Health Card Yojana: ಹಿರಿಯ ನಾಗರಿಕರಿಗೆ ಆಯುಷ್ಮಾನ್ ಯೋಜನೆ: ಆಧಾರ್ ಇದ್ದರೆ ಸಾಕು ₹5 ಲಕ್ಷದ ಉಚಿತ ಚಿಕಿತ್ಸೆ ಲಭ್ಯ!

Health Card Yojana: ಹಿರಿಯ ನಾಗರಿಕರಿಗೆ ಆಯುಷ್ಮಾನ್ ಯೋಜನೆ: ಆಧಾರ್ ಇದ್ದರೆ ಸಾಕು ₹5 ಲಕ್ಷದ ಉಚಿತ ಚಿಕಿತ್ಸೆ ಲಭ್ಯ!

ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವು ಸಹಜ. ಆಸ್ಪತ್ರೆ, ಚಿಕಿತ್ಸೆ, ಔಷಧಿಗಳಿಗೆ ಆಗಾಗ್ಗೆ ಖರ್ಚು ಮಾಡುವ ಪರಿಸ್ಥಿತಿಯು ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆ ತರಬಹುದಾಗಿದೆ. ಇಂತಹ ಸಂಕಷ್ಟದಲ್ಲಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಸೌಲಭ್ಯ ಸಿಕ್ಕಿದೆ – ಆಯುಷ್ಮಾನ್ ಸೀನಿಯರ್ ಸಿಟಿಸನ್ ಯೋಜನೆ ಎಂಬ ಹೊಸ ಯೋಜನೆಯ ಮೂಲಕ!.

Health Card Yojana

  • ಆಧಾರ್ ಇದ್ದರೆ ಸಾಕು – ಆದಾಯ ಪ್ರಮಾಣಪತ್ರದ ಅವಶ್ಯಕತೆ ಇಲ್ಲ
  • ₹5 ಲಕ್ಷದ ಉಚಿತ ಆರೋಗ್ಯ ವಿಮೆ ವರ್ಷಕ್ಕೆ
  • 70 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಯೋಜನೆ ಲಭ್ಯ
  • ಆನ್‌ಲೈನ್ ಅಥವಾ ಮೊಬೈಲ್ ಆ್ಯಪ್‌ ಮೂಲಕವೇ ಅರ್ಜಿ ಸಲ್ಲಿಕೆ
  • ಏನಾದರೂ ಇತರ ಸರ್ಕಾರಿ ಅಥವಾ ಖಾಸಗಿ ಪ್ಲಾನ್ ಇದ್ದರೂ ಬದಲಾಯಿಸಬಹುದು

ಅರ್ಜಿಯನ್ನು ಹೇಗೆ ಸಲ್ಲಿಸಬೇಕು? 

ಹಂತ 1:
 ಆಯುಷ್ಮಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ ಅಥವಾ Ayushman Bharat App ಡೌನ್‌ಲೋಡ್ ಮಾಡಿಕೊಳ್ಳಿ

ಹಂತ 2:
 ನಿಮ್ಮ ಮೊಬೈಲ್ ನಂಬರ್‌ ನೀಡಿ OTP ಮೂಲಕ ಲಾಗಿನ್ ಆಗಿ

ಹಂತ 3:
 ‘Senior Citizens 70+’ ವಿಭಾಗವನ್ನು ಆಯ್ಕೆ ಮಾಡಿ

ಹಂತ 4:
 ನಿಮ್ಮ ರಾಜ್ಯ, ಜಿಲ್ಲೆ, Aadhaar ಮಾಹಿತಿ ನಮೂದಿಸಿ

WhatsApp Group Join Now
Telegram Group Join Now       

ಹಂತ 5:
 ಇತ್ತೀಚಿನ ಫೋಟೋ ಅಪ್ಲೋಡ್ ಮಾಡಿ ಮತ್ತು eKYC ಪ್ರಕ್ರಿಯೆ ಮುಗಿಸಿ

ಹಂತ 6:
 ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಆಯುಷ್ಮಾನ್ ಕಾರ್ಡ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು

WhatsApp Group Join Now
Telegram Group Join Now       

ಈ ಯೋಜನೆ ಯಾಕೆ ಅಗತ್ಯ?

ವೃದ್ಧರಾದ ನಂತರ ಆಸ್ಪತ್ರೆಗಳಿಗೆ ಆಗಾಗ್ಗೆ ಭೇಟಿ ನೀಡುವುದು ಅನಿವಾರ್ಯ. ಆದರೆ ಚಿಕಿತ್ಸೆ, ಸ್ಕ್ಯಾನ್, ಸರ್ಜರಿ ಮುಂತಾದ ವ್ಯಯಗಳು ಕೆಲವೊಮ್ಮೆ ಲಕ್ಷಾಂತರ ರೂಪಾಯಿಗೆ ಹತ್ತಬಹುದು. ಇಂತಹ ಸಂದರ್ಭದಲ್ಲಿ ಸರ್ಕಾರದ ₹5 ಲಕ್ಷದ ಉಚಿತ ಆರೋಗ್ಯ ವಿಮೆ ಕುಟುಂಬದ ಹಣಕಾಸಿನ ಭದ್ರತೆಗೆ ಮಹತ್ತರ ನೆರವಾಗುತ್ತದೆ.

ಈ ಯೋಜನೆ ಈಗಾಗಲೇ 6 ಕೋಟಿ ಜನರಿಗೆ ಲಾಭ ನೀಡಿದೆ. ನೀವು ಅಥವಾ ನಿಮ್ಮ ಮನೆಯ ಹಿರಿಯರು 70 ವರ್ಷ ಮೀರಿ ಇದ್ದರೆ, ಈ ಯೋಜನೆಗೆ ತಕ್ಷಣವೇ ನೋಂದಾಯಿಸಿಕೊಳ್ಳಿ. ಆರೋಗ್ಯದ ಭದ್ರತೆ ಜೀವನದ ಭದ್ರತೆ!

ಇನ್ನು ಹೆಚ್ಚಿನ ಮಾಹಿತಿಗಾಗಿ Ayushman Bharat ಅಧಿಕೃತ ವೆಬ್‌ಸೈಟ್‌ ಅಥವಾ ಆ್ಯಪ್‌ ಅನ್ನು ಭೇಟಿನೀಡಿ.

1 thought on “Health Card Yojana: ಹಿರಿಯ ನಾಗರಿಕರಿಗೆ ಆಯುಷ್ಮಾನ್ ಯೋಜನೆ: ಆಧಾರ್ ಇದ್ದರೆ ಸಾಕು ₹5 ಲಕ್ಷದ ಉಚಿತ ಚಿಕಿತ್ಸೆ ಲಭ್ಯ!”

Leave a Comment