PM Vishwakarma Yojana:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಯೋಜನೆಗೆ ಅರ್ಜಿ ಹಾಕಿದಂತ ಫಲಾನುಭವಿಗಳಿಗೆ 15000 ಹಣವನ್ನು ನೀಡುತ್ತಾರೆ ಹಾಗೂ ಮೂರು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು ಹಾಗೂ ಕೌಶಲ್ಯ ತರಬೇತಿಗಾಗಿ ಐದು ದಿನಗಳ ತರಬೇತಿ ನೀಡುತ್ತಾರೆ ಮತ್ತು ಪ್ರತಿದಿನ 500 ಹಣವನ್ನು ಕೂಲಿಯಾಗಿ ಪಡೆದುಕೊಳ್ಳಬಹುದು ಹಾಗಾದರೆ ಯಾವ ಯೋಜನೆ ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ತಿಳಿದುಕೊಳ್ಳುತ್ತಿದ್ದೇವೆ ಹಾಗಾಗಿ ಈ ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದ್ದರಿಂದ ತುಂಬಾ ಜನರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ ಹಾಗಾಗಿ ನೀವು ಪ್ರತಿದಿನ ಹೊಸ ಹೊಸ ಮಾಹಿತಿಯನ್ನು ಪಡೆಯಬೇಕು ಅಂದುಕೊಂಡಿದ್ದರೆ ನೀವು ನಮ್ಮ WhatsApp & Telegram ಗ್ರೂಪುಗಳಿಗೆ ಜಾಯಿನ್ ಆಗಬಹುದು ಹಾಗೂ ನಮ್ಮ ವೆಬ್ಸೈಟ್ ಆದ people of karnataka.com ಗೆ ಭೇಟಿ ನೀಡಬಹುದು
ಸ್ನೇಹಿತರೆ ಪ್ರಥಮ ಮಂತ್ರಿ ಜಾರಿಗೆ ತಂದಿರುವಂತ ಈ ಯೋಜನೆ ನೀವು ಅರ್ಜಿ ಹಾಕಿ ಲಾಭ ಪಡೆಯಬೇಕೆಂದರೆ ಏನು ಮಾಡಬೇಕು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು..? ಹಾಗೂ ಈ (PM Vishwakarma Yojana) ಯೋಜನೆಯ ಉದ್ದೇಶ ಏನು ಎಂಬುದು ನಾವು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇವೆ ಹಾಗೂ ಉಚಿತವಾಗಿ 15000 ಹಣ ನಿಜವಾಗಲೂ ಬರುತ್ತಾ ಎಂಬ ಪ್ರಶ್ನೆಗೆ ನಾವು ಈ ಲೇಖನಿಯಲ್ಲಿ ಉತ್ತರ ನೀಡಿದ್ದೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಈ ದಿನದಂದು ಅವಕಾಶ ಮತ್ತು ಈ ದಾಖಲಾತಿಗಳು ಬೇಕು ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಪ್ರತಿದಿನವೂ ನಿಮಗೆ ಸರಕಾರಿ ನೌಕರಿಗಳ ಬಗ್ಗೆ ಮಾಹಿತಿ ಅಂದರೆ ಕೇಂದ್ರ ಸರ್ಕಾರ ಕಡೆಯಿಂದ ಬಿಡುವಂತ ಸರಕಾರಿ ಹುದ್ದೆಗಳು ಹಾಗೂ ರಾಜ್ಯ ಸರ್ಕಾರ ಕಡೆಯಿಂದ ಬಿಡುವಂತ ಸರ್ಕಾರಿ ಹುದ್ದೆಗಳು ಅವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಕೊನೆಯ ದಿನಾಂಕ ಯಾವಾಗ ಇದೆ ಈ ರೀತಿ ಅನೇಕ ಮಾಹಿತಿಯನ್ನು ನಾವು ಪ್ರತಿದಿನ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುತ್ತೇವೆ ಹಾಗೂ ಬೇಗ ಮಾಹಿತಿ ಪಡೆಯಬೇಕೆಂದರೆ ನೀವು ನಮ್ಮ ವಾಟ್ಸಪ್ ಗೆ ಜಾಯಿನ್ ಆಗಿ
ಮೋದಿ 3ನೇ ಬಾರಿ ಅಧಿಕಾರಕ್ಕೆ ಬಂದ ಮೊದಲ ದಿನವೇ ರೈತರಿಗೆ ಬಂಪರ್ ಗಿಫ್ಟ್ ಇಲ್ಲಿದೆ ಸಂಪೂರ್ಣ ಮಾಹಿತಿ
ಇದರ ಜೊತೆಗೆ ರೈತರಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಪ್ರತಿಯೊಂದು ಸುದ್ದಿಯನ್ನು ನಾವು ನಮ್ಮ ಮಾಧ್ಯಮದಲ್ಲಿ ಪ್ರಕಟಣೆ ಮಾಡುತ್ತೇವೆ ಹಾಗೂ ಬೇಗ ಈ ಸುದ್ದಿಗಳನ್ನು ಪಡೆಯಲು ನೀವು ನಮ್ಮ WhatsApp & Telegram ಗ್ರೂಪ್ ಗಳಿಗೆ ಜೈನ್ ಆಗಿ ಇದರಿಂದ ಪ್ರತಿಯೊಂದು ಮಾಹಿತಿ ಬೇಗ ಪಡೆದುಕೊಳ್ಳಬಹುದು
(PM Vishwakarma Yojana) ಪಿಎಂ ವಿಶ್ವಕರ್ಮ ಯೋಜನೆ..?
ನಮ್ಮ ಪ್ರೀತಿಯ ಓದುಗರೆ ಈ ಪಿಎಂ ವಿಶ್ವಕರ್ಮ (PM Vishwakarma Yojana) ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಗುಡಿ ಕೈಗಾರಿಕೆಗಳನ್ನು ಹಾಗೂ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವ ಜನರಿಗೆ ಉತ್ತೇಜನ ನೀಡಲು ಹಾಗೂ ಅವರಿಗೆ ತಮ್ಮ ಉದ್ಯೋಗವನ್ನು ಆಧುನಿಕರಣ ಗೊಳಿಸಲು ಈ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಒಂದಿಷ್ಟು ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದೆ ಎಂದು ಹೇಳಬಹುದು
ಹೌದು ಗೆಳೆಯರೇ ಈ ಪಿಎಂ ವಿಶ್ವಕರ್ಮ (PM Vishwakarma Yojana) ಯೋಜನೆಯನ್ನು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆಗಳು ಹಾಗೂ ಗುಡಿ ಕೈಗಾರಿಕೆಗಳು ಮತ್ತು ವಂಶ ಪಾರಂಪರಿಕವಾಗಿ ವೃತ್ತಿಗಳನ್ನು ಮಾಡಿಕೊಂಡು ಬಂದಿರುವಂತಹ ಜನರಿಗೆ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಅವರು ತಮ್ಮ ಉದ್ಯೋಗವನ್ನು ಆಧುನಿಕರಣ ಗೊಳಿಸಲು ಈ ಯೋಜನೆಯಲ್ಲಿ ಶೇಕಡ 5% ಕಡಿಮೆ ಬಡ್ಡಿ ದರದಲ್ಲಿ ಸುಮಾರು ಮೂರು ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದು ಹಾಗೂ ಈ ಹಣದಲ್ಲಿ ತಮ್ಮ ಉದ್ಯೋಗವನ್ನು ಅಥವಾ ವಂಶ ಪಾರಂಪರಿಕ ವೃತ್ತಿಯನ್ನು ಇನ್ನಷ್ಟು ಆಧುನಿಕರಣ ಗೊಳಿಸಿ ಹೆಚ್ಚಿನ ಲಾಭವನ್ನು ಪಡೆದು ಆರ್ಥಿಕವಾಗಿ ಬಲಿಷ್ಠರನ್ನಾಗಿ ಮಾಡಲು ಈ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದೆ
ಹೌದು ಸ್ನೇಹಿತರೆ ಈ ಪಿಎಂ ವಿಶ್ವಕರ್ಮ (PM Vishwakarma Yojana) ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಅಂದರೆ 5% ಬಡ್ಡಿಯನ್ನು ವಿಧಿಸಲಾಗುತ್ತದೆ ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತದೆ ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳು ಉಚಿತವಾಗಿ 15000 ಹಣವನ್ನು ಪಡೆಯಬಹುದು ಅದು ಹೇಗೆ ಎಂದು ಈ ಲೇಖನ ಮುಂದೆ ವಿವರಿಸಲಾಗಿದೆ ಮತ್ತು ಈ ಹಣವು ಸಂಪೂರ್ಣವಾಗಿ ಉಚಿತವಾಗಿದ್ದು ಇದನ್ನು ಕೇಂದ್ರ ಸರ್ಕಾರಕ್ಕೆ ಅಥವಾ ಬ್ಯಾಂಕಿಗೆ ಹಿಂದಿರುಗಿಸುವಂತಿಲ್ಲ
