LIC Scheme: ಈ ಸ್ಕೀಮ್ ನಿಂದ ಜೀವನಪೂರ್ತಿ ಪಿಂಚಣಿ! ನ್ಯೂ ಜೀವನ್ ಶಾಂತಿ ಯೋಜನೆಯ ಸಂಪೂರ್ಣ ವಿವರ

LIC Scheme: ಈ ಸ್ಕೀಮ್ ನಿಂದ ಜೀವನಪೂರ್ತಿ ಪಿಂಚಣಿ! ನ್ಯೂ ಜೀವನ್ ಶಾಂತಿ ಯೋಜನೆಯ ಸಂಪೂರ್ಣ ವಿವರ

ನಿವೃತ್ತಿ ನಂತರವೂ ಸ್ಥಿರ ಆದಾಯವನ್ನು ಗಳಿಸಲು ನಿಮ್ಮತ್ತಿರುವ ಬಹುಮುಖ್ಯ ಆಯ್ಕೆಗಳಲ್ಲಿ ಒಂದು ಎನ್ನಿಸಿಕೊಳ್ಳಬಹುದು ಎಲ್‌ಐಸಿ (LIC) ಯ ನ್ಯೂ ಜೀವನ್ ಶಾಂತಿ ಯೋಜನೆ.
ಇದು ಒಮ್ಮೆ ಹೂಡಿಕೆಯ ಆಧಾರಿತ ಜೀವನಪೂರ್ತಿ ಪಿಂಚಣಿ ಸೌಲಭ್ಯ ನೀಡುವ ವಿಶೇಷ ಪ್ಲಾನ್ ಆಗಿದ್ದು, ಈಗಾಗಲೇ ಸಾವಿರಾರು ಜನರ ನಂಬಿಕೆಯನ್ನು ಗಳಿಸಿದೆ.

LIC Scheme

ಯೋಜನೆಯ ಹೈಲೈಟ್ಸ್

  • ಜೀವನಪೂರ್ತಿ ಪಿಂಚಣಿ:
    ಒಮ್ಮೆ ಹೂಡಿಕೆ ಮಾಡಿದರೆ ಸಾಕು – ನಿಗದಿತ ಕಾಲದ ನಂತರ, ಜೀವನಪೂರ್ತಿ ಪ್ರತಿ ತಿಂಗಳು ನಿಗದಿತ ಹಣ ನಿಮ್ಮ ಖಾತೆಗೆ ಬರಲಿದೆ.
  • ₹12,000 ತಿಂಗಳಿಗೆ ಪಿಂಚಣಿ ಗ್ಯಾರಂಟಿ!
    ಯೋಜನೆಯು MONTHLY, QUARTERLY, HALF YEARLY ಅಥವಾ YEARLY ಪಿಂಚಣಿ ಆಯ್ಕೆಯೊಂದಿಗೆ ಲಭ್ಯವಿದ್ದು, ಉದಾಹರಣೆಗೆ ತಿಂಗಳಿಗೆ ₹12,000 (ವಾರ್ಷಿಕ ₹1,42,500) ಗಳಿಸಲು ಸಾಧ್ಯ.
  • ಸಿಂಗಲ್ ಅಥವಾ ಜಾಯಿಂಟ್ ಲೈಫ್ ಆಯ್ಕೆ:
    ಈ ಯೋಜನೆ ಸಿಂಗಲ್ ಲೈಫ್ (ಒಬ್ಬರಿಗೆ) ಅಥವಾ ಜಾಯಿಂಟ್ ಲೈಫ್ (ಪತಿ-ಪತ್ನಿ ಅಥವಾ ಪಾಲುದಾರರಿಗೆ) ರೂಪದಲ್ಲಿ ಲಭ್ಯವಿದೆ.
    ಜಾಯಿಂಟ್ ಲೈಫ್ ಆಯ್ಕೆ ಮಾಡಿದರೆ, ಇಬ್ಬರಲ್ಲಿ ಒಬ್ಬರ ಜೀವಿತಾವಧಿಯವರೆಗೆ ಪಿಂಚಣಿ ಲಭ್ಯವಿರುತ್ತದೆ. ಇಬ್ಬರೂ ಇನ್ನಿಲ್ಲದ ಬಳಿಕ ನಾಮಿನಿಗೆ ಹೂಡಿಕೆ ಮೊತ್ತ ಹಿಂತಿರುಗುತ್ತದೆ.

ಇದನ್ನು ಓದಿ : UPI New Rules 2025- ಆಗಸ್ಟ್ 1 ರಿಂದ UPI ನಿಯಮದಲ್ಲಿ ಭಾರೀ ಬದಲಾವಣೆ.! ಇಲ್ಲಿದೆ ನೋಡಿ ಹೊಸ ರೂಲ್ಸ್ ಗಳ ವಿವರ

ಹೂಡಿಕೆಗೆ ಸಂಬಂಧಿಸಿದ ವಿವರಗಳು

  • ಕನಿಷ್ಠ ಹೂಡಿಕೆ: ₹1.5 ಲಕ್ಷ
  • ಗರಿಷ್ಠ ಮಿತಿ: ಇಲ್ಲ
  • ಅರ್ಹ ವಯಸ್ಸು: ಕನಿಷ್ಠ 30 ವರ್ಷ – ಗರಿಷ್ಠ 79 ವರ್ಷ

ಈ ಪ್ಲಾನ್ ಬ್ಯಾಂಕ್ ಎಫ್ಡಿ ಅಥವಾ ಫೈನಾನ್ಸ್ ಕಂಪನಿಗಳ ಯೋಜನೆಗಿಂತ ಭದ್ರತೆ ಮತ್ತು ಸ್ಥಿರ ಆದಾಯದಲ್ಲಿ ಮುನ್ನಡೆಯಲ್ಲಿದೆ. ಇದನ್ನು ಭಾರತೀಯ ಸರ್ಕಾರದ ಅನುಮೋದಿತ ಎಲ್‌ಐಸಿ ಬಿಡುಗಡೆ ಮಾಡಿರುವುದರಿಂದ ಇದು ವಿಶ್ವಾಸಾರ್ಹ ಕೂಡಾ.

ನೀವು ಏನು ಮಾಡಬೇಕು?

ನೀವು LIC ನ್ಯೂ ಜೀವನ್ ಶಾಂತಿ ಯೋಜನೆಗೆ ಹೂಡಿಕೆ ಮಾಡಲು ಇಚ್ಛಿಸುತ್ತಿದ್ದರೆ, ನಿಮ್ಮ najikada LIC ಶಾಖೆ ಅಥವಾ ಅಧಿಕೃತ ಏಜೆಂಟ್ ನೊಂದಿಗೆ ಸಂಪರ್ಕಿಸಿ. ನಿಮ್ಮ ವಯಸ್ಸು, ಹಣಕಾಸು ಗುರಿ ಮತ್ತು ಇತರ ವಿವರಗಳ ಆಧಾರದ ಮೇಲೆ ಯೋಜನೆ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದನ್ನು ಓದಿ : Old Age Pension: ರಾಜ್ಯದಲ್ಲಿ ಈಗ 23 ಲಕ್ಷ ಹಿರಿಯ ನಾಗರಿಕರ ಪಿಂಚಣಿ ರದ್ದು! ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

WhatsApp Group Join Now
Telegram Group Join Now       

ಜಾಯಿಂಟ್ ಪ್ಲಾನ್ ಆಯ್ಕೆ ಮಾಡಿದರೆ, ಪಿಂಚಣಿ ಮೊತ್ತ ಸ್ವಲ್ಪ ಕಡಿಮೆಯಾಗಬಹುದು (ವಾರ್ಷಿಕ ₹1,33,400), ಆದರೆ ಎರಡೂ ಪಾಲುದಾರರಿಗೂ ಜೀವನಪೂರ್ತಿ ಪಿಂಚಣಿ ಲಭ್ಯವಿರುತ್ತದೆ.

ಪ್ಲಾನ್‌ನ ಪ್ರಮುಖ ಸೌಲಭ್ಯಗಳು

  • ವಿವಿಧ ಪಿಂಚಣಿ ಆಯ್ಕೆ (Monthly/Quarterly/Half Yearly/Yearly)
  • Nominee ಫಸಿಲಿಟಿ
  • ಬದ್ಧ ಆದಾಯದ ಭರವಸೆ
  • ಬಡ್ಡಿದರದ ಬದಲಾವಣೆಗಳ ಪ್ರಭಾವ ಇಲ್ಲ

ಈ ಪ್ಲಾನ್ ಯಾರಿಗೆ ಉಪಯುಕ್ತ?

  • ನಿವೃತ್ತಿಯ ಆಸನ್ನರಲ್ಲಿರುವವರಿಗೆ
  • ಹೆಚ್ಚು ಮೊತ್ತವನ್ನು ಒಂದೇ ಬಾರಿಗೆ ಹೂಡಿಸಲು ಸಿದ್ಧರಾಗಿರುವವರಿಗೆ
  • ಜೀವನಪೂರ್ತಿ ಸೂರಕ್ಷಿತ ಆದಾಯ ಬೇಕಿರುವವರಿಗೆ
  • ಪತ್ನಿ/ಪತಿ ಇಬ್ಬರಿಗಿಂತಲೂ ಭದ್ರತೆ ಬೇಕಿರುವ ಕುಟುಂಬಗಳಿಗೆ

 

WhatsApp Group Join Now
Telegram Group Join Now       

Leave a Comment