Posted in

Horticulture Diploma: ತೋಟಗಾರಿಕೆ ವಿಶ್ವವಿದ್ಯಾಲಯದಿಂದ 2 ವರ್ಷದ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಆರಂಭ!

Horticulture Diploma

Horticulture Diploma: ತೋಟಗಾರಿಕೆ ವಿಶ್ವವಿದ್ಯಾಲಯದಿಂದ 2 ವರ್ಷದ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಆರಂಭ!

ಕೃಷಿ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲು ಉತ್ಸುಕರಾಗಿರುವ ವಿದ್ಯಾರ್ಥಿಗಳಿಗೆ ಶುಭವಾರ್ತೆ! ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ (University of Horticultural Sciences, Bagalkot) ಎರಡು ವರ್ಷದ ಡಿಪ್ಲೋಮಾ ತೋಟಗಾರಿಕೆ ಕೋರ್ಸ್‌ಗೆ (Diploma in Horticulture) ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ತೋಟಗಾರಿಕೆಯಲ್ಲಿ ಉಜ್ವಲ ಭವಿಷ್ಯ ನಿರ್ಮಿಸಲು ಈ ಕೋರ್ಸ್ ಉತ್ತಮ ದಾರಿ ಆಗಲಿದೆ.

Horticulture Diploma

WhatsApp Group Join Now
Telegram Group Join Now       

ಈ ಬ್ಲಾಗ್‌ ಪೋಸ್ಟ್ನಲ್ಲಿ ಪ್ರವೇಶ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಕೋರ್ಸ್ ಲಭ್ಯವಿರುವ ಕಾಲೇಜುಗಳು, ಸೀಟುಗಳ ಸಂಖ್ಯೆ, ಶುಲ್ಕದ ವಿವರ, ಹಾಗೂ ಕೋರ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.

  • ಕೋರ್ಸ್ ಅವಧಿ: 2 ವರ್ಷ
  • ಕೊನೆಯ ದಿನಾಂಕ: 31 ಜುಲೈ 2025
  • ಅಧಿಕೃತ ವೆಬ್‌ಸೈಟ್: karnataka.gov.in

 

ಪ್ರವೇಶ ಅರ್ಹತೆ (Eligibility)

  • ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ನಡೆಸುವ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • 2025ರ ಜುಲೈ 31ರ ವೇಳೆಗೆ ಅಭ್ಯರ್ಥಿಯು 25 ವರ್ಷ ಮೀರಿ ಇರಬಾರದು.

ಲಭ್ಯವಿರುವ ಕಾಲೇಜುಗಳು ಮತ್ತು ಸೀಟುಗಳ ವಿವರ

ಮಹಾವಿದ್ಯಾಲಯದ ಹೆಸರುಸ್ಥಳಸೀಟುಗಳು
ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯಅರಭಾವಿ, ಗೋಕಾಕ್, ಬೆಳಗಾವಿ25
ಜಿ. ನಾರಾಯಣ ಗೌಡ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರಹೊಗಳಗೆರೆ, ಶ್ರೀನಿವಾಸಪುರ, ಕೋಲಾರ25

 ಇದನ್ನು ಓದಿ : SBI Personal Loan 2025: SBI ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ.! ಸಾಲ ಪಡೆಯಲು ಈ ದಾಖಲಾತಿಗಳು ಬೇಕು

ಅರ್ಜಿ ಶುಲ್ಕ (Application Fee)

  • ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ: ₹500
  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: ₹250

ಅಭ್ಯರ್ಥಿ ಆಯ್ಕೆ ವಿಧಾನ

  • ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಹಾಗೂ ರೋಸ್ಟರ್ ಪದ್ಧತಿಯಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
  • ಮೂಲ ಅಂಕಪಟ್ಟಿ ಲಭ್ಯವಿಲ್ಲದಿದ್ದರೆ, ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯ.
  • ಪ್ರವೇಶ ಸ್ವೀಕರಿಸುವ ವೇಳೆಗೆ ಮೌಲಿಕ ಅಂಕಪಟ್ಟಿ ಹಾಜರುಪಡಿಸಲೇಬೇಕು.

ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್‌ಸೈಟ್ karnataka.gov.in ಗೆ ಭೇಟಿ ನೀಡಿ.
  2. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಪೂರ್ಣವಾಗಿ ಭರ್ತಿ ಮಾಡಿ.
  3. ವಿಶ್ವವಿದ್ಯಾಲಯದ ಚಲನ್ ರಶೀದಿ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಕಳಿಸಿ:

ಡೀನ್ ಸ್ನಾತಕೋತ್ತರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ನವನಗರ, ಬಾಗಲಕೋಟ – 587104
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2025 ಸಂಜೆ 5 ಗಂಟೆ

ಇದನ್ನು ಓದಿ : udyogini loan: ಈ ಯೋಜನೆ ಅಡಿಯಲ್ಲಿ ಸಿಗಲಿದೆ 3 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ! ಶೇಕಡ 50ರಷ್ಟು ಸಬ್ಸಿಡಿ,

ಸಹಾಯವಾಣಿ ಸಂಖ್ಯೆ

  • ಅರಭಾವಿ ಕೇಂದ್ರ: 9845656148
  • ಹೊಗಳಗೆರೆ ಕೇಂದ್ರ: 9900534193

ಡಿಪ್ಲೋಮಾ ನಂತರ ಲಭ್ಯವಿರುವ ಉದ್ಯೋಗಾವಕಾಶಗಳು

ತೋಟಗಾರಿಕೆ ಡಿಪ್ಲೋಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಕೆಳಗಿನ ಕ್ಷೇತ್ರಗಳಲ್ಲಿ ಅವಕಾಶಗಳು ಲಭ್ಯವಿವೆ:

  • ತೋಟಗಾರಿಕೆ ಇಲಾಖೆ
  • ಬೀಜೋತ್ಪಾದನಾ ಕಂಪನಿಗಳು
  • ರಸಗೊಬ್ಬರ ಮತ್ತು ಕೀಟನಾಶಕ ಕಂಪನಿಗಳು
  • ತೋಟಗಾರಿಕೆ ಉತ್ಪನ್ನ ಸಂಸ್ಕರಣಾ ಘಟಕಗಳು
  • ಹೋಟಿಕಲ್ಚರ್ ಮಿಷನ್/ರಫ್ತು ಕಂಪನಿಗಳು

ಮತ್ತೊಂದೆ ಮುಖ್ಯಾಂಶ ಎಂದರೆ, ಈ ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ (ಹಾನರ್ಸ್) ತೋಟಗಾರಿಕೆಯಲ್ಲಿ ಶೇ.5% ಸೀಟುಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ಕಾಯ್ದಿರಿಸಲಾಗಿದೆ.

ಇದನ್ನು ಓದಿ : SSLC Exam 3 Result : 10ನೇ ತರಗತಿ ಪರೀಕ್ಷೆ ಮೂರರ ಫಲಿತಾಂಶ ಇಂದು ಪ್ರಕಟಗೊಂಡಿದೆ | ವಿದ್ಯಾರ್ಥಿಗಳು ಈ ರೀತಿ ತಮ್ಮ ಫಲಿತಾಂಶ ಚೆಕ್ ಮಾಡಬಹುದು!

ಗ್ರಾಮೀಣ ಯುವಕರು ತೋಟಗಾರಿಕೆಯಲ್ಲಿ ತಾಂತ್ರಿಕ ಜ್ಞಾನ ಪಡೆದು ಸ್ವಯಂ ಉದ್ಯೋಗಕ್ಕೆ ಪ್ರೇರಿತರಾಗಲು ಈ ಡಿಪ್ಲೋಮಾ ಪಥ ಉತ್ತಮ ಅವಕಾಶ. ತೋಟಗಾರಿಕೆಯಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸಲು ಹಾಗೂ ಸರ್ಕಾರಿ-ಖಾಸಗಿ ಉದ್ಯೋಗ ಗಳಿಸಲು ಈ ಕೋರ್ಸ್‌ ಸಹಾಯಕವಾಗಲಿದೆ.

 

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>