ಈ ಯೋಜನೆಗೆ ಅರ್ಜಿ ಹಾಕಿದಂತ (PM Vishwakarma Yojana) ಫಲಾನುಭವಿಗಳಿಗೆ ತಮ್ಮ ಕೌಶಲ್ಯ ಅಭಿವೃದ್ಧಿಗೆ 5 ದಿನಗಳ ಕಾಲ ಟ್ರೈನಿಂಗ್ ನೀಡಲಾಗುತ್ತದೆ ಮತ್ತು ಟ್ರೈನಿಂಗ್ ಕಾರಣ ಅವರಿಗೆ ಪ್ರತಿದಿನ 500 ಹಣವನ್ನು ಕೂಲಿ ರೂಪದಲ್ಲಿ ನೀಡಲಾಗುತ್ತಿದ್ದು ಈ ಹಣವನ್ನು ಬ್ಯಾಂಕ್ ಗಳ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಹಾಗಾಗಿ ಈ ಟ್ರೈನಿಂಗ್ ಅಟೆಂಡ್ ಆದಂತ ವ್ಯಕ್ತಿಗಳು ತಮ್ಮ ಉದ್ಯೋಗವನ್ನು ಯಾವ ರೀತಿ ಆಧುನಿಕರಣ ಗೊಳಿಸಬೇಕು ಹಾಗೂ ಹೆಚ್ಚಿನ ಲಾಭವನ್ನು ಯಾವ ರೀತಿ ಪಡೆಯಬೇಕು ಎಂದು ಟ್ರೈನಿಂಗ್ ನಲ್ಲಿ ತರಬೇತಿ ನೀಡಲಾಗುತ್ತದೆ
(PM Vishwakarma Yojana) 15000 ಉಚಿತವಾಗಿ ಹೇಗೆ ಪಡೆಯುವುದು…?
ಹೌದು ಸ್ನೇಹಿತರೆ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಉಚಿತವಾಗಿ 15000 ಹಣವನ್ನು ನೀಡುತ್ತಾರೆ ಮತ್ತು ಈ (PM Vishwakarma Yojana) ಹಣವನ್ನು ಹಿಂದಿರುಗಿಸುವಂತಿಲ್ಲ. ಹೌದು ಸ್ನೇಹಿತರೆ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳು ಐದು ದಿನ ಕೌಶಲ್ಯ ತರಬೇತಿ ಪಡೆದ ನಂತರ ಉಚಿತವಾಗಿ 15 ಸಾವಿರ ಗಿಫ್ಟನ್ನು ನೀಡುತ್ತಾರೆ ಈ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಬಹುದು.
ಹೌದು ಸ್ನೇಹಿತರೆ ಸಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಟೂಲ್ ಕಿಟ್ ತೆಗೆದುಕೊಳ್ಳಲು ಉಚಿತವಾಗಿ 15000 ಹಣವನ್ನು ನೀಡುತ್ತಾರೆ ಮತ್ತು ಈ ಹಣದಿಂದ ಅವರು ತಮ್ಮ ವೃತ್ತಿಗೆ ಬೇಕಾದಂತ ಹೊಲಿಗೆ ಯಂತ್ರ ಆಗಲಿ ಅಥವಾ ಇತರ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು ಹಾಗಾಗಿ ಉಚಿತವಾಗಿ 15000 ಹಣ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ ಮತ್ತು ತುಂಬಾ ಜನರು ಈ ಹಣವನ್ನು ಪಡೆದುಕೊಂಡು ಹೊಲಿಗೆ ಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು
ಹಾಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ 15000 ಪಡೆದುಕೊಳ್ಳಬೇಕು ಅಂದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಅಥವಾ ಕೆಲವು ವರ್ಗದ ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ
(PM Vishwakarma Yojana) ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?
- ಕುಲುಮೆ ಮಾಡುವವರು
- ಮೀನುಗಾರರು
- ಅಕ್ಕಸಾಲಿಗರು
- ಕಲ್ಲು ಕುಟಿಗರು
- ಕೈಯಿಂದ ಪಾದರಕ್ಷೆ ಮಾಡುವವರು
- ಬಟ್ಟೆ ತೊಳೆಯುವವರು(ಮಡಿವಾಳರು)
- ಹೂ ಮಾಲೆ ಕಟ್ಟುವವರು
- ಬುಟ್ಟಿ ಎಣೆಯುವವರು
- ಟೈಲರಿಂಗ್ ಮಾಡುವವರು
- ಖ್ಸೌರಿಕರು
- ಶಿಲ್ಪಿಗಳು
- ಕುಂಬಾರರು
- ದೋಣಿ ತಯಾರಕರು
- ಬಡಿಗರು
- ಬೊಂಬೆ ತಯಾರು ಮಾಡುವವರು
ಮೇಲೆ ನೀಡಿದಂತ ವರ್ಗಗಳು ಅಂದರೆ (PM Vishwakarma Yojana) ಸಾಂಪ್ರದಾಯಿಕ ವೃತ್ತಿಯನ್ನು ಮಾಡುವಂಥವರು ಹಾಗೂ ಟೈಲರಿಂಗ್ ಮಾಡುವಂಥವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು.. ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕೆಂದು ಕೆಳಗಡೆ ವಿವರಿಸಲಾಗಿದೆ
(PM Vishwakarma Yojana) ಮೂರು ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ…?
ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳು ತಮ್ಮ ಸಣ್ಣ ಕೈಗಾರಿಕೆಗಳು ಅಥವಾ ಸಾಂಪ್ರದಾಯಿಕ ವೃತ್ತಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಹಾಗೂ ಆಧುನಿಕರಣ ಗೊಳಿಸಲು ಈ ಯೋಜನೆ ಅಡಿಯಲ್ಲಿ ಮೂರು ಲಕ್ಷದವರೆಗೆ 5% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಹಾಗಾಗಿ ಈ ಹಣವನ್ನು ಪಡೆದುಕೊಂಡು ತಮ್ಮ ಉದ್ಯೋಗವನ್ನು ಆಧುನಿಕರಣ ಗೊಳಿಸಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆ ಆದ ನಂತರ ಮೊದಲ ಬಾರಿಗೆ 5% ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ ಸಾಲ ನೀಡಲಾಗುತ್ತದೆ ಹಾಗೂ ಈ ಸಾಲವನ್ನು 18 ತಿಂಗಳಗಳಲ್ಲಿ ಮರುಪಾವತಿ ಮಾಡಬೇಕು
- ನಂತರ ಮತ್ತೆ ಈ ಯೋಜನೆ ಅಡಿಯಲ್ಲಿ ಎರಡು ಲಕ್ಷದವರೆಗೆ 5% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಈ ಹಣವನ್ನು 30 ತಿಂಗಳಗಳಲ್ಲಿ ಹಿಂದಿರುಗಿಸಬೇಕು.
ಈ ರೀತಿ ಕಡಿಮೆ ಬಡ್ಡಿ ದರದಲ್ಲಿ ಈ ಯೋಜನೆ ಮೂಲಕ ಸಾಲ ಪಡೆದುಕೊಳ್ಳಬಹುದು
(PM Vishwakarma Yojana) ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು..?
ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳನ್ನು ನಾವು ಈ ಕೆಳಕಂಡಂತೆ ವಿವರಿಸಿದ್ದೇವೆ
ಉಚಿತ ಹೊಲಿಗೆ ಯಂತ್ರ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಿದಂತ ಫಲಾನುಭವಿಗಳು ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂದರೆ ಅರ್ಜಿ ಹಾಕಿದ ನಂತರ ಫಲಾನುಭವಿಗಳಿಗೆ ಟೂಲ್ ಕಿಟ್ಟು ಖರೀದಿಗಾಗಿ 15000 ಉಚಿತ ಹಣವನ್ನು ನೀಡಲಾಗುತ್ತದೆ ಈ ಹಣದಲ್ಲಿ ಅವರು ಹೊಲಿಗೆ ಯಂತ್ರವನ್ನು ಖರೀದಿ ಮಾಡಿಕೊಳ್ಳಬಹುದು ಅಥವಾ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಸಲಕರಣೆಗಳು ಅಥವಾ ಯಂತ್ರಗಳನ್ನು ಖರೀದಿ ಮಾಡಬಹುದು
ಕೌಶಲ್ಯ ಅಭಿವೃದ್ಧಿ:- ಹೌದು ಸ್ನೇಹಿತರೆ ಈ (PM Vishwakarma Yojana) ಯೋಜನೆಗೆ ಅರ್ಜಿ ಸಲ್ಲಿಸಿದಂತಹ ವ್ಯಕ್ತಿಗಳಿಗೆ ಅಥವಾ ಫಲಾನುಭವಿಗಳಿಗೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಐದು ದಿನಗಳ ಕಾಲ ಕೌಶಲ್ಯ ಅಭಿವೃದ್ಧಿಗೆ ಅಂದರೆ ತಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಯಾವ ರೀತಿ ಗೊಳಿಸಬೇಕು ಹಾಗೂ ತಮ್ಮ ಉದ್ಯೋಗವನ್ನು ಹೆಚ್ಚಿನ ಮಟ್ಟದಲ್ಲಿ ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಐದರಿಂದ ಏಳು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ ಹಾಗೂ ಈ ತರಬೇತಿಗೆ ಹಾಜರಾದ ಕಾರಣ ಅವರಿಗೆ ಪ್ರತಿದಿನ 500 ಕೂಲಿಯನ್ನು ಕೊಡಲಾಗುತ್ತದೆ.
ಸಾಲ ಸೌಲಭ್ಯ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳಿಗೆ 5% ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ರಾಷ್ಟ್ರೀಯ ಬ್ಯಾಂಕ್ ಗಳ ಮೂಲಕ ಸಾಲವನ್ನು ನೀಡಲಾಗುತ್ತದೆ
ಈ ಮೇಲೆ ನೀಡಿದ ಮೂರು ಉಪಯೋಗಗಳನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದು ಹಾಗೂ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ನಿಗದಿ ಮಾಡಿರುತ್ತೆ ಅವುಗಳ ವಿವರವನ್ನು ಈ ಕೆಳಕಂಡಂತೆ ವಿವರಿಸಿದ್ದೇವೆ
(PM Vishwakarma Yojana) ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು..?
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ವಯಸ್ಸು 18 ವರ್ಷ ಮೇಲ್ಪಟ್ಟು 59 ವರ್ಷ ಕೆಳಗಡೆ ಇರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಯಾವುದಾದರೂ ಸಾಂಪ್ರದಾಯಿಕ ವೃತ್ತಿಯನ್ನು ಮಾಡುತ್ತಿರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಡೆಯಿಂದ ಯಾವುದೇ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಪಡೆದಿರಬಾರದು
- ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತ ಅಭ್ಯರ್ಥಿಯ ಕುಟುಂಬದಲ್ಲಿ ಸರಕಾರಿ ನೌಕರಿದಾರರು ಇದ್ದರೆ ಅರ್ಜಿ ಸಲ್ಲಿಸಲು ಬರುವುದಿಲ್ಲ
ಈ ಮೇಲೆ ನೀಡಿದಂತ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಬೇಕಾಗುವಂತ ದಾಖಲಾತಿಗಳು ಏನು ಎಂಬುವುದರ ಬಗ್ಗೆ ಕೆಳಗಡೆ ವಿವರಿಸಿದ್ದೇವೆ
(PM Vishwakarma Yojana) ಈ ಯೋಜನೆಯ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..?
ಆಧಾರ್ ಕಾರ್ಡ್:- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಆಧಾರ್ ಕಾರ್ಡ್ ಮಾಹಿತಿಯನ್ನು ಅಥವಾ ಜೆರಾಕ್ಸ್ ಅನ್ನು ನೀಡಬೇಕು
ವೃತ್ತಿಪಾರವಾನಿ ಪತ್ರ:- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ತಾನು ಮಾಡುತ್ತಿರುವಂತಹ ವೃತ್ತಿಯ ಬಗ್ಗೆ ಪಾರವಾಣಿ ಪತ್ರ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಪತ್ರವನ್ನು ನೀಡಬೇಕಾಗುತ್ತದೆ ಇದನ್ನು ಪಡೆಯಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಿಂದ ಈ ಪತ್ರವನ್ನು ಪಡೆದುಕೊಳ್ಳಬಹುದು
ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ
ಬ್ಯಾಂಕ್ ಖಾತೆ:- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ತನ್ನ ಬ್ಯಾಂಕ್ ಖಾತೆ ವಿವರವನ್ನು ನೀಡಬೇಕಾಗುತ್ತದೆ ಏಕೆಂದರೆ ಈ ಯೋಜನೆ ಮೂಲಕ ಪಡೆಯುವಂತಹ ಉಚಿತ 15,000 ಹಣವನ್ನು ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಹಾಗೂ ಸಾಲ ಸೌಲಭ್ಯವನ್ನು ಕೂಡ ತಮ್ಮ ಬ್ಯಾಂಕ್ ಖಾತೆಯ ಮೂಲಕ ನೀಡಲಾಗುತ್ತದೆ ಹಾಗಾಗಿ ಅರ್ಜಿದಾರ ಬ್ಯಾಂಕ್ ಖಾತೆ ವಿವರ ನೀಡುವುದು ಕಡ್ಡಾಯ
ಮೊಬೈಲ್ ಸಂಖ್ಯೆ:- ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಏಕೆಂದರೆ ಈ ಯೋಜನೆ ಅರ್ಜಿ ಸ್ಥಿತಿಯ ಬಗ್ಗೆ ಪ್ರತಿಯೊಂದು ಮಾಹಿತಿ ಪಡೆದುಕೊಳ್ಳಲು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕು
ರೇಷನ್ ಕಾರ್ಡ್:- ಅರ್ಜಿದಾರ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ರೇಷನ್ ಕಾರ್ಡ್ ಜೆರಾಕ್ಸ್ ಕೂಡ ನೀಡಬೇಕು ಏಕೆಂದರೆ ಕುಟುಂಬಕ್ಕೆ ಸಂಬಂಧಿಸಿದಂತ ವೈಯಕ್ತಿಕ ವಿವರಗಳು ಹಾಗೂ ಪ್ರತಿಯೊಂದು ಮಾಹಿತಿ ಸಿಗುತ್ತದೆ
ಈ ಮೇಲೆ ನೀಡಿದಂತ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ನಾವು ಕೆಳಗಡೆ ವಿವರಿಸಿದ್ದೇವೆ
(PM Vishwakarma Yojana) ಪಿಎಂ ವಿಶ್ವಕರ್ಮ ಯೋಜನೆಗೆ ಹೇಗೆ (apply online) ಅರ್ಜಿ ಸಲ್ಲಿಸಬೇಕು..?
ಹೌದು ಸ್ನೇಹಿತರೆ ಈ ಯೋಜನೆಗೆ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ಗಳ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಮೊಬೈಲ್ ನಲ್ಲಿ ಹಾಗೂ ಅಧಿಕೃತ ವೆಬ್ಸೈಟ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ನೀಡಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿದವರ ಮೂಲಕ ನೀವು ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ ಹಾಗೂ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದುಕೊಳ್ಳುತ್ತೇನೆ ಹಾಗೂ ಪಿಎಂ ವಿಶ್ವಕರ್ಮ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಈ ಯೋಜನೆಯ ಲಾಭ ಏನು ಎಂಬುವುದರ ಬಗ್ಗೆ ಮಾಹಿತಿ ನಿಮಗೆ ತಿಳಿದಿದೆ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನವನ್ನು ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ
Nange 15000 beku. Holigeyanthra nu sigabeku🙏sir