AnnaBhagya DBT Status :– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಮೇ ಮತ್ತು ಜೂನ್ ತಿಂಗಳ ಅಕ್ಕಿ ಹಣ ಬಿಡುಗಡೆ ಮಾಡಲಾಗಿದ್ದು ಇದನ್ನು ನಿಮ್ಮ ಮೊಬೈಲ್ ಮೂಲಕ ಯಾವ ರೀತಿ ಚೆಕ್ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ ಬೇಗ ಅರ್ಜಿ ಸಲ್ಲಿಸಿ ಕೇವಲ ಒಂದು ದಿನ ಮಾತ್ರ ಅವಕಾಶವಿದೆ ಇಲ್ಲಿದೆ ಮಾಹಿತಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮತ್ತು ವಿದ್ಯಾರ್ಥಿ ವೇತನ ಗಳಿಗೆ ಸಂಬಂಧಿಸಿದ ಅರ್ಜಿ ಹಾಕುವುದು ಹೇಗೆ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ಈ ರೀತಿ ಪ್ರತಿಯೊಂದು ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಬೇಕು ಅಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಅನ್ನಭಾಗ್ಯ (AnnaBhagya DBT Status) ಯೋಜನೆ..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಅನ್ನ ಭಾಗ್ಯ ಯೋಜನೆ ಮೂಲಕ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆ.ಜಿ ಅಕ್ಕಿಯ ಹಣವನ್ನು 170 ರೂಪಾಯಿಯಂತೆ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ ಹಣವನ್ನು ರೇಷನ್ ಕಾರ್ಡ್ ನಲ್ಲಿರುವ ಮುಖ್ಯಸ್ಥರ ಖಾತೆಗೆ ನಮ್ಮ ರಾಜ್ಯ ಸರ್ಕಾರ ಕಳೆದ ಕಳೆದ 10 ತಿಂಗಳುಗಳಿಂದ ವರ್ಗಾವಣೆ ಮಾಡುತ್ತಾ ಬಂದಿದೆ.
ಹೌದು ಸ್ನೇಹಿತರೆ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುವ ಭರವಸೆ ಕೊಟ್ಟಿತ್ತು ಆದರೆ ಅಕ್ಕಿ ಅಭಾವದಿಂದ ಕೇಂದ್ರ ಸರ್ಕಾರ ನೀಡುತ್ತಿರುವಂತ 5 ಕೆಜಿ ಅಕ್ಕಿಗೆ ರಾಜ್ಯ ಸರ್ಕಾರ ಕಡೆಯಿಂದ 5 ಕೆ.ಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ ಕಳೆದ 2-3 ತಿಂಗಳಿಂದ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಜನರಿಗೆ ಬಿಡುಗಡೆ ಆಗಿಲ್ಲ ಇದರ ಬಗ್ಗೆ ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಸ್ಪಷ್ಟ ಮಾಹಿತಿ ತಿಳಿಸಿದ್ದಾರೆ
ಅನ್ನಭಾಗ್ಯ (AnnaBhagya DBT Status) ಯೋಜನೆಯ ಅಕ್ಕಿ ಹಣ ಯಾವಾಗ ಬಿಡುಗಡೆ..?
ಹೌದು ಸ್ನೇಹಿತರೆ ತುಂಬಾ ಜನರಿಗೆ ಕಳೆದ ಎರಡರಿಂದ ಮೂರು ತಿಂಗಳ ಅಕ್ಕಿ ಹಣ ಬಂದಿಲ್ಲ..! ಇದರ ಬಗ್ಗೆ ಆಹಾರ ಇಲಾಖೆ ಕಡೆಯಿಂದ ಗುಡ್ ನ್ಯೂಸ್ ಬಂದಿದೆ ಏನೆಂದರೆ ಜೂನ್ ಮತ್ತು ಮೇ ತಿಂಗಳ ಅಕ್ಕಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದ್ದು ಹಂತ ಹಂತವಾಗಿ ಪ್ರತಿಯೊಬ್ಬರ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.
ಹೌದು ಸ್ನೇಹಿತರೆ ನಿಮಗೆ ಕಳೆದ ಎರಡು ತಿಂಗಳಿಂದ ಅಥವಾ ಮೂರು ತಿಂಗಳಿಂದ ಹಣ ಬಂದಿಲ್ಲ ಅಂದರೆ ನೀವು ಚಿಂತೆ ಮಾಡುವಂತ ಅವಶ್ಯಕತೆ ಇಲ್ಲ ಈಗಾಗಲೇ ಮೇ ಮತ್ತು ಜೂನ್ ತಿಂಗಳ ಅಕ್ಕಿ ಹಣ ವರ್ಗಾವಣೆ ಮಾಡಲು ಪ್ರಾರಂಭ ಮಾಡಲಾಗಿದ್ದು ಈ ಹಣವು ಪಲಾನುಭವಿಗಳ ಖಾತೆಗೆ ಜಮಾ ಆಗಲು ಪ್ರಾರಂಭವಾಗಿದೆ ಇವತ್ತು ಅಥವಾ ಇನ್ನು ಎರಡರಿಂದ ಮೂರು ದಿನಗಳ ಕಾಲ ಅಕ್ಕಿ ಹಣ ಪ್ರತಿಯೊಬ್ಬರ ಖಾತೆಗಳಿಗೆ ಅಂತ ಹಂತವಾಗಿ ಜಮಾ ಆಗುತ್ತದೆ.. ಪೂರ್ತಿಯಾಗಿ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಜಮಾ ಆಗಲು ಈ ಜುಲೈ ತಿಂಗಳವರೆಗೆ ಕಾಯಬೇಕಾಗುತ್ತದೆ.
ಹೌದು ಸ್ನೇಹಿತರೆ ಪೆಂಡಿಂಗ್ ಇರುವಂತ ಎಲ್ಲಾ ಕಂತಿನ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಹಾಗೂ ಜೂನ್ ಮತ್ತು ಮೇ ತಿಂಗಳ ಹಣವು ಕೂಡ ಈಗಾಗಲೇ ಬಿಡುಗಡೆ ಮಾಡಿದೆ ಈ ಹಣವನ್ನು ನಿಮ್ಮ ಖಾತೆಯಲ್ಲಿ ಜಮಾ ಆಗಿದೆ ಇಲ್ಲವೋ ಎಂದು ಯಾವ ರೀತಿ ತಿಳಿದುಕೊಳ್ಳುವುದೇ ಎಂಬುದನ್ನು ಈ ಕೆಳಗಡೆ ತಿಳಿಸಲಾಗಿದೆ
ಅನ್ನಭಾಗ್ಯ ಯೋಜನೆಯ (AnnaBhagya DBT Status) ಅಕ್ಕಿ ಹಣ ಯಾವ ರೀತಿ ಚೆಕ್ ಮಾಡಬೇಕು..?
ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ನೀವು ಚೆಕ್ಕು ಮಾಡಬೇಕು ಅಂದುಕೊಂಡರೆ ನೀವು ಮೊದಲು ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಆ ವೆಬ್ಸೈಟ್ ಲಿಂಕ್ ಅನ್ನು ನಾವು ಕೆಳಗಡೆ ಕೊಟ್ಟಿದ್ದೇವೆ
ಹಣದ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಾವು ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತಿರಿ.
ಅಲ್ಲಿ ನಿಮಗೆ ಮೂರು ರೀತಿಯ ಆಯ್ಕೆಗಳು ಕಾಣುತ್ತವೆ ಅದರಲ್ಲಿ ನಿಮ್ಮ ಜಿಲ್ಲೆ ಯಾವ ಲಿಂಕಿನಲ್ಲಿ ಬರುತ್ತೆ ಎಂದು ನೋಡಿಕೊಳ್ಳಿ ನಂತರ ನಿಮ್ಮ ಜಿಲ್ಲೆಯ ಬರುವಂತ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಗದು ನೇರವಾಗಿ ಎಂದು ಕಾಣಿಸುತ್ತದೆ
ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಪ್ರಸ್ತುತ ವರ್ಷ 2024 ಎಂದು ಆಯ್ಕೆ ಮಾಡಿಕೊಳ್ಳಿ ನಂತರ ನೀವು ಯಾವ ತಿಂಗಳ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರಿ ಆ ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ
ನಂತರ ನಿಮಗೆ ಅಲ್ಲಿ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಲು ಕೇಳುತ್ತದೆ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ ಪಕ್ಕದಲ್ಲಿ ಕಾಣುವಂತ ಕ್ಯಾಪ್ಚ ಕೋಡ್ ಕೂಡ ಎಂಟರ್ ಮಾಡಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ನಂತರ
ನಿಮಗೆ ಅಕ್ಕಿ ಹಣ ಜಮಾ ಆಗುತ್ತೋ ಇಲ್ಲವೋ ಎಂದು ತೋರಿಸುತ್ತದೆ ಅಲ್ಲಿ ನಿಮಗೆ ಹಣ ಪಾವತಿ ಪ್ರಗತಿಯಲ್ಲಿ ಇದೆ ಅಂತ ತೋರಿಸಿದರೆ ನಿಮಗೆ ಖಂಡಿತವಾಗಲೂ ಎಲ್ಲಾ ಕಂತಿನ ಹಣವು ಕೂಡ ಶೀಘ್ರದಲ್ಲೇ ನಿಮ್ಮ ಖಾತೆಗೆ ಜಮಾ ಆಗುತ್ತೆ
ಅನ್ನಭಾಗ್ಯ ಯೋಜನೆಯ (AnnaBhagya DBT Status) ಹಣ ಬಂದಿಲ್ಲ ಅಂದರೆ ಏನು ಮಾಡಬೇಕು..?
ಹೌದು ಸ್ನೇಹಿತರೆ ತುಂಬಾ ಜನರಿಗೆ ಸುಮಾರು 10 ರಿಂದ 12 ಕಂತಿನ ಹಣ ಅಥವಾ ಯಾವುದೇ ರೀತಿ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಿಲ್ಲ ಇದಕ್ಕೆ ಕಾರಣ ಏನೆಂದರೆ ತಮ್ಮ ಬ್ಯಾಂಕ್ ಖಾತೆ ಸರಿಯಾಗಿ ಇರುವುದಿಲ್ಲ ಹಾಗಾಗಿ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ನಂತರ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರಿಗೆ ಈ ಕೆವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂದರೆ ಮಾತ್ರ ನಿಮ್ಮ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಹಾಗೂ ಮುಂದೆ ಬರುವಂತ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಜಮಾ ಆಗುತ್ತೆ
ವಿಶೇಷ ಸೂಚನೆ:- ಎಲ್ಲಾ ಸರಿಯಾಗಿದ್ದರೂ ಕೂಡ ನಿಮಗೆ ಅನ್ನ ಭಾಗ್ಯ ಯೋಜನೆ ಹಣ ಬರುತ್ತಿಲ್ಲವೆಂದರೆ ನೀವು ಮೊದಲು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಇದೇ ರೀತಿ ಪ್ರತಿಯೊಂದು ಮಾಹಿತಿ ಅಪ್ಡೇಟ್ ಬೇಗ ಪಡೆಯಲು ಹಾಗೂ ಪ್ರತಿದಿನ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ನೀವು ನಮ್ಮ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು