Education Loan: ವಿದ್ಯಾಭ್ಯಾಸಕ್ಕೆ ₹50 ಲಕ್ಷದವರೆಗೆ ಬಡ್ಡಿರಹಿತ ಶಿಕ್ಷಣ ಸಾಲಕ್ಕೆ ಅರ್ಜಿ ಆಹ್ವಾನ
ಉನ್ನತ ವಿದ್ಯಾಭ್ಯಾಸವೇ ಭವಿಷ್ಯದ ಬುನಾದಿ. ಇಂದಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ವಿದೇಶಗಳಲ್ಲಿ ಉನ್ನತ ಪದವಿ ಪಡೆಯುವ ಕನಸು ಕಾಣುತ್ತಿದ್ದಾರೆ. ಆದರೆ, ವಿದ್ಯಾಭ್ಯಾಸ ವೆಚ್ಚವು ಬಹುಪಾಲು ವಿದ್ಯಾರ್ಥಿಗಳ ಕನಸುಗಳಿಗೆ ಅಡ್ಡಿಯಾಗುತ್ತದೆ. ಹೀಗಾಗಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು (Devaraj Arasu Development Corporation) ಒಂದು ಮಹತ್ವದ ಶಿಕ್ಷಣ ಸಾಲ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಲು ಬಡ್ಡಿರಹಿತವಾಗಿ ₹50 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ಈ ಯೋಜನೆಯ ಉದ್ದೇಶ ಏನು?
ಈ ಯೋಜನೆಯು ಹಿಂದುಳಿದ ವರ್ಗಗಳ (ಪ್ರವರ್ಗ 1, 2ಎ, 3ಎ, 3ಬಿ) ಅರ್ಹ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಗ್ರಾಜುಯೇಟ್, ಪಿ.ಎಚ್.ಡಿ., ಮತ್ತು ಪೋಸ್ಟ್ ಡಾಕ್ಟ್ರಲ್ ಪದವಿಗಳಿಗೆ ವ್ಯಾಸಂಗ ಮಾಡಲು ಆರ್ಥಿಕ ನೆರವು ನೀಡುವದು.
ಅರ್ಹತೆಯ ಮಾನದಂಡಗಳು
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ₹15 ಲಕ್ಷಕ್ಕಿಂತ ಹೆಚ್ಚು ಇರಬಾರದು.
- ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಟ 60% ಅಂಕ ಪಡೆದಿರಬೇಕು.
- QS World University Ranking 1000 ಒಳಗಿನ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು.
- ಅರ್ಜಿದಾರ/ಪೋಷಕರ ಸ್ಥಿರಾಸ್ತಿ ಭದ್ರತೆಯಾಗಿ ನಿಗಮಕ್ಕೆ ಒದಗಿಸಬೇಕು.
- ವಯೋಮಿತಿ:
- ಸ್ನಾತಕೋತ್ತರ ಕೋರ್ಸ್ – ಗರಿಷ್ಠ 32 ವರ್ಷ
- ಪಿ.ಎಚ್.ಡಿ ಕೋರ್ಸ್ – ಗರಿಷ್ಠ 35 ವರ್ಷ
- ಇತ್ತೀಚಿನ ಅರ್ಜಿದಾರ ಅಥವಾ ಅವರ ಕುಟುಂಬದವರು ನಿಗಮದ ಇತರೆ ಯೋಜನೆಗಳಲ್ಲಿ ಪ್ರಯೋಜನ ಪಡೆದಿದ್ದರೆ ಅರ್ಹರಾಗಿರುವುದಿಲ್ಲ.
ಇದನ್ನು ಓದಿ : PM Surya Ghar Free Solar: ಮನೆ ಮನೆಗೆ ಇನ್ನು ಮುಂದೆ ಉಚಿತ ವಿದ್ಯುತ್! ಈ ಕೂಡಲೇ ಅರ್ಜಿ ಸಲ್ಲಿಸಿ.
ಯಾವ ಕೋರ್ಸ್‌ಗಳಿಗೆ ಅನ್ವಯಿಸುತ್ತದೆ?
ಈ ಕೆಳಗಿನ ವಿಭಾಗಗಳಿಗೆ ಈ ಯೋಜನೆ ಅನ್ವಯಿಸುತ್ತದೆ:
- ಇಂಜಿನಿಯರಿಂಗ್ & ಟೆಕ್ನಾಲಜಿ
- ಮ್ಯಾನೇಜ್ಮೆಂಟ್ & ಕಾಮರ್ಸ್
- ಸೈನ್ಸ್ & ಟೆಕ್ನಾಲಜಿ
- ಅಗ್ರಿಕಲ್ಚರ್ & ಅಲೈಡ್ ಟೆಕ್ನಾಲಜಿ
- ಮೆಡಿಸಿನ್
- ಹುಮ್ಯಾನಿಟೀಸ್ & ಸೋಷಿಯಲ್ ಸೈನ್ಸಸ್
ಸಾಲದ ಪ್ರಮಾಣ
- ವಾರ್ಷಿಕ ಗರಿಷ್ಠ: ₹25 ಲಕ್ಷ
- ಪೂರ್ಣ ಕೋರ್ಸ್ ಅವಧಿಗೆ ಗರಿಷ್ಠ: ₹50 ಲಕ್ಷ
- ಬಡ್ಡಿರಹಿತವಾಗಿ ಈ ಸಾಲವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಈ ಕೆಳಗಿನ ಮಾರ್ಗಗಳಲ್ಲಿ ಯಾವುದೇ ಒಂದು ಬಳಸಿ ಅರ್ಜಿ ಸಲ್ಲಿಸಬಹುದು:
- ಸೇವಾ ಸಿಂಧು ಪೋರ್ಟಲ್
- ಗ್ರಾಮ ಒನ್ / ಬೆಂಗಳೂರು ಒನ್ / ಕರ್ನಾಟಕ ಒನ್ ಕೇಂದ್ರಗಳು
ಅಗತ್ಯ ದಾಖಲೆಗಳ ಪಟ್ಟಿ
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ವಿದೇಶಿ ವಿಶ್ವವಿದ್ಯಾಲಯದಿಂದ ಲಭ್ಯವಿರುವ ಪ್ರವೇಶ ಪತ್ರ
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್ ಪ್ರತಿ
- ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ
- ವೀಸಾ, ಪಾಸ್‌ಪೋರ್ಟ್ ಮತ್ತು ವಿಮಾನ ಟಿಕೆಟ್ ಪ್ರತಿ
ಇದನ್ನು ಓದಿ : Heavy Rains alert: ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ IMD ರಿಪೋರ್ಟ್.! ಇಲ್ಲಿದೆ ವಿವರ
ಮಹತ್ವದ ಸೂಚನೆ
- ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆ ಆಧಾರ್ ಜೋಡಣೆಯಾದದ್ದಾಗಿರಬೇಕು.
- ಎಲ್ಲಾ ದಾಖಲೆಗಳಲ್ಲಿ ಹೆಸರು (ಶ್ರೀ/ಶ್ರೀಮತಿ/ಕುಮಾರಿ) ಹೋಲಿಕೆ ಮಾಡಿಕೊಳ್ಳಬೇಕು.
ಸಾಲ ಮರುಪಾವತಿ ವಿಧಾನ
- ವ್ಯಾಸಂಗ ಪೂರ್ಣಗೊಂಡ ನಂತರ 1 ವರ್ಷದೊಳಗೆ ಅಥವಾ ಉದ್ಯೋಗ ದೊರೆತ 6 ತಿಂಗಳೊಳಗೆ ಮರುಪಾವತಿ ಪ್ರಾರಂಭವಾಗಬೇಕು.
- ಗರಿಷ್ಠ 60 ಮಾಸಿಕ ಕಂತುಗಳಲ್ಲಿ ಈ ಸಾಲವನ್ನು ಮರುಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ
- ನಿಗಮದ ಅಧಿಕೃತ ವೆಬ್ಸೈಟ್: https://dbcdc.karnataka.gov.in/kn