Navodaya School Admission: ನವೋದಯ ವಿದ್ಯಾಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ!
ಜವಾಹರ್ ನವೋದಯ ವಿದ್ಯಾಲಯ (JNV)ವು ಪ್ರತಿವರ್ಷದಂತೆ 2026-27ನೇ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಿದೆ. ದೇಶದ ವಿವಿಧ ಜಿಲ್ಲೆಗಳಲ್ಲಿರುವ ನವೋದಯ ಶಾಲೆಗಳು ಉಚಿತ, ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಗೆ ಎಚ್ಚರಿಕೆಯಿಂದ ಅವಕಾಶ ಕಲ್ಪಿಸುತ್ತವೆ. ಈ ಬ್ಲಾಗ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಅಗತ್ಯ ದಾಖಲೆಗಳು, ಸೌಲಭ್ಯಗಳು ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು
- ಪ್ರಸ್ತುತ ಶೈಕ್ಷಣಿಕ ವರ್ಷ 2024-25ರಲ್ಲಿ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಹರಾಗಿರಬೇಕು.
- ವಿದ್ಯಾರ್ಥಿಯು 01 ಮೇ 2014 ರಿಂದ 30 ಏಪ್ರಿಲ್ 2016 ರ ನಡುವಿನ ಅವಧಿಯಲ್ಲಿ ಜನಿಸಿದ್ದಿರಬೇಕು.
- ವಿದ್ಯಾರ್ಥಿಯು ಗ್ರಾಮೀಣ ಪ್ರದೇಶದ ಶಾಲೆಯಲ್ಲಿಯೇ ಹೆಚ್ಚು ಕಾಲ ವ್ಯಾಸಂಗ ಮಾಡಿರಬೇಕು.
- ಈ ಹಿಂದೆ ನವೋದಯ ಪ್ರವೇಶ ಪರೀಕ್ಷೆ ಬರೆದಿದ್ದರೆ, ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ಒಬ್ಬ ವಿದ್ಯಾರ್ಥಿಗೆ ಒಂದೇ ಬಾರಿ ಮಾತ್ರ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ (Aadhar Card)
- ವಿದ್ಯಾರ್ಥಿಯ ಸಹಿ (Signature)
- ಪೋಷಕರ ಸಹಿ (Parent Signature)
- ವ್ಯಾಸಂಗ ಪ್ರಮಾಣ ಪತ್ರ (Study Certificate)
- ನಿವಾಸ ದೃಢೀಕರಣ ಪತ್ರ (Residential Certificate)
- ಪಾಸ್‌ಪೋರ್ಟ್ ಗಾತ್ರದ ಪೋಟೋ (Student Photo)
ಇದನ್ನು ಓದಿ : New Rules In House: ಮನೆ ಕಟ್ಟುವವರಿಗೆ ಹೊಸ ಕಟ್ಟುನಿಟ್ಟಾದ ನಿಯಮಗಳು!
ನವೋದಯ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು
- ಉಚಿತ ಶಿಕ್ಷಣ, ವಸತಿ, ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ
- 9 ರಿಂದ 12ನೇ ತರಗತಿಯವರೆಗೆ ಮಾತ್ರ ತಿಂಗಳಿಗೆ ₹600 ವಿಕಾಸ ನಿಧಿ ಸಂಗ್ರಹಿಸಲಾಗುತ್ತದೆ
- SC/ST, ದಿವ್ಯಾಂಗ, ಬಾಲಕಿಯರು ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
- ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ (ಮಕ್ಕಳ ಮತ್ತು ಹುಡುಗಿಯರಿಗಾಗಿ)
- ಸಾಂಸ್ಕೃತಿಕ, ಕ್ರೀಡೆ, ಇತರೆ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ
ಪ್ರವೇಶ ಪರೀಕ್ಷೆಯ ವಿವರ
- ಪರೀಕ್ಷೆ ದಿನಾಂಕ: 13 ಡಿಸೆಂಬರ್ 2025
- ಪರೀಕ್ಷೆ ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮರಾಠಿ ಮುಂತಾದ ಭಾಷೆಗಳು
ಇದನ್ನು ಓದಿ : BSNL New Recharge Plan: ಕೇವಲ 7 ರೂಪಾಯಿಗೆ 84 ದಿನ ವ್ಯಾಲಿಡಿಟಿ. ಪ್ರತಿದಿನ 3GB ಡೇಟಾ ನೀಡುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: gov.in
- ‘Class 6 Admission’ ಲಿಂಕ್ ಕ್ಲಿಕ್ ಮಾಡಿ
- ಅರ್ಜಿ ನಮೂನೆ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಅಪ್ಲೋಡ್ ಮಾಡಿ
- “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲನೆ ಪ್ರಕ್ರಿಯೆ ಪೂರ್ಣಗೊಳಿಸಿ
ಮುಖ್ಯ ದಿನಾಂಕಗಳು
- ಅರ್ಜಿಯ ಕೊನೆಯ ದಿನಾಂಕ: 27 ಜುಲೈ 2025
- ಪರೀಕ್ಷೆ ದಿನಾಂಕ: 13 ಡಿಸೆಂಬರ್ 2025
ಅಧಿಕೃತ ಲಿಂಕ್ಸ್