student scholarship : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ ಇನ್ನು ಮುಂದೆ ಇಂಥಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 15000 ಹಣ ಸಿಗುತ್ತೆ

student scholarship:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿನ್ನೆ ನಡೆದ SCSP & TSP ಪರಿಷತ್ತಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಇನ್ನು ಮುಂದೆ ಇಂತಹ ವಿದ್ಯಾರ್ಥಿಗಳಿಗೆ 15000 ಹಣ ಕೊಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಪ್ರಾರಂಭ ಬೇಗ ಈ ಸಮಯ ಸದುಪಯೋಗಪಡಿಸಿಕೊಳ್ಳಿ ಇಲ್ಲಿದೆ ಮಾಹಿತಿ

ಇದೇ ರೀತಿ ಸರ್ಕಾರಿ ನೌಕರಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವಂತೆ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಅವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ಹಾಗೂ ಪ್ರತಿದಿನ ಪ್ರಚಲಿತ ಘಟನೆಗಳ ಬಗ್ಗೆ ಮತ್ತು ದಿನನಿತ್ಯದ ಸುದ್ದಿಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತರು ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ ಇಲ್ಲಿದೆ ಮಾಹಿತಿ

 

ಟ್ರೈಬಲ್ ಸಬ್ ಪ್ಲಾನ್ ಮತ್ತು (student scholarship) ಪರಿಶಿಷ್ಟ ಜಾತಿ ಅಭಿವೃದ್ಧಿ..?

ಹೌದು ಸ್ನೇಹಿತರೆ, ನೆನ್ನೆ ನಡೆದ ವಿಧಾನ ಪರಿಷತ್ತು ಸಭೆಯಲ್ಲಿ ಈ ಬಗ್ಗೆ ಮಾತನಾಡುತ್ತಾ ಸಿಎಂ ಸಿದ್ದರಾಮಯ್ಯನವರು ಈ ಉನ್ನತ ಶಿಕ್ಷಣ ಮಾಡುತ್ತಿರುವಂತ ವಿದ್ಯಾರ್ಥಿಗಳಿಗೆ ಅಂದರೆ IAS, IRS, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಈ ಹಿಂದೆ ರಾಜ್ಯ ಸರ್ಕಾರ ಕಡೆಯಿಂದ 10 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಕೊಡಲಾಗುತ್ತಿತ್ತು ಜೊತೆಗೆ ಈ ಹಣವನ್ನು ಈ ವರ್ಷದಿಂದ 5000 ಹೆಚ್ಚಳ ಮಾಡಿ 15000 ಹಣವನ್ನು ಉನ್ನತ ಶಿಕ್ಷಣ ಮಾಡುತ್ತಿರುವಂತ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

WhatsApp Group Join Now
Telegram Group Join Now       
student scholarship
student scholarship

 

SCSP & TSP (student scholarship) ಸೌಲಭ್ಯಗಳ ಹೆಚ್ಚಳ..?

ಹೌದು ಸ್ನೇಹಿತರೆ ಈ ಉನ್ನತ ಶಿಕ್ಷಣ ಮಾಡುತ್ತಿರುವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಂತ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಉತ್ತಮ ಹಾಸ್ಟೆಲ್ ಸೌಲಭ್ಯ ಕೊಡುವುದರ ಜೊತೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಬೇಕಾಗುವಂತ ಪುಸ್ತಕಗಳನ್ನು ನೀಡುವುದು ಹಾಗೂ ಪ್ರತಿ ತಿಂಗಳು 15000 ಹಣ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now       

2024 ಮತ್ತು 25 ನೇ ಸಾಲಿನಲ್ಲಿ SCSP/TSP ನಲ್ಲಿ ಲಭ್ಯ ಇರುವಂತ ಹಣವನ್ನು ಖರ್ಚು ಮಾಡಲು ಈಗಾಗಲೇ ಒಂದು ವ್ಯವಸ್ಥಿತ ಪ್ಲಾನ್ ಮಾಡಲಾಗಿದ್ದು ಅದಕ್ಕೆ ಅನುಮೋದನೆ ಮಾಡಲಾಗಿದೆ ಎಂದು ತಿಳಿಸಲಾಗಿದೆ ಮತ್ತು ರಾಜ್ಯದ ಅಭಿವೃದ್ಧಿ ಆಯಾಮ ಈ ವರ್ಷದ ಸಾಲಿನಲ್ಲಿ ಸುಮಾರು 1 ಲಕ್ಷದ 60 ಸಾವಿರ ಕೋಟಿ ರೂಪಾಯಿ ಹಣ ಇದ್ದು

ಇದರಲ್ಲಿ ಪರಿಶಿಷ್ಟ ಪಂಗಡ ಜನರ ಅಭಿವೃದ್ಧಿಗಾಗಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸುಮಾರು 39,121.46 ಕೋಟಿ ರೂಪಾಯಿ ಹಣವನ್ನು ಯೋಜನೆ ಅಡಿಯಲ್ಲಿ ವಿವಿಧ 34 ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ ಮತ್ತು ಈ ಹಣವು ಸರಿಯಾದ ರೀತಿಯಲ್ಲಿ ಖರ್ಚು ಮಾಡಲು ಒಂದು ಪ್ಲಾನ್ ಮಾಡಲಾಗಿದ್ದು ಇದರಲ್ಲಿ ಇಂದಿನ ವರ್ಷ ಬಿಡುಗಡೆ ಮಾಡಿರುವ ಹಣದಲ್ಲಿ ಸುಮಾರು 97.81 ಕೋಟಿ ರೂಪಾಯಿ ಉಳಿತಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ

 

SCSP/TSP ಅಭಿವೃದ್ಧಿಗೆ (student scholarship) ಹೆಚ್ಚುವರಿ ಹಣ…?

ಹೌದು ಸ್ನೇಹಿತರೆ, ಕಳೆದ ವರ್ಷಕ್ಕಿಂತ ಈ ವರ್ಷ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಹಾಗೂ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕಳೆದ ವರ್ಷಕ್ಕಿಂತ 3900 ಕೋಟಿ ರೂಪಾಯಿ ಹಣ ಮೀಸಲಾಗಿ ಇಟ್ಟಿತ್ತು ಮತ್ತು ಈ ವರ್ಷ 3900 ಕೋಟಿ ಹೆಚ್ಚುವರಿ ಹಣವನ್ನು ಈ ಯೋಜನೆಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಮತ್ತು ಈ ಹಣವನ್ನು ಸಂಬಂಧಿಸಿದ ಇಲಾಖೆಗಳಿಗೆ ಈಗಾಗಲೇ ವರ್ಗಾವಣೆ ಮಾಡಲಾಗಿದ್ದು.

ಆ ಇಲಾಖೆಯವರು ಈ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಲ್ಲಾ ನಿಯಮಗಳನ್ನು ಮತ್ತು ಕಾಯ್ದೆಗಳನ್ನು ಉದ್ದೇಶಪೂರ್ವಕವಾಗಿ ಕೆಲಸ ಮಾಡಬೇಕು ಮತ್ತು ಇದರಿಂದ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿ ಹಾಗೂ ಬುಡಕಟ್ಟು ಜನರ ಅಭಿವೃದ್ಧಿಯಲ್ಲಿ ಶೇಕಡ ನೂರರಷ್ಟು ಸಾಧನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಮತ್ತು ಈ ಬಗ್ಗೆ ಯಾವುದೇ ನಿರ್ಲಕ್ಷ ವಹಿಸಿದರೆ ಅಂತವರ ಮೇಲೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ

ಹಾಗೂ ಖಾಲಿ ಇರುವಂತ ಹೋಬಳಿಗಳಲ್ಲಿ ಹೊಸದಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭ ಮಾಡುವುದರ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ಸಂಬಂಧಪಟ್ಟಂತ ಹೋಬಳಿಗಳಲ್ಲಿ ವಿದ್ಯಾರ್ಥಿಗಳಿಗೆ ಶೇಕಡ 75ರಷ್ಟು ಸೀಟು ಹಾಗೂ ಇತರ ಪ್ರದೇಶದ ವಿದ್ಯಾರ್ಥಿಗಳಿಗೆ ಉಳಿದ 25 ರಷ್ಟು ಸೀಟು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೀಡಬೇಕು ಎಂದು ಆದೇಶ ಮಾಡಲಾಗಿದೆ

ಮತ್ತು ಮುರಾರ್ಜಿ ದೇಸಾಯಿ ಹಾಸ್ಟೆಲುಗಳಿಗೆ ಹಾಗೂ ಸರಕಾರ ನಡೆಸುತ್ತಿರುವ ಅಂತ ಇತರ ಹಾಸ್ಟೆಲ್ಗಳಿಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದ್ದು ಯಾವುದೇ ತಪ್ಪು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಜೊತೆಗೆ ಕಳೆದ ಹತ್ತು ವರ್ಷದಲ್ಲಿ ಈ ಯೋಜನೆಯಿಂದ ಪರಿಶಿಷ್ಟ ಪಂಗಡ ಹಾಗೂ ಇತರ ಸಮುದಾಯದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಹಾಗೂ ಈ ಎಲ್ಲಾ ಯೋಜನೆಗಳಿಂದ ಯಾವ ಸಮುದಾಯಗಳಿಗೆ ಎಷ್ಟು ತಲುಪಿದೆ ಮತ್ತು ಸರ್ಕಾರ ನೀಡುತ್ತಿರುವಂತೆ ಎಲ್ಲಾ ಯೋಜನೆಗಳಿಂದ ಜನರ ಆರ್ಥಿಕ ಸ್ಥಿತಿ ಎಷ್ಟು ಅಭಿವೃದ್ಧಿ ಹೊಂದಿದೆ ಎಂಬುದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿಸಲಾಗುತ್ತಿದ್ದು ಇನ್ನೂ ಮೂರು ತಿಂಗಳ ಬಳಿಕ ಮತ್ತೊಮ್ಮೆ ಪರಿಷತ್ತಿನಲ್ಲಿ ಸಭೆ ಕರೆಯಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಯೋಜನೆಯಲ್ಲಿ ಹಾಗೂ ಸಮುದಾಯದ ಅಭಿವೃದ್ಧಿಯಲ್ಲಿ ಅಧಿಕಾರಿಗಳು ಯಾವುದೇ ರೀತಿ ಲೋಪ ದೋಷ ಕಂಡು ಬಂದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡಿದ್ದಾರೆ

Leave a Comment