Teacher Recruitment:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ಯೆಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಬೇತಿ ನೀಡುವ ಅಥವಾ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗಳಲ್ಲಿ LKG & UKG ತರಗತಿಗಳನ್ನು ಪ್ರಾರಂಭ ಮಾಡುತ್ತಿದ್ದು ಈ ತರಗತಿಗಳಿಗೆ ಶಿಕ್ಷಕರು ಹಾಗೂ ಸಿಬ್ಬಂದಿಗಳ ನೇಮಕಾತಿ ಮಾಡಲು ನಿರ್ಧಾರ ಮಾಡಿದೆ ಹಾಗಾಗಿ ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ಲೇಖನಿಯಲ್ಲಿ ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಚಲಿತ ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ಪ್ರತಿಯೊಂದು ಮಾಹಿತಿ ನೀವು ಬೇಗ ಪಡೆಯಬೇಕು ಅಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
LKG, UKG ಶಿಕ್ಷಕರು ಮತ್ತು ಸಿಬ್ಬಂದಿಗಳ (Teacher Recruitment) ನೇಮಕಾತಿ…?
ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನೆ ನಿರ್ದೇಶಕರು ನಮ್ಮ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಉದ್ದೇಶದಿಂದ ಅಂದರೆ ಈಗಾಗಲೇ ಪ್ರೈವೇಟ್ ಸಂಸ್ಥೆಗಳು ಆರಂಭಿಸಿರುವಂತೆ LKG & UKG ಶಿಕ್ಷಣ ತರಬೇತಿ ಮಕ್ಕಳಿಗೆ ನೀಡುವ ರೀತಿಯಲ್ಲಿ ಇದೇ ಮಾದರಿ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ನೀಡುವ ಉದ್ದೇಶದಿಂದ ನಮ್ಮ ಸರಕಾರಿ ಶಾಲೆಗಳಲ್ಲಿ LKG UKG ತರಗತಿಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಕಡೆಯಿಂದ ಅನುಮತಿ
ಈ ಉದ್ದೇಶದಿಂದ ನಮ್ಮ ರಾಜ್ಯ ಸರ್ಕಾರ ಈ ಬಗ್ಗೆ ಸಾಕಷ್ಟು ಸಮೀಕ್ಷೆಗಳು & ಉನ್ನತ ಶಿಕ್ಷಣ ತಜ್ಞರ ಹತ್ತಿರ ಚರ್ಚೆ ಮಾಡಿ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ತಿಳುವಳಿಕೆ ನೀಡುವ ಉದ್ದೇಶದಿಂದ ಸರಕಾರಿ ಶಾಲೆಗಳಲ್ಲಿ LKG UKG ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ
ಕಲ್ಯಾಣಿ ಕರ್ನಾಟಕ ಭಾಗಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಸುಮಾರು ನಮ್ಮ ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು 578 ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಅಂದರೆ LKG ಮತ್ತು UKG ತರಗತಿ ಪ್ರಾರಂಭಿಸಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ ಮತ್ತು ಈ ತರಗತಿಗಳಿಗೆ ಶಿಕ್ಷಕರು ಮತ್ತು ಸಿಬ್ಬಂದಿಗಳ ಕೊರತೆ ಉಂಟಾಗಿದ್ದು ಈ ದೃಷ್ಟಿಯಿಂದ ಸರ್ಕಾರ ಕಡೆಯಿಂದ LKG & UKG ಶಿಕ್ಷಕರು ಹಾಗೂ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಕಡೆಯಿಂದ ಮಾಹಿತಿ ಬಂದಿದೆ
LKG & UKG ಶಿಕ್ಷಕರು ಮತ್ತು ಸಿಬ್ಬಂದಿಗಳ (Teacher Recruitment) ನೇಮಕಾತಿ ಘೋಷಣೆ..?
ಹೌದು ಸ್ನೇಹಿತರೆ ಅತಿ ಶೀಘ್ರದಲ್ಲೇ LKG & UKG ತರಗತಿಗಳಿಗೆ ಬೋಧನೆ ಮಾಡಲು ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳಾದಂತ ಡಿಕೆ ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತ ಲಕ್ಷ್ಮಿ ಹೆಬ್ಬಾಳಕರ್ ಅವರು ಈ ಬಗ್ಗೆ ಅಧಿಕೃತ ಪ್ರೆಸ್ ಮೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ ಜೊತೆಗೆ ಈ ಹುದ್ದೆಗಳಿಗೆ ನೇಮಕಾತಿಗೊಂಡ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಸರ್ಕಾರ ಕಡೆಯಿಂದ ಗೌರವ ಧನ ನೀಡುವುದು ಹಾಗೂ ಅರ್ಜಿ ಸಲ್ಲಿಸಲು ಕೆಲವೊಂದು ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಅವುಗಳ ಬಗ್ಗೆ ಪೂರ್ತಿ ವಿವರವನ್ನು ನಾವು ಕೆಳಗಡೆ ಕೊಟ್ಟಿದ್ದೇವೆ
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ನಮ್ಮ ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದ್ದು 2024ನೇ ಸಾಲಿನಲ್ಲಿ ಸುಮಾರು 162 ಶಾಲೆಗಳು ಹಾಗೂ ಪ್ರಸ್ತುತ ದಿನದಲ್ಲಿ 316 ಶಾಲೆಗಳನ್ನು ತೆರೆಯಲು ನಮ್ಮ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಲಾಗಿದ್ದು ಒಟ್ಟು 578 ಶಾಲೆಗಳಲ್ಲಿ ಈ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಲು ಸರ್ಕಾರ ತಯಾರಿ ನಡೆಸಿದೆ
LKG UKG ಶಿಕ್ಷಕರು ಮತ್ತು ಸಿಬ್ಬಂದಿಗಳು(Teacher Recruitment) ಅರ್ಜಿ ಸಲ್ಲಿಸಲು ಇರುವ ಅರ್ಹತೆ ಮತ್ತು ಮಾನದಂಡಗಳು…?
- LKG, UKG ಈ ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಕಡ್ಡಾಯವಾಗಿ 2nd ಪಿಯುಸಿಯಲ್ಲಿ ಕನಿಷ್ಠ 45ರಷ್ಟು ಅಂಕ ಗಳಿಸಿ ಉತ್ತೀರ್ಣರಾಗಿರಬೇಕು
- NCET ಇಂದ ಮಾನ್ಯತೆ ಪಡೆದ ಯಾವುದೇ ಅಧಿಕೃತ ಶಿಕ್ಷಣ ಸಂಸ್ಥೆಯಿಂದ ಎರಡರಿಂದ ಮೂರು ವರ್ಷಗಳ ಕಾಲ ಡಿಪ್ಲೋಮೋ ಇನ್ ನರ್ಸರಿ ಇನ್ಸ್ಟಿಟ್ಯೂಟ್ ಎಜುಕೇಶನ್/B.ED or DECED & ಡಿಪ್ಲೋಮಾ ಇನ್ ಫ್ರೀ ಸ್ಕೂಲ್ ಎಜುಕೇಶನ್ ಮಾಡಿದಂತವರಿಗೆ ಮೊದಲ ಆದ್ಯತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮತ್ತು ಶಿಕ್ಷಣ ಸಂಸ್ಥೆಯಿಂದ 2nd ಪಿಯುಸಿ ಮತ್ತು B.ED ಮುಗಿಸಿದವರಿಗೆ ಅವಕಾಶ
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 18 ವರ್ಷ ಮೇಲ್ಪಟ್ಟು ಮತ್ತು 45 ವರ್ಷ ಒಳಗಿನವರಿಗೆ ಅವಕಾಶ
- ಈ ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಹಿಳೆ ಮತ್ತು ಪುರುಷರಿಗೆ ಅವಕಾಶವಿರುತ್ತದೆ ಆದ್ಯತೆಯ ಮೇರೆಗೆ ಆದಷ್ಟು ಹೆಚ್ಚಿನ ಸ್ಥಾನಗಳಲ್ಲಿ ಮಹಿಳೆಯರ ಆಯ್ಕೆ ಮಾಡಲಾಗುತ್ತದೆ
- ಈ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳು SSLC ಉತ್ತೀರ್ಣರಾಗಿರಬೇಕು
- ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರ ಆಯ್ಕೆಯಾದಂತಹ ಅಭ್ಯರ್ಥಿಗಳನ್ನು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ವಾರ್ಡ್ಗಳಲ್ಲಿ ನೇಮಕ ಮಾಡಲಾಗುತ್ತದೆ.
- ಒಂದು ವೇಳೆ ಗ್ರಾಮದಲ್ಲಿ ವಾರ್ಡುಗಳಲ್ಲಿ ಖಾಲಿ ಇರದ ಪಕ್ಷದಲ್ಲಿ ಪಕ್ಕದ ವಾರ್ಡಿನಲ್ಲಿ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಅಥವಾ ಪಕ್ಕದ ಗ್ರಾಮ ಪಂಚಾಯಿತಿಗಳಲ್ಲಿ ಕಾಲಿರುವ ವಾರ್ಡ್ಗಳಲ್ಲಿ ನೇಮಕಾತಿ ಮಾಡಲಾಗುತ್ತದೆ
ಸಂಬಳ ಎಷ್ಟು (Teacher Recruitment)..?
- LKG, UKG ಶಿಕ್ಷಕರಾಗಿ ಆಯ್ಕೆಗೊಂಡಂತ ಅಭ್ಯರ್ಥಿಗಳಿಗೆ ಗೌರವ ಧನವಾಗಿ 10,000 ರೂಪಾಯಿ ನೀಡಲಾಗುತ್ತದೆ
- LKG, UKG ನೇಮಕಗೊಂಡ ಸಹಾಯಕ ಸಿಬ್ಬಂದಿಗಳಿಗೆ ಮತ್ತು ಇತರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 5000 ಗೌರವದನವಾಗಿ ವೇತನ ನೀಡಲಾಗುತ್ತದೆ
(Teacher Recruitment) ಆಯ್ಕೆಯ ವಿಧಾನ…?
ಹೌದು ಸ್ನೇಹಿತರೆ ಈ ಹುದ್ದೆಗಳಿಗೆ ಆಯ್ಕೆ ಮಾಡಲು ಮೊದಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ ನಂತರ ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಅಧಿಕಾರಿಗಳ ಅಧ್ಯಕ್ಷತೆಯ ಮೇರೆಗೆ ಹಾಗೂ ನಿಮ್ಮ ಹತ್ತಿರದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಪ್ರಾಥಮಿಕ ಶಾಲೆಯ DCM ಅಧ್ಯಕ್ಷತೆಯಲ್ಲಿ ತಮ್ಮ ಗ್ರಾಮಗಳಲ್ಲಿ ಕಾಲಿ ಇರುವಂತ LKG UKG ಶಿಕ್ಷಕರ ಮತ್ತು ಶಿಕ್ಷಕಿ ಹುದ್ದೆಗಳಿಗೆ ಹಾಗೂ ಸಹಾಯಕ ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗುತ್ತದೆ
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರು ಹಾಗೂ ಪಿಯುಸಿ ಮುಗಿಸಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಹೊಸ ಮಾಹಿತಿಗಳನ್ನು ಬೇಗ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು