RBI New Rule: ಸಾಲದಲ್ಲಿರುವವರಿಗೆ ಸಿಹಿ ಸುದ್ದಿ! ಆರ್‌ಬಿಐನ ಹೊಸ ತೀರ್ಮಾನ!
RBI – ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ಬೆಳಿಗ್ಗೆ ದೊಡ್ಡದೊಂದು ಜನಪರ ತೀರ್ಮಾನ ಪ್ರಕಟಿಸಿದೆ. ಈಗಾಗಲೇ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ವಾಣಿಜ್ಯ ಉದ್ದೇಶದ ಸಾಲ ಪಡೆದಿರುವವರು, ತಮ್ಮ ಸಾಲವನ್ನು ಅವಧಿಗೆ ಮುನ್ನ ಮರುಪಾವತಿಸಿದರೆ (Prepayment), ಅವರಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲು ಯಾವುದೇ ಸಂಸ್ಥೆಗೆ ಅನುಮತಿ ಇರುವುದಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ.
ಯಾರಿಗೆ ಲಾಭ?
ಈ ಹೊಸ ನಿಯಮವು ಮುಖ್ಯವಾಗಿ MSME (ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ)ಗಳಿಗೆ ಹಾಗೂ ಸಾಮಾನ್ಯ ಗ್ರಾಹಕರಿಗೆ ಅನುಕೂಲ ತರಲಿದೆ. ಆಗಾಗ ಬ್ಯಾಂಕ್‌ಗಳು ಅಥವಾ NBFCಗಳು (ನಾನ್-ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು) ತಮ್ಮ ಷರತ್ತುಗಳ ಆಧಾರದ ಮೇಲೆ ಸಾಲ ಮೊತ್ತವನ್ನು ಮುಂಚಿತವಾಗಿ ತೀರಿಸಿದವರಿಗೆ ‘ಪ್ರೀಪೇಮೆಂಟ್ ಚಾರ್ಜ್’ಗಳನ್ನ ವಿಧಿಸುತ್ತಿದ್ದವು. ಆದರೆ ಈ ತೀರ್ಮಾನದ ಜಾರಿಗೆ ಅಷ್ಟೆಲ್ಲಾ ವೆಚ್ಚಗಳು ಇಲ್ಲವಾಗಲಿದೆ.
ಯಾವ ಯಾವ ಬ್ಯಾಂಕ್‌ಗಳಿಗೆ ಅನ್ವಯಿಸುತ್ತದೆ?
ಈ ಹೊಸ ನಿಯಮವು ಕೆಳಗಿನ ಎಲ್ಲ ಸಂಸ್ಥೆಗಳಿಗೆ ಅನ್ವಯಿಸುತ್ತದೆ:
- ವಾಣಿಜ್ಯ ಬ್ಯಾಂಕ್‌ಗಳು
- ಎನ್‌ಬಿಎಫ್‌ಸಿಗಳು
- ಪ್ರಾಥಮಿಕ ಸಹಕಾರ ಬ್ಯಾಂಕ್‌ಗಳು
- ಕಿರು ಹಣಕಾಸು ಬ್ಯಾಂಕ್‌ಗಳು
- ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು
- ₹50 ಲಕ್ಷದವರೆಗೆ ಅನುಮೋದಿತ ಸಾಲ ನೀಡುವ ಎಲ್ಲಾ ಸಂಘಗಳು
ಇತ್ತೀಚೆಗೆ ನಡೆದ ಪರಿಶೀಲನೆಗಳಲ್ಲಿ ಕೆಲವೊಂದು ಬ್ಯಾಂಕ್‌ಗಳು ಗ್ರಾಹಕರ ಮೇಲೆ ಅಪ್ರಾಮಾಣಿಕ ಷರತ್ತುಗಳನ್ನು ಹೇರುತ್ತಿರುವುದು ಗಮನಕ್ಕೆ ಬಂತು. ಇದರಿಂದ ಸಾಲಗಾರರು ತಮ್ಮ ಸಾಲವನ್ನು ಮುಂಚಿತವಾಗಿ ತೀರಿಸುವಾಗ ಅನಾವಶ್ಯಕವಾಗಿ ದಂಡ ಭರಿಸುತ್ತಿದ್ದರು. ಈ ಅನ್ಯಾಯಕ್ಕೆ ತಕ್ಕ ಪ್ರತಿಕ್ರಿಯೆಯಾಗಿ, ಆರ್‌ಬಿಐ ಜನರಿಂದ ಸಲಹೆಗಳನ್ನು ಆಹ್ವಾನಿಸಿ, ಸಾರ್ವಜನಿಕ ಅಭಿಪ್ರಾಯದ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದೆ.
ಯಾಕೆ ಇದು ಮಹತ್ವದ ತೀರ್ಮಾನ?
ಈ ತೀರ್ಮಾನದಿಂದ
- ಸಾಲಗಾರರ ಮೇಲೆ ಆರ್ಥಿಕ ಒತ್ತಡ ಇಳಿಯುತ್ತದೆ
- MSMEಗಳು ಬೇಗನೆ ಸಾಲ ಮುಗಿಸಿ ಹೊಸ ಯೋಜನೆಗೆ ಬಂಡವಾಳ ಬಳಸಿ ಅಭಿವೃದ್ಧಿ ಸಾಧಿಸಬಹುದು
- ಕಾನೂನು ವ್ಯಾಜ್ಯಗಳು ಕಡಿಮೆಯಾಗಬಹುದು
- ಸಾಲವನ್ನು ಶಿಸ್ತುತನದಿಂದ ತೀರಿಸಲು ಪ್ರೋತ್ಸಾಹ ಸಿಗುತ್ತದೆ
ಈ ತೀರ್ಮಾನವು ಹೊಸ ಉದ್ಯಮ ಆರಂಭಿಸುವ ಯುವಕರು, ವಿಶೇಷವಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಅನುಕೂಲ. ತ್ವರಿತ ಸಾಲ ತೀರಿಕೆ ಮಾಡಬಲ್ಲ ಸಾಧ್ಯತೆ ಇದರಿಂದ ಲಾಭವಾಗಲಿದೆ..