Muskaan Scholarship 2025: ಪ್ರೌಢ ಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ₹12,000 ವಿದ್ಯಾರ್ಥಿವೇತನ – ಅರ್ಜಿ ಹಾಕುವ ಸಂಪೂರ್ಣ ಮಾಹಿತಿ!
Muskaan Scholarship ಎಂಬ ಶೈಕ್ಷಣಿಕ ಬೆಂಬಲ ಯೋಜನೆಯು Valvoline Cummins Private Limited (VCPL) ಸಂಸ್ಥೆಯ ಮೂಲಕ 2025ನೇ ಸಾಲಿಗೆ ಜಾರಿಗೆ ಬಂದಿದೆ. ಈ ವಿದ್ಯಾರ್ಥಿವೇತನ ಯೋಜನೆಯು ಮುಖ್ಯವಾಗಿ ಭಾರತದಲ್ಲಿ 9ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಣಕಾಸು ನೆರವನ್ನು ಒದಗಿಸುವ ಉದ್ದೇಶ ಹೊಂದಿದೆ.
ಈ ಲೇಖನದಲ್ಲಿ ಈ ವಿದ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಅರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಂತಿಮ ದಿನಾಂಕಗಳ ಬಗ್ಗೆ ತಿಳಿಸಲಾಗುತ್ತಿದೆ.
Muskaan Scholarship ಯೋಜನೆಯ ಮುಖ್ಯ ಉದ್ದೇಶ
ಈ ವಿದ್ಯಾರ್ಥಿವೇತನದ ಉದ್ದೇಶ ವಾಣಿಜ್ಯ ವಾಹನ ಚಾಲಕರು (LMV/HMV), ಮೆಕ್ಯಾನಿಕ್‌ಗಳು, ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (EWS) ವಿದ್ಯಾರ್ಥಿಗಳ ಮಕ್ಕಳಿಗೆ ಶೈಕ್ಷಣಿಕ ನೆರವನ್ನು ಒದಗಿಸಿ, ಅವರು ಅನಾರೋಗ್ಯ ಅಥವಾ ಹಣಕಾಸು ಕಾರಣಗಳಿಂದ ಶಿಕ್ಷಣವಿಲ್ಲದೆ ನಿಲ್ಲದಂತೆ ಮಾಡುವದು.
ಇದನ್ನು ಓದಿ : udyogini loan: ಈ ಯೋಜನೆ ಅಡಿಯಲ್ಲಿ ಸಿಗಲಿದೆ 3 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ! ಶೇಕಡ 50ರಷ್ಟು ಸಬ್ಸಿಡಿ,
ಅರ್ಜಿ ಸಲ್ಲಿಸಲು ಅರ್ಹತೆ
Muskaan Scholarship ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ವಿದ್ಯಾರ್ಥಿಯು ಭಾರತದ ನಿವಾಸಿ ಆಗಿರಬೇಕು.
- 9ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ವಿದ್ಯಾರ್ಥಿಯು ಈ ಕೆಳಗಿನ ರಾಜ್ಯಗಳಲ್ಲಿ ಉಲ್ಲೇಖಿತ ಯಾವುದೇ ರಾಜ್ಯದವರಾಗಿರಬೇಕು:
ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ, ಒಡಿಶಾ, ಬಿಹಾರ, ಪುದುಚೇರಿ, ಛತ್ತೀಸ್‌ಗಢ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಮೇಘಾಲಯ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ. - ವಿದ್ಯಾರ್ಥಿಯ ಪೋಷಕರು ಅಥವಾ ಪಾಲಕರು ವಾಣಿಜ್ಯ ಚಾಲಕ ಅಥವಾ ಮೆಕ್ಯಾನಿಕ್ ಆಗಿರಬೇಕು ಅಥವಾ EWS ವರ್ಗಕ್ಕೆ ಸೇರಿದವರಾಗಿರಬೇಕು.
- ವಿದ್ಯಾರ್ಥಿಯು ತನ್ನ ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
- ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅಗತ್ಯ ದಾಖಲಾತಿಗಳ ಪಟ್ಟಿ
Muskaan ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿರಿಸಿ
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಶುಲ್ಕ ರಸೀದಿ
- ಹಿಂದಿನ ತರಗತಿಯ ಅಂಕಪಟ್ಟಿ
- ಕುಟುಂಬದ ಆದಾಯ ಪ್ರಮಾಣ ಪತ್ರ
- ಆದಾಯ ತೆರಿಗೆ ರಿಟರ್ನ್ (ITR)
- ಬ್ಯಾಂಕ್ ಪಾಸ್ ಬುಕ್ ನ ಪೋಟೋಕಾಪಿ
- ವಿದ್ಯಾರ್ಥಿಯ ಪಾಸ್‌ಪೋರ್ಟ್ ಗಾತ್ರದ ಫೋಟೋ
ಕೊನೆಯ ದಿನಾಂಕ
Muskaan Scholarship 2025 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-09-2025
ಅದುವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತಡಮಾಡದೇ ಅರ್ಜಿ ಸಲ್ಲಿಸಿ.
ಇದನ್ನು ಓದಿ : Ration Card Update 2025: ರೇಷನ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿ.! ಇಲ್ಲವಾದರೆ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಸುವ ವಿಧಾನ
Muskaan ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿ:
- ವೆಬ್ಸೈಟ್: buddy4study.com ಗೆ ಭೇಟಿ ನೀಡಿ.
- “Apply Now” ಬಟನ್ ಕ್ಲಿಕ್ ಮಾಡಿ.
- ಮೊದಲ ಬಾರಿಗೆ ವೆಬ್ಸೈಟ್ ಬಳಸುತ್ತಿರುವವರು “Create an Account” ಆಯ್ಕೆಮಾಡಿ.
- ಲಾಗಿನ್ ಆದ ನಂತರ ಅರ್ಜಿ ಫಾರ್ಮ್ ತೆರೆಯುತ್ತದೆ.
- ಅಗತ್ಯ ವಿವರಗಳು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಗೆ “Submit” ಬಟನ್ ಕ್ಲಿಕ್ ಮಾಡಿ.
Muskaan Scholarship ಯೋಜನೆ, ಶಿಕ್ಷಣದಲ್ಲಿ ಹಿನ್ನಡೆಯಾಗದಂತೆ ಆರ್ಥಿಕವಾಗಿ ದುರ್ಬಲ ಕುಟುಂಬದ ಮಕ್ಕಳಿಗೆ ನಿಜವಾದ ಆಶಾಕಿರಣ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ವಿದ್ಯಾಭ್ಯಾಸದಲ್ಲಿ ಮುಂದಿನ ಹಂತ ತಲುಪಲು ಇಂದೇ ಅರ್ಜಿ ಸಲ್ಲಿಸಿ.
ಇದನ್ನು ಓದಿ : Ration Card New Update: ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಜುಲೈ 31ರೊಳಗೆ ಅರ್ಜಿ ಸಲ್ಲಿಸಿ!