Rajiv Gandhi Housing Scheme Karnataka:- ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯನವರು ಹಾಗೂ ನಮ್ಮ ರಾಜ್ಯದ ವಸತಿ ಸಚಿವರಾದಂತ ಜಮೀರ್ ಅಹ್ಮದ್ ಖಾನ್ ಅವರು ಒಂದು ಹೇಳಿಕೆ ನೀಡಿದರು ವಸತಿ ಯೋಜನೆಯ ಮೂಲಕ ಅಥವಾ ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿದ್ದರು
ಗಂಗಾ ಕಲ್ಯಾಣ ಯೋಜನೆ ಅರ್ಜಿ ಪ್ರಾರಂಭ..! ಅರ್ಜಿ ಸಲ್ಲಿಸಿದ ರೈತರಿಗೆ ಸಿಗಲಿದೆ 4,50,000 ಬೇಗ ಅರ್ಜಿ ಸಲ್ಲಿಸಿ
ಹಾಗಾಗಿ ನೀವೇನಾದರೂ ರಾಜೀವ್ ಗಾಂಧಿ ಆವಾಸ್ ಯೋಜನೆಯ ಮೂಲಕ ಮನೆ ಕಟ್ಟಿಸಿಕೊಳ್ಳಬೇಕು ಎಂದುಕೊಂಡಿದ್ದರೆ ಅರ್ಜಿ ಪ್ರಾರಂಭವಾಗಿದ್ದು ಮತ್ತು ಈ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಈ ಹಿಂದೆ 5 ಲಕ್ಷ ಹಣ ನೀಡಲಾಗುತ್ತಿತ್ತು ಜೊತೆಗೆ ಒಂದು ಲಕ್ಷ ರೂಪಾಯಿ ಫಲಾನುಭವಿಗಳು ಬರಿಸಬೇಕಾಗಿತ್ತು. ಒಟ್ಟು 6 ಲಕ್ಷ ರೂಪಾಯಿ ಈ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಲು ಹಣ ಸಾಹೇ ಸಿಗುತ್ತಿತ್ತು ಆದರೆ ಈಗ ವಸತಿ ಸಚಿವರು ನೀಡಿರುವ ಮಾಹಿತಿ ಪ್ರಕಾರ ಆ ಒಂದು ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ಬರಿಸಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಸುಮಾರು 151.56 ಕೋಟಿ ರೂಪಾಯಿ ಹಣ ಮೀಸಲಾಗಿ ಇಡಲಾಗಿದೆ ಎಂಬ ಮಾಹಿತಿಯನ್ನು ಜಮೀರ್ ಅಹ್ಮದ್ ಖಾನ್ ಅವರು ಹಂಚಿಕೊಂಡಿದ್ದಾರೆ
ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme Karnataka)..?
ಹೌದು ಸ್ನೇಹಿತರೆ ಇದು ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವಂತ ಒಂದು ಯೋಜನೆಯಾಗಿದ್ದು ಈ ಯೋಜನೆ ಮೂಲಕ ಹಿಂದುಳಿದ ವರ್ಗದವರು ಹಾಗೂ ಬಡವರಿಗೆ ಉಚಿತವಾಗಿ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ಸಹಾಯ ನೀಡುವಂತೆ ಯೋಜನೆಯಾಗಿದೆ ಹಾಗಾಗಿ ಈಗ ಮತ್ತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯನವರು ಈ ಯೋಜನೆ ಮೂಲಕ ಸುಮಾರು ನಮ್ಮ ಕರ್ನಾಟಕದಲ್ಲಿ 1 ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡಿದ್ದಾರೆ
ಹಾಗಾಗಿ ಈ ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಅರ್ಜಿ ಪ್ರಾರಂಭವಾಯಿತು ಆಸಕ್ತಿ ಉಳ್ಳಂತವರು ಅರ್ಜಿ ಸಲ್ಲಿಸಬಹುದು ಆದರೆ ಇಲ್ಲಿ ಗಮನಿಸಬೇಕಾದಂತ ಅಂಶವೇನೆಂದರೆ ಈ ಯೋಜನೆ ಅಡಿಯಲ್ಲಿ ಕೇವಲ ಬೆಂಗಳೂರಿನಲ್ಲಿ ಇರುವಂತಹ ಜನರು ಮಾತ್ರ ಅರ್ಜಿ ಸಲ್ಲಿಸಲು ಈಗ ಸದ್ಯ ಅವಕಾಶ ಮಾಡಿಕೊಡಲಾಗಿದ್ದು ಮುಂದೆ ಬರುವಂತ ದಿನಗಳಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ಜನರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ
ಹೌದು ಸ್ನೇಹಿತರೆ ಬೆಂಗಳೂರಿನಲ್ಲಿರುವಂತ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಈ ಯೋಜನೆ ಅಡಿಯಲ್ಲಿ 1BHK & 2BHK ಮನೆ ಕಟ್ಟಿಸಲು ಅರ್ಜಿ ಹಾಕಲು ಅವಕಾಶವಿದೆ ಆದ್ದರಿಂದ ಬೆಂಗಳೂರಿನಲ್ಲಿರುವ ಪ್ರತಿಯೊಬ್ಬರು ಈ ಯೋಜನೆಗೆ ಆದಷ್ಟು ಅರ್ಜಿ ಸಲ್ಲಿಸಲು ಪ್ರಯತ್ನಿಸಿ ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳು ಇರಬೇಕು ಎಂದು ಲೇಖನಿಯ ಮುಂದಿನ ಭಾಗದಲ್ಲಿ ತಿಳಿಸಲಾಗಿದೆ
ಮನೆ ಕಟ್ಟಿಸಲು ಹಣ ಸಹಾಯ ಎಷ್ಟು ಸಿಗುತ್ತದೆ (Rajiv Gandhi Housing Scheme Karnataka)..?
ರಾಜೀವ್ ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ಹಿಂದೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮನೆ ಕಟ್ಟಿಸಿಕೊಳ್ಳಲು 5 ಲಕ್ಷ ವರೆಗೆ ಆರ್ಥಿಕ ಸಹಾಯವನ್ನು ನೀಡುತ್ತಿತ್ತು ಮತ್ತು ಫಲಾನುಭವಿಗಳು ಒಂದು ಲಕ್ಷ ರೂಪಾಯಿ ಹಣವನ್ನು ಮನೆ ಕಟ್ಟಿಸಿಕೊಳ್ಳಲು ಬರಿಸಬೇಕಾಗಿತ್ತು. ಆದರೆ ಸದ್ಯ ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿರುವ ಪ್ರಕಾರ ಆ ಒಂದು ಲಕ್ಷ ರೂಪಾಯಿ ಹಣವನ್ನು ಕೂಡ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಬರಿಸುತ್ತೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ರಾಜೀವ್ ಗಾಂಧಿ ಆವಾಸ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಮನೆ ಕಟ್ಟಿಸಿಕೊಳ್ಳಲು 6 ಲಕ್ಷ ರೂಪಾಯಿವರೆಗೆ ಅನಸಾಯ ಸಿಗುತ್ತದೆ
ಈ ಯೋಜನೆಗೆ (Rajiv Gandhi Housing Scheme Karnataka) ಯಾರು ಅರ್ಜಿ ಸಲ್ಲಿಸಬಹುದು..?
- ಸ್ನೇಹಿತರೆ ಈ ರಾಜೀವ್ ಗಾಂಧಿ ಆವಾಸ್ ಯೋಜನೆಗೆ ಕರ್ನಾಟಕದ ಖಾಯಂ ನಿವಹಿಸಿಗಳು ಅರ್ಜಿ ಸಲ್ಲಿಸಬಹುದು
- ಮತ್ತು ಬೆಂಗಳೂರಿನಲ್ಲಿ ಕನಿಷ್ಠ 5 ವರ್ಷಗಳ ಕಾಲ ವಾಸ ಮಾಡಿರಬೇಕು ಅಂತವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
- ರಾಜೀವ್ ಗಾಂಧಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಬಿಪಿಎಲ್ ಅಥವಾ ಅಂಥೋದಯ ರೇಷನ್ ಕಾರ್ಡ್ ಹೊಂದಿರಬೇಕು
- ಈ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ಸಹಾಯ ಪಡೆಯಬೇಕಾದರೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 87 ಸಾವಿರ ರೂಪಾಯಿಗಿಂತ ಕಡಿಮೆ ಇರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಈ ಹಿಂದೆ ಯಾವುದೇ ರೀತಿ ವಸತಿ ಯೋಜನೆಯ ಲಾಭ ಪಡೆದಿರಬಾರದು
ಅರ್ಜಿ ಸಲ್ಲಿಸಲು (Rajiv Gandhi Housing Scheme Karnataka) ಬೇಕಾಗುವ ದಾಖಲಾತಿಗಳು..?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವಾಸಸ್ಥಳ ಪ್ರಮಾಣ ಪತ್ರ
ರಾಜೀವ್ ಗಾಂಧಿ ವಸತಿ ಯೋಜನೆ )Rajiv Gandhi Housing Scheme Karnataka) ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದೀರಾ ಮತ್ತು ನಿಮಗೆ ರಾಜೀವ್ ಗಾಂಧಿ ಆವಾಸ್ ಯೋಜನೆ ಮೂಲಕ 6 ಲಕ್ಷ ರೂಪಾಯಿ ಹಣ ಸಹಾಯ ಪಡೆಯಬೇಕು ಅಂದುಕೊಂಡಿದ್ದೀರಾ ಹಾಗಾದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ರಾಜೀವ್ ಗಾಂಧಿ ಆವಾಸ್ ಯೋಜನೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಮೇಲೆ ನೀಡಿದಂತ ಲಿಂಕ್ ರಾಜೀವ್ ಗಾಂಧಿ ಆವಾಸ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತದೆ ನಂತರ ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಈ ರಾಜೀವ್ ಗಾಂಧಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಇದೇ ರೀತಿ ಹೊಸ ಹೊಸ ಸುದ್ದಿಗಳು ಹಾಗೂ ರಾಜ್ಯ ಸರಕಾರದ ವಿವಿಧ ರೀತಿ ಯೋಜನೆಗಳು ಮತ್ತು ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಬೇಕೆ ಹಾಗಾದರೆ ನೀವು ನಮ್ಮ WhatsApp & Telegram ಚಾನಲ್ಗಳಿಗೆ ಜಾಯಿನ್ ಆಗಬೇಕು ದಯವಿಟ್ಟು ಪ್ರತಿಯೊಬ್ಬರು ಜಾಯಿನ್ ಆಗಲು ಪ್ರಯತ್ನ ಮಾಡಿ