Posted in

Farmer Subsidy Scheme: ರೈತರು ಈಗ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರದ ಸಹಾಯಧನ!

 Farmer Subsidy Scheme

 Farmer Subsidy Scheme: ರೈತರು ಈಗ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರದ ಸಹಾಯಧನ!

ಕರ್ನಾಟಕ ರಾಜ್ಯದಲ್ಲಿ 2025-26ರ ಮುಂಗಾರು ಋತು ಆರಂಭದಿಂದಲೇ ಸತತ ಮಳೆಯಾಗುತ್ತಿದೆ. ಈ ಹಿಂದೆ ಬಿತ್ತನೆ ಮಾಡಿದ ಬೆಳೆಗಳ ಮೇಲೆ ಮಳೆಯ ದುಷ್ಪರಿಣಾಮಗಳಾಗದಂತೆ ನೋಡಿಕೊಳ್ಳಲು ರಾಜ್ಯ ಕೃಷಿ ಇಲಾಖೆ ಹೊಸ crop advisory ಪ್ರಕಟಿಸಿದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ.

 Farmer Subsidy Scheme

WhatsApp Group Join Now
Telegram Group Join Now       

 ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ 2025-26

ರೈತರು ಈಗ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರದ ಸಹಾಯಧನ (Subsidy) ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿಯಲ್ಲಿ ಹಲವಾರು ಪ್ರಕಾರದ ಯಂತ್ರೋಪಕರಣಗಳು ದೊರೆಯುತ್ತವೆ.

ಅರ್ಜಿಯ ಸ್ಥಳ

  • ನಿಕಟದ ರೈತ ಸಂಪರ್ಕ ಕೇಂದ್ರ (Raitha Samparka Kendra)ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆ 

  1. ಆಧಾರ್ ಕಾರ್ಡ್
  2. ಪಾಸ್‌ಪೋರ್ಟ್ ಸೈಸ್ ಫೋಟೋ
  3. ಬ್ಯಾಂಕ್ ಪಾಸ್‌ಬುಕ್ ನ ಪ್ರತಿಗೆ
  4. ರೇಶನ್ ಕಾರ್ಡ್
  5. 20 ರೂ. ಬಾಂಡ್ ಪೇಪರ್
  6. ಜಮೀನಿನ ಪಹಣಿ/ಊತಾರ್/RTC
  7. ಜಾತಿ ಮತ್ತು ಆದಾಯ ಪ್ರಮಾಣಪತ್ರ
  8. ರೈತರ ಮೊಬೈಲ್ ಸಂಖ್ಯೆ

ಮಳೆಯ ಅತಿಯಾದ ಪ್ರಮಾಣದಿಂದ ಬೆಳೆ ರಕ್ಷಣೆ ಹೇಗೆ?

ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ಹೊಂಡ ಅಥವಾ ಬಸಿಗಾಲುವೆಗಳ ಮೂಲಕ ಆ ನೀರನ್ನು ಹೊರಹಾಕುವುದು ಅತ್ಯಾವಶ್ಯಕವಾಗಿದೆ.

ಇದನ್ನು ಓದಿ : Karnataka 2nd PUC Exam 3 Result 2025: ದ್ವಿತೀಯ ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಯಾವಾಗ ಬಿಡುಗಡೆ

ಗೋವಿನ ಜೋಳ, ಹತ್ತಿ ಬೆಳೆಗಳಿಗೆ ವಿಶೇಷ ಸೂಚನೆಗಳು

  1. ರಸಗೊಬ್ಬರ ಸಿಂಪಡನೆ:
    • 19:19:19 ಅಥವಾ 13:0:45 ರಸಗೊಬ್ಬರಗಳನ್ನು 1 ಲೀಟರ್ ನೀರಿಗೆ 3-5 ಗ್ರಾಂ ದರದಲ್ಲಿ ಬೆರೆಸಿ ಸಿಂಪಡಿಸಬೇಕು.
    • ಇದು ಬೆಳೆ ಚೈತನ್ಯವನ್ನು ಪುನಶ್ಚೇತನಗೊಳಿಸಲು ಸಹಕಾರಿಯಾಗುತ್ತದೆ.
  2. ಮೆಕ್ಕಜೋಳದ ಹುಳು ನಿಯಂತ್ರಣ:
    • ಫಾಲ್ ಆರ್ಮಿವಾರ್ಮ್ (Fall Armyworm) ನಿಯಂತ್ರಣಕ್ಕಾಗಿ Emamectin Benzoate ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ದರದಲ್ಲಿ ಸಿಂಪಡಿಸಬೇಕು.
  3. ಹತ್ತಿ, ಶೇಂಗಾ, ಸೋಯಾ ಬೆಳೆಗಳಿಗೆ:
    • ಕಾರ್ಬನ್ ಡೈಜಿಮ್: ಪ್ರತಿ ಲೀಟರ್ ನೀರಿಗೆ 3 ಗ್ರಾಂ.
    • ಧೈಯೋಪಿನೆಟ್ ಮಿಥೈಲ್: ಪ್ರತಿ ಲೀಟರ್ ನೀರಿಗೆ 2 ಗ್ರಾಂ ಸಿಂಪಡಿಸಬೇಕು.

 ಎಲೆ ಹಳದಿ, ಕೆಂಪು ಬಣ್ಣ ತಿರುವು ತಪ್ಪಿಸಲು

ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವ ಬೆಳೆ ಎಲೆಗಳನ್ನು ನಿಖರವಾಗಿ ನಿರ್ವಹಿಸಲು ಈ ಪೋಷಕಾಂಶಗಳ ಬಳಕೆ ಮಾಡಬಹುದು:

  • ನ್ಯಾನೋ ಡಿಎಪಿ (Nano DAP)
  • ನ್ಯಾನೋ ಯೂರಿಯಾ (Nano Urea)
  • 19:19:19 ಅಥವಾ 13:0:45

ಈ ಪೋಷಕಾಂಶಗಳು ಬೆಳೆ ಆರೋಗ್ಯವನ್ನು ಪುನಃಸ್ಥಾಪಿಸಲು ನೆರವಾಗುತ್ತವೆ.

ಹೆಚ್ಚಿನ ಮಾಹಿತಿಗಾಗಿ

ಯೋಜನೆಗಳ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು, ಕರ್ನಾಟಕ ಕೃಷಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು:

ಇದನ್ನು ಓದಿ : BPL CARD Canceled: ಒಂದೇ ಮನೆಗೆ ಎರಡು ರೇಷನ್ ಕಾರ್ಡ್ ಇದ್ದರೆ ರದ್ದು!

ಈ ವರ್ಷ ಕೂಡ ಮಳೆಯ ಅತಿಯಾದ ಪ್ರಮಾಣದಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಕೃಷಿ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ರೈತರು ಬೆಳೆಗಳನ್ನು ಕಾಪಾಡಿಕೊಳ್ಳಬಹುದು. ಜೊತೆಗೆ, ಸರ್ಕಾರ ನೀಡುವ ಯಂತ್ರೋಪಕರಣ ಸಬ್ಸಿಡಿ ಯೋಜನೆಯಿಂದ ಲಾಭ ಪಡೆಯುವದು ಹೆಚ್ಚಿನ ಉತ್ಪಾದನೆಗೆ ಸಹಾಯಕವಾಗಬಹುದು.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>