bele parihar list:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ರಾಜ್ಯ ಸರ್ಕಾರ ಕಳೆದ ವರ್ಷದ ಮುಂಗಾರು ಬೆಳೆ ಹಂಗಾಮಿನ ಬೆಳೆ ಹಾನಿ ಅಥವಾ ನಷ್ಟದ ಪರಿಹಾರದ ಹಣ ಬಿಡುಗಡೆ ಮಾಡಿದ್ದು. ನಿಮಗೆಲ್ಲರಿಗೂ ಗೊತ್ತೇ ಇರುವಂತ ವಿಷಯ ಹಾಗಾಗಿ ತುಂಬಾ ರೈತರಿಗೆ ಇನ್ನೂ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಅಂತವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅದನ್ನು ಯಾವ ರೀತಿ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಬಡವರಿಗಾಗಿ ಮೂರು ಕೋಟಿ ಮನೆ ನಿರ್ಮಾಣ..! ಉಚಿತ ಮನೆ ಕಟ್ಟಿಕೊಳ್ಳಲು ಅರ್ಜಿ ಪ್ರಾರಂಭ ಬೇಗ ಅರ್ಜಿ ಸಲ್ಲಿಸಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರತಿದಿನ ಪ್ರಮುಖ ಸುದ್ದಿಗಳ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಗೃಹಲಕ್ಷ್ಮಿ ಯೋಜನೆ ರೇಷನ್ ಕಾರ್ಡ್ ತಿದ್ದುಪಡಿ ಮುಂತಾದ ವಿಷಯಗಳ ಬಗ್ಗೆ ಪ್ರತಿದಿನ ಬೇಗ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಬರ ಪರಿಹಾರ (bele parihar list)..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ 2023-24 ವರ್ಷದಲ್ಲಿ ಮಳೆಯ ಕೊರತೆಯಿಂದ ಹಾಗೂ ಪ್ರಕೃತಿ ವಿಕೋಪದಿಂದ ತುಂಬಾ ರೈತರು ಬೆಳೆಯ ನಷ್ಟ ಅನುಭವಿಸಿದ್ದರು. ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ ಹಣವನ್ನು ಮೂರು ಕಂತಿನ ರೂಪದಲ್ಲಿ ಬಿಡುಗಡೆ ಮಾಡಿರುವ ವಿಷಯ ನಿಮಗೆ ಗೊತ್ತೇ ಇದೆ.
ಈ ಬರ ಪರಿಹಾರ ಹಣ ಬಿಡುಗಡೆಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ಅನುದಾನ ಬೇಡಿಕೆ ಇಟ್ಟಿತ್ತು ಆದರೆ (NDF) ಮಾರ್ಗಸೂಚಿಯಂತೆ ನಮ್ಮ ರಾಜ್ಯಕ್ಕೆ 3454 ಕೋಟಿ ರೂಪಾಯಿ ಬರ ಪರಿಹಾರ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಕಡೆಯಿಂದ ನೆರವು ದೊರೆಯುತ್ತಿದೆ. ಇದರಿಂದ ನಮ್ಮ ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ ಈಗಾಗಲೇ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ
ಇನ್ನು ತುಂಬಾ ರೈತರಿಗೆ ಬರ ಪರಿಹಾರದ ಹಣ ಜಮಾ ಆಗಿಲ್ಲ ಅಂತವರ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಅದನ್ನು ಯಾವ ರೀತಿ ಪರಿಶೀಲನೆ ಮಾಡಿಕೊಳ್ಳುವುದು ಎಂಬುದನ್ನು ಈಗ ತಿಳಿದುಕೊಳ್ಳೋಣ
ಬರ ಪರಿಹಾರ ಹಣದ ಪಟ್ಟಿ (bele parihar list) ಚೆಕ್ ಮಾಡುವುದು ಹೇಗೆ..?
ಸ್ನೇಹಿತರೆ ನಿಮ್ಮ ಖಾತೆಗೆ ಎಷ್ಟು ಬರ ಪರಿಹಾರದ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ಹಾಗೂ ಒಂದು ವೇಳೆ ಜಮಾ ಆಗಿಲ್ಲ ಅಂದರೆ ಯಾವ ರೀತಿ ಮಾಹಿತಿ ಚೆಕ್ ಮಾಡುವುದು ಎಂಬುದನ್ನು ಈಗ ತಿಳಿದುಕೊಳ್ಳೋಣ. ಬರ ಪರಿಹಾರದ ಹಣದ ಮಾಹಿತಿಯನ್ನು ಚೆಕ್ ಮಾಡಲು ನೀವು ಬರ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ.
ಈ ಮೇಲೆ ಕೊಟ್ಟಿರುವಂತ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಬರ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ. ನಂತರ ನೀವು ಅಲ್ಲಿ ಯಾವ ವರ್ಷದ ಬರ ಪರಿಹಾರ ಹಣ ಚೆಕ್ ಮಾಡಲು ಬಯಸ್ತೀರಿ ಆ ವರ್ಷ ಆಯ್ಕೆ ಮಾಡಿಕೊಳ್ಳಿ.
ನಂತರ ಅಲ್ಲಿ ನೀವು ಋತುವಿನಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಿ ಮತ್ತು ಬರ ಪರಿಹಾರ ಅಥವಾ ಪ್ರವಾಹ ಎಂದು ಕೇಳುತ್ತದೆ ಅಲ್ಲಿ ನೀವು ಬರ ಪರಿಹಾರ ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬ್ಳಿಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿ ನೀವು ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ
ನಂತರ ನಿಮಗೆ ಅಲ್ಲಿ ಗೆಟ್ ವರದಿ ಎಂದು ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ನಿಮ್ಮ ಹಳ್ಳಿಗಳಲ್ಲಿ ಅಥವಾ ನಿಮ್ಮ ಗ್ರಾಮದಲ್ಲಿ ಬರ ಪರಿಹಾರ ಹಣ ಜಮಾ ಆದವರ ಪಟ್ಟಿ ಕಾಣಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇದ್ದರೆ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಅರ್ಥ.
ಒಂದು ವೇಳೆ ಬರ ಪರಿಹಾರದ ಹಣ ಜಮಾ ಆಗದೇ ಇರುವವರ ಪಟ್ಟಿ ಪಡೆಯಬೇಕಾದರೆ ನೀವು ಅಲ್ಲೇ ಕಾಣುವ ಪಕ್ಕದಲ್ಲಿ ವಿಫಲ ಪ್ರಕರಣಗಳು ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗದೇ ಇರುವವರ ಪಟ್ಟಿ ನೋಡಲು ಸಿಗುತ್ತದೆ
ಬರ ಪರಿಹಾರ (bele parihar list) ಹಣ ಜಮಾ ಆಗದೆ ಇದ್ದರೆ ಏನು ಮಾಡಬೇಕು..?
ಹೌದು ಸ್ನೇಹಿತರೆ ನಿಮಗೇನಾದರೂ ಬರ ಪರಿಹಾರದ ಹಣ ಜಮಾ ಆಗಿಲ್ವ ಹಾಗಾದರೆ ನೀವು ನಿಮ್ಮ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ (ಕುಲಕರಣಿ) ಭೇಟಿ ನೀಡಬೇಕು ಮತ್ತು ಯಾವ ಕಾರಣಕ್ಕೆ ಬರ ಪರಿಹಾರ ಹಣ ಜಮಾ ಆಗಿಲ್ಲ ಎಂಬ ಮಾಹಿತಿಯನ್ನು ನೀವು ಆ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆದುಕೊಳ್ಳಬಹುದು
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಬರ ಪರಿಹಾರ ಹಣ ಜಮಾ ಆಗದೇ ಇರುವ ರೈತರಿಗೆ ಈ ಲೇಖನಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಅಪ್ಡೇಟ್ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು