Airtel Scholarship 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಭಾರತೀಯ ಏರ್ಟೆಲ್ ಫೌಂಡೇಶನ್ ಕಡೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ಶಿಪ್..! ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ.
ಏರ್ಟೆಲ್ ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲಾನ್ ಪರಿಚಯ..! ಕೇವಲ ಹನ್ನೊಂದು ರೂಪಾಯಿಗೆ ಸಿಗುತ್ತದೆ ಬೇಗ ರಿಚಾರ್ಜ್ ಮಾಡಿಸಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ನಮ್ಮ ಕರ್ನಾಟಕದಲ್ಲಿ ನಡೆಯುವಂತ ಪ್ರಮುಖ ಸುದ್ದಿಗಳು ಹಾಗೂ ರಾಜಕೀಯ ವಿಷಯಗಳು ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಇವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪ್ರತಿದಿನ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
pm ಕಿಸಾನ್ ಯೋಜನೆ 18ನೇ ಕಂತು ಹಣ ಬಿಡುಗಡೆಗೆ ಹೊಸ ರೂಲ್ಸ್ ಇಲ್ಲಿದೆ ಮಾಹಿತಿ
ಏರ್ಟೆಲ್ ವಿದ್ಯಾರ್ಥಿ ವೇತನ (Airtel Scholarship 2024)…?
ಭಾರತೀಯ ಏರ್ಟೆಲ್ ಸ್ಕಾಲರ್ಶಿಪ್ ಪ್ರೋಗ್ರಾಮ್ 2024 – 2025 ಹೌದು ಸ್ನೇಹಿತರೆ, ಭಾರತೀಯ ಏರ್ಟೆಲ್ ಫೌಂಡೇಶನ್ ಇದು ಭಾರತೀಯ ಎಂಟರ್ಪ್ರೈಸಸ್ ಲೋಕೋಪಕಾರಿ ಅಂಗ ಸಂಸ್ಥೆಯಾಗಿದ್ದು ಇದು ನಮ್ಮ ದೇಶದಲ್ಲಿ ಹಿಂದುಳಿದ ಮಕ್ಕಳಿಗೆ ಹಾಗೂ ಯುವಕರಿಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವಂತ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಲಾಯಿತು
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಂತ್ರಜ್ಞಾನ OR ಎಂಜಿನಿಯರಿಂಗ್ (engineering) ಪದವಿಪೂರ್ವ & ಇಂಟಿಗ್ರೇಟೆಡ್ ಕೋರ್ಸ್ ಗಳಿಗೆ ದಾಖಲಾದ ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ಮೆರಿಟ್ ಕಮ್ ಮೀನ್ಸ್ ಆಧಾರಿತ ವಿದ್ಯಾರ್ಥಿ ವೇತನವನ್ನು ಈ ಭಾರತೀಯ ಏರ್ಟೆಲ್ ಫೌಂಡೇಶನ್ ಕಡೆಯಿಂದ ನೀಡಲಾಗುತ್ತದೆ
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರುವ (Airtel Scholarship 2024) ಅರ್ಹತೆಗಳು..?
- ಎಲೆಕ್ಟ್ರಿಕ್ ಮತ್ತು ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ, {AI, IoT, AR/VR, ಮೆಷಿನ್ ಲರ್ನಿಂಗ್, ರೊಬೊಟಿಕ್ಸ್} ಕ್ಷೇತ್ರಗಳಲ್ಲಿ ಹಾಗೂ ಎಮರ್ಜಿಂಗ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ನಿರ್ದಿಷ್ಟ ಪಡಿಸಿದ ಕೋರ್ಸ್ ಗಳನ್ನು ಮೊದಲ ವರ್ಷದ (Fist years) ಪ್ರವೇಶ OR ದಾಖಲಾತಿಯನ್ನು ದೃಢಪಡಿಸಲಾಗಿದೆ 50 NIRF (engineering) ಕಾಲೇಜುಗಳು
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಭಾರತದ ನಿವಾಸಿಗಳಾಗಿರಬೇಕು
- ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 8.5 ಲಕ್ಷ ರೂಪಾಯಿ ಒಳಗಡೆ ಇರಬೇಕು
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಈ ಹಿಂದೆ ಭಾರತೀಯ ಏರ್ಟೆಲ್ ಫೌಂಡೇಶನ್ ವತಿಯಿಂದ ಯಾವುದೇ ರೀತಿ ವಿದ್ಯಾರ್ಥಿ ವೇತನ ಪಡೆದುಕೊಂಡಿರಬಾರದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Airtel Scholarship 2024)…?
- ವಿದ್ಯಾರ್ಥಿಯ ಆಧಾರ್ ಕಾರ್ಡ್
- 12ನೇ ತರಗತಿ ಮಾರ್ಕ್ಸ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
- ಇತ್ತೀಚಿನ ಭಾವಚಿತ್ರ
- ವಾಸಸ್ಥಳ ಪ್ರಮಾಣ ಪತ್ರ
- ಕಾಲೇಜು ಅರ್ಜಿ ಶುಲ್ಕ OR ಹಾಸ್ಟೆಲ್ ಅರ್ಜಿ ಶುಲ್ಕ ರಸೀದಿ
- JEE ಅಂಕಪಟ್ಟಿ ಅಥವಾ ವಿಶ್ವವಿದ್ಯಾಲಯದ ಪರೀಕ್ಷೆ ಮಾರ್ಕ್ಸ್ ಕಾರ್ಡ್
ಈ ಮೇಲೆ ನೀಡಿದ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಏರ್ಟೆಲ್ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವುದು ಹೇಗೆ (Airtel Scholarship 2024)..?
ಸ್ನೇಹಿತರೆ ನೀವು ಏರ್ಟೆಲ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ಪಡೆದುಕೊಳ್ಳಬೇಕು ಅಂದರೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ಕೆಳಗಡೆ ಒಂದು ಲಿಂಕ್ ನೀಡುತ್ತೇವೆ ಆತರ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಎಲ್ಲಿ ಕ್ಲಿಕ್ ಮಾಡಿ
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು…?
- ಪ್ರಾರಂಭ ದಿನಾಂಕ:- 01/09/2024
- ಕೊನೆಯ ದಿನಾಂಕ:- 31/10/2024
ಈ ಮೇಲೆ ಕೊಟ್ಟಿರುವಂಥ ದಿನಾಂಕದ ಒಳಗಡೆ ಆದಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿ ಪಡೆದು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಇದೇ ರೀತಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳುವುದು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು