NLM Scheme: ಕೋಳಿ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಘಟಕಗಳಿಗೆ ₹25 ಲಕ್ಷದವರೆಗೆ ಸಬ್ಸಿಡಿ!
ಗ್ರಾಮೀಣ ಭಾರತೀಯರ ಬದುಕಿನಲ್ಲಿ ಜಾನುವಾರು ಸಾಕಾಣಿಕೆಯು ಮಹತ್ವದ ಪಾತ್ರವಹಿಸುತ್ತಿದೆ. ಈ ಕ್ಷೇತ್ರವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು “ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ (National Livestock Mission – NLM)”ಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ರೈತರ ಆದಾಯ ಹೆಚ್ಚಿಸುವುದರ ಉದ್ದೇಶವಾಗಿದೆ.
ಈ ಯೋಜನೆಯಡಿ ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ, ಹಂದಿ ಸಾಕಣೆ ಮತ್ತು ರಸಮೇವು ಘಟಕ ಸ್ಥಾಪನೆಗೆ ಶೇ 50ರಷ್ಟು ಅಥವಾ ಗರಿಷ್ಠ ₹25 ಲಕ್ಷದವರೆಗೆ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ 2000 ಹಣ ಪಡೆಯಲು ಹೊಸ ರೂಲ್ಸ್ ! gruhalakshmi 23th installment date
ಯೋಜನೆಯಡಿ ಲಭ್ಯವಿರುವ ಘಟಕಗಳು ಮತ್ತು ಸಬ್ಸಿಡಿ ವಿವರಗಳು
ಗ್ರಾಮೀಣ ಕೋಳಿ ಸಾಕಾಣಿಕೆ ಘಟಕ
- ಘಟಕ ವೆಚ್ಚ: ₹50 ಲಕ್ಷ
- ಸಹಾಯಧನ: ₹25 ಲಕ್ಷ (ಶೇ 50)
- ಘಟಕದ ಅಂಶಗಳು: 1000 ಮಾತೃ ಕೋಳಿಗಳು, ಹ್ಯಾಚರಿ ಘಟಕ, ಮರಿ ಸಾಕಾಣಿಕೆ ಘಟಕ
ಕುರಿ-ಮೇಕೆ ಸಾಕಣೆ ಘಟಕ
ಘಟಕ (ಜಾನುವಾರು ಸಂಖ್ಯೆ) | ಗರಿಷ್ಠ ವೆಚ್ಚ | ಸಬ್ಸಿಡಿ (ಶೇ 50%) |
500+25 | ₹1 ಕೋಟಿ | ₹50 ಲಕ್ಷ |
400+20 | ₹80 ಲಕ್ಷ | ₹40 ಲಕ್ಷ |
300+15 | ₹60 ಲಕ್ಷ | ₹30 ಲಕ್ಷ |
200+10 | ₹40 ಲಕ್ಷ | ₹20 ಲಕ್ಷ |
100+5 | ₹20 ಲಕ್ಷ | ₹10 ಲಕ್ಷ |
ಹಂದಿ ಸಾಕಣೆ ಘಟಕ
ಘಟಕ (ಹಂದಿ ಸಂಖ್ಯೆ) | ಗರಿಷ್ಠ ವೆಚ್ಚ | ಸಬ್ಸಿಡಿ (ಶೇ 50%) |
100+10 | ₹60 ಲಕ್ಷ | ₹30 ಲಕ್ಷ |
50+5 | ₹30 ಲಕ್ಷ | ₹15 ಲಕ್ಷ |
ರಸಮೇವು ಘಟಕ / ಟಿಎಂಆರ್ ಘಟಕ
- ವರ್ಷಕ್ಕೆ 2000-2500 ಮೆಟ್ರಿಕ್ ಟನ್ ಉತ್ಪಾದನೆ ಸಾಮರ್ಥ್ಯ
- ಘಟಕ ವೆಚ್ಚ: ₹1 ಕೋಟಿ
- ಸಹಾಯಧನ: ₹50 ಲಕ್ಷ (ಶೇ 50)
NLM ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಯಾರಾದರೂ ಉದ್ಯಮಶೀಲರು ಅಥವಾ ರೈತರು ಈ ಯೋಜನೆಯ ಉಪಯೋಗ ಪಡೆಯಲು ಇಚ್ಛಿಸುತ್ತಿದ್ದರೆ, ಅವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : ಕರ್ನಾಟಕ ರೇಷ್ಮೆ ಇಲಾಖೆ ಹೊಸ ನೇಮಕಾತಿ! 2492 ಹುದ್ದೆಗಳು! Karnataka Sericulture Department Recruitment 2025
ಅರ್ಜಿ ಸಲ್ಲಿಸಲು ಹಂತಗಳು
Step 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – NLM Yojana Website
Step 2: “Login As Entrepreneur” ಆಯ್ಕೆಮಾಡಿ
Step 3: ಮೊಬೈಲ್ ನಂಬರ್ ನೀಡಿ OTP ಮೂಲಕ ದೃಢೀಕರಿಸಿ
Step 4: ಅರ್ಜಿ ನಮೂನೆ ಭರ್ತಿ ಮಾಡಿ
Step 5: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, “Submit” ಬಟನ್ ಒತ್ತಿ
ಅರ್ಜಿಗೆ ಬೇಕಾದ ಮುಖ್ಯ ದಾಖಲೆಗಳು
- ಗುರುತಿನ ಚೀಟಿ (ಆಧಾರ್/ಪಾನ್/ವೋಟರ್ ಐಡಿ)
- ಭೂಸ್ವಾಮ್ಯದ ದಾಖಲೆ ಅಥವಾ ಭೂ ಬಾಡಿಗೆ ಒಪ್ಪಂದ
- ಬ್ಯಾಂಕ್ ಖಾತೆ ವಿವರ
- ಪ್ರಾಜೆಕ್ಟ್ ಪ್ರಪೋಸಲ್
- ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ
ಈ ಯೋಜನೆಯ ಉಪಯೋಗ ಪಡೆಯಲು ಉತ್ಸಾಹವಿದ್ದರೆ, ಈಗಲೇ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ. ನಿಮ್ಮ ವ್ಯಾಪಾರದ ಕನಸುಗಳಿಗೆ ಕೇಂದ್ರ ಸರ್ಕಾರವೇ ಬೆಂಬಲವಾಗಿದೆ!
ಇದನ್ನು ಓದಿ: Ration KYC Update: E-KYC ಮಾಡದಿದ್ರೆ ರೇಷನ್ ಸಿಗಲ್ಲ! ಅಂತಿಮ ದಿನಾಂಕ ತಡ ಮಾಡಿದ್ರೆ ರೇಷನ್ ಕಾರ್ಡ್ ರದ್ದು!
ಆಧಿಕೃತ ವೆಬ್‌ಸೈಟ್: https://nlm-india.in