Posted in

Finance Student Scholarship:  2025-26ನೇ ಸಾಲಿನ ವಿದ್ಯಾರ್ಥಿಗಳಿಗೆ ₹5.50 ಲಕ್ಷದವರೆಗೆ ಸ್ಕಾಲರ್‌ಶಿಪ್ – ಇಂದುಲೇ ಅರ್ಜಿ ಸಲ್ಲಿಸಿ!

Finance Student Scholarship

Finance Student Scholarship:  2025-26ನೇ ಸಾಲಿನ ವಿದ್ಯಾರ್ಥಿಗಳಿಗೆ ₹5.50 ಲಕ್ಷದವರೆಗೆ ಸ್ಕಾಲರ್‌ಶಿಪ್ – ಇಂದುಲೇ ಅರ್ಜಿ ಸಲ್ಲಿಸಿ!

Finance Student Scholarship : ಹಣಕಾಸು ಕ್ಷೇತ್ರದಲ್ಲಿ ಪದವಿ ಪಡೆದಿರುವ ಅಥವಾ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್ (Hero Group Foundation) ನಿಂದ ಭರ್ಜರಿ ಸ್ಕಾಲರ್‌ಶಿಪ್ ಅವಕಾಶ ದೊರೆಯಲಿದೆ. ಭಾರತದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯ ಮಾಡುವ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು, ಹಣದ ಕೊರತೆಯಿಂದ ಹಿಂಜರಿಯದಂತೆ ನೆರವು ನೀಡುವುದು ಇದರ ಗುರಿಯಾಗಿದೆ.

Finance Student Scholarship

WhatsApp Group Join Now
Telegram Group Join Now       

ಇದನ್ನು ಓದಿ : personal Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುವ 5 ಬ್ಯಾಂಕುಗಳ ವಿವರ

ಯಾರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಬಹುದು?

ಫೈನಾನ್ಸ್ ಸಂಬಂಧಿತ ಕೋರ್ಸ್‌ಗಳಲ್ಲಿ (ಅರ್ಥಶಾಸ್ತ್ರ, BBA, B.Com, BFIA, BMS, BBS, IPM) ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಅರ್ಜಿ ಹಾಕುವ ಮುನ್ನ ಈ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ:

  • ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು
  • 10ನೇ ಮತ್ತು 12ನೇ ತರಗತಿಯಲ್ಲಿ ಕನಿಷ್ಠ 80% ಅಂಕಗಳು (ಅಂಗವೈಕಲ್ಯ ವಿದ್ಯಾರ್ಥಿಗಳಿಗೆ 70%)
  • ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷಕ್ಕಿಂತ ಕಡಿಮೆ ಇರಬೇಕು
  • Hero FinCorp ಅಥವಾ Raman Kant Munjal Foundation ಉದ್ಯೋಗಿಗಳ ಮಕ್ಕಳು ಅರ್ಹರಾಗಿಲ್ಲ
  • ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಫೈನಾನ್ಸ್ ಕ್ಷೇತ್ರದ ಕೋರ್ಸ್‌ಗೆ ಪ್ರವೇಶ ಪಡೆದಿರಬೇಕು

 ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಮೂರು ವರ್ಷಗಳವರೆಗೆ ವರ್ಷಕ್ಕೆ ₹40,000 ರಿಂದ ₹5,50,000 ರವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ಮೊತ್ತವು ವಿದ್ಯಾರ್ಥಿಯ ಪಾಠ್ಯಕ್ರಮ, ಶೈಕ್ಷಣಿಕ ಸಾಧನೆ ಮತ್ತು ಹಣಕಾಸು ಪರಿಸ್ಥಿತಿಯನ್ನು ಆಧರಿಸಿ ನಿಗದಿಯಾಗುತ್ತದೆ.

ಇದನ್ನು ಓದಿ : SSP Scholarship Application: SSP ಸ್ಕಾಲರ್ಷಿಪ್ ಅರ್ಜಿ ಪ್ರಾರಂಭ.! ಬೇಗ ವಿದ್ಯಾರ್ಥಿಗಳು ಈ ರೀತಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

30 ಜುಲೈ 2025 – ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಅಂತಿಮ ದಿನಾಂಕವನ್ನು ತಪ್ಪಿಸಬೇಡಿ!

ಅರ್ಜಿ ಸಲ್ಲಿಸುವ ವಿಧಾನ ಆನ್‌ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ. ಕೆಳಗಿನ ಹಂತಗಳನ್ನು ಅನುಸರಿಸಿ

Apply Now ಲಿಂಕ್ ಕ್ಲಿಕ್ ಮಾಡಿ Buddy4Study Website ಗೆ ಹೋಗಿ

  1. ಹೊಸ ಉಪಯೋಗದಾರರಾಗಿದ್ದರೆ “Create an Account” ಮೂಲಕ ಖಾತೆ ರಚಿಸಿ
  2. ಲಾಗಿನ್ ಆಗಿ ಅರ್ಜಿ ಫಾರ್ಮ್ ಭರ್ತಿ ಮಾಡಿ
  3. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  4. Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ಅಗತ್ಯ ದಾಖಲೆಗಳ ಪಟ್ಟಿ

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್
  • 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಪಾಸ್ಪೋರ್ಟ್ ಸೈಜ್ ಫೋಟೋ
  • ಆದಾಯ ಪ್ರಮಾಣ ಪತ್ರ
  • ಕಾಲೇಜು ಪ್ರವೇಶ ಪ್ರಮಾಣ ಪತ್ರ/ಸ್ಟಡಿ ಸೆರ್ಟಿಫಿಕೇಟ್

Buddy4Study ವೆಬ್‌ಸೈಟ್‌ನಲ್ಲಿ ಸೂಚಿಸಿರುವ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕಾಲೇಜು ಪಟ್ಟಿ ಹೊಂದಿದೆಯೇ ಎಂಬುದನ್ನು ಪರಿಶೀಲಿಸಿ.

ಈ ವಿದ್ಯಾರ್ಥಿವೇತನವು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ನಂಬಲಾಗದ ಅವಕಾಶ. ಆದ್ದರಿಂದ ಅರ್ಜಿ ಸಲ್ಲಿಸಲು ಇನ್ನೂ ಕಾಯಬೇಡಿ – ಇಂದುಲೇ ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ!

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>