PM-KISAN  Scam: ರೈತರೆ ಎಚ್ಚರ! ನಕಲಿ ಆ್ಯಪ್‌ಗಳಿಂದ ನಿಮ್ಮ ಹಣಕ್ಕೂ, ಮಾಹಿತಿಗೂ ಕನ್ನ!

PM-KISAN  Scam: ರೈತರೆ ಎಚ್ಚರ! ನಕಲಿ ಆ್ಯಪ್‌ಗಳಿಂದ ನಿಮ್ಮ ಹಣಕ್ಕೂ, ಮಾಹಿತಿಗೂ ಕನ್ನ!

ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಹೆಸರಿನಲ್ಲಿ ರೈತರನ್ನು ಗುರಿಯಾಗಿಸಿಕೊಂಡು ನಕಲಿ ಆ್ಯಪ್‌, ಸಂದೇಶಗಳು, ಫಿಶಿಂಗ್‌ ವೆಬ್‌ಸೈಟ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ವಂಚನೆ ನಡೆದಿದೆ. ಇದರಲ್ಲಿ, ರೈತರು ತಮ್ಮ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ.

PM-KISAN  Scam

ಸ್ಕಾಮ್ ಹೇಗೆ ನಡೆಯುತ್ತಿದೆ?

  1. ನಕಲಿ APK ಫೈಲ್‌ಗಳು:

ನಕಲಿ “PM Kisan Yojana.apk” ಫೈಲ್‌ಗಳನ್ನು ರೈತರಿಗೆ ವಾಟ್ಸಾಪ್ ಅಥವಾ ಮೆಸೆಜ್ ಮೂಲಕ ಕಳುಹಿಸಲಾಗುತ್ತದೆ. ಇವುಗಳನ್ನು ಕ್ಲಿಕ್ ಮಾಡಿದರೆ ಫೋನ್‌ಗೆ ಮಾಲ್‌ವೇರ್ ಡೌನ್‌ಲೋಡ್ ಆಗಿ ಬ್ಯಾಂಕ್‌ ವಿವರ, OTP, ಪಾಸ್‌ವರ್ಡ್‌ಗಳು ಹ್ಯಾಕ್ ಆಗುತ್ತವೆ.

ಇದನ್ನು ಓದಿ : PM Avasa Scheme: ಪ್ರಧಾನ ಮಂತ್ರಿ ಆವಾಸ್ ಯೋಜನೆ 2025 ಈಗಲೇ ಅರ್ಜಿ ಸಲ್ಲಿಸಿ.

ಉದಾಹರಣೆ: ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ ಕೆಲವು ಗ್ರಾಮಸ್ಥರು ಫೇಕ್ APK ಕ್ಲಿಕ್ ಮಾಡಿದ ಪರಿಣಾಮ ಫೋನ್‌ ಹ್ಯಾಕ್‌ ಆಗಿದ್ದು ಹಣ ಕಳಕೊಂಡಿದ್ದಾರೆ.

  1. ಫಿಶಿಂಗ್‌ ಸಂದೇಶಗಳು ಮತ್ತು ನಕಲಿ ವೆಬ್‌ಸೈಟ್‌ಗಳು:

“ಇ-ಕೆವೈಸಿ ಅಪ್‌ಡೇಟ್ ಮಾಡಿಸಿ”, “ಹಣ ತ್ವರಿತವಾಗಿ ಪಡೆಯಲು ಲಿಂಕ್ ಕ್ಲಿಕ್ ಮಾಡಿ” ಎಂದು ಸಂದೇಶ ಬರುತ್ತದೆ. ಈ ಲಿಂಕ್‌ಗಳು ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತವೆ. ಅವು ಅಧಿಕೃತ ವೆಬ್‌ಸೈಟ್‌ನಂತೆ ಕಾಣಿಸುತ್ತವೆ. OTP ಹಂಚಿಕೊಂಡರೆ ಹಣ ಕಳೆದುಕೊಳ್ಳುತ್ತಾರೆ.

WhatsApp Group Join Now
Telegram Group Join Now       

ಇದನ್ನು ಓದಿ : UPI New Rules 2025- ಆಗಸ್ಟ್ 1 ರಿಂದ UPI ನಿಯಮದಲ್ಲಿ ಭಾರೀ ಬದಲಾವಣೆ.! ಇಲ್ಲಿದೆ ನೋಡಿ ಹೊಸ ರೂಲ್ಸ್ ಗಳ ವಿವರ

ಉದಾಹರಣೆ: ಹೈದರಾಬಾದ್‌ನ ವ್ಯಕ್ತಿಯೊಬ್ಬರು ವಾಟ್ಸಾಪ್‌ ಲಿಂಕ್‌ ಕ್ಲಿಕ್ ಮಾಡಿ OTP ನೀಡಿದ ಕಾರಣ ₹1.9 ಲಕ್ಷ ಕಳೆದುಕೊಂಡಿದ್ದಾರೆ.

WhatsApp Group Join Now
Telegram Group Join Now       
  1. ನಕಲಿ ಕರೆಗಳು ಹಾಗೂ ವಿಡಿಯೋ ಕರೆಗಳು:

ವಂಚಕರು ಪಿಎಂ ಕಿಸಾನ್ ಅಧಿಕಾರಿಗಳಂತೆ ಕರೆ ಮಾಡಿ “ಗುರುತಿನ ಪರಿಶೀಲನೆ” ಹೆಸರಿನಲ್ಲಿ OTP ಅಥವಾ ಆಧಾರ್ ಮಾಹಿತಿ ಕೇಳುತ್ತಾರೆ. ಕೆಲವೊಂದು ವೇಳೆ ಸ್ಕ್ರೀನ್ ಶೇರಿಂಗ್ ಕೂಡ ಕೇಳುತ್ತಾರೆ.

ಈ ಸ್ಕಾಮ್‌ನಿಂದ ತಪ್ಪಿಸಿಕೊಳ್ಳಲು ರೈತರು ಏನು ಮಾಡಬೇಕು?

  1. ನಕಲಿ ಆ್ಯಪ್ ಡೌನ್‌ಲೋಡ್ ಮಾಡಬೇಡಿ:

“PM KISAN YOJANA.apk” ಅಥವಾ ಯಾವುದೇ ಅನಧಿಕೃತ ಆ್ಯಪ್‌ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.

  1. ಸಂದೇಶಗಳಲ್ಲಿ ಬರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ:

ಅಧಿಕೃತ ಮೂಲವಲ್ಲದ ಯಾವುದೇ ಲಿಂಕ್‌ಗಳನ್ನು ಓಪನ್ ಮಾಡಬಾರದು. ಸಂದೇಹಾಸ್ಪದ ಸಂಖ್ಯೆಯಿಂದ ಮೆಸೇಜ್ ಬಂದರೆ ಬ್ಲಾಕ್ ಮಾಡಿ.

ಇದನ್ನು ಓದಿ : Gruhalakshmi Loan Scheme – ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ 5 ಲಕ್ಷದವರೆಗೆ ಸಾಲ ಸೌಲಭ್ಯ

  1. OTP ಅಥವಾ ಸ್ಕ್ರೀನ್ ಶೇರಿಂಗ್ ಮಾಡಬೇಡಿ:

ಸರ್ಕಾರಿ ಅಧಿಕಾರಿಗಳು OTP ಕೇಳುವುದಿಲ್ಲ. ಅಂತಹ ಕರೆಗಳನ್ನು ತಕ್ಷಣ ಕಟ್ ಮಾಡಿ.

  1. ಕೇವಲ ಅಧಿಕೃತ ಮೂಲಗಳಿಗೆ ಒತ್ತು ನೀಡಿ:

ವೆಬ್‌ಸೈಟ್: https://pmkisan.gov.in

ಪಿಎಂ ಕಿಸಾನ್ ಆ್ಯಪ್: Google Play Store ಮೂಲಕ ಮಾತ್ರ ಡೌನ್‌ಲೋಡ್ ಮಾಡಿರಿ

  1. ಇ-ಕೆವೈಸಿ ಮಾಡಿಸೋಣ, ಆದರೆ ಸರಿಯಾದ ಕಡೆಗೆ:

ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಇ-ಕೆವೈಸಿಯನ್ನು ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಿಎಸ್ಸಿ ಕೇಂದ್ರದಲ್ಲಿ ಮಾತ್ರ ಮಾಡಿಸಿಕೊಳ್ಳಿ.

ಸೈಬರ್ ವಂಚನೆಗೆ ಒಳಗಾದರೆ ತಕ್ಷಣ ಕೆಳಗಿನ ಆಯ್ಕೆಗಳನ್ನು ಬಳಸಿರಿ:

ಸೈಬರ್ ಕ್ರೈಂ ಹೆಲ್ಪ್‌ಲೈನ್: 1930

Website :- https://cybercrime.gov.in

Leave a Comment