New Ration card: ಹೊಸ ರೇಷನ್ ಕಾರ್ಡ್ ಪಡೆಯಲು ಹಾಗೂ ತಿದ್ದುಪಡಿ ಮಾಡಲು ಅರ್ಜಿ ಆರಂಭ ಈ ರೀತಿ ಅರ್ಜಿ ಸಲ್ಲಿಸಿ

New Ration card:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಪಡೆಯಲು ಕಾಯುತ್ತಿದ್ದಾರೆ ಮತ್ತು ರೇಷನ್ ಕಾರ್ಡ್ ನಲ್ಲಿ ಸದಸ್ಯರ ಸೇರ್ಪಡೆ ಹಾಗೂ ವಿಳಾಸದ ಬದಲಾವಣೆಗಾಗಿ ತುಂಬಾ ಜನರು ಕಾಯುತ್ತಿದ್ದಾರೆ ಅಂತವರಿಗೆ ಸಿಹಿ ಸುದ್ದಿ ಏನಪ್ಪಾ ಅಂದರೆ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆರಂಭವಾಗಿದೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೂಡ ಅರ್ಜಿ ಪ್ರಾರಂಭವಾಗಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ.

ಇವತ್ತು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ ಇಲ್ಲಿದೆ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮತ್ತು ರೇಷನ್ ಕಾರ್ಡ್ ಅರ್ಜಿ ಹಾಕುವುದು ಹೇಗೆ? ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತ ಮಾಹಿತಿ ಮತ್ತು ರಾಜ್ಯ ಸರ್ಕಾರ ಕಡೆಯಿಂದ ಬರುವಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಈ ರೀತಿ ಮುಂತಾದ ಮಾಹಿತಿಗಳನ್ನು ನೀವು ಪ್ರತಿದಿನ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಡಿಲೀಟ್ ಆಗಬಾರದು ಅಂದರೆ ಕಡ್ಡಾಯವಾಗಿ ಈ ಮೂರು ದಾಖಲಾತಿಗಳು ಹೊಂದಿರಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

 

ಹೊಸ ರೇಷನ್ ಕಾರ್ಡ್ ಅರ್ಜಿ (New Ration card)…?

ಹೌದು ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದಾರೆ ಅಂತವರಿಗೆ ಸರಕಾರ ಈಗಾಗಲೇ ಸುಮಾರು ನಾಲ್ಕರಿಂದ ಐದು ಸಲ ಅವಕಾಶ ಕೊಟ್ಟಿದೆ ಆದರೆ ತುಂಬಾ ಜನರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಇದಕ್ಕೆ ಕಾರಣ ಸರ್ವರ್ ಸಮಸ್ಯೆ ಈ ಬಗೆಯು ಕೂಡ ಆಹಾರ ಇಲಾಖೆ ಗಮನ ಹರಿಸಿದ್ದು ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಲು ಸರ್ಕಾರ ಕಡೆಯಿಂದ ಈಗಾಗಲೇ ಅವಕಾಶ ಕೊಟ್ಟಿದೆ.

WhatsApp Group Join Now
Telegram Group Join Now       
New Ration card
New Ration card

 

ಹೌದು ಸ್ನೇಹಿತರೆ ಆಹಾರ ಇಲಾಖೆ ಮಾಹಿತಿ ಪ್ರಕಾರ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅಂದರೆ ಬಡವರಿಗಾಗಿ ನೀಡುವ BPL ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕೊಟ್ಟಿಲ್ಲ ಆದರೆ ವೈದ್ಯಕೀಯ ಚಿಕಿತ್ಸೆಗಾಗಿ ಬೇಕಾಗುವಂತ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಮಾತ್ರ ಅವಕಾಶ ಕೊಟ್ಟಿದ್ದೇವೆ ಎಂದು ಆಹಾರ ಇಲಾಖೆ ತಿಳಿಸಿದೆ ಹಾಗಾಗಿ ನೀವು ವೈದ್ಯಕೀಯ ಚಿಕಿತ್ಸೆಗಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದರೆ ನಿಮಗೆ ಗುಡ್ ನ್ಯೂಸ್

WhatsApp Group Join Now
Telegram Group Join Now       

 

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವಾಗ ಪ್ರಾರಂಭ (New Ration card)..?

