PMSBY Scheme: ಕೇವಲ ₹20ರಲ್ಲಿ ₹2 ಲಕ್ಷ ವಿಮೆ! ‘ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ.
ನೀವು ತಿಂಗಳಿಗೆ ಶೇಕಡಾ ಸಾವಿರ ರೂಪಾಯಿ ಆದಾಯ ಹೊಂದದ ಶ್ರಮಜೀವಿ ಅಲ್ಲವೇ? ಅಥವಾ ಬ್ಯಾಂಕ್ ಖಾತೆ ಮಾತ್ರವಿರುವ ಸಾಮಾನ್ಯ ನಾಗರಿಕ? ಹಾಗಿದ್ದರೆ, ಕೇವಲ ವರ್ಷಕ್ಕೆ ₹20 ರೂಪಾಯಿ ಪಾವತಿಸಿ, ₹2 ಲಕ್ಷದ ವಿಮಾ ಭದ್ರತೆ ಪಡೆಯಬಹುದಾದ ಮಹತ್ವದ ಕೇಂದ್ರ ಸರ್ಕಾರದ ಯೋಜನೆಯ ಕುರಿತು ನಿಮಗೆ ಗೊತ್ತಿರಲೇಬೇಕು!
ಸಾಮಾನ್ಯ ಜನತೆಗೆ, ವಿಶೇಷವಾಗಿ ಬಡ ವರ್ಗ, ಶ್ರಮಜೀವಿ, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಆರ್ಥಿಕ ಸುರಕ್ಷತೆಯನ್ನು ನೀಡುವ ಉದ್ದೇಶದಿಂದ ಆರಂಭಿಸಲಾದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಭಾರತದ ಲಕ್ಷಾಂತರ ಕುಟುಂಬಗಳಿಗೆ ಭದ್ರತೆ ನೀಡುತ್ತಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಗೃಹಲಕ್ಷ್ಮಿ ಹಣ 3 ತಿಂಗಳಿಗೊಮ್ಮೆ ಅಷ್ಟೇ ಕೊಡುತ್ತೇವೆ, H.M ರೇವಣ್ಣ
ಪ್ರಿಮಿಯಂ: ವರ್ಷಕ್ಕೆ ಕೇವಲ ₹20
ವಯೋಮಿತಿ: 18 ರಿಂದ 70 ವರ್ಷದೊಳಗಿನ ಎಲ್ಲ ಭಾರತೀಯರಿಗೆ ಲಭ್ಯ
ಅರ್ಹತೆ: ಆಕ್ಟಿವ್ ಸೇವಿಂಗ್ ಬ್ಯಾಂಕ್ ಖಾತೆ ಇದ್ದರೆ ಸಾಕು
- ಅಪಘಾತದಿಂದ ಸಾವು ಅಥವಾ ಸಂಪೂರ್ಣ ಅಂಗವೈಕಲ್ಯ – ₹2 ಲಕ್ಷ
- ಭಾಗಶಃ ಅಂಗವೈಕಲ್ಯ – ₹1 ಲಕ್ಷ
- ದೈನಂದಿನ ಜೀವನದಲ್ಲಿ ಅಪಘಾತಗಳು ಯಾವುದೇ ಮುನ್ಸೂಚನೆಯಿಲ್ಲದೆ ಸಂಭವಿಸುತ್ತವೆ. ಈ ರೀತಿಯ ತೀವ್ರ ದುರ್ಘಟನೆಗಳಲ್ಲಿ ಸಂಪೂರ್ಣ ಆರ್ಥಿಕ ನಷ್ಟವಾಗದಂತೆ ತಡೆಯಲು ಈ ಯೋಜನೆಯು ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ಶ್ರಮಿಕರು, ಟ್ಯಾಕ್ಸಿ ಚಾಲಕರು, ಕೃಷಿಕರು, ಕಟ್ಟಡ ಕಾರ್ಮಿಕರು ಮುಂತಾದವರು ಇದರಿಂದ ಹೆಚ್ಚಿನ ಲಾಭ ಪಡೆಯಬಹುದು.
ಇದನ್ನು ಓದಿ : nhpc Recruitment: ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಹೊಸ ನೇಮಕಾತಿ! 361 ಖಾಲಿ ಹುದ್ದೆಗಳು, ಬೇಗ ಅರ್ಜಿ ಸಲ್ಲಿಸಿ
ಯೋಜನೆಗೆ ಹೇಗೆ ಸೇರಿಕೊಳ್ಳಬೇಕು?
- ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ PMSBY ನೋಂದಣಿ ಫಾರ್ಮ್ ಪಡೆಯಿರಿ.
- ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಜೋಡಿಸಿ ಅರ್ಜಿ ಸಲ್ಲಿಸಿ
- ಖಾತೆಗೆ ಈ ಯೋಜನೆ ಲಿಂಕ್ ಆದ ನಂತರ, ಪ್ರತಿ ವರ್ಷ ₹20 ಪ್ರೀಮಿಯಂ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ.
ಮಹತ್ವದ ಸೂಚನೆಗಳು
- ಈ ಯೋಜನೆ ಆರೋಗ್ಯ ಸಮಸ್ಯೆ ಅಥವಾ ಸಹಜ ಮರಣಕ್ಕೆ ವಿಮಾ ಭದ್ರತೆ ನೀಡದು.
- ಬಲವಂತದ ಅರ್ಜಿಯ ಅಗತ್ಯವಿಲ್ಲ – ಸ್ವಯಂಚಾಲಿತ ನವೀಕರಣದ ವ್ಯವಸ್ಥೆ ಇದೆ.
- ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ಮಾತ್ರ ಅರ್ಹ.
ಬಡತನ ಹಾಗೂ ಅಪಘಾತದ ಅತಿರಿಕ್ತ ಹೊರೆದಿಂದ ದೇಶದ ಅನೇಕ ಕುಟುಂಬಗಳು ನಿತ್ಯದ ಬದುಕಿಗೆ ಹೆದರಿಕೊಳ್ಳುತ್ತಿವೆ. ಅವರಿಗೆ ಆರ್ಥಿಕ ಭದ್ರತೆಯ ಕನಿಷ್ಠ ಭರವಸೆ ನೀಡಲು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ.
ಇದನ್ನು ಓದಿ : SSP Scholarship Apply Now: ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ: 2025-26ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!
₹20 ರಷ್ಟು ಕನಿಷ್ಠ ಮೊತ್ತದಲ್ಲಿ ₹2 ಲಕ್ಷದ ವಿಮಾ ಭದ್ರತೆ ಎಂಬುದು ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ದೇವರು ಕೊಟ್ಟ ವರದಾನವೇ ಸರಿ. ಇಂದೇ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಅರ್ಜಿ ನೀಡಿ.