UAS Dharwad Engineer Recruitment 2025: ಕೃಷಿ ವಿಶ್ವವಿದ್ಯಾಲಯದಿಂದ ತಾತ್ಕಾಲಿಕ ಹುದ್ದೆಗಳ ನೇಮಕಾತಿ!
ಧಾರವಾಡ, ಜುಲೈ 2025 – ಕರ್ನಾಟಕದ ಹೆಸರಾಂತ ಕೃಷಿ ವಿಶ್ವವಿದ್ಯಾಲಯ, ಧಾರವಾಡ (UAS Dharwad) ತನ್ನ ವಿವಿಧ ಶಾಖೆಗಳಲ್ಲಿ (ಧಾರವಾಡ, ಶಿರಸಿ, ಹನುಮನಮಟ್ಟಿ, ಬಿಜಾಪುರ) ನಡೆಯುವ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳ ನಿರ್ವಹಣೆಗಾಗಿ ಅಲ್ಪಾವಧಿ ಸೇವೆಗೆ ತಾತ್ಕಾಲಿಕವಾಗಿ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಈ ನೇಮಕಾತಿ 179 ದಿನಗಳಿಗಷ್ಟೇ ಸೀಮಿತವಾಗಿದ್ದು, ಈ ಮೂಲಕ ಖಾಯಂ ನೇಮಕಾತಿಗೆ ಯಾವುದೇ ಹಕ್ಕು ಲಭ್ಯವಿಲ್ಲ. ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಇದನ್ನು ಓದಿ : Navy Recruitment 2025: ಭಾರತೀಯ ನೌಕಾಪಡೆ ಹೊಸ ನೇಮಕಾತಿ.! 1,097 ಖಾಲಿ ಹುದ್ದೆಗಳು, 10Th, PUC ಪಾಸಾದವರು ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರಗಳು (Total: 09 ಹುದ್ದೆಗಳು)
ಸಹಾಯಕ ಎಂಜಿನಿಯರ್ (ಸಿವಿಲ್) – 02 ಹುದ್ದೆಗಳು
- ಪದವಿ: ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಗ್ರಿ
- ಮೀಸಲಾತಿ: SC-1, GM-1
- ವೇತನ: ₹30,255.16
- ಅನುಭವ: estimate, drawing ನಲ್ಲಿ ಅನುಭವಿತ ಅಭ್ಯರ್ಥಿಗಳಿಗೆ ಆದ್ಯತೆ.
ಸಹಾಯಕ ಎಂಜಿನಿಯರ್ (ವಿದ್ಯುತ್) – 01 ಹುದ್ದೆ
- ಪದವಿ: ವಿದ್ಯುತ್ ಇಂಜಿನಿಯರಿಂಗ್‌ನಲ್ಲಿ ಡಿಗ್ರಿ
- ಮೀಸಲಾತಿ: SC-1
- ವೇತನ: ₹30,255.16
- ಅನುಭವ: ವಿದ್ಯುತ್ ಕಾಮಗಾರಿಗಳ ನಿರ್ವಹಣೆಯಲ್ಲಿ ಅನುಭವ ಇರುವವರು.
ಜೂನಿಯರ್ ಎಂಜಿನಿಯರ್ (ಸಿವಿಲ್) – 04 ಹುದ್ದೆಗಳು
- ಅರ್ಹತೆ: Diploma in Civil Engineering (3 ವರ್ಷ)
- ಮೀಸಲಾತಿ: SC-1, GM-1, ST-1, GM(W)-1
- ವೇತನ: ₹24,590.16
- ಅನುಭವ: estimate, drawing ವಿಭಾಗದಲ್ಲಿ ಅನುಭವ.
ಜೂನಿಯರ್ ಎಂಜಿನಿಯರ್ (ವಿದ್ಯುತ್) – 02 ಹುದ್ದೆಗಳು
- ಅರ್ಹತೆ: Diploma in Electrical Engineering
- ಮೀಸಲಾತಿ: SC-1, GM-1
- ವೇತನ: ₹24,590.16
- ಅನುಭವ: ವಿದ್ಯುತ್ ಕಾಮಗಾರಿಗಳ ಅನುಭವ.
ಇದನ್ನು ಓದಿ : ದಿನ ಭವಿಷ್ಯ: 12 ಜುಲೈ 2025 | ಇಂದು ಈ ರಾಶಿಯವರಿಗೆ ಶುಭದಿನ | Today Horoscope
ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಅರ್ಜಿ ನಮೂನೆ: ನಿಗದಿತ ಫಾರ್ಮಾಟ್‌ನಲ್ಲಿ ಎರಡು ಪ್ರತಿಗಳು.
- ಅರ್ಜಿ ಶುಲ್ಕ: ಇಲ್ಲ
- ದಾಖಲೆಗಳು: ಮೂಲ ಹಾಗೂ ನಕಲಿ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು.
- ದಾಖಲೆಗಳು: ವಿದ್ಯಾರ್ಹತೆ, ಅನುಭವ, ಜಾತಿ ಪ್ರಮಾಣಪತ್ರ ಇತ್ಯಾದಿ.
ಸಂದರ್ಶನ ವಿವರಗಳು
- ದಿನಾಂಕ: 18 ಜುಲೈ 2025
- ಸಮಯ: ಬೆಳಿಗ್ಗೆ 10:00 ಗಂಟೆಗೆ
- ಸ್ಥಳ: ಸಹ ಸಂಶೋಧನಾ ನಿರ್ದೇಶಕರ ಕಚೇರಿ, ಕೃಷಿ ವಿಶ್ವವಿದ್ಯಾಲಯ, ಧಾರವಾಡ
- TA/DA: ಲಭ್ಯವಿಲ್ಲ, ಅಭ್ಯರ್ಥಿಯೇ ಖರ್ಚು ಭರಿಸಬೇಕು.
ಆಯ್ಕೆ ವಿಧಾನ
1️ ಅರ್ಜಿ ಹಾಗೂ ದಾಖಲೆ ಪರಿಶೀಲನೆ
2️ ನೇರ ಸಂದರ್ಶನ
3️ ಅನುಭವ ಮತ್ತು ವಿದ್ಯಾರ್ಹತೆ ಆಧಾರಿತ ಆಯ್ಕೆ
4️ ತಾತ್ಕಾಲಿಕ ನಿಯಮಾನುಸಾರ ಸೇವೆಗೆ ಸೇರ್ಪಡೆ
ಇದನ್ನು ಓದಿ : Pension news ಪಿಂಚಣಿ ಹಣ ಬಿಡುಗಡೆ! ಹಳ್ಳಿವಾರು ಪಟ್ಟಿ ಬಿಡುಗಡೆ, ಈಗಲೇ ಪರಿಶೀಲನೆ ಮಾಡಿ?
ಪ್ರಮುಖ ದಿನಾಂಕಗಳು
- ಅಧಿಸೂಚನೆ ಪ್ರಕಟಣೆ: 16 ಮೇ 2025
- ಸಂದರ್ಶನ ದಿನಾಂಕ: 18 ಜುಲೈ 2025