ಹೌದು ಸ್ನೇಹಿತರೆ, ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಇನ್ನು ಅವಕಾಶ ಕೊಟ್ಟಿಲ್ಲ ಆದರೆ ಚಿಕಿತ್ಸೆಗಾಗಿ ನೀಡುವಂತಹ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶವಿದೆ ಮತ್ತು ರೇಷನ್ ಕಾರ್ಡ್ ನಲ್ಲಿ ವಿಳಾಸದ ಬದಲಾವಣೆ ಹಾಗೂ ತಿದ್ದುಪಡಿ ಮಾಡಲು ಅವಕಾಶವಿದೆ.

ಹೌದು ಸ್ನೇಹಿತರೆ, ಜುಲೈ 6ನೇ ತಾರೀಖಿನಿಂದ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಚಿಕಿತ್ಸೆಗಾಗಿ ಬೇಕಾಗುವಂತ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಪ್ರಾರಂಭವಾಗಿದ್ದು ಜುಲೈ 20ನೇ ತಾರೀಕಿನವರೆಗೂ ಕೂಡ ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಬರುತ್ತೆ ಎಂದು ಬಲಮೂಲಗಳ ಪ್ರಕಾರ ಮಾಹಿತಿ ತಿಳಿದು ಬಂದಿದೆ.

ಹೌದು ಸ್ನೇಹಿತರೆ ಸದ್ಯದ ಮಟ್ಟಿಗೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಶೇರ್ ಪಡೆ ಹಾಗೂ ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ರೀತಿ ಬದಲಾವಣೆ ಮಾಡಿಕೊಳ್ಳಲು ಸರಕಾರ ಜುಲೈ 20ನೇ ತಾರೀಕು ಕೂಡ ಅವಕಾಶ ನೀಡಿದೆ ಅಥವಾ ಇನ್ನು ಎರಡು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇರಬಹುದು ಹಾಗಾಗಿ ಕೂಡಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಅಂದರೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಆನ್ಲೈನ್ ಸೆಂಟರಗಳಿಗೆ ಭೇಟಿ ನೀಡಿ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾತ್ರ ಮಾಡಿಸಿಕೊಳ್ಳಬಹುದು.

 

ರೇಷನ್ ಕಾರ್ಡ್ ತಿದ್ದುಪಡಿಗೆ ಮಾತ್ರ ಅವಕಾಶ (New Ration card)…?

ಹೌದು ಸ್ನೇಹಿತರೆ, ನಮ್ಮ ರಾಜ್ಯ ಸರ್ಕಾರ ಕಡೆಯಿಂದ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮತ್ತು ಕುಟುಂಬದ ಮುಖ್ಯಸ್ಥರ ಬದಲಾವಣೆ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಜುಲೈ 6ನೇ ತಾರೀಖಿನಿಂದ ಜುಲೈ 20ನೇ ತಾರೀಖಿನವರೆಗೆ ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಆನ್ಲೈನ್ ಸೆಂಟರ್ ಗಳಲ್ಲಿ ಮಾತ್ರ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೆಸರು ಬದಲಾವಣೆಗೆ ಅವಕಾಶವಿದೆ ಹಾಗಾಗಿ ಈ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ.

 

ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಬೇಕಾಗುವ ದಾಖಲಾತಿಗಳು (New Ration card)..?

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ

 

ಈ ದಾಖಲಾತಿಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಕೇಂದ್ರಗಳಿಗೆ ಅಥವಾ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಮತ್ತು ಹೆಸರು ಬದಲಾವಣೆಗೆ ಹಾಗೂ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬದಲಾವಣೆ ಮಾಡಿಕೊಳ್ಳಬಹುದು.

 

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು (New Ration card) ಯಾವಾಗ ಅವಕಾಶ…?

ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸರ್ಕಾರ ಸದ್ಯ ಅವಕಾಶ ನೀಡಿಲ್ಲ. ಆಹಾರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ ಸುಮಾರು 2.36 ಲಕ್ಷ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲಾಗಿದೆಯಂತೆ ಮತ್ತು ಈ ಅರ್ಜಿಗಳನ್ನು ಸದ್ಯದಲ್ಲೇ ವಿಲೇವಾರಿ ಮಾಡಲಾಗುತ್ತದೆಯಂತೆ. ಅದಾದ ಬಳಿಕ ಮಾತ್ರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಈ ಬಗ್ಗೆ ಮಾಹಿತಿ ಬಂದ ತಕ್ಷಣ ನಿಮಗೆ ಮಾಹಿತಿ ಬೇಕಾದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment