PM-KISAN Update: 20ನೇ ಕಂತು ಭೂದಾಖಲೆ ದೋಷದಿಂದ ಹಣ ಕೈತಪ್ಪಬಹುದು! ರೈತರು ಎಚ್ಚರಿಕೆಯಿಂದಿರಿ!
ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ರಂತೆ ಮೂರು ಕಂತುಗಳಲ್ಲಿ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಈ ಸಲದ ಕಂತು ಎಲ್ಲರಿಗೂ ಸಿಗುತ್ತದೆ ಎನ್ನುವುದು ಖಚಿತವಲ್ಲ. ಭೂದಾಖಲೆಗಳು ಮತ್ತು ಬ್ಯಾಂಕ್ ವಿವರಗಳಲ್ಲಿ ದೋಷವಿದ್ದರೆ ಹಣ ಜಮೆಯಾಗದೆ ಕೈತಪ್ಪಬಹುದು.
ಪಿಎಂ ಕಿಸಾನ್ ಹಣ ಸಿಗಲು ಅಗತ್ಯವಿರುವ ಮುಖ್ಯ ಅಂಶಗಳು:
1. ಭೂದಾಖಲೆಗಳು ಸರಿಯಾಗಿರಬೇಕು
ಕಂತು ಬಿಡುಗಡೆಗೂ ಮುನ್ನ, ರೈತರು ತಮ್ಮ ಹೆಸರಿನಲ್ಲಿ ಭೂಮಿ ಇದ್ದದ್ದು ಪಹಣಿ ದಾಖಲೆಗಳಲ್ಲಿ ಸ್ಪಷ್ಟವಾಗಿರಬೇಕು. ಭೂಮಿಯ ಹೆಸರಿನಲ್ಲಿ ವ್ಯತ್ಯಾಸ, ಹಳೆಯ ದಾಖಲೆ ಅಥವಾ ತಪಾಸಣೆಗೆ ಒಳಪಟ್ಟ ಭೂಮಿ ಇದ್ದರೆ, ಕಂತು ರದ್ದುಪಡಿಸುವ ಸಾಧ್ಯತೆ ಇದೆ.
ಸ್ಥಳೀಯ ತಹಶೀಲ್ದಾರ್ ಕಚೇರಿಗೆ ತೆರಳಿ ಪಹಣಿ ನಕಲು ಪರಿಶೀಲಿಸಿ. ಯಾವ ದಾಖಲೆಯ ಮೇಲೆ ಅರ್ಜಿ ಸಲ್ಲಿಸಿದ್ದೀರೋ ಅದು ಸರಿಯೆಂದು ಖಚಿತಪಡಿಸಿಕೊಳ್ಳಿ.
ಇದನ್ನು ಓದಿ : School Holiday: ಇಂದು ಶಾಲಾ ಕಾಲೇಜುಗಳು ರಜೆ, ವಿದ್ಯಾರ್ಥಿಗಳೇ ತಪ್ಪದೆ ಈ ಮಾಹಿತಿ ಗಮನಿಸಿ
2. ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಅಗತ್ಯ
- ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಿಸಿರಬೇಕು.
- ಖಾತೆ ಸಂಖ್ಯೆ ಅಥವಾ ಐಎಫ್‌ಎಸ್‌ಸಿ ಕೋಡ್‌ನಲ್ಲಿ ತಪ್ಪಿದ್ದರೆ, ಹಣ ಜಮೆಯಾಗುವುದಿಲ್ಲ.
- ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ದರೂ ಕಂತು ಕೈ ತಪ್ಪಬಹುದು.
3. ಇ-ಕೆವೈಸಿ (e-KYC) ಮಾಡಿದ್ದು ಅವಶ್ಯಕ
ಇ-ಕೆವೈಸಿ ಇಲ್ಲದ ಫಲಾನುಭವಿಗಳಿಗೆ 20ನೇ ಕಂತು ಹಣ ಬರುವ ಸಾಧ್ಯತೆ ಇಲ್ಲ.
pmkisan.gov.in ವೆಬ್‌ಸೈಟ್‌ನಲ್ಲಿ e-KYC ಆಯ್ಕೆಯ ಮೂಲಕ ಈ ಪ್ರಕ್ರಿಯೆ ಆನ್‌ಲೈನ್ ಮೂಲಕ ಮಾಡಬಹುದು.
ಇದನ್ನು ಓದಿ : ಪಿಎಂ ಕಿಸಾನ್ ಸನ್ಮಾನ್ ಯೋಜನೆ: ಈ ಯೋಜನೆ 20ನೇ ಕಂತಿನ ₹2000 ಹಣ ಈ ದಿನಾಂಕದಂದು ಬಿಡುಗಡೆ
4. ಮೆಾಬೈಲ್ ಸಂಖ್ಯೆ ನವೀಕರಿಸಿಕೊಳ್ಳಿ
ನಿಮ್ಮ ಪಿಎಂ ಕಿಸಾನ್ ಖಾತೆಗೆ ಲಿಂಕ್ ಆಗಿರುವ ಮೆಾಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿಲ್ಲದಿದ್ದರೆ, SMS ಮೂಲಕ ಮಾಹಿತಿ ಸಿಗದು. ಫಲಿತಾಂಶವಾಗಿ, ಕಂತು ಬಂದುಕೊಂಡು ಹಣವನ್ನು ಖಾತೆಯಲ್ಲಿ ದೃಢಪಡಿಸಿಕೊಳ್ಳುವ ಅವಕಾಶ ತಪ್ಪಬಹುದು.
ಆನ್‌ಲೈನ್‌ನಲ್ಲಿ ಮಾಹಿತಿ ಪರಿಶೀಲಿಸುವ ವಿಧಾನ
pmkisan.gov.in ವೆಬ್‌ಸೈಟ್‌ಗೆ ತೆರಳಿ, ಕೆಳಗಿನ ಹಂತಗಳನ್ನು ಅನುಸರಿಸಿ:
- Farmers Corner ವಿಭಾಗದಲ್ಲಿ ‘Beneficiary Status’ ಆಯ್ಕೆ ಮಾಡಿ.
- ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ನಂಬರ ಮೂಲಕ ನಿಮ್ಮ ಸ್ಥಿತಿಯನ್ನು ಪರಿಶೀಲಿಸಿ.
- ‘e-KYC’, ‘Bank Account Update’, ‘Mobile Number Update’* ಸೇರಿದಂತೆ ಬಾಕಿ ಎಲ್ಲಾ ಸೇವೆಗಳು ಕೂಡ ಇದೇ ವಿಭಾಗದಲ್ಲಿ ಲಭ್ಯವಿದೆ.
ಇದನ್ನು ಓದಿ : IDFC First Bank Scholarship: MBA ವಿದ್ಯಾರ್ಥಿಗಳಿಗೆ IDFC FIRST ಬ್ಯಾಂಕ್ ವಿದ್ಯಾರ್ಥಿವೇತನ – ವರ್ಷಕ್ಕೆ ₹1 ಲಕ್ಷ ಸಹಾಯಧನ!
ಹಣ ಯಾಕೆ ತಡವಾಗಿದೆ ?
ಹಣ ತಡವಾಗುವುದು ಈ ಕಾರಣಗಳಾಗಿರಬಹುದು:
- ಪಹಣಿ ದಾಖಲೆಗಳಲ್ಲಿ ಹೆಸರು ತಪ್ಪು
- ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಇಲ್ಲ
- ಇ-ಕೆವೈಸಿ ಪ್ರಕ್ರಿಯೆ ಮುಗಿದಿಲ್ಲ
- ಮೊಬೈಲ್ ನಂಬರ್ ನವೀಕರಿಸಲಾಗಿಲ್ಲ
20ನೇ ಕಂತು ಬಿಡುಗಡೆ
ಈವರೆಗೆ 19 ಕಂತುಗಳನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಬಿಡುಗಡೆ ಮಾಡಿದ್ದು, 20ನೇ ಕಂತು ಜುಲೈ 2025 ರೊಳಗೆ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಯಿದೆ. ಆದ್ದರಿಂದ, ಈ ಸಮಯದಲ್ಲಿಯೇ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ತಿದ್ದಿಕೊಳ್ಳಿ ಮತ್ತು ಆರ್ಥಿಕ ಸಹಾಯವನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಿಂದಿರಿ.
ಪಿಎಂ ಕಿಸಾನ್ ಯೋಜನೆಯ ಉದ್ದೇಶವು ಸಣ್ಣ ಮತ್ತು ಸೀಮಿತ ಭೂಮಿ ಹೊಂದಿರುವ ರೈತರಿಗೆ ಆರ್ಥಿಕ ಸಹಾಯ ನೀಡುವದು. ಕೃಷಿಕರ ಆದಾಯವನ್ನು ಹೆಚ್ಚಿಸಿ, ಬೆಳೆವಳಿ ನಿರ್ವಹಣೆಗೆ ನೆರವು ನೀಡುವದು ಇದರ ಗುರಿಯಾಗಿದೆ.