udyogini women loan scheme: ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲ ಮತ್ತು 1.5 ಲಕ್ಷ ಸಬ್ಸಿಡಿ ಹಣ ಸಿಗುತ್ತೆ..! ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

udyogini women loan scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿ ಮಾಡಲು ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಉದ್ಯೋಗಿನಿ ಯೋಜನೆ ಜಾರಿಗೆ ತರಲಾಗಿದೆ.

ಈ ದಿನ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ಇಲ್ಲಿದೆ ಮಾಹಿತಿ

ಈ ಯೋಜನೆ ಮೂಲಕ ಮಹಿಳೆಯರಿಗೆ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುತ್ತದೆ ಮತ್ತು ಇದರಲ್ಲಿ ವಿಶೇಷ ವರ್ಗದ ಮಹಿಳೆಯರಿಗೆ ಶೇಕಡ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ ಅಂದರೆ ಸುಮಾರು ರೂ.1,50,000ವರೆಗೆ ಸಾಲ ಮನ್ನಾ ಮಾಡಲಾಗುತ್ತದೆ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ ಸುಮಾರು 90 ಸಾವಿರ ರೂಪಾಯಿವರೆಗೆ ಸಾಲ ಮನ್ನಾ ಮಾಡಲಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ತಿಳಿದುಕೊಳ್ಳೋಣ

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಪ್ರಾರಂಭ ಈ ರೀತಿ ಅರ್ಜಿ ಸಲ್ಲಿಸಬಹುದು ಇಲ್ಲಿನ ಮಾಹಿತಿ

 

ಉದ್ಯೋಗಿನಿ ಯೋಜನೆ (udyogini women loan scheme)…?

ಹೌದು ಸ್ನೇಹಿತರೆ, ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳುವ ಹಾಗೂ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳುವ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಹಾಗೂ ವಿಶೇಷ ಮಹಿಳೆಯರಿಗೆ ಮೂರು ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುತ್ತದೆ ಇದರಿಂದ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ಹಾಗೂ ಸ್ವಯಂ ಉದ್ಯೋಗವನ್ನು ಉತ್ತೇಜನ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿದೆ

WhatsApp Group Join Now
Telegram Group Join Now       
udyogini women loan scheme
udyogini women loan scheme

 

ಉದ್ಯೋಗಿನಿ ಯೋಜನೆಯ ವಿಶೇಷತೆ ಏನು (udyogini women loan scheme)…?

ಸ್ನೇಹಿತರೆ ಈ ಯೋಜನೆಯಲ್ಲಿ ಸಾಮಾನ್ಯ ವರ್ಗದ ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗದ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಈ ಯೋಜನೆಯ ಮೂಲಕ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿದರ ಇಲ್ಲದೆ ಸಾಲ ನೀಡಲಾಗುತ್ತದೆ.

WhatsApp Group Join Now
Telegram Group Join Now       

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇಕಡ 50ರಷ್ಟು ಸಾಲದ ಮೇಲೆ ಸಬ್ಸಿಡಿ ನೀಡಲಾಗುತ್ತದೆ ಅಂದರೆ ಸುಮಾರು 1,50,000 ವರೆಗೂ ಸಾಲ ಮನ್ನಾ ಆಗುವ ಸಾಧ್ಯತೆ ಇರುತ್ತದೆ.

ಸಾಮಾನ್ಯ ವರ್ಗದ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಶೇಕಡ 30ರಷ್ಟು ಅಂದರೆ ಗರಿಷ್ಠ 90 ಸಾವಿರ ರೂಪಾಯಿವರೆಗೆ ಸಬ್ಸಿಡಿ ಹಣ ಸಿಗುತ್ತದೆ ಅಥವಾ ಸಾಲ ಮನ್ನಾ ಆಗುತ್ತದೆ

ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಈ ಯೋಜನೆ ಮೂಲಕ ಸ್ವಂತ ಉದ್ಯೋಗಕ್ಕಾಗಿ ಘಟಕದ ವೆಚ್ಚ ಒಂದು ಲಕ್ಷದಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು

 

ಈ ಯೋಜನೆಗೆ (udyogini women loan scheme) ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು..?

  • ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರ ವಾರ್ಷಿಕ ಆದಾಯ 1,56,000 ಕ್ಕಿಂತ ಕಡಿಮೆ ಇರಬೇಕು
  • ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಕುಟುಂಬದ ವಾರ್ಷಿಕ ಆದಾಯದ ಯಾವುದೇ ಮಿತಿ ಇಲ್ಲ
  • ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅರ್ಜಿದಾರರಿಗೆ ಕನಿಷ್ಠ 18ರಿಂದ 55 ವರ್ಷದ ಒಳಗಿನ ನಡುವೆ ಇರುವವರಿಗೆ ಮಾತ್ರ ಅವಕಾಶ
  • ಅರ್ಜಿ ಸಲ್ಲಿಸುವ ಮಹಿಳೆ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
  • ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಈ ಹಿಂದೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಅಡಿಯಲ್ಲಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆದಿರಬಾರದು

 

ಉದ್ಯೋಗಿನಿ ಯೋಜನೆಯಲ್ಲಿ (udyogini women loan scheme) ಅರ್ಜಿ ಸಲ್ಲಿಸಿದ ಈ ವರ್ಗದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ..?

  • ಅತ್ಯಂತ ಬಡವರು, ನಿರ್ಗತಿಕರು, ಅಂಗವಿಕಲರು, ವಿದುವೆ ಮಹಿಳೆಯರು, ಹಾಗೂ ST & SC ಮಹಿಳೆಯರಿಗೆ ಹೆಚ್ಚಿನ ಆದ್ಯತೆ.
  • ಹೆಚ್ಚಾಗಿ ಯಾವುದೇ KSWDC ಇಲಾಖೆ ಅಥವಾ ಇತರ ಯಾವುದೇ ಇಲಾಖೆಯಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆದ ಅಥವಾ ವೃತ್ತಿಪರ ಯಾವುದೇ ತರಬೇತಿ ಪಡೆದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
  • ವಿಶ್ವ ಬ್ಯಾಂಕ್ ನೆರವಿನ ಸ್ತ್ರೀ ಶಕ್ತಿ & ಸ್ವಶಕ್ತಿ ಸಂಘ-ಸಂಸ್ಥೆಗಳ ಅಥವಾ ಇತರ ಯಾವುದೇ ಗುಂಪುಗಳ ಸದಸ್ಯರ ಅರ್ಜಿದಾರರಿಗೆ ಅನುಕೂಲ ವಾಗುವಂತೆ ಈ ಯೋಜನೆಯೆಲ್ಲಿ ಶೇಕಡ 10 ರಷ್ಟು ಮೀಸಲಾತಿ ನೀಡಲಾಗುತ್ತದೆ

 

ಉದ್ಯೋಗಿನಿ ಯೋಜನೆಗೆ (udyogini women loan scheme) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಶಾಲಾ ವರ್ಗಾವಣೆ ಪ್ರಮಾಣ ಪತ್ರ
  • ಯೋಜನೆ ವರದಿ
  • ಅಂಗವಿಕಲರು ಅಥವಾ ವಿಧವೆಯರು ಅಥವಾ ವಿಶೇಷ ವರ್ಗದ ಮಹಿಳೆಯರು ಅರ್ಜಿ ಸಲ್ಲಿಸುವಂಥವರು ಯಾವುದಾದರೂ ಪ್ರಮಾಣ ಪತ್ರ ಲಗತಿಸಬೇಕು

 

ಉದ್ಯೋಗಿನಿ ಯೋಜನೆಗೆ ಅರ್ಜಿ (udyogini women loan scheme) ಸಲ್ಲಿಸುವುದು ಹೇಗೆ…?

ಸ್ನೇಹಿತರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದರೆ ಪ್ರತಿ ವರ್ಷ ನಮ್ಮ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರತಿ ವರ್ಷ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಅರ್ಜಿ ಕರೆಯಲಾಗುತ್ತದೆ ಹಾಗಾಗಿ ಆಸಕ್ತಿ ಉಳ್ಳವರು ಈ ತಿಂಗಳಿನಲ್ಲಿ ಆನ್ಲೈನ್ ಮೂಲಕ ಅಥವಾ ಕರ್ನಾಟಕ ಸೇವಾ ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಅಧಿಕೃತ ವೆಬ್ಸೈಟ್ ಲಿಂಕ್

 

ಹೆಚ್ಚಿನ ಮಾಹಿತಿಗಾಗಿ:- ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು ಅಥವಾ ನಿಮ್ಮ ಜಿಲ್ಲೆಗಳಿಗೆ ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು

Leave a Comment