New RD Scheme: ದಿನಕ್ಕೆ ₹340 ಉಳಿಸಿ – 5 ವರ್ಷದಲ್ಲಿ ₹7 ಲಕ್ಷ!

New RD Scheme: ಈಗ ದಿನಕ್ಕೆ ₹340 ಉಳಿಸಿ – 5 ವರ್ಷದಲ್ಲಿ ₹7 ಲಕ್ಷ!

ನಿಮ್ಮ ಭವಿಷ್ಯ ಭದ್ರವಾಗಿರಲಿ ಎಂದು ಬಯಸುವಿರಾ? ಮನೆ ಕಟ್ಟೋ ಕನಸು ಇದೆಯಾ? ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಳಿತಾಯ ಮಾಡಬೇಕೆಂದಿದ್ದೀರಾ? ನಿವೃತ್ತಿಯ ನಂತರದ ದಿನಗಳನ್ನು ಆರ್ಥಿಕ ದೃಷ್ಠಿಯಿಂದ ಹಂಗಿಲ್ಲದೆ ಕಳೆಯೋ ಕನಸು ಇದೆಯಾ? ಇವೆಲ್ಲಕ್ಕೂ ಸರಳ, ಭದ್ರ ಮತ್ತು ಲಾಭದಾಯಕ ಪರಿಹಾರವಿದೆ – ಪೋಸ್ಟ್ ಆಫೀಸ್ ಆರ್‌ಡಿ (Recurring Deposit) ಯೋಜನೆ.

New RD Scheme

ಈ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಪ್ರತಿದಿನ ಕೇವಲ ₹340 ಉಳಿತಾಯ ಮಾಡಿದರೆ, ತಿಂಗಳಿಗೆ ₹10,000 ಇಡಬಹುದಾಗಿದೆ. ಈ ರೀತಿಯಲ್ಲಿ 5 ವರ್ಷ (ಅಂದರೆ 60 ತಿಂಗಳು) ನಿಮ್ಮ ಠೇವಣಿ ಮೊತ್ತ ₹6,00,000 ಆಗುತ್ತದೆ. ಈ ಹಣಕ್ಕೆ ವಾರ್ಷಿಕ 6.7% ಬಡ್ಡಿದರ ಲಭ್ಯವಿದ್ದು, ತ್ರೈಮಾಸಿಕವಾಗಿ ಕಾಂಪೌಂಡ್ ಇಂಟರೆಸ್ಟ್ ಲೆಕ್ಕ ಹಾಕಲಾಗುತ್ತದೆ. 5 ವರ್ಷದ ನಂತರ ನಿಮಗೆ ಒಟ್ಟು ₹7,13,659 ಸಿಗುತ್ತದೆ. ಅಂದರೆ ಬಡ್ಡಿಯಾಗಿ ₹1,13,659 ಹೆಚ್ಚಾಗಿ ಸಿಗುತ್ತದೆ!

ಇದು ಅತಿ ಕಡಿಮೆ ಅಪಾಯದ ಸುರಕ್ಷಿತ ಮಗ್ಗುಲಿನಿಂದ ಲಾಭ ಪಡೆಯುವ ಅತ್ಯುತ್ತಮ ಮಾರ್ಗವಾಗಿದೆ.

ಪೋಸ್ಟ್ ಆಫೀಸ್ ಆರ್‌ಡಿ ಹೈಲೈಟ್ಸ್

  • ಬಡ್ಡಿದರ: ಪ್ರಸ್ತುತ 6.7% ವಾರ್ಷಿಕ
  • ಠೇವಣಿ ಅವಧಿ: 5 ವರ್ಷ
  • ನಿಮ್ಮ ಠೇವಣಿ ಸಂಪೂರ್ಣವಾಗಿ ಸುರಕ್ಷಿತ – ಕೇಂದ್ರ ಸರ್ಕಾರದ ಅನುಮೋದಿತ ಯೋಜನೆ
  • ಕಾಂಪೌಂಡ್ ಇಂಟರೆಸ್ಟ್ ಪ್ರಯೋಜನ: ತ್ರೈಮಾಸಿಕ ಲೆಕ್ಕಾಚಾರ
  • ತುರ್ತು ಸಾಲ ಅವಕಾಶ: ಕನಿಷ್ಠ 12 ತಿಂಗಳ ಠೇವಣಿಯ ಬಳಿಕ, 50% ವರೆಗೆ ಸಾಲ
  • ತೊಡಗಿಸಬಹುದಾದ ಮೊತ್ತ: ತಿಂಗಳಿಗೆ ₹100 ರಿಂದ ಆರಂಭಿಸಬಹುದು

ಯಾರು ಈ ಯೋಜನೆಗೆ ಅರ್ಹರು?

ಈ ಯೋಜನೆ ಯಾರಾದರೂ ಆರಂಭಿಸಬಹುದು:

  • ಉದ್ಯೋಗಸ್ಥರು
  • ಮನೆಯ ಮಹಿಳೆಯರು
  • ವಿದ್ಯಾರ್ಥಿಗಳು
  • ಸಣ್ಣ ವ್ಯಾಪಾರಸ್ಥರು
  • ನಿವೃತ್ತರಾದವರು

ಇದು ಕಡಿಮೆ ಆದಾಯವಿರುವವರಿಗೆ ಅಷ್ಟೇ ಲಾಭದಾಯಕ, ಹೆಚ್ಚು ಆದಾಯವಿರುವವರಿಗೂ ಉತ್ತಮವಾದ ಡೈಸಿಪ್ಲಿನ್ ಉಳಿತಾಯ ಆಯ್ಕೆ.

WhatsApp Group Join Now
Telegram Group Join Now       

ಖಾತೆ ತೆರೆದು ಹೇಗೆ ಪ್ರಾರಂಭಿಸಬಹುದು?

ಪೋಸ್ಟ್ ಆಫೀಸ್ ಆರ್‌ಡಿ ಖಾತೆ ತೆರೆಯುವುದು ಬಹಳ ಸರಳ:

  • ಆಧಾರ್ ಕಾರ್ಡ್
  •  ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋ

ಈ ಮೂರು ದಾಖಲೆಗಳು ಇದ್ದರೆ ಸಾಕು. ಇನ್ನೂ ಉತ್ತಮ ವಿಷಯವೇನೆಂದರೆ, ಈಗ ಈ ಸೇವೆ ಆನ್‌ಲೈನ್‌ ಮೂಲಕವೂ ಲಭ್ಯವಿದೆ. ಹೌದು, ನೀವು ನಿಮ್ಮ ಪೋಸ್ಟ್ ಆಫೀಸ್ ಪೋರ್ಟಲ್ ಅಥವಾ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಖಾತೆ ತೆರೆಯಬಹುದು.

WhatsApp Group Join Now
Telegram Group Join Now       

ಈ ರಿಕರಿಂಗ್ ಡೆಪಾಸಿಟ್ ಯೋಜನೆ ನಿಮ್ಮ ಮುಂದಿನ 5 ವರ್ಷಗಳ ಆರ್ಥಿಕ ಸ್ಥಿರತೆಗೆ ಭದ್ರ ಬುನಾದಿ ಹಾಕುತ್ತದೆ. ಬಡ್ಡಿದರ ಏರಿಕೆಯಾಗುವುದಕ್ಕೂ ಮೊದಲು ಖಾತೆ ತೆರೆಯುವುದರಿಂದ ನೀವು ಹೆಚ್ಚು ಲಾಭ ಪಡೆಯಬಹುದು.

Leave a Comment

Your email address will not be published. Required fields are marked *

Scroll to Top