಾ ಆಗಿಲ್ಲ ಅಂದರೆ (bara parihar status) ಏನು ಮಾಡಬೇಕು..?
ಸ್ನೇಹಿತರೆ ಇದು ಗಮನದಲ್ಲಿಟ್ಟುಕೊಳ್ಳಿ ನೀವು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದರೆ ಮಾತ್ರ ನಿಮಗೆ ಬರ ಪರಿಹಾರದ ಮೂರನೇ ಕಂತಿನ ಹಣ ಬರುತ್ತೆ ಒಂದು ವೇಳೆ ಇಲ್ಲಿವರೆಗೂ ನಿಮಗೆ ಎರಡು ಕಂತಿನ ಹಣ ಬಂದಿದೆ ಎಂದರೆ ನೀವು ಮೂರನೇ ಕಂತಿನ ಹಣ ಬರುವವರೆಗೂ ಕಾಯಬೇಕಾಗುತ್ತದೆ ಅಥವಾ ನಿಮ್ಮ ಹತ್ತಿರದ ಗ್ರಾಮ ಲೆಕ್ಕೀಗ ಅಧಿಕಾರಿಗಳಿಗೆ ಭೇಟಿ ನೀಡಿ.
ಸ್ನೇಹಿತರೆ ನಿಮಗೆ ಯಾವುದೇ ರೀತಿ ಬೆಳೆ ಪರಿಹಾರ ಅಥವಾ ಬರ ಪರಿಹಾರದ ಹಣ ನಿಮಗೆ ಬಂದಿಲ್ಲ ಅಂದರೆ ನೀವು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದೆ ಇಲ್ಲವೋ ಎಂದು ತಿಳಿದುಕೊಳ್ಳಿ ಏಕೆಂದರೆ ಬರ ಪರಿಹಾರ ಹಣ ಜಮಾ ಆಗಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಲಿಂಗ್ ಮತ್ತು ಬ್ಯಾಂಕ್ ಖಾತೆ ಕೆವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ ಜೊತೆಗೆ ನಿಮ್ಮ ಹೊಲಕ್ಕೆ ಸಂಬಂಧಿಸಿದಂತೆ ನಿಮ್ಮ ಪಾಣಿಗಳಿಗೆ ಆಧಾರ್ ಲಿಂಕ್ ಮಾಡಿಸಬೇಕು ಹಾಗೂ ನಿಮ್ಮ ಜಮೀನಿಗೆ ಸಂಬಂಧಿಸಿ ದಂತೆ FID ಕ್ರಿಯೇಟ್ ಮಾಡಬೇಕಾಗುತ್ತದೆ ಅಂದರೆ ಮಾತ್ರ ಅಥವಾ ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಮಾತ್ರ ನಿಮಗೆ ಬರ ಪರಿಹಾರದ ಹಣ ಬರುತ್ತೆ.
ವಿಶೇಷ ಸೂಚನೆ:- ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದ್ದರೂ ಕೂಡ ಯಾವುದೇ ರೀತಿ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬಂದಿಲ್ಲ ಅಂದರೆ ನೀವು ಕೂಡಲೇ ನಿಮ್ಮ ಹತ್ತಿರದ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕೀಗ (ಕುಲಕರಣಿ) ಅಧಿಕಾರಿಗಳನ್ನು ಭೇಟಿ ಮಾಡಬಹುದು ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಅಥವಾ ಓಬಳಕೆ ಸಂಬಂಧಿಸಿದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಖಾತೆಗೆ ಯಾವ ಕಾರಣಕ್ಕೆ ಬರ ಪರಿಹಾರದ ಹಣ ಜಮಾ ಆಗಿಲ್ಲ ಎಂಬ ನಿಖರ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಊರಿನಲ್ಲಿ ಇರುವಂತಹ ಎಲ್ಲಾ ರೈತರಿಗೆ ಹಾಗೂ ಬರ ಪರಿಹಾರ ಹಣ ಜಮಾ ಆಗದೇ ಇರುವ ರೈತರಿಗೆ ಹಾಗೂ ಬರ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ರೈತರಿಗೂ ಕೂಡ